ಹುಳಿಯಾರಿನ ಅಯ್ಯಪ್ಪ ಸನ್ನಿಧಿಯನ್ನು ಸತತ 3ನೇ ವರ್ಷ ಪ್ರದಕ್ಷಿಣೆ ಹಾಕಿದ ಗರುಡ ಪಕ್ಷಿ.
ಹುಳಿಯಾರು ಇಲ್ಲಿನ ಗಾಂಧೀಪೇಟೆಯಲ್ಲಿರುವ ಪ್ರಸಿದ್ದ ಶ್ರೀಅಯ್ಯಪ್ಪನ ಸನ್ನಿಧಿಯಲ್ಲಿ ಸಂಕ್ರಾಂತಿ ದಿನದಂದು ಮಧ್ಯಾಹ್ನ ಗರುಡಪಕ್ಷಿಯು ದರ್ಶನ ನೀಡಿದ್ದು, ಅಯ್ಯಪ್ಪನ ಭಕ್ತರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಇದು ಸತತ 3ನೇಬಾರಿ ಗರುಡ ಪಕ್ಷಿ ಅಯ್ಯಪ್ಪನ ಸನ್ನಿಧಿಗೆ ಬಂದು ಪ್ರದಕ್ಷಿಣೆ ಹಾಕುತ್ತಿದೆ ಎಂದು ನೆರೆದಿದ್ದ ಗುರುಸ್ವಾಮಿಗಳು ತಿಳಿಸಿದ್ದಾರೆ. ಶಬರಿಮಲೆಯಲ್ಲಿ ಅಯ್ಯಪ್ಪನ ಒಡವೆಗಳನ್ನು ಕಾವಲು ಕಾಯಲು ಬರುವ ಗರುಡದಂತೆ ಇಲ್ಲಿಯೂ ಸಹ ಗರುಡ ಬರುತ್ತಿರುವುದು ನೊಡುಗರಲ್ಲಿ ಕುತೂಹಲವನ್ನುಂಟುಮಾಡಿದೆ.ಅಲ್ಲದೆ ಗರುಡ ದೇವಾಲಯವನ್ನು ಪ್ರದಕ್ಷಿಣೆಹಾಕುವುದನ್ನು ನೋಡಲು ಜನಸಾಗರೇ ಸೇರಿ,ಅಯ್ಯಪ್ಪನ ನಾಮಸ್ಮರಣೆಯಲ್ಲಿ ತೊಡಗಿದ್ದು, ಈ ದರ್ಶನದಿಂದ ನಮ್ಮ ಜನ್ಮ ಪುನೀತವೆಂದುಕೊಳ್ಳುತ್ತಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ