ಹುಳಿಯಾರಿನ ಕನಕದಾಸ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ 2011-12ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿದ ಅವರು ಮಾತನಾಡಿದರು.
ನಮ್ಮ ಮಾನವ ಜನ್ಮ ಎಲ್ಲದಕ್ಕಿಂತಲೂ ಅಮೂಲ್ಯವಾದ್ದು,ಅದಕ್ಕಾಗಿ ನಾವು ಸಮಾಜದಲ್ಲಿ ಮಾನವೀಯ ಗುಣಗಳನ್ನು,ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡು,ಇತರರಿಗೆ ನೋವುಂಟುಮಾಡದಂತೆ ಸಹಬಾಳ್ವೆಯಿಂದ ಜೀವಿಸಬೇಕಿದೆ ಎಂದರು. ಅಲ್ಲದೆ ಮುಂದಿನ 77ದಿನಗಳಲ್ಲಿ 10ನೇ ತರಗತಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು,ಇನ್ನಾದರೂ ಕಠಿಣ ಪರಿಶ್ರಮದಿಂದ ಓದಿ,ಶಾಲೆಗೆ,ಪೋಷಕರಿಗೆ ಕೀರ್ತಿ,ಯಶಸ್ಸನ್ನು ತನ್ನಿ ಎಂದು ಮಕ್ಕಳಿಗೆ ಹಾರೈಸಿದರು.
ಚಿ.ನಾ.ಹಳ್ಳಿ ಪ್ರಾಚಾರ್ಯ ಸಂಘದ ಕಾರ್ಯದರ್ಶಿಗಳಾದ ಕರಿಸಿದ್ದಪ್ಪನವರು ಮಾತನಾಡಿ ಪ್ರತಿಯೊಂದು ಶಾಲೆಗಳಲ್ಲೂ ಚರ್ಚಾಸ್ಪರ್ಧೆ,ರಸಪ್ರಶ್ನೆ, ಆಟೋಟಗಳು,ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಇನ್ನೂ ಮುಂತಾದ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಮಕ್ಕಳಲ್ಲಿ ಸಹಕಾರ,ಒಗ್ಗೂಡುವಿಕೆ,ನಾಯಕತ್ವ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತಿವೆ.ಅಲ್ಲದೆ ಮಕ್ಕಳು ತಮ್ಮ ಪ್ರತಿಭೆಯನ್ನು ತೋರ್ಪಡಿಸವ ಒಂದು ವೇದಿಕೆಯೇ ಶಾಲಾವಾರ್ಷಿಕೋತ್ಸವವಾಗಿದೆ ಎಂದರು.ಗ್ರಾ.ಪಂ.ಸದಸ್ಯ ರಂಗನಾಥ್ ಮಾತನಾಡಿ ನಾನು ಸಹ ಈ ಶಾಲೆಯ ಹಳೆವಿದ್ಯಾರ್ಥಿಯಾಗಿದ್ದು,ಇಲ್ಲಿ ಉತ್ತಮ ರೀತಿಯಲ್ಲಿ ಪಾಠಪ್ರವಚನಗಳು ನಡೆಯುತ್ತವೆ.ಇದಕ್ಕೆ ಸಾಕ್ಷಿ ಎಂಬಂತೆ ನನ್ನ ಸಹಪಾಠಿಗಳು ವಿವಿಧ ಸರ್ಕಾರಿ,ಉನ್ನತ ಹುದ್ದೆಗಳಲ್ಲಿದ್ದಾರೆ ಎಂದರು.
ಸಮಾರಂಭದಲ್ಲಿ ಸಹ ಶಿಕ್ಷಕ ಎಸ್.ಚನ್ನಬಸಪ್ಪ 2011-12ನೇ ಸಾಲಿನ ಶಾಲಾವರದಿಯನ್ನು ಮಂಡಿಸಿ, ನಂತರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಚೆಕ್ ವಿತರಿಸುವ ಮೂಲಕ ಅವರನ್ನು ಸನ್ಮಾನಿಸಲಾಯಿತು.
ಕನಕದಾಸ ವಿದ್ಯಾಸಂಸ್ಥೆಯ ಗೌರವ ಸದಸ್ಯರಾದ ಮೈಲಾರಪ್ಪ ಅಧ್ಯಕ್ಷತೆವಹಿಸಿದ್ದ ಸಮಾರಂಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಆಂಜನೇಯ,ಸಂಸ್ಥೆಯ ಅಧ್ಯಕ್ಷೆ ದ್ರಾಕ್ಷಾಯಣಮ್ಮ, ಕಾರ್ಯದರ್ಶಿ ಶಿವಕುಮಾರ್, ಗ್ರಾ.ಪಂ.ಸದಸ್ಯ ಶಿವಕುಮಾರ್, ಕೆಂಚಮ್ಮ, ಸಿ.ಆರ್.ಪಿ.ಮಹಲಿಂಗಣ್ಣ,ಮುಖ್ಯಶಿಕ್ಷಕ ಕೃಷ್ಣಪ್ಪ ಸೆರಿದಂತೆ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ