ಹುಳಿಯಾರಿನ ಟಿಪ್ಪು ಯುವಕ ಸಂಘದವರು ನಡೆಸಿದ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವಕ ದಿನವನ್ನು ರಾಜ್ಯ ರೈತ ಸಂಘದ ಕೆಂಕೆರೆ ಸತೀಶ್ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ನರೇಂದ್ರಬಾಬು,ರಾಘವೇಂದ್ರ,ಡಿಶ್ ಬಾಬು,ಆಶೋಕ್ ಬಾಬು, ಕರವೇ ರಘು,ಟಿಪ್ಪು ಸಂಘದ ಪದಾಧಿಕಾರಿಗಳು ಇದ್ದಾರೆ.
ಹೋಬಳಿಯ ಟಿಪ್ಪುಸುಲ್ತಾನ್ ಯುವಕಸಂಘದವರು ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನ ಹಾಗೂ ರಾಷ್ಟ್ರೀಯ ಯುವ ದಿನದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸ್ವಾಮಿ ವಿವೇಕಾನಂದರು ಒಬ್ಬ ಮಹಾನ್ ವ್ಯಕ್ತಿ ಉತ್ತಮ ಚಿಂತನೆಗಳನ್ನು,ಆದರ್ಶಗಳನ್ನು ಹೊಂದಿದ್ದು,ನಮ್ಮ ದೇಶದ ಬಗ್ಗೆ ಇತರೆ ರಾಷ್ಟ್ರಗಳಿಗೆ ತಿಳಿಸಿದಂತಹವರು. ಅವರು ಯುವ ಪೀಳಿಗೆಯ ಉದ್ದಾರಕ್ಕಾಗಿ ಹತ್ತು ಹಲವು ಮಾರ್ಗಗಳನ್ನು ಹಾಕಿಕೊಟ್ಟಿದ್ದು,ಅದರಂತೆ ನೆಡೆಯುವುದು ನಮ್ಮೆಲರ ಹೊಣೆಯಾಗಿದೆ ಎಂದರು. ಅಲ್ಲದೆ ನಾವು ಸದಾ ಕಾಲ ಸದೃಢ ಮನಸ್ಸನ್ನು ಹೊಂದಿದ್ದೇ ಆದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು.ಅಲ್ಲದೆ ಟಿಪ್ಪು ಸಂಘದವರು ಇಂತಹ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದು,ಮುಂದಿನ ದಿನಗಳಲ್ಲಿ ಅವರು ಇನ್ನೂ ಹೆಚ್ಚಿನ ಸೇವೆಯನ್ನು ಸಾರ್ವಜನಿಕರಿಗೆ ನೀಡಲಿ ಎಂದು ಆಶಿಸಿದರು.ಗ್ರಾ.ಪಂ.ಸದಸ್ಯ ಆಶೋಕ್ ಬಾಬು ಅವರು ಮಾತನಾಡಿ ವಿವೇಕಾನಂದರು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಮ್ಮ ಸಂಸ್ಕೃತಿ ಎಂಹದ್ದು ಎಂಬುದನ್ನು ತಿಳಿಸಿ,ಅಲ್ಲಿನ ಜನರಲ್ಲಿ ಪ್ರೀತಿ,ವಿಶ್ವಾಸವನ್ನು ನೆಲೆಯೂರುವಂತೆ ಮಾಡಿದ್ದಾರೆ ಎಂದರು.ಅಲ್ಲದೆ ಇಂದಿನ ಯುವ ಸಮುದಾಯ ಇವರ ಜಯಂತಿಯನ್ನು ಆಚರಿಸುವ ಮೂಲಕ ಅವರಿಗೆ ನಮನ ಸಲ್ಲಿಸಬೇಕಿದೆ ಎಂದರು.ಸಮಾರಂಭದಲ್ಲಿ ಉಪಸ್ಥಿತರಿದ್ದ ಗ್ರಾ.ಪಂ.ಸದಸ್ಯ ರಾಘವೇಂದ್ರ ,ಎ.ಬಿ.ವಿ.ಪಿಯ ನರೇಂದ್ರಬಾಬು ವಿವೇಕಾನಂದರ ಜೀವನ ಶೈಲಿಯ ಬಗ್ಗೆ ತಿಳಿಸಿದರು.
ಗ್ರಾ.ಪಂ.ಸದಸ್ಯ ರಿಯಾಜ್ ಅಹಮದ್,ಕ.ರ.ವೇ ರಘುಪತಿಗೌಡ,ನೆಹರು ಯುವಕ ಸಂಘದ ಕೋದಂಡರಾಮು,ತಾಲ್ಲೂಕು ಜಯ ಕರ್ನಾಟಕ ಸಂಘದ ಅಧ್ಯಕ್ಷ ವೇಂಕಟೇಶ್,ಟಿಪ್ಪು ಸಂಘದ ಉಪಾಧ್ಯಕ್ಷ ಅಪ್ಸರ್ ಆಲಿ,ಕಾರ್ಯದರ್ಶಿ ಸಯ್ಯದ್,ಇರ್ಫಾನ್,ಮುಜೀಬ್ ಆಲಿಖಾನ್ ಸೇರಿದಂತೆ ಪದಾಧಿಕಾರಿಗಳು ಇದ್ದರು.ಶಾಹಿದ್ ನಿರೂಪಿಸಿ,ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ