
ಹುಳಿಯಾರು ಹೋಬಳಿಯ ಹೆಚ್.ಮೇಲನಹಳ್ಳಿ ಗ್ರಾಮದ ಕೆ.ಲಕ್ಷ್ಮಯ್ಯ (ಬುಡ್ಡಯ್ಯ)(56) ಬುಧವಾರ ರಾತ್ರಿ ಹೃದಯಾಗಾತದಿಂದ ಮೃತರಾಗಿದ್ದಾರೆ. ಇವರು ತಮ್ಮ ಮನೆಯಲ್ಲಿ ನಾಟಿಜೌಷಧಿ ಕೊಡುವ ಕಾರ್ಯಮಾಡುತ್ತಿದ್ದು ಹಾವು,ಚೇಳು,ಜಿರಿ ಕಡಿತ ಹಾಗೂ ಲಕ್ವ ಮುಂತಾದ ಅನೇಕ ಖಾಯಿಲೆಗಳಿಗೆ ಔಷಧಿಯನ್ನು ನೀಡುತ್ತಿದ್ದರು, ಇವರಲ್ಲಿಗೆ ತಿಪಟೂರು,ಹಿರಿಯೂರು,ಹೋಸದುರ್ಗ ತಾಲ್ಲೂಕಿನಿಂದ ಅನೇಕ ಜನರು ಬಂದು ಔಷಧಿಯನ್ನು ಪಡೆಯುತತಿದ್ದರು. ಮೃತರಿಗೆ 3ಮಕ್ಕಳು, 2ಮೊಮ್ಮಕ್ಕಳು ಇದ್ದರು. ಕಾಟಂಲಿಂಗೇಶ್ವರ ಸಂಘದವರು,ವಕೀಲ ಸದಾಶಿವ ಇತರರು ಅಂತಿಮ ದರ್ಶನ ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ