ಹುಳಿಯಾರಿನ ಕೆ.ಇ.ಬಿ ಕಛೇರಿ ಜಿ.ವಿ.ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ್,ಆನಾರೋಗ್ಯದ ಕಾರಣ ಕೆಲಸಕ್ಕೆ ಬಾರದಿದ್ದು,ನಂತ ಕೆಲಸಕ್ಕೆ ಹಾಜರಾದಾಗ ಅವರಿಗೆ ಕಛೇರಿಯಲ್ಲಿ ಕಿರುಕುಳ ನೀಡುತ್ತಿದ್ದಾರೆಂದು ಹೋಬಳಿ ವಿಭಾಗ ಎಲ್ಲಾ ಗ್ರಾಮ ವಿದ್ಯುತ್ ಪ್ರತಿನಿಧಿಗಳು(ಜಿ.ವಿ.ಪಿ) ಒಟ್ಟಾಗಿ ಸೇರಿ ಕಛೇರಿ ಆವರಣದ ಮುಂದೆ ಮಂಗಳವಾರ ಧರಣಿ ನಡೆಸಿದರು.
ಹುಳಿಯಾರು ಹೋಬಳಿಯ ಬೆಸ್ಕಾಂ ಕಛೇರಿ ಆವರಣದಲ್ಲಿ ಬುಧವಾರ ಹೋಬಳಿಯ 13 ವಿಭಾಗದ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಸೇರಿ ಬೆಸ್ಕಾಂನ ಹಿರಿಯ ಸಹಾಯಕಾಧಿಕಾರಿಯ ವಿರುದ್ದ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಡೆಸಲು ಕಾರಣ ಕೆಂಕೆರೆ ಗ್ರಾಮದ ಗ್ರಾಮ ವಿದ್ಯುತ್ ಪ್ರತಿನಿಧಿಯಾಗಿ ಕೆ.ಜಿ.ಮಲ್ಲಿಕಾರ್ಜುನ್ ಎಂಬಾತ ಕಾರ್ಯ ನಿರ್ವಹಿಸುತ್ತಿದ್ದು, ಇತ ಆನಾರೋಗ್ಯದ ಕಾರಣ 2 ತಿಂಗಳು ಕೆಲಸಕ್ಕೆ ರಜೆ ಹಾಕಿದ್ದು, ನಂತರ ಕೆಲಸಕ್ಕೆ ಪುನಃ ಹಾಜರಾದಾಗ ತಾವು ವಸೂಲಿ ಮಾಡಿದ ಬಿಲ್ ಗೆ ತಮಗೆ ಬರಬೇಕಿದ್ದ ಕಮಿಷನ್ ಕೇಳಿದಾಗ ಅದಕ್ಕೆ ಮೇಲಾಧಿಕಾರಿಗಳಿಗೆ ಅರ್ಜಿ ಕೊಡಿ ಎಂದು ತಿಳಿಸಿದ್ದರು, ಅದೇ ರೀತಿ ಅವರು ಅರ್ಜಿಯನ್ನು ಮೂರು-ನ್ಕಾಲು ಬಾರಿ ಕೊಟ್ಟರು ಸಹ ಅವರಿಗೆ ಕೊಡಬೇಕಾದ ಹಣವನ್ನು ನೀಡಿಲ್ಲ. ಅಲ್ಲದೆ ಈ ಜಿ.ವಿ.ಪಿ ಗಳು ಕೆಲಸಕ್ಕೆ ಸೇರಿಕೊಳ್ಳುವಾಗ ಮಾಡಿಕೊಂಡ ಕರಾರಿ ನಂತೆ ಜಿವಿಪಿಗಳು ಕಲೆಕ್ಟ್ ಮಾಡಿದ ಹಣ ಮತ್ತು ಕಛೇರಿಯಲ್ಲಿ ಜನರು ಕಟ್ಟುವ ಸಂಪೂರ್ಣ ಹಣ ಸೇರಿ ಕಮಿಷನ್ ನೀಡುವುದಾಗಿತ್ತು,ಆದರೆ ಈಗ ಅಧಿಕಾರಿಗಳು ಜಿವಿಪಿಗಳಿಗೆ ನೀವು ವಸೂಲಿ ಮಾಡಿದ ಹಣಕ್ಕೆ ಮಾತ್ರ ಕಮಿಷನ್ ಕೊಡುವುದಾಗಿ ಹೇಳುತ್ತಿದ್ದಾರೆಂದು ಆರೋಪಿಸಿ ಧರಣಿಯನ್ನು ನಡೆಸುತ್ತಿದ್ದೇವೆ ಎಂದರು.
ಧರಣಿ ಸ್ಥಳಕ್ಕೆ ಆಗಮಿಸಿದ್ದ ಎಎಒ ಪ್ರಕಾಶ್ ಹಾಗೂ ಎಇಇ ಗೀರೀಶ್ ಧರಣಿ ನಿರತರೊಂದಿಗೆ ಮಾಡಿದ ಸಂದಾನಕ್ಕೆ ಯಾವುದೇ ಫಲ ದೊರೆಯಲಿಲ್ಲ. ಧರಣಿಯು ನಾಳೆಗೆ ಮುಂದುವರೆದಿದ್ದು, ನಮಗೆ ನ್ಯಾಯ ದೊರೆಯದೇ ಹೋದರೆ ತಾಲ್ಲೂಕಿನ 28ಜನ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಸೇರಿ ಧರಣಿ ನಡೆಸುವುದಾಗಿ ಧರಣಿ ನಿರತ ಜಿವಿಪಿಗಳು ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ