ಹೋಬಳಿಯ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ 5 ನೇ ವರ್ಷದ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ನಡೆದ ಸಾಂಸ್ಕೃತಿಕ ಹಬ್ಬದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಪ್ರತಿಯೊಂದು ಮಗುವಿನಲ್ಲಿ ಒಂದಲ್ಲ ಒಂದು ಪ್ರತಿಭೆ ಸುಪ್ತವಾಗಿರುತ್ತದೆ,ಅದನ್ನು ಹೊರ ತರುವ ಕಾರ್ಯ ಉತ್ತಮ ಹಾಗೂ ಪ್ರಜ್ಞಾವಂತ ಶಿಕ್ಷಕರು ಶಿಕ್ಷಣವನ್ನು ಒಂದು ಸಾಧನವಾಗಿ ಮಾಡಿಕೊಂಡಾಗ ಮಾತ್ರ ಸಾಧ್ಯೆವೆಂದರು. ಇಂದು ಮಕ್ಕಳ ಇಷ್ಟಕ್ಕೆ ಅನುಸಾರವಾಗಿ ಅವರಿಗೆ ಅಭ್ಯಾಸ ಮಾಡಿಸಬೇಕಿದೆ. ಪೋಷಕರು ತಮ್ಮ ಮಕ್ಕಳ ಆಸೆ ಆಕಾಂಕ್ಷೆಗಳನ್ನು ತಿಳಿದು ಅವರ ಆಭಿರುಚಿಗೆ ತಕ್ಕಂತೆ ಬಿಟ್ಟು,ಅವರು ಉತ್ತಮ ಮಾರ್ಗದಲ್ಲಿ ನಡೆಯುತಿದ್ದಾರೆಯೇ ಎಂದು ಗಮನಿಸಬೇಕಿದೆ,ಅವರು ತಪ್ಪು ಮಾಡಿದಾಗ ಅವರನ್ನು ಮತ್ತೊಬ್ಬರೊಂದಿಗೆ ಹೋಲಿಸದೆ, ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬಬೇಕಿದೆ ಎಂದರು.ಅಲ್ಲದೆ ಇಂತಹ ಗ್ರಾಮೀಣ ಪ್ರದೇಶದಲ್ಲಿ ಶಾಲೆಯನ್ನು ನಡೆಸುವುದು ಕಷ್ಟಕರ,ಮುಂದಿನ ದಿನಗಳಲ್ಲಿ ಈ ವಿದ್ಯಾಸಂಸ್ಥೆಯು ತನ್ನ ಇತರ ಶಾಖೆಗಳನ್ನು ತೆರೆಯಲಿ ಎಂದು ಆಶಿಸಿದರು.
ಮಾಜಿ ಶಾಸಕ ಹಾಗೂ ಬಸಪ್ಪ,ಮರುಳಪ್ಪ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿ ಮಕ್ಕಳ ಮೇಲೆ ಪೋಷಕರ ಅತಿಯಾದ ಪ್ರೀತಿ ಮಕ್ಕಳ ಕಲಿಕೆಗೆ ಅಡ್ಡಗಾಲಾಗಿದೆ, ಅಂದರೆ ಶಾಲೆಯಲ್ಲಿ ಶಿಕ್ಷಕರು ಒಂದು ವೇಳೆ ಮಕ್ಕಳನ್ನು ಶಿಕ್ಷಿಸಿದರೆ ಸಾಕು, ಮರುದಿನ ಮಕ್ಕಳೊಂದಿಗೆ ತಂದೆ ತಾಯಿ ಶಾಲೆಗೆ ಬಂದು ನಮ್ಮ ಮಗುವನ್ನು ಏಕೆ ಶಿಕ್ಷಿಸಿದಿರಿ ಎಂದು ಪ್ರಶ್ನೆ ಹಾಕುತ್ತಾರೆ. ಇದರಿಂದ ಮಕ್ಕಳಲ್ಲಿ ಶಿಕ್ಷಕರ ಮೇಲಿನ ಗೌರವ ಕ್ಷಿಣಿಸುತ್ತಿದೆ ಎಂದರು. ನಮ್ಮ ವಿದ್ಯಾಸಂಸ್ಥೆ ಇಂದು 5ವರ್ಷ ಪೂರೈಸಿದ್ದರೆ ಅದು ನಿಮ್ಮೆಲ್ಲರ ಸಹಕಾರ,ಶಿಕ್ಷಕರ ಪರಿಶ್ರಮವಾಗಿದೆ.ಇನ್ನೂ ಮುಂದಿನ ದಿನಗಳಲ್ಲಿ ನಮ್ಮಶಾಲೆಯಲ್ಲಿ ವಿವಿಧ ರೀತಿಯ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ಈ ಶಾಲೆಯ 10ನೇ ತರಗತಿ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಗಳಾಗಿದ್ದು ಅವರು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಶಾಲೆಗೆ,ಹೆತ್ತವರಿಗೆ ಹೆಸರುತರಲಿ ಎಂದು ಹಾರೈಸಿದರು.
ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್ ಅವರು ಮಕ್ಕಳಿಗೆ ಹಿತವಚನ ಹೇಳಿದರು.ಶಾಲೆಯ ಪ್ರಾಚಾರ್ಯ ರವಿ 2011-12ನೇ ವರ್ಷದ ಶಾಲಾ ವರದಿ ಮಂಡಿಸಿದರು. ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ