ವಾಹನ ತಪಾಸಣೆ ವೇಳೆ ವಾಹನ ಚಾಲಕ / ಸವಾರರು ಡಿಜಿ ಲಾಕರ್ ಮತ್ತು ಎಂಪರಿವಾಹನ್ ಮೂಲಕ ವಾಹನದ ದಾಖಲಾತಿಗಳನ್ನು ತೋರಿಸಲು ಸೂಚನೆ
*ವಾಹನ ತಪಾಸಣೆ ವೇಳೆ ವಾಹನ ಚಾಲಕ / ಸವಾರರು ಡಿಜಿ ಲಾಕರ್ ಮತ್ತು ಎಂಪರಿವಾಹನ್ ಮೂಲಕ ವಾಹನದ ದಾಖಲಾತಿಗಳನ್ನು ತೋರಿಸಲು ಸೂಚನೆ*
ಡಿಜಿಟಲ್ ಕ್ರಾಂತಿ ಎಲ್ಲೆಡೆ ಕಾಣಿಸಿಕೊಂಡಿದ್ದು, ಈಗ ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗವು ಡಿಜಿಟಲೀಕರಣದ ಮುಂಚೂಣಿಯಲ್ಲಿದೆ. ವಾಹನ ಸವಾರರಿಗೆ ಎಲ್ಲಾ ಸಮಯದಲ್ಲಿಯೂ ವಾಹನ ಚಾಲನೆಯ ವೇಳೆ ಬೇಕಾದ ಅಗತ್ಯ ದಾಖಲಾತಿಗಳನ್ನು ಭೌತಿಕವಾಗಿ ತೆಗೆದುಕೊಂಡು ಹೋಗಲು ಕಿರಿಕಿರಿಯಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಡಿಜಿಟಲ್ ರೂಪವನ್ನು ವಾಹನ ಚಾಲಕರು ತಮ್ಮೊಡನೆ ಕೊಂಡೊಯ್ಯಲು ಡಿಜಿಲಾಕರ್ ಮತ್ತು ಎಂಪರಿವಾಹನ್ ಆ್ಯಪ್ ಮೂಲಕ ಅವಕಾರ ಮಾಡಿಕೊಡಲಾಗಿದೆ.
ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಂತೆ ನೊಂದಣಿ ಪ್ರಮಾಣ ಪತ್ರ (ಆರ್.ಸಿ), ಚಾಲನಾ ಪರವಾನಗಿ (ಡಿಎಲ್), ವಿಮೆ (ಇನ್ಸೂರೆನ್ಸ್), ಫಿಟೈಸ್ ಪ್ರಮಾಣಪತ್ರ (ಎಫ್.ಸಿ), ಪರ್ಮಿಟ್, ವಾಯುಮಾಲಿನ್ಯ ಪ್ರಮಾಣಪತ್ರ ಸೇರಿ ವಾಹನಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಡಿಜಿಟಲ್ (ಎಲೆಕ್ಟ್ರಾನಿಕ್) ಮಾದರಿಯಲ್ಲಿ ಸಲ್ಲಿಸಬಹುದು.
ಡಿಜಿಟಲ್ ದಾಖಲೆ ಸಮಾನ ಸ್ಮಾಟ್‌ಕಾರ್ಡ್ ಅಥವಾ ಕಾಗದ ರೂಪದ ದಾಖಲೆಗಳಿಗೆ ಡಿಜಿಟಲ್ ದಾಖಲೆ ಸಮಾನವಾಗಿದ್ದು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅನ್ವಯವೂ ಡಿಜಿಟಲ್ ದಾಖಲೆಗಳು ಅಧಿಕೃತವಾಗಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ