ಸಮಾರಂಭದ ಸಾನಿಧ್ಯವಹಿದ್ದ ತಿಪಟೂರಿನ ವಿರಶೈವಾನಂದಾಶ್ರಮದ ಬಸವಾನುಭವ ಸ್ವಾಮೀಜಿ ಮಾತನಾಡಿ,ಇಂದಿನ ದಿನಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಕೈಗೊಂಡಿರುವ ಸಾಮಾಜಿಕ ಕಾರ್ಯಗಳು ಹತ್ತು ಹಲವು,ಅವುಗಳು ಜನಸಾಮಾನ್ಯರ ಅಭಿವೃದ್ದಿಗಾಗಿ,ಏಳ್ಗೆಗಾಗಿ,ಗ್ರಾಮಾಂತರ ಜನರ ಯಶಸ್ಸನ್ನು ಬಯಸುತ್ತವೆ,ಈ ಸಂಘಗಗಳಿಂದ ದೊರೆಯುವ ಹಣವನ್ನು ದುರುಪಯೋಗ ಮಾಡದೆ,ಉತ್ತಮ ಕಾರ್ಯಕ್ಕೆ ವಿನಿಯೋಗಿಸಿಕೊಂಡು ಅದರಿಂದ ಸಾಮಾಜಿಕ ಪರಿವರ್ತನೆಯಾಗುವಂತೆ ಮಾಡಬೇಕು ಎಂದರು.
ಉದ್ಘಾಟನೆ ನೆರವೇರಿಸಿದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿ ಜನಸಾಮಾನ್ಯರಿಗಾಗಿ ಸರ್ಕಾರದಿಂದ ಸಂಘಗಳು ಮುಂಜುರಾಗಿದ್ದರೂ ಸಹ ಅವುಗಳ ನಿರ್ವಹಣೆ ಉತ್ತಮವಾಗಿಲ್ಲ,ಅದಕ್ಕೆ ಕಾರಣ ಕೆಲವು ಅಧಿಕಾರಿಗಳ ಬೇಜವಬ್ದಾರಿತನವೇ ಆಗಿದೆ. ಪುಣ್ಯ ಕ್ಷೇತ್ರಗಳಲ್ಲಿ ಒಂದು ಧರ್ಮಸ್ಥಳ ಕ್ಷೇತ್ರವಾಗಿದ್ದು ಅದು ರೂಪಿಸಿರುವ ಇಂತಹ ಯೋಜನೆಯಿಂದ ಬಂದ ಹಣವನ್ನು ಪೋಲುಮಾಡದೆ ಅದರಿಂದ ಹೆಚ್ಚಿನ ಲಾಭಗಳಿಸಿ ಎಂದರು.
ಸಮಾರಂಭದಲ್ಲಿ ಯೋಜನೆಯ ನಿರ್ದೇಶಕ ಗಂಗಾಧರ ರೈ, ಶಿವಮೊಗ್ಗ ಜಿಲ್ಲೆಯ ಪ್ರಬಾರ ಜಿಲ್ಲಾಧಿಕಾರಿ ಶ್ರೀರಂಗಯ್ಯ,ಜಿ.ಪಂ.ಸದಸ್ಯೆ ನಿಂಗಮ್ಮ ರಾಮಯ್ಯ,ತಾ.ಪಂ.ಸದಸ್ಯ ಆರ್.ಪಿ.ವಸಂತಯ್ಯ, ಗ್ರಾ.ಪಂ.ಅಧ್ಯಕ್ಷೆ ನೇತ್ರಾವತಿ,ವಿಶ್ರಾಂತ ಶಿಕ್ಷಕ ಸಿದ್ದಯ್ಯ, ಧರ್ಮಸ್ಥಳ ಸಂಸ್ಥೆಯ ವಿಜಯ್ ಕುಮಾರ್,ಅನಿಲ್,ರೋಹಿತ್,ನಾಗರತ್ನ,ಕೊಟ್ಟುರಯ್ಯ ಸೇರುದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ