SSLC ಪರೀಕ್ಷಾ ನಿರ್ವಹಣೆ ಕುರಿತು ಸಭೆ
ಇಂದು ಮಾನ್ಯ ವಿಧಾನ ಪರಿಷತ್ ಶಾಸಕರಾದ ಶ್ರೀ ಚಿದಾನಂದ್ ಗೌಡ ರವರು ಶಿರಾ ತಾಲ್ಲೂಕು ಕಛೇರಿಯಲ್ಲಿ SSLC ಪರೀಕ್ಷಾ ನಿರ್ವಹಣೆ ಉಸ್ತುವಾರಿ ಸಭೆ ನಡೆಸಿ,
ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಪಟ್ಟಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಕುರಿತು, ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬರುವುದರ ಬಗ್ಗೆ ಹಾಗೂ ವಿದ್ಯಾರ್ಥಿಗಳ ಸಹಾಯಕ್ಕಾಗಿ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಕರಿಸುವಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ರಾಜೇಶ್ ಗೌಡ ರವರು, ತಹಶೀಲ್ದಾರ್ ಶ್ರೀಮತಿ ಮಮತಾ ರವರು, ಬಿಇಓ ಶಂಕರ್ ರವರು, ಪೊಲೀಸ್ ಅಧಿಕಾರಿಗಳು, ಸಾರಿಗೆ ಅಧಿಕಾರಿಗಳು, ಶಿಕ್ಷಕರುಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ