ಹುಳಿಯಾರು-ಕೆಂಕರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 63ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯದಲ್ಲಿ ಭಾಗವಹಿಸಿದ್ದ ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಇಂದಿನ ಶಾಲಾ ಮಕ್ಕಳಲ್ಲಿ ಒಂದು ದಿನ ರಜೆ ಸಿಕ್ಕರೆ ಸಾಕು ಆರಾಮಾಗಿರಬಹುದು ಎಂಬ ಮನೋಭಾವವಿದೆ.ಆದರೆ ಈ ಮನೋಭಾವವನ್ನು ತೊಡೆದು ಹಾಕಿ ರಾಷ್ಟ್ರೀಯ ದಿನಗಳನ್ನು ಶ್ರದ್ದಾಭಕ್ತಿಯಿಂದ ಆಚರಿಸಿದ್ದೇ ಆದರೆ ಅದು ನಮ್ಮ ರಾಷ್ಟ್ರಕ್ಕೆ ನಾವು ಸಲ್ಲಿಸಿದ ಮಹತ್ವದ ಸೇವೆಯಾಗಿರುತ್ತದೆ ಎಂದರು. ವಿದ್ಯಾರ್ಥಿಗಳು ನಮ್ಮ ದೇಶದ ಸಂಪತ್ತಾಗಿದ್ದು ರಾಷ್ಟ್ರಕ್ಕೆ,ಸಂವಿದಾನಕ್ಕೆ ಧಕ್ಕೆ ಉಂಟಾಗದಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಎಂ.ಎನ್.ನಾಗರಾಜು ಮಾತನಾಡಿ ಸಂವಿಧಾನ ರಚನೆಗೆ ಶ್ರಮಿಸಿದ ಅಂಬೇಡ್ಕರ್ ಮಹಾನ್ ವ್ಯಕ್ತಿಯಾಗಿದ್ದು ಅವರು ರಚಿಸಿದ ಸಂವಿಧಾನದಿಂದ ನಮ್ಮ ಆಡಳಿತ ಚಕ್ರ ನಡೆಯುತ್ತಿದೆ ಎಂದರು. ಹಿರಿಯ ಪ್ರಾಧ್ಯಾಪಕ ಪ್ರೋ. ಮೂಗೇಶಪ್ಪ,ಹೆಚ್.ಓ.ಡಿ.ಇಬ್ರಾಹಿಂ , ಎಸ್.ಡಿ.ಎಂ.ಸಿ ಯ ಜಲಾಲ್ ಸಾಬ್ ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ