ಇಲ್ಲಿನ ಸುತ್ತಮುತ್ತಲ ಗ್ರಾಮದ ತೋಟದ ಮನೆಗಳ ಪಂಪ್ ಸೆಟ್ ಬಾವಿಗಳಲ್ಲಿ ಕೆಲ ವರ್ಷಗಳಿಂದ ಮೋಟಾರ್ ಕೇಬಲ್ ಕಳ್ಳತನ ನಡೆಯುತ್ತಲೇ ಇತ್ತು,ಆದರೆ ಕಳ್ಳರು ಮಾತ್ರ ಸಿಗುತ್ತಿರಲಿಲ್ಲ,ಇದರಿಂದ ಕಂಗೆಟ್ಟಿದ್ದ ರೈತರು ಪೋಲೀಸರಿಗೆ ದೂರು ನೀಡಿದ್ದರು ಸಹ ಯಾವುದೇ ಫಲ ಲಭಿಸಿರಲಿಲ್ಲ. ಆದರೆ ರೈತರು ಇಷ್ಟಕ್ಕೆ ಸುಮ್ಮನಾಗದೆ ತಾವೇ ಕಳ್ಳರನ್ನು ಹಿಡಿಯಲು ಪತ್ತೆಕಾರ್ಯದಲ್ಲಿ ತೊಡಗಿದ್ದರು. ಅದರಂತೆ ಮಂಗಳವಾರ ರಾತ್ರಿ ಸಿದ್ದಮರಿಯಪ್ಪ ಎಂಬುವರ ತೋಟದಲ್ಲಿ ಕಳ್ಳರಿದ್ದಾರೆ ಎಂಬ ಸುಳಿವನ್ನು ಅರಿತು ಹೊರಟ ರೈತರಿಗೆ ಕಳ್ಳತನ ಮಾಡುತ್ತಿದ್ದ 3-4 ಮಂದಿಯಲ್ಲಿ ಸಿಕ್ಕಿಬಿದ್ದಿದ್ದು ಒಬ್ಬ ಕಳ್ಳ ಮಾತ್ರ.ಅವನನ್ನು ಹಿಡಿದು ತಂದು ಸಾರ್ವಜನಿಕವಾಗಿ ಕಂಬಕ್ಕೆ ಕಟ್ಟಿ ಧರ್ಮದೇಟು ಕೊಟ್ಟಿದ್ದಾರೆ.ಆದರೆ ಕಳ್ಳ ಮಾತ್ರ ತನ್ನ ಸಹಪಾಠಿಗಳ ಬಗ್ಗೆ ತಿಳಿಸಲಿಲ್ಲ. ನಂತರ ಆತನನ್ನು ಹುಳಿಯಾರು ಪೋಲಿಸರ ವಶಕ್ಕೆ ಒಪ್ಪಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ