ವಿದ್ಯಾರ್ಥಿಗಳು ರಕ್ತದಾನ ಮಾಡಲು ಮೀನಾಮೇಷ ಎಣಿಸುತ್ತಿದ್ದಾಗ ಕಾಲೇಜಿನ ಮೂವರು ಉಪನ್ಯಾಸಕರು ರಕ್ತದಾನ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ರಕ್ತದಾನದ ಬಗೆಗಿದ್ದ ತೊಳಲಾಟವನ್ನು ತೊಡೆದುಹಾಕಿ,ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲವೆಂದು ತಿಳಿಸಿದ್ದಾರೆ.ನಂತರ ಸುಮಾರು 32 ಮಂದಿ ವಿದ್ಯಾರ್ಥಿಗಳು ಸ್ವತಃ ತಾವೇ ರಕ್ತದಾನ ಮಾಡಲು ಮುಂದಾದರು. ಪ್ರಾಚಾರ್ಯ ಎಂ.ಎನ್.ನಾಗರಾಜು, ಎನ್.ಎಸ್.ಎಸ್. ಅಧಿಕಾರಿಗಳಾದ ಶಂಕರಲಿಂಗಯ್ಯ,ಸೈಯ್ಯದ್ ಇಬ್ರಾಹಿಂ,ಹಿರಿಯ ಉಪನ್ಯಾಸಕ ಮೂಗೇಶಪ್ಪ ಶಿಬಿರದ ನೇತೃತ್ವವಹಿಸಿದ್ದು, ಕಾಲೇಜಿನ ಉಪನ್ಯಾಸಕರು ಸೇರಿದಂತೆ ಸಿಬ್ಬಂದಿವರ್ಗದವರು ಸಕ್ರೀಯವಾಗಿ ಪಾಲ್ಗೊಂಡಿದ್ದರು.ಅಲ್ಲದೆ ಹೋಬಳಿಯ ಟಿಪ್ಪು ಯುವಕ ಸಂಘ,ರೋಟರಿ ಸಂಸ್ಥೆ,ಥಿಯೋಸೊಫಿಕಲ್ ಸೊಸೈಟಿಯರು ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಹಣ್ಣು ವಿತರಿಸಿದರು. ಹುಳಿಯಾರು-ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಪ್ರಾಧ್ಯಾಪಕ ಶ್ರೀನಿವಾಸ್ ರಕ್ತದಾನ ಮಾಡುವ ಮೂಲಕ ವಿದ್ಯಾಥಿಗಳಿಗೆ ಮಾದರಿಯಾದರು.
ಹುಳಿಯಾರು: ಹೋಬಳಿಯ ಹುಳಿಯಾರು-ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್. ಘಟಕ ಹಾಗೂ ರೆಡ್ ರಿಬ್ಬನ್ ವತಿಯಿಂದ ತುಮಕೂರು ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ನಡೆಸಿದ ಸ್ವಯಂ ಪ್ರೇರಿತ ರಕ್ತದಾನ ಶೀಬಿರದಲ್ಲಿ ಉಪನ್ಯಾಸಕರೇ ರಕ್ತದಾನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ