ಹುಳಿಯಾರಿನ ಬೆಸ್ಕಾಂ ಕಚೇರಿ ಆವರಣದಲ್ಲಿ ರಾಷ್ಟ್ರಭಾವುಟ ಹಾರಿಸದೇ ಖಾಲಿ ಇರುವ ರಾಷ್ಟ್ರಧ್ವಜಸ್ತಂಭ.
ಜನವರಿ 26 ರಂದು ದೇಶಾದ್ಯಂತ ಎಲ್ಲಾ ಸರ್ಕಾರಿ ಕಛೇರಿ,ಶಾಲಾ-ಕಾಲೇಜುಗಳಲ್ಲಿ,ಸಂಘ ಸಂಸ್ಥೆಗಳಲ್ಲಿ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಬಾವುಟವನ್ನು ಹಾರಿಸಿ ರಾಷ್ಟ್ರಕ್ಕೆ ಗೌರವ ಸಲ್ಲಿಸಿದರೆ,ಹೋಬಳಿಯ ಬೆಸ್ಕಾಂನ ಕಛೇರಿ ಆವರಣದಲ್ಲಿ ರಾಷ್ಟ್ರಧ್ವಜ ಹಾರಿಸುವ ಗೋಜಿಗೆ ಹೋಗದಿರುವುದು ಸಾರ್ವಜನಿಕರಲ್ಲಿ ಪ್ರಶ್ನೆ ಉಂಟುಮಾಡಿದೆ.
ಗುರುವಾರ ಕಛೇರಿಗೆ ಎಂದಿನಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಆಗಮಿಸಿದ್ದರು ಸಹ ಗಣರಾಜ್ಯದದಿನ ರಾಷ್ಟ್ರಭಾವುಟ ಹಾರಿಸಬೇಕೆಂದು ಯಾರಿಗೂ ತಿಳಿದಿಲ್ಲದಂತೆ ಇದ್ದುದ್ದು ಕಂಡುಬಂದಿತು.ಇದೇ ಕಛೇರಿಯಲ್ಲಿ ಕೆಲವು ತಿಂಗಳ ಹಿಂದೆ ಕನಕದಾಸ ಜಯಂತಿಯಂದು ಕನಕದಾಸರಿಗೆ ಸಂಬಂದಿಸಿದ ಬಾವುಟವನ್ನು ಇದೇ ರಾಷ್ಟ್ರಧ್ವಜದಲ್ಲಿ ಹಾರಿಸಿದ್ದ ಇವರು ಇಂದು ದೇಶಾಭಿಮಾವನ್ನು ಮರೆತು ಕುಳಿತ್ತಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ