ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಉಚಿತ ಯೋಗಾಸನ ಮತ್ತು ಪ್ರಾಣಾಯಾಮ ಶಿಬಿರ

ಕುಲ,ಮತ,ಲಿಂಗ,ಜಾತಿ ಭೇದವನ್ನು ಎಣಿಸದೆ ಸಾರ್ವತ್ರಿಕ ಸೋದರಭಾವದ ಉದ್ದೇಶ ಹೊಂದಿರುವ ಪಟ್ಟಣದ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯವರ ಆಶ್ರಯದಡಿ ಚಿ.ನಾ.ಹಳ್ಳಿ ಎಂ.ಪುಟ್ಟಮಾದಯ್ಯ ಅವರ ಮಾರ್ಗದರ್ಶನದಲ್ಲಿ ಇಂದಿನಿಂದ ಮಾ.30 ರವರೆಗೆ ಒಂದು ತಿಂಗಳ ಕಾಲ ಪ್ರತಿದಿನ ಪ್ರಾತ:ಕಾಲ 6ರಿಂದ 7 ರ 1 ಗಂಟೆ ಅವಧಿಯಲ್ಲಿ .ಉಚಿತ ಯೋಗಾಸನ ಮತ್ತು ಪ್ರಾಣಾಯಾಮ ಶಿಬಿರ ನಡೆಯಲಿದೆ. ಶಿಬಿರಕ್ಕೆ ಹಾಜರಾಗುವ ಶಿಬಿರಾರ್ಥಿಗಳು ಅಭ್ಯಾಸಕ್ಕೆ ಅನುಕೂಲವಾಗುವಂತೆ ಸಡಿಲವಾದ ಉಡುಪನ್ನು ಧರಿಸಿರಬೇಕು ಹಾಗೂ ರಗ್ಗು,ಜಮಖಾನ ತರಬೇಕು.13ವರ್ಷ ಮೇಲ್ಪಟ್ಟವರಿಗೆ ಮಾತ್ರ ಇಲ್ಲಿ ಅವಕಾಶ ವಿದ್ದು, ಆಸಕ್ತರು ಮಾಹಿತಿಗಾಗಿ ಗೋಪಾಲಕೃಷ್ಣ(7259299271),ಜಗದೀಶ್(9448556171),ಮಹೇಶಾಚಾರ್(9901315526) ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

ಪೋಟೊ ಕ್ಯಾಪ್ಷನ್

ಹುಳಿಯಾರು ಹೋಬಳಿಯ ಗುರುವಾಪುರದ ಸಾಕ್ಷರತಾ ಮಹಿಳಾ ಮಂಡಳಿ ಪ್ರೌಢಶಾಲೆಯ ವಾರ್ಷಿಕೊತ್ಸವದಲ್ಲಿ ರಾಷ್ಟ್ರೀಯ ಯುವಜನೋತ್ಸವದಲ್ಲಿ ರಾಜ್ಯ ತಂಡ ಪ್ರತಿನಿಧಿಸಿದ್ದ ಮಾತೃಭೂಮಿ ಯುವಕ ಸಂಘದವರನ್ನು ಸನ್ಮಾನಿಸಲಾಯಿತು.ತಾ.ಪಂ.ಸದಸ್ಯ ವಸಂತಯ್ಯ,ಜಿ.ಪಂ.ಸದಸ್ಯ ನಿಂಗಮ್ಮ ರಾಮಯ್ಯ,ರೈತಯುವ ಮೊರ್ಚಾದ ಅಧ್ಯಕ್ಷ. ಶ್ರೀನಿವಾಸ್ ಹಾಗೂ ಶಿಕ್ಷಕರಿದ್ದಾರೆ. ಹುಳಿಯಾರು ಸಮೀಪದ ಹಂದನಕೆರೆ ಗುರುಗಿರಿ ಸಿದ್ದೇಶ್ವರಸ್ವಾಮಿಯ ಬೆಟ್ಟದ ತಪ್ಪಲಿನಲ್ಲಿ ನಡೆದ ಮಹಾರುದ್ರಯಾಗಕ್ಕೆ ಮಾಜಿ.ಸಿ.ಎಂ.ಯಡೆಯೂರಪ್ಪ ಅವರನ್ನು ಮಾಜಿ.ಶಾಸಕ ಕಿರಣ್ ಕುಮಾರ್ ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಕರೆದ್ಯೊಯುತ್ತಿರುವುದು.

ಪೋಟೊ ಕ್ಯಾಪ್ಷನ್

ಹುಳಿಯಾರು ಹೋಬಳಿಯ ಗುರುವಾಪುರದ ಸಾಕ್ಷರತಾ ಮಹಿಳಾ ಮಂಡಳಿ ಪ್ರೌಢಶಾಲೆಯ ವಾರ್ಷಿಕೊತ್ಸವದಲ್ಲಿ ರಾಷ್ಟ್ರೀಯ ಯುವಜನೋತ್ಸವದಲ್ಲಿ ರಾಜ್ಯ ತಂಡ ಪ್ರತಿನಿಧಿಸಿದ್ದ ಮಾತೃಭೂಮಿ ಯುವಕ ಸಂಘದವರನ್ನು ಸನ್ಮಾನಿಸಲಾಯಿತು.ತಾ.ಪಂ.ಸದಸ್ಯ ವಸಂತಯ್ಯ,ಜಿ.ಪಂ.ಸದಸ್ಯ ನಿಂಗಮ್ಮ ರಾಮಯ್ಯ,ರೈತಯುವ ಮೊರ್ಚಾದ ಅಧ್ಯಕ್ಷ. ಶ್ರೀನಿವಾಸ್ ಹಾಗೂ ಶಿಕ್ಷಕರಿದ್ದಾರೆ. ಹುಳಿಯಾರು ಸಮೀಪದ ಹಂದನಕೆರೆ ಗುರುಗಿರಿ ಸಿದ್ದೇಶ್ವರಸ್ವಾಮಿಯ ಬೆಟ್ಟದ ತಪ್ಪಲಿನಲ್ಲಿ ನಡೆದ ಮಹಾರುದ್ರಯಾಗಕ್ಕೆ ಮಾಜಿ.ಸಿ.ಎಂ.ಯಡೆಯೂರಪ್ಪ ಅವರನ್ನು ಮಾಜಿ.ಶಾಸಕ ಕಿರಣ್ ಕುಮಾರ್ ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಕರೆದ್ಯೊಯುತ್ತಿರುವುದು

ಕೆಲವೇ ಮಂದಿ ಗ್ರಾಮಸ್ಥರೊಂದಿಗೆ ಅಂತು-ಇಂತು ನಡೆಯಿತು ಗ್ರಾಮ ಸಭೆ

ಹುಳಿಯಾರು ಗ್ರಾಮ ಪಂಚಾಯ್ತಿ ಗ್ರಾಮಭೆಯಲ್ಲಿ ಮನೆ ಗ್ರಾಂಟ್ ಹಂಚುವ ಕಾರ್ಯಕ್ಕೆ ಸೂಕ್ತ ಪ್ರಚಾರವಿಲ್ಲದೆ ಹಾಜರಿದ್ದ ಕೆಲವೇ ಮಂದಿ ಫಲಾನುಭವಿಗಳು ಗ್ರಾಮ ಪಂಚಾಯ್ತಿಯ 2011-12ನೇ ವರ್ಷದ ಅಂಬೇಡ್ಕರ್ ವಸತಿ ಯೋಜನೆ ಹಾಗೂ 2012-13ನೇ ಸಾಲಿನ ಇಂದಿರಾ ಆವಾಸ್ ಯೋಜನೆಯಡಿ ಫಲಾನುಭವಿಗಳ ಆಯ್ಕೆಗಾಗಿ ಸೋಮವಾರ ಪಂಚಾಯ್ತಿ ಆವರಣದಲ್ಲಿ ಕೆಲವೇ ಸಂಖ್ಯೆಯ ಗ್ರಾಮಸ್ಥರೊಂದಿಗೆ ಗ್ರಾಮ ಸಭೆ ನಡೆಯಿತು. ಸಭೆಯಲ್ಲಿ ಬೆರಳೆಣಿಕೆಯಷ್ಟು ಮಾತ್ರ ಗ್ರಾಮಸ್ಥರು ಹಾಜರಿದ್ದುದು ಕುಂಡುಬಂದಿತು, ಶನಿವಾರ ನಡೆಯಬೇಕಿದ್ದ ಸಭೆ ಸೋಮವಾರಕ್ಕೆ ಮುಂದೂಡಿದ್ದು, ಪ್ರಚಾರ ಕೊರತೆಯಿಂದಾಗಿ ಜನರಲ್ಲಿ ಗ್ರಾಮಸಭೆಯ ಬಗ್ಗೆ ತಿಳಿಯದ ವಿಷಯವಾಗಿದೆ.ಅದರೂ ಸಹ ಹಾಜರಿದ್ದ ಕೆಲ ಸ್ತ್ರೀ ಶಕ್ತಿ ಸಂಘಗಳ ಮಹಿಳಾ ಫಲಾನುಭವಿಗಳೊಂದಿಗೆ ಗ್ರಾಮ ಸಭೆ ಅಂತು ಇಂತು ಜರುಗಿತು. ಅಂಬೇಡ್ಕರ್ ವಸತಿ ಯೋಜನೆಯಡಿ ಮಂಜೂರಾಗಿದ್ದ 15 ಮನೆ ಗ್ರಾಂಟ್ ಗಳಲ್ಲಿ 10 ಮನೆ ಎಸ್ಸಿ ವರ್ಗಕ್ಕೂ,5 ಮನೆ ಎಸ್ ಟಿ ವರ್ಗಕ್ಕೆ ಹಾಗೂ ಇಂದಿರಾ ಆವಾಸ್ ಯೋಜನೆಯಡಿ ಮಂಜೂರಾಗಿದ್ದ 26 ಮನೆ ಗ್ರಾಂಟ್ ಗಳಲ್ಲಿ ಎಸ್ಸಿ-ಎಸ್ಟಿಗೆ 16, ಅಲ್ಪಸಂಖ್ಯಾತರಿಗೆ 4, ಇತರೆ 6 ಮನೆ ಗ್ರಾಂಟ್ ಗಳನ್ನು ಹಂಚಿಕೆ ಮಾಡಲಾಯಿತು. ಧ್ವನಿವರ್ದಕವಿಲ್ಲದೆ ನಡೆದ ಸಭೆಯುದ್ದಕ್ಕೂ ಗೊಂದಲಗಳೇ ಮನೆಮಾಡಿದ್ದವು,ಆಂಬೇಡ್ಕರ್ ಹಾಗೂ ಇಂದಿರಾ ಆವಾಸ್ ಯೋಜನೆಯಡಿ ಮಂಜೂರಾಗಿದ್ದ ಮನೆಗಳನ್ನು ಹಂಚಲು ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿತ್ತು, ಆದರೆ ಸಭೆ

ಆಡಳಿತ ಮಂಡಳಿ ಸದಸ್ಯರ ಚುನಾವಣಾ ವೇಳಾ ಪಟ್ಟಿ ಪ್ರಕಟ

ಹುಳಿಯಾರು ಹೋಬಳಿ ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ 2012-2016ರ 5 ವರ್ಷದ ಅವಧಿಗೆ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗೆ ಚುನಾವಣೆಯು ಮಾಚ್ 14 ರಂದು ನಡೆಯಲಿದೆ. ಚುನಾವಣಾ ವೇಳಾಪಟ್ಟಿ ಹಾಗೂ ಮಾಹಿತಿಯನ್ನು ಸಂಘದ ಸೂಚನಾ ಫಲಕದಲ್ಲಿ ಫೆ.೨೮ರಂದು ಪ್ರಕಟಿಸಲಾಗಿದ್ದು, ಉಮೇದುವಾರಿಕೆ ಮತ್ತು ನಾಮನಿರ್ದೇಶನ ಪತ್ರಗಳನ್ನು ಸಲ್ಲಿಸಲಿಚ್ಚಿಸುವ ಸಂಘದ ಸದರಿ ಆಸಕ್ತ ಸದಸ್ಯರು ಹೆಚ್ಚಿನ ವಿವರಗಳಿಗಾಗಿ ಕಛೇರಿಯ ಸೂಚನಾ ಫಲಕವನ್ನು ವೀಕ್ಷಿಸಬೇಕಾಗಿ ಸಂಘದ ಕಾರ್ಯದರ್ಶಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು ; ಜಿಲ್ಲಾ ನ್ಯಾಯಾಧೀಶ ಹೆಚ್.ಬಿ.ಪ್ರಭಾಕರಶಾಸ್ತ್ರಿ

ಹುಳಿಯಾರಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಚಿ.ನಾ.ಹಳ್ಳಿ ತಾಲ್ಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ ಮತ್ತು ಹೋಬಳಿಯ ನವ ಚೇತನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಸತ್ರನ್ಯಾಯಾಧೀಶರಾದ ಹೆಚ್.ಬಿ.ಪ್ರಭಾಕರಶಾಸ್ತ್ರಿ ಉದ್ಘಾಟಿಸಿದರು. ಸರ್ವಜ್ಞ ಹೇಳಿರುವಂತೆ ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು ಎಂಬುದು ಅಕ್ಷರಸಹ ಸತ್ಯ, ಎಲ್ಲಾ ವಿದ್ಯೆಗಳನ್ನು ಸುಲಭವಾಗಿ ತಿಳಿದು ಕರಗತ ಮಾಡಿಕೊಳ್ಳಬಹುದು ಆದರೆ ಮೇಟಿ ವಿದ್ಯೆಯನ್ನು ಅಂದರೆ ಕೃಷಿ ಮಾಡುವುದನ್ನು ಕಲಿಯುವುದು ಸುಲಭದ ಸಂಗತಿಯಲ್ಲ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಸತ್ರನ್ಯಾಯಾಧೀಶರು ಆದ ಹೆಚ್.ಬಿ.ಪ್ರಭಾಕರಶಾಸ್ತ್ರಿ ತಿಳಿಸಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ , ಚಿ.ನಾ.ಹಳ್ಳಿ ತಾಲ್ಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ ಮತ್ತು ಹೋಬಳಿಯ ನವ ಚೇತನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ಸಂಜೆ ನಡೆದ ರೈತಕೂಟ ಫಲಾನುಭವಿಗಳಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಭಾರತ ದೇಶದ ಬೆನ್ನೆಲುಬೇ ಕೃಷಿಯಾಗಿದ್ದು, ಪ್ರಸ್ತುತ ಭಾರತದಲ್ಲಿ ಶೇ.65ರಷ್ಟು ಜನ ಕೃಷಿಯನ್ನೇ ಅವಲಂಭಿಸಿ ಕೃಷಿಕರಾಗಿದ್ದಾರೆ. ಇತರ ರಾಷ್ಟ್ರಗಳ ಸಾಲಿನಲ್ಲಿ ನಮ್ಮ ದೇಶ ಆಗ

ನಾಟಕದ ಒಂದು ದೃಶ್ಯ

ಹುಳಿಯಾರು ಹೋಬಳಿ ನಂದಿಹಳ್ಳಿ ಗ್ರಾಮದಲ್ಲಿ ಬಸವೇಶ್ವರ ನಾಟಕ ಕಲಾ ತಂಡದವರು ಅಭಿನಯಿಸಿದ ಜಗಜ್ಯೋತಿ ಶ್ರೀಬಸವೇಶ್ವರ ಪೌರಾಣಿಕ ನಾಟಕದ ಒಂದು ದೃಶ್ಯ.

ಶಿವರಾತ್ರಿಯಂದು

ಹುಳಿಯಾರಿನ ಈಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯಂದು ಸ್ವಾಮಿಯ ದರ್ಶನಕ್ಕಾಗಿ ಭಕ್ತಾಧಿಗಳು ಸರತಿಯಲ್ಲಿ ನಿಂತು ದರ್ಶನ ಪಡೆದರು. ಹುಳಿಯಾರಿನಲ್ಲಿ ಶಿವರಾತ್ರಿ ಪ್ರಯುಕ್ತ ವಿಪ್ರ ಮಹಿಳೆಯರಿಂದ ಶ್ರೀ ಸೀತಾರಾಮ ಪ್ರತಿಷ್ಠನಾದಲ್ಲಿ ರಾತ್ರಿ ಪೂರ ನಾಲ್ಕು ಜಾವದ ಪುಜೆ ಹಾಗೂ ವ್ರತವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಗ್ರಾಮೀಣ ಭಾಗದ ಕ್ರೀಡಾಕೂಟಗಳಿಗೆ ಪ್ರೋತ್ಸಾಹ ಕೊಡಿ : ಶಾಸಕ ಸಿ.ಬಿ.ಎಸ್

ಹುಳಿಯಾರು ಸಮೀಪದ ಸೋರಲಮಾವು ಗ್ರಾಮದಲ್ಲಿ ಉದಯೋನ್ಮುಖ ಯುವಕ ಸಂಘದವರು ಆಯೋಜಿಸಿದ್ದ ವಾಲಿಬಾಲ್ ಟೂರ್ನಿಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಉದ್ಘಾಟಿಸಿದರು . ಇಂದು ಗ್ರಾಮೀಣ ಭಾಗದ ಯುವಜನತೆ ನಮ್ಮ ಸ್ಥಳೀಯ ಕ್ರೀಡೆಗಳನ್ನು ಮರೆತು ಅವುಗಳು ಮೂಲೆಗುಂಪಾಗುವಂತೆ ಮಾಡದೆ,ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಹೆಚ್ಚಿನದಾಗಿ ಆಯೋಜಿಸುವ ಮೂಲಕ ಅವುಗಳನ್ನು ಪ್ರೋತ್ಸಾಹಿಸಿ,ಬೆಳೆಸಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಸಲಹೆ ನೀಡಿದರು. ಸಮೀಪದ ಸೋರಲಮಾವು ಗ್ರಾಮದಲ್ಲಿ ಬಸವೇಶ್ವರ ಕಲಾ ಯುವಕ ಸಂಘ ಹಾಗೂ ಉದಯೋನ್ಮುಖ ಯುವಕ ಸಂಘದವರು ಆಯೋಜಿಸಿದ್ದ ವಾಲಿಬಾಲ್ ಟೂರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಾಲಿಬಾಲ್,ಕಬ್ಬಡಿ,ಕೋಕೋ ಅಂತಹ ಗ್ರಾಮೀಣ ಕ್ರೀಡಾಕೂಟಗಳನ್ನು ಗ್ರಾಮಾಂತರ ಮಟ್ಟದಲ್ಲಿ ನಡೆಸುವ ಮೂಲಕ ಇಂದಿನ ಯುವ ಪೀಳಿಗೆಯವರು ಸಂಘಟನೆ ಹಾಗೂ ಸೌಹಾರ್ದತೆಯಿಂದ ಬದುಕುವುದನ್ನು ಕಲಿಯಿರಿ ಎಂದರು. ಹಳ್ಳಿಗಳಲ್ಲಿ ಜನ ವ್ಯವಸಾಯದಲ್ಲಿ ನಿರತರಾಗಿರುತ್ತಾರೆ,ಅವರಿಗೆ ಇಂತಹ ಗ್ರಾಮೀಣ ಕ್ರೀಡೆಗಳ ಬಗ್ಗೆ ತಿಳಿಸುವ ಮೂಲಕ ಅವರು ಪಾಲ್ಗೊಳ್ಳುವಂತೆ ಮಾಡುವ ಕಾರ್ಯ ಯುವಸಂಘಟನೆಗಳು ಮಾಡಬೇಕಿದೆ ಎಂದರು.ಟೂರ್ನಿಯಲ್ಲಿ ಪ್ರಥಮ ಬಹುಮಾನವನ್ನು ಬುಕ್ಕಸಾಗರ ತಂಡದವರು,ದ್ವೀತಿಯ ಬಹುಮಾನ ಸೋರಲಮಾವು ತಂಡದವರು ಪಡೆದಿದ್ದಾರೆ. ತಹಶೀಲ್ದಾರ್ ಉಮೇಶ್ ಚಂದ್ರ ಕ್ರೀಡಾಕೂಟಕ್ಕೆ ಆಗಮಿಸಿದ್ದ ಕ್ರೀಡಾಪಟುಗಳಿಗೆ ಶುಭಹಾರೈಸಿದರು.ಉದಯೋನ್ಮುಖ ಸಂ

100 ಮನೆಯಂಗಳದಲ್ಲಿ ಗಾಯನ ಮಾಡಿದ ಉಪಾಸನ ಮೊಹನ್ ಗೆ ಸನ್ಮಾನ

ಹುಳಿಯಾರಿನ ಕೆನರಾ ಬ್ಯಾಂಕ್ ಮ್ಯಾನೇಜರ್ ಸತೀಶ್ ಅವರ ನಿವಾಸದಲ್ಲಿ ನಡೆದ ಅಭಿನಂದನ ಕಾರ್ಯಕ್ರಮದಲ್ಲಿ ನೂರು ಮನೆಯಂಗಳದಲ್ಲಿ ಕವಿತೆಗಾಯನ ಮಾಡಿದ ಗಾಯಕ ಉಪಾಸನ ಮೋಹನ್ ಅವರನ್ನು ಸ್ನೇಹ ಬಳಗವರು ಬಿನ್ನವತ್ತಳೆ ನೀಡುವಮೂಲಕ ಅಭಿನಂದಿಸಿದರು. ಸಂಗೀತ ಸಂಯೋಜಕ, ಗಾಯಕ ಉಪಾಸನ ಮೊಹನ್ ಅವರ ಸಂಗೀತ ಕ್ಷೇತ್ರದಲ್ಲಿನ ಸಾಧನೆ ಹಾಗೂ ಮನೆಯಂಗಳದಲ್ಲಿ ಕವಿತಾ ಗಾಯನ ಕಾರ್ಯಕ್ರಮದ ಮೂಲಕ ನೂರಾರು ಕವಿತೆಗಳನ್ನು ಹಾಡಿ ಸಂಗೀತ ಪ್ರಿಯರ ಮನಸ್ಸು ಗೆದ್ದಿರುವ ಅವರ ಸಾಧನೆ ಗುರ್ತಿಸಿ ಸ್ನೇಹ ಬಳಗದ ವತಿಯಿಂದ ಹುಳಿಯಾರಿನ ಕೆನರಾಬ್ಯಾಂಕ್ ಸತೀಶ್ ನಿವಾಸದಲ್ಲಿ ಅವರನ್ನು ಸನ್ಮಾನಿಸಲಾಯಿತು. ಉಪಾಸನ ಮೊಹನ್ ಅವರ ಪರಿಚಯ ಮಾಡಿಕೊಟ್ಟ ಸತೀಶ್ ಮಾತನಾಡಿ ಮೂಲತಃ ಮೈಸೂರಿನವರಾದ ಮೋಹನ್ ಅವರು ಸಂಗೀತದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದು, ಸಂಗೀತಾಭ್ಯಾಸದಲ್ಲಿ ನಿರತರಾಗಿ ಬೆಂಗಳೂರಿನಲ್ಲಿ ಉಪಾಸನ ಸಂಗೀತ ಶಾಲೆಯನ್ನು ಪ್ರಾರಂಭಿಸಿ ಅನೇಕ ವಿದ್ಯಾರ್ಥಿಗಳಿಗೆ ಸಂಗೀತವನ್ನು ಕಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.ಅಲ್ಲದೆ ಕರ್ನಾಟಕದ ವಿವಿಧ ಭಾಗಗಳಲ್ಲಿ ತಮ್ಮ ಸಂಗೀತ ಕಛೇರಿಗಳನ್ನು ನಡೆಸಿ ಜನರ ಹೃದಯದಲ್ಲಿ ಮನೆ ಮಾಡಿ ಅವರ ಅಭಿಮಾನವನ್ನು ಸಂಪಾದಿಸಿದ್ದಾರೆ. ಅನೇಕ ಕವಿತೆಗಳಿಗೆ ರಾಗ ಸಂಯೋಜನೆಯನ್ನು ಮಾಡಿ ಸುಮಾರು ನೂರು ಮನೆಗಳಲ್ಲಿ ತಮ್ಮ ಸಂಗೀತ ಕಛೇರಿಗಳನ್ನು ನಡೆಸುವ ಮೂಲಕ ಕನ್ನಡ ನಾಡಿನ,ಭಾಷೆಯ ಹಾಗೂ ಸಂಸ್ಕೃತಿಯ ಹಿರಿಮೆಯನ್ನು ಮನೆಮನೆ ಅಂಗಳದಲ್ಲಿ ಹರಡುವಂತೆ ಮಾಡಿದ ಕೀರ್ತಿ

ಹುಳಿಯಾರಿನ ವಿವಿಧೆಡೆ ಪಲ್ಸ್ ಪೋಲಿಯೊ ಕಾರ್ಯಕ್ರಮ

ಹುಳಿಯಾರು ಬಸ್ ನಿಲ್ದಾಣದ ಪೋಲಿಯೊ ಬೂತ್ ನಲ್ಲಿ ಸುತ್ತಮುತ್ತಲ ಹಳ್ಳಿಗಳಿಂದ ಬಂದಿದ್ದ 5ವರ್ಷ ಒಳಪಟ್ಟ ಮಕ್ಕಳಿಗೆ ಪೋಲಿಯೊ ಹನಿ ಹಾಕುತ್ತಿರುವುದು . ಭಾನುವಾರ ಭಾರತದಾದ್ಯಂತ ಪಲ್ಸ್ ಪೋಲಿಯೊ ದಿನದ ಹಿನ್ನಲೆಯಲ್ಲಿ 5ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮ ನಡೆಯುತ್ತಿದ್ದು, ಅದರಂತೆಯೇ ಹುಳಿಯಾರಿನ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಹೋಬಳಿಯ ವಿವಿಧೆಡೆ ಪೋಲಿಯೊ ಬೂತ್ ಗಳನ್ನು ತೆರೆಯಲಾಗಿತ್ತು. ಬೆಳೆಗ್ಗಿನಿಂದಲೇ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಪೋಲಿಯೊ ಹನಿ ಹಾಕಿಸುತ್ತಿರುವುದು ಕಂಡುಬಂದಿತು. ನಗರದ ಬಸ್ ನಿಲ್ದಾಣ,ಅಂಗನವಾಡಿ ಕೇಂದ್ರ,ಆಸ್ಪತ್ರೆ ಸೇರಿದಂತೆ ಶಾಲೆಗಳಲ್ಲೂ ಬೂತ್ ಗಳನ್ನು ತರೆಯಲಾಗಿತ್ತು.ನಗರದ ಬಸ್ ನಿಲ್ದಾಣದ ಬೂತ್ ನಲ್ಲಿ ದಾದಿಯರು ಬಸ್ ನಿಂದ ಇಳಿದು ಬರುತ್ತಿದ್ದ ಜನರನ್ನು ಗಮನಿಸುತ್ತಿದ್ದು,ಅವರಲ್ಲಿ ಯಾರಾದರು 5ವರ್ಷದ ಒಳಗಿನ ಮಕ್ಕಳೊಂದಿಗೆ ಇಳಿದರೆ ಸಾಕು ಅವರ ಹತ್ತಿರವೇ ಹೋಗಿ,ಪಲ್ಸ್ ಪೋಲಿಯೊದ ಬಗ್ಗೆ ಮಾಹಿತಿ ತಿಳಿಸಿ ಮಗುವಿಗೆ ಪೋಲಿಯೊ ಹನಿಯನ್ನು ಹಾಕುತ್ತಿದ್ದರು.ಇದರಿಂದ ಕೆಲವರು ಇಂದು ಪಲ್ಸ್ ಪೋಲಿಯೋ ದಿನ ಎಂಬುದನ್ನು ಮರೆತಿದ್ದರು ಸಹ ಅವರಿಗೆ ತಿಳಿಯುವಂತೆ ಮಾಡುತ್ತಿದ್ದರು. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿಯೂ ಸಂಜೆಯ ವರೆಗೂ ಪಲ್ ಪೋಲಿಯೊ ಹಾಕುತ್ತಿದ್ದು ಕಂಡುಬಂದಿತು.

ಮಕ್ಕಳಿಗೆ ಮಾನವೀಯ ಗುಣಗಳನ್ನು ಕಲಿಸಿ : ಸಿಆರ್ ಪಿ ಮಹಲಿಂಗಪ್ಪ ಸಲಹೆ

ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀಚನ್ನಬಸವೇಶ್ವರ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಸಿಆರ್ ಪಿ ಮಹಲಿಂಗಪ್ಪ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ರಮೇಶ್, ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ,ಸದಸ್ಯರಾದ ಬಸವರಾಜು, ರೇಣುಕಮ್ಮ, ಕುಮಾರ್, ಮಾಜಿ ಸದಸ್ಯೆ ಶಿವಮ್ಮ,ರೈತಸಂಘದ ನಾಗಣ್ಣ ಇದ್ದಾರೆ. ಪ್ರಸ್ತುತ ಸಮಾಜದಲ್ಲಿ ಮಗುವಿಗೆ ಶಿಕ್ಷಣ ಅತಿ ಮುಖ್ಯ ಅದರಂತೆ ಅವರು ಇತರರೊಂದಿಗೆ ಬೆರತು ಬಾಳಲು ಉತ್ತಮ ಮಾನವೀಯ ಗುಣಗಳನ್ನು ಹೊಂದಿರಬೇಕು, ಆ ಗುಣಗಳನ್ನು ಕಲಿಸಿ,ಬೆಳೆಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರದ್ದು ಎಂದು ಹುಳಿಯಾರು ಕ್ಲಸ್ಟರ್ ನ ಸಿಆರ್ ಪಿ ಮಹಲಿಂಗಪ್ಪ ತಿಳಿಸಿದರು. ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಶ್ರೀಚನ್ನಬಸವೇಶ್ವರ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ತಮ್ಮದೇ ಆದ ಸುಪ್ತಚೇತನವನ್ನು ಹೊಂದಿದ್ದು,ಕ್ರೀಡೆ,ಸಂಗೀತ,ನೃತ್ಯ,ನಟನೆಯಂತ ಪಠ್ಯೇತರ ಚಟುವಟಿಕೆಗಳ ಕಡೆ ಅವರ ಒಲವಿರುತ್ತದೆ.ಇದನ್ನು ಅರಿತ ಪೋಷಕರು ಮತ್ತು ಶಿಕ್ಷಕರು ಅವರಿಗೆ ಉತ್ತಮ ಮಾರ್ಗವನ್ನು ತೊರಿಸಿದ್ದೇ ಆದರೆ ಆ ಮಗು ಉತ್ತಮ ನಟ,ನೃತ್ಯಗಾರ,ಕ್ರೀಡಾಪಟುವಾಗಿ ಹೊರಹುಮ್ಮುವ ಮೂಲಕ ಯಶಸ್ಸನ್ನು ಸಾಧಿಸುತ್ತಾನೆ ಎಂದರು. ಅಲ್ಲದೆ ಕೆಲ ಪೋಷಕರು ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡಬೇಕೆಂಬ ಹಂಬಲದಿಂದ ಮಗುವಿಗೆ ಇಷ್ಟವಿಲ್ಲದಿದ್ದರು ಬಲವಂತವಾಗಿ ಸೇರಿಸುತ್ತಾರೆ.ಅದರಿಂದ ಮ

ಓಂಶಕ್ತಿ ನೃತ್ಯ

ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಚನ್ನಬಸವೇಶ್ವರ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಮಕ್ಕಳ ಓಂಶಕ್ತಿ ನೃತ್ಯ ನೋಡುಗರ ಗಮನ ಸೆಳೆಯಿತು.

ಪೋಟೊ ಸುದ್ದಿ

ಹುಳಿಯಾರು ಹೋಬಳಿ ಗಾಣಧಾಳು ಗ್ರಾಮ ಪಂಚಾಯ್ತಿಯಿಂದ ಅಂಗವಿಕಲರಿಗಾಗಿ ಮೀಸಲಿರಿಸಿದ್ದ ಹಣದಲ್ಲಿ ಗುರುವಾಪುರದ ಹನುಮಂತಮ್ಮ ಎಂಬಾಕೆಗೆ ಟ್ರೈಸಿಕಲ್ ನೀಡಲಾಯಿತು.ಗ್ರಾ.ಪಂ.ನ ನೇತ್ರಾವತಿ,ಶ್ರೀನಿವಾಸ್,ಕಾರ್ಯದರ್ಶಿ ನಾಗೇಶ್,ರಂಗಯ್ಯ,ನಂಜುಂಡಪ್ಪ,ಸೋಮಶೇಖರಯ್ಯ ಇದ್ದಾರೆ. ಪಲ್ಸ್ ಪೋಲೀಯೊ ಕಾರ್ಯಕ್ರಮದ ಅಂಗವಾಗಿ ಹುಳಿಯಾರಿನ ರೋಟರಿ ಸಂಸ್ಥೆಯವರು ವಾಸವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಪಲ್ಸ್ ಪೋಲೀಯೊದ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಶನಿವಾರ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.ರೋಟರಿ ಸಂಸ್ಥೆಯ ರವೀಶ್,ಮಂಜುನಾಥ್ ಗುಪ್ತ ಇದ್ದಾರೆ.

ಪೋಟೊ ಸುದ್ದಿ

ಹುಳಿಯಾರಿನ ವಿವಿಧ ಶಾಲೆಗಳಿಗೆ ಭೇಟಿನೀಡುವ ಮೂಲಕ ಚುನಾವಣ ಪ್ರಚಾರದಲ್ಲಿ ತೊಡಗಿದ್ದ ಪದವಿದರ ಕ್ಷೇತ್ರದ ಅಭ್ಯರ್ಥಿ ಎಂಎಲ್ ಸಿ ನಾರಾಯಣಸ್ವಾಮಿ ಅವರನ್ನು ಕನಕದಾಸ ಶಾಲೆಯ ಸಿಬ್ಬಂದಿಯವರು ಸ್ವಾಗತಿಸಿದರು. ತಾ.ಪಂ.ಅಧ್ಯಕ್ಷ ಸೀತಾರಾಂ,ಸದಸ್ಯ ನವೀನ್,ವಸಂತಯ್ಯ,ಸಂಸ್ಥೆಯ ಕಾರ್ಯದರ್ಶಿ ಶಿವಪ್ರಸಾದ್ ಹಾಗೂ ಇತರರಿದ್ದಾರೆ.

ಅಭ್ಯರ್ಥಿಗಳು ತಮ್ಮ ವರ್ಚಸ್ಸಿಗನುಸಾರ ಮತ ಕೇಳಿ : ಎಂಎಲ್ ಸಿ ನಾರಾಯಣಸ್ವಾಮಿ

ಹುಳಿಯಾರಿನ ವಿವಿಧ ಶಾಲೆಗಳಿಗೆ ಬೇಟಿ ನೀಡಿದ ಪದವಿದರ ಕ್ಷೇತ್ರದ ಅಭ್ಯರ್ಥಿ ಎಂಎಲ್ ಸಿ ನಾರಾಯಣಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿ ಚುನಾವಣ ಪ್ರಚಾರಗಳಲ್ಲಿ ಕೆಲ ಅಭ್ಯರ್ಥಿಗಳು ಇಲ್ಲಸಲ್ಲದ ಮಾತುಗಳನ್ನಾಡುತ್ತಾ ವೈಯಕ್ತಿಕ ತೇಜೋವಧೆ ಮಾಡುತ್ತಾರೆ,ಆ ರೀತಿ ಮಾಡುವುದಕ್ಕಿಂತ ತಾವು ಮಾಡಿರುವ ಕಾರ್ಯದನುಸಾರ ಅವರವರ ವರ್ಚಸ್ಸಿಗೆ ಅನುಗುಣವಾಗಿ ಮತ ಕೇಳಿ ಎಂದು ಎಂಲ್ ಸಿ ನಾರಾಯಣಸ್ವಾಮಿ ತಿಳಿಸಿದರು. ಶುಕ್ರವಾರದಂದು ಹೋಬಳಿಯ ವಿವಿಧ ಶಾಲೆಗಳಿಗೆ ಭೇಟಿನೀಡಿ ಮುಂದೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗಾಗಿ ಈಗಾಗಲೇ ಮತ ಪ್ರಚಾರದಲ್ಲಿ ತೊಡಗಿದ್ದ ಪದವಿದರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ನಾರಾಯಣಸ್ವಾಮಿ ಅವರು ಕನಕದಾಸ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಕಳೆದ ಬಾರಿ ಇದೇ ಪದವಿದರ ಕ್ಷೇತ್ರದಿಂದ ಪಕ್ಷೇತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾನು ಅಭೂತಪೂರ್ವ ಗೆಲುವನ್ನು ಪಡೆದಿದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ಬಾರಿ ವರಿಷ್ಠರ ನನ್ನನು, ನಾನು ಕೈಗೊಂಡಕಾರ್ಯಗಳನ್ನು ಗುರ್ತಿಸಿದ್ದಾರೆ.ಅದರಂತೆ ನಾನು ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದರು. ಪಕ್ಷದ ಜನಪರ ಕಾರ್ಯಗಳು ಹಾಗೂ ನಾನು ಕೈಗೊಂಡ ಕಾರ್ಯಗಳೇ ನನ್ನನು ಗೆಲ್ಲುವಂತೆ ಮಾಡುತ್ತವೆ ಎಂದು ಹೇಳಿದರು. ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾದ ನಾನು ಅವರಿಗಾಗಿ ಅನೇಕ ಕಾರ್ಯಗಳನ್ನು ಮಾಡಿದ್ದು,ಸಾವಿರಾರು ಸಹಶಿಕ್

ನೆಚ್ಚಿನ ನಾಯಕ ಹುಟ್ಟಿದ ಹಬ್ಬ ಆಚರಿಸಿದ ಅಭಿಮಾನಿಗಳು

ಹುಳಿಯಾರಿನ ಖಾಸಗಿ ಬಸ್ ಮಾಲೀಕರ ಹಾಗೂ ಏಜೆಂಟರ ಛಾರಿಟಬಲ ಟ್ರಸ್ಟ್ ವತಿಯಿಂದ ಶಾಸಕ ಸಿ.ಬಿ.ಸುರೇಶ್ ಬಾಬು ಅವರ ಜನ್ಮದಿನದಂದು ಶಾಸಕರು ಏಜೆಂಟರ್ ಗಳಿಗೆ ಒರಿಯಂಟಲ್ ಬಾಂಡ್ ವಿತರಿಸಿದರು. ಹೋಬಳಿಯ ಖಾಸಗಿ ಬಸ್ ಮಾಲೀಕರ ಹಾಗೂ ಏಜೆಂಟರ ಛಾರಿಟಬಲ್ ಸೇವಾ ಟ್ರಸ್ಟ್ ವತಿಯಿಂದ ಶಾಸಕ ಸಿ.ಬಿ.ಸುರೇಶ್ ಬಾಬು ಅವರ ಜನ್ಮದಿನವನ್ನು ನಗರದ ಬಸ್ ನಿಲ್ದಾಣದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಆಚರಿಸಿದರು, ಬಸ್ ಏಜೆಂಟರ್ ಗಳಿಗೆ ವೈಯಕ್ತಿಕವಾಗಿ ಒರಿಯಂಟಲ್ ಇನ್ಶೂರೆನ್ಸ್ ಬಾಂಡ್ ವಿತರಿಸಿ ಮಾತನಾಡಿದ ಶಾಸಕ ಸುರೇಶ್ ಬಾಬು ನನ್ನ ಹುಟ್ಟಿದ ಹಬ್ಬದ ದಿನವನ್ನು ಸಮಾಜಸೇವಾ ಕಾರ್ಯಗಳಿಗಾಗಿ ಮೀಸಲಿರಿಸಿದ್ದು,ಪ್ರತಿಬಾರಿಯೂ ಅಂದು ಜನಪರ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದೆನೆ. ಅದರಂತೆಯೇ ಕಳೆದ ವರ್ಷ ತಾಲ್ಲೂಕಿನ ಜನತೆಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳವನ್ನು ಏರ್ಪಡಿಸಿದ್ದರೆ ಈ ಬಾರಿ ತಜ್ಞ ವೈದ್ಯರನ್ನು ಕರೆಸಿ ನೂರಾರು ಜನರಿಗೆ ಉಚಿತ ಹೃದಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು,ಹೃದಯ ಸಂಬಂಧಿ ತೊಂದರೆಯಿದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ಮಾಡಿಸುವುದಾಗಿ ತಿಳಿಸಿದರು. ಹಿಂದೆ ಹೇಳಿದಂತೆ ಹುಳಿಯಾರಿಗೆ ಸುಸಜ್ಜಿತ ಬಸ್ ನಿಲ್ದಾಣದ ವ್ಯವಸ್ಥೆಯನ್ನು ಮಾಡಿದ್ದು,ಶೀಘ್ರವೇ ಅದರ ಪ್ರಾರಂಭೋತ್ಸವವನ್ನು ಮಾಡುವ ಮುಖಾಂತರ ಇಲ್ಲಿನ ವ್ಯಾಪಾರಸ್ಥರಿಗೆ,ಸಾರ್ವಜನಿಕರಿಗೆ ಅನುಕೂಲಕಲ್ಪಿಸುವುದಾಗಿ ಹೇಳಿದರು. ಏಜೆಂಟರ ಸಂಘದಿಂ

ವಿ..ಎಸ್.ಆಚಾರ್ಯ ನಿಧನಕ್ಕೆ ಸಂತಾಪ

ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದ ಉನ್ನತ ಶಿಕ್ಷಣ ಸಚಿವ ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ ಅವರು ಹೃದಯಾಘಾತದಿಂದ ನಿಧನರಾಗಿರುವುದಕ್ಕೆ ಹುಳಿಯಾರಿನ ವಿಪ್ರ ಸಂಘದ ಅಧ್ಯಕ್ಷ ಡಿ.ಆರ್.ನರೇಂದ್ರಬಾಬು, ಕಾರ್ಯದರ್ಶಿ ವಿಶ್ವನಾಥ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ. ರಾಜ್ಯದ ಹಿತಕ್ಕಾಗಿ, ಅಭಿವೃದ್ಧಿಗಾಗಿ ಯಾವತ್ತೂ ಶ್ರಮಿಸುತ್ತಿದ್ದ ಮತ್ತು ಚಿಂತಿಸುತ್ತಿದ್ದ ಸರಳ ಮತ್ತು ಸಜ್ಜನ ರಾಜಕಾರಣಿ ಆಚಾರ್ಯ ಅವರ ನಿಧನ ತುಂಬಲಾರದ ನಷ್ಟವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಎನ್ .ಎಸ್.ಎಸ್ ನಿಂದ ಸಂತಾಪ : ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ನಂದಿಹಳ್ಳಿಯಲ್ಲಿ ನಡೆಯುತ್ತಿದ್ದ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿ.ಎಸ್.ಆಚಾರ್ಯ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ಸಮಾರಂಭದ ಮಧ್ಯದಲ್ಲೇ ಅವರ ನಿಧನಕ್ಕೆ ಎಲ್ಲಾ ಶಿಬಿರಾರ್ಥಿಗಳು ಸೇರಿದಂತೆ ಮುಖಂಡರುಗಳು,ಉಪನ್ಯಾಸಕ ವರ್ಗದವರು ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

ಮಾರ್ಕ್ ಗಳೇ ಮಕ್ಕಳ ಮುಂದಿನ ಭವಿಷ್ಯದ ಮಾನದಂಡ : ಮಾ.ಚಿ.ಕೈಲಾಸನಾಥ್

ಹುಳಿಯಾರು ಸಮೀಪದ ನಂದಿಹಳ್ಳಿಯಲ್ಲಿ ಕಳೆದ 7ದಿನಗಳಿಂದ ನಡೆಯುತ್ತಿದ್ದ ಎನ್,ಎಸ್,ಎಸ್, ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಎನ್.ನಾಗರಾಜು ಮಾತನಾಡಿದರು. ವಿದ್ಯಾರ್ಥಿಗಳು ಮುಂದಿನ ತಮ್ಮ ಜೀವನದಲ್ಲಿ ಒಂದು ಉನ್ನತ ಸ್ಥಾನವನ್ನು, ಕೆಲಸವನ್ನು ಪಡೆಬೇಕಾದರೆ ಅವರು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬೇಕು, ಈ ಪರೀಕ್ಷೆಗಳಲ್ಲಿ ಗಳಿಸಿದ ಮಾರ್ಕ್ ಗಳೇ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಮಾನದಂಡವಾಗುತ್ತವೆ ಎಂದು ನಿವೃತ್ತ ಪ್ರಾಧ್ಯಾಪಕ ಮಾ.ಚಿ.ಕೈಲಾಸನಾಥ್ ತಿಳಿಸಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಕಳೆದ 7ದಿನಗಳಿಂದ ನಂದಿಹಳ್ಳಿಯಲ್ಲಿ ನಡೆಯುತ್ತಿದ್ದ 2011-12ನೇ ಸಾಲಿನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಿದರು. ಕಾಲಕ್ಕೆ ತಕ್ಕಂತೆ ನಾವು ನೀವು ನಡೆಯಬೇಕಿದೆ.ಯಾವ ಕಾಲದಲ್ಲಿ ಯಾವ ಕಾರ್ಯ ಆಗಬೇಕಿರುತ್ತದೆ ಅದು ಖಂಡಿತವಾಗಿಯೂ ನಡೆದೇ ತೀರುತ್ತದೆ ಎಂದರು. ಇಲ್ಲಿ ಕೈಗೊಂಡಿದ್ದ 7ದಿನಗಳ ಶಿಬಿರ ಜನರಲ್ಲಿ ಸ್ವಚ್ಚತೆಯ ಬಗ್ಗೆ ಹರಿವು ಮೂಡಿಸುವುದ ಜೊತೆ ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಗುಣಗಳು ಮೈಗೂಡುವಂತೆ ಮಾಡಿದೆ ಎಂದರು. ಇಂತಹ ಶಿಬಿರಗಳಿಗೆ ಎಲ್ಲಾ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಂಡು ಸ್ವಯಂ ಸೇವೆಯಲ್ಲಿ ತೊಡಗಿದಾಗ ಮಾತ್ರ ನಮ್ಮ ರಾಷ್ಟ್ರ ಉನ್ನತಿಯ ಶಿಖರವನ್ನು ತಲುಪುತ್ತದೆ ಅದಕ್ಕಾಗಿ ನಮ್ಮೆಲ್ಲರ ಪರಿಶ್ರಮ ಅತ್ಯಗತ

ಆಕಸ್ಮಿಕ ಬೆಂಕಿ : 6 ಗುಡಿಸಲು ಭಸ್ಮ

ಹುಳಿಯಾರು ಹೋಬಳಿ ಕಂಪನಹಳ್ಳಿಯಲ್ಲಿ ಆಕಸ್ಮಿಕ ಬೆಂಕಿಗಾಹುತಿಯಾದ ಗುಡಿಸಲುಗಳಲ್ಲಿ ಅಳಿದುಳಿದ ಅವಶೇಷಗಳನ್ನು ಗಮನಿಸುತ್ತಿರುವ ಮಹಿಳೆ. ಹುಳಿಯಾರು : ಸಮೀಪದ ಕಂಪನಹಳ್ಳಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 6 ಗುಡಿಸಲು ಸುಟ್ಟು ಕರಕಲಾದ ಘಟನೆ ಭಾನುವಾರ ರಾತ್ರಿ ಘಟಿಸಿದೆ. ಫೀರ್ ಸಾಬ್ ಎಂಬುವರ ಗುಡಿಸಲಿಗೆ ಮೊದಲು ಬೆಂಕಿ ತಾಗಿ ತದನಂತ ಬೆಂಕಿಯ ಕಾವು ಅಕ್ಕ ಪಕ್ಕದ ಸುಮಾರು 5 ಗುಡಿಸಲನ್ನು ಆವರಿಸಿದ್ದು, ಎಲ್ಲಾ ಗುಡಿಸಲುಗಳು ಭಸ್ಮವಾಗಿ ಹೋಗಿವೆ. ಷೇರ್ ಹುಸೇನ್ ಸಾಬ್,ಸೈಯ್ಯದ್,ಬಾಜಿ ಸಾಬ್, ಸೈಯ್ಯದ್ ಫೀರ್ ಸಾಬ್,ಭಾಗ್ಯಮ್ಮ ಎಂಬ ವ್ಯಕ್ತಿಗಳಿಗೆ ಸೇರಿದ್ದವು. ಈ ಅನಾಹುತದಲ್ಲಿ ಫೀರ್ ಸಾಬ್ ಅವರು ಮದುವೆಗಾಗಿ ತಂದಿದ್ದ ಸಾಮಗ್ರಿಗಳು ಸಂಪೂರ್ಣ ಸುಟ್ಟಿವೆ.ಅಲ್ಲದೆ ಷೇರ್ ಹುಸೇನ್ ಸಾಬ್ ಎಂಬುವರ ಗುಡಿಸಲಿನಲಿದ್ದ ಸುಮಾರು 5 ಸಾವಿರ ಹಣ ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ತಹಶೀಲ್ದಾರ್ ಉಮೇಶ್ಚಂದ್ರ,ಆರ್.ಐ,ಬಸವರಾಜು,ಗ್ರಾಮಲೆಕ್ಕಿಗ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭವ್ಯಭಾರತದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು : ಕ್ಷೇತ್ರ ಶಿಕ್ಷಣಾಧಿಕಾರಿ

ಹುಳಿಯಾರಿನ ವಾಸವಿ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಉದ್ಘಾಟಿಸಿದರು..ಕೆನರಾಬ್ಯಾಂಕ್ ಮ್ಯಾನೇಜರ್ ಸತೀಶ್ ,ಟಿ.ಆರ್.ಲಕ್ಷ್ಮಿಕಾಂತ್,ಚಿ.ನಾ.ಹಳ್ಳಿಯ ತಿಮ್ಮಯ್ಯ, ಇಂದಿರಾಗಾಂಧಿ ಶಾಲೆಯ ಮುಖ್ಯಶಿಕ್ಷಕ ದೇವೇಂದ್ರಪ್ಪ,ಶಿಕ್ಷಕ ರಮೇಶ್,ಮುಖ್ಯಶಿಕ್ಷಕಿ ಗಾಯತ್ರಿ ಇದ್ದಾರೆ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಪೈಪೋಟಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಭವ್ಯಭಾರತ ನಿರ್ಮಾಣವಾಗ ಬೇಕಾದರೆ ಇಂದಿನ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಮಹತ್ವವಾದದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಅಭಿಪ್ರಾಯಪಟ್ಟರು. ಹೋಬಳಿ ವಾಸವಿ ಸಂಸ್ಥೆಯ ಟಿ.ಆರ್.ಶ್ರೀನಿವಾಸಶ್ರೇಷ್ಠಿ ರುಕ್ಮಿಣಮ್ಮ ಪ್ರೌಢಶಾಲೆಯಲ್ಲಿ ಶನಿವಾರ ಸಂಜೆ ನಡೆದ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭವನ್ನು ಉದ್ಘಾಟಸಿ ಮಾತನಾಡಿದರು. ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಂಡಾಗ ಮಾತ್ರ ಅದು ಸಾರ್ಥಕವಾಗುತ್ತದೆ.ಇದರಿಂದ ಮಕ್ಕಳು ತಮ್ಮ ಸುಪ್ತ ಪ್ರತಿಭೆಯನ್ನು ಅಭಿವ್ಯಕ್ತಿಸಲು ಸಹಕಾರಿಯಾಗುತ್ತದೆ ಎಂದರು. ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗಾಗಿ ಶಾಲೆಗಳಲ್ಲಿ ವಿವಿಧ ಸಂಘಗಳನ್ನು ರಚನೆ ಮಾಡಿ, ಮಗು ಈ ಸಂಘಗಳಿಗೆ ಸೇರಿ ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನೆಡೆದು,ನಾಯಕತ್ವ ಗುಣ,ಸಹಕಾರ ಮನೋಭಾವ ಹಾಗೂ ಕೂಡಿಬಾಳುವುದರ ಬಗ್ಗೆ ತಿಳಿಯಲು ನೆರವಾಗುತ್ತವೆ ಎಂದರು.ಶ

ಪೋಟೊ ಕ್ಯಾಪ್ಷನ್

ಹುಳಿಯಾರಿನ ಮಾರುತಿ ಶಾಲೆಯಲ್ಲಿ ನಡೆದ ಶಾಲಾ ವಾಷಿಕೋತ್ಸವದಲ್ಲಿ ಮಕ್ಕಳ ಭರತ ನಾಟ್ಯ ನೋಡುಗರ ಗಮನಸೆಳೆಯಿತು. ಹುಳಿಯಾರು-ಕೆಂಕೆರೆ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕದಿಂದ ನಂದಿಹಳ್ಳಿಯಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.ಡಾ ಸಿದ್ದರಾಮಯ್ಯ,ಡಾನಾಗರಾಜು ತಪಾಸಣೆ ಮಾಡಿದರು.

ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಿ: ಶಾಸಕ ಸಿ.ಬಿ.ಎಸ್

ಹುಳಿಯಾರು ಹೋಬಳಿಯ ಜಿ.ಗೋಲ್ಲರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಸಮಾರೋಪ ಸಮಾರಂಭದಲ್ಲಿ ದಾನಿಗಳಾದ ಸಾಹುಕಾರ್ ಜಿ.ಸಿ.ಸಿದ್ದಲಿಂಗಪ್ಪ ಅವರ ಭಾವಚಿತ್ರದ ಅನಾವರಣವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ನೆರವೇರಿಸಿದರು. ಜಿ.ಪಂ.ಸದಸ್ಯೆ ನಿಂಗಮ್ಮ,ತಾ.ಪಂ.ಅಧ್ಯಕ್ಷ ಸೀತಾರಾಂ,ಸದಸ್ಯ ವಸಂತಯ್ಯ, ಇದ್ದಾರೆ. ಗ್ರಾಮೀಣ ಭಾಗದ ಕೆಲ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸದೆ ತಮ್ಮ ಜೊತೆ ಕೂಲಿ ಕೆಲಸಕ್ಕೆ ಹಾಕಿಕೊಳ್ಳುವುದನ್ನು ಬಿಟ್ಟು ಅವರಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಹುಳಿಯಾರು ಹೋಬಳಿ ಗಾಣಧಾಳು ಗ್ರಾಮಪಂಚಾಯ್ತಿಯ ಜಿ.ಗೊಲ್ಲರಹಟ್ಟಿ(ಸೋಮನಹಳ್ಳಿ) ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಹಾಗೂ ಕುಡಿಯುನ ನೀರಿನ ಯೋಜನೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು,ಕೊಡುವುದು ಪೋಷಕ ಹಾಗೂ ಶಿಕ್ಷಕರ ಕರ್ತವ್ಯವಾಗಿದೆ.ಪೋಷಕರು ತಮ್ಮ ಮಕ್ಕಳ ಮೇಲೆ ಪ್ರೀತಿಯನ್ನು ಹೊಂದಿರ ಬೇಕು ಅದರಂತೆ ಅವರಲ್ಲಿ ಉತ್ತಮಾಂಶಗಳು ಬೆಳೆಯುವ ರೀತಿಯಲ್ಲಿ ವಾತಾವರಣವನ್ನು ಸೃಷ್ಟಿಸಬೇಕು ಆಗ ಮಗು ತನ್ನಲ್ಲಿ ಉತ್ತಮ ಚಿಂತನೆ,ಆಲೋಚನೆಗಳನ್ನು ಮಾಡಿ ಮಹಾನ್ ವ್ಯಕ್ತಿಗಾಗಿ ಬೆಳೆಯುತ್ತಾನೆ ಎಂದರು. ಮಗುವಿಗೆ ಸ್ವಚ್ಚತೆ ಎಂಬುದು ತುಂಬಾ ಅವಶ್ಯ ಇದರಿಂದ ಮಗು ಉತ್ತಮ ಆರೋಗ್ಯದಿಂದಿರಲು ಸಹಕಾರಿಯಾಗುತ್ತದೆ, ಗ್ರಾ

ಉಚಿತ ಆರೋಗ್ಯ ತಪಾಸಣಾ ಶಿಬಿರ

ಹುಳಿಯಾರು ಹೋಬಳಿಯ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದವತಿಯಿಂದ ನಂದಿಹಳ್ಳಿಯಲ್ಲಿ ಆಯೋಜಿಸಿರುವ 2011-12ನೇ ಸಾಲೀನ 7ದಿನಗಳ ಎನ್.ಎಸ್.ಎಸ್ ಶಿಬಿರದ 4ನೇ ದಿನವಾದ ಇಂದು(ತಾ.11) ಶನಿವಾರ ಮಧ್ಯಾಹ್ನ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವ ನಡೆಯಲಿದೆ. ತಾಲ್ಲೂಕು ಸಮಾಜಕಲ್ಯಾಣ ಇಲಾಖೆ ಮತ್ತು ರೋಟರಿ ಕ್ಲಬ್ ನ ಅಧ್ಯಕ್ಷರಾದ ಕೆ.ಆರ್. ಚನ್ನಬಸಪ್ಪ ಅಧ್ಯಕ್ಷತೆವಹಿಸುವ ಸಮಾರಂಭದಲ್ಲಿ ಸಕ್ಕರೆ ಕಾಯಿಲೆ ಮತ್ತು ಅದರ ನಿರ್ವಹಣೆ ಹಾಗೂ ಆಸ್ಪೃಶ್ಯತಾ ನಿವಾರಣೆ ಎಂಬ ವಿಷಯದ ಬಗ್ಗೆ ಸಿದ್ದಶ್ರೀ ಕ್ಲಿನಿಕ್ ನ ಡಾ ವೈಜಿ.ಸಿದ್ದರಾಮಯ್ಯ ಉಪನ್ಯಾಸ ನೀಡಲಿದ್ದಾರೆ.ಅಲ್ಲದೆ ತಾಲ್ಲೂಕು ವೈದ್ಯ ಸಂಘದ ಕಾರ್ಯದರ್ಶಿ ಡಾ ಸಂಜೀವ್ ಕುಮಾರ್,ಡಾಪ್ರಶಾಂತಕುಮಾರ್,ಸ್ವಂದನ ನರ್ಸಿಂಗ್ ಹೋಂನ ಡಾ ನಾಗರಾಜು,ವೀರಭದ್ರೇಶ್ವರ ಕ್ಲಿನಿಕ್ ನ ಡಾ ರಾಜಶೇಖರ್, ಡಾಶಶಿಕಿರಣ್ , ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ದಾಸಪ್ಪ,ವ್ಯವಸ್ಥಾಪಕ ರಾಮಣ್ಣ, ಚನ್ನಬಸವಯ್ಯ, ಲಿಂಗದೇವರು,ಪ್ರಾಧ್ಯಾಪಕ ಹನುಮಂತಪ್ಪ ಸೆರಿದಂತೆ ಇತರರು ಭಾಗವಹಿಸುವ ಕಾರ್ಯಕ್ರಮಕ್ಕೆ ಗ್ರಾಮದ ಸುತ್ತಲಿನ ಸಾರ್ವಜನಿಕರು ಪಾಲ್ಗೊಂಡು ಅದರ ಬಗ್ಗೆ ಮಾಹಿತಿ ಪಡೆಯಬೇಕೆಂದು ಶಿಬಿರಾಧಿಕಾರಿ ಶಂಕರಲಿಂಗಯ್ಯ ಕೋರಿದ್ದಾರೆ.

ಆಶೀರ್ವಚನ

ಹುಳಿಯಾರು ಸಮೀಪದ ದೊಡ್ಡೆಣ್ಣೆಗೆರೆಯ ಗ್ರಾಮದೇವತೆ ಕರಿಯಮ್ಮ ದೇವಿಯ ಪುನರ್ ಪ್ರತಿಷ್ಠಾಪನಾ ಕಳಸ ಸ್ಥಾಪನೆಗೆ ಆಗಮಿಸಿದ್ದ ಪುರುಷೋತ್ತಮಾನಂದಪುರಿ ಸ್ವಾಮಿಗಳು ಆಶೀರ್ವಚನ ನೀಡಿದರು.ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ಶಾಸಕ ಸಿ.ಬಿ.ಸುರೇಶ್ ಬಾಬು ಹಾಜರಿದ್ದರು.

ಸನ್ಮಾನ

ಹುಳಿಯಾರು ಹೋಬಳಿ ಗಾಣಧಾಳು ಗ್ರಾಮದಲ್ಲಿ ಹೋಬಳಿ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಕನ್ನಡ ಕವಿಕಾವ್ಯ ಗೋಷ್ಠಿ ಸಮಾರಂಭದಲ್ಲಿ ಸ್ಥಳೀಯ ಸಾವಯವ ಕೃಷಿಕ ಮಲ್ಲೇಶಯ್ಯ ತಮ್ಮ ಗುರುಗಳಾದ ರಂಗಮ್ಮ ಮತ್ತು ನಾಗರಾಜಯ್ಯ ಸನ್ಮಾನಿಸಿ, ಗುರುಭಕ್ತಿ ತೋರಿದ್ದಾರೆ.ನೀಲಕಂಠಪ್ಪ, ಚನ್ನಬಸವಯ್ಯ, ರಾಮಯ್ಯ, ಇದ್ದಾರೆ.

ಜಾಥಾ

ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕದಿಂದ ನಂದಿಹಳ್ಳಿಯಲ್ಲಿ ಹಮ್ಮಿಕೊಂಡಿದ್ದ 2011-12ನೇ ಸಾಲೀನ ಶಿಬಿರದಲ್ಲಿ ಶಿಬಿರಾರ್ಥಿಗಳು ಗ್ರಾಮದಲ್ಲಿ ಜಾಥಾ ನಡೆಸಿದರು.

ನಂದಿಹಳ್ಳಿಯಲ್ಲಿ ಎನ್ ಎಸ್ ಎಸ್ ಶಿಬಿರಕ್ಕೆ ಚಾಲನೆ

ಹುಳಿಯಾರು ಹೋಬಳಿ ನಂದಿಹಳ್ಳಿಯಲ್ಲಿ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದವತಿಯಿಂದ ಹಮ್ಮಿಕೊಂಡಿದ್ದ 2011-12ನೇ ಸಾಲೀನ ಎನ್.ಎಸ್.ಎಸ್ ಶಿಬಿರವನ್ನು ನಂದಿಹಳ್ಳಿ ಶಿವಣ್ಣ ಉದ್ಘಾಟಿಸಿದರು . ಹುಳಿಯಾರು ಹೋಬಳಿಯ ನಂದಿಹಳ್ಳಿ ಗ್ರಾಮದಲ್ಲಿ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದವತಿಯಿಂದ ಹಮ್ಮಿಕೊಂಡಿದ್ದ 2011-12ನೇ ಸಾಲಿನ ಎನ್ ಎಸ್ ಎಸ್ ಶಿಬಿರವನ್ನು ಕಾಲೇಜಿನ ಸಿಡಿಸಿ ಉಪಾಧ್ಯಕ್ಷರಾದ ನಂದಿಹಳ್ಳಿ ಶಿವಣ್ಣ ಚಾಲನೆ ನೀಡಿದರು. ಸ್ವಸ್ತ ಸಮಾಜದ ನಿರ್ಮಾಣದಲ್ಲಿ ಸಾರ್ವಜನಿಕ ನೈರ್ಮಲ್ಯ ಮತ್ತು ವ್ಯಕ್ತಿಗತ ಆರೋಗ್ಯ ಎಂಬ ವಿಚಾರದ ಬಗ್ಗೆ ಒಟ್ಟು ೭ ದಿನಗಳ ಕಾಲ ನಡೆಯುತ್ತಿರುವ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾನವನ ಜೀವನದಲ್ಲಿ ಸ್ವಚ್ಚತೆ ತುಂಬಾ ಅಗತ್ಯ.ಸ್ವಚ್ಚತೆ ನಮ್ಮನ್ನು,ನಮ್ಮಪರಿವಾರವನ್ನು ಹಾಗೂ ಸುತ್ತಲಿನವರನ್ನು ಕಾಪಾಡುತ್ತದೆ.ಇಲ್ಲವಾದಲ್ಲಿ ಹಲವಾರು ರೋಗರುಜಿನೆಗಳ ಬಾಯಿಗೆ ಸಿಲುಕಿ ನರಳಬೇಕಾಗುತ್ತದೆ ಎಂದರು. ಜನರು ತಮ್ಮ ಬಗ್ಗೆ ಮಾತ್ರ ಮೊದಲು ಚಿಂತಿಸುತ್ತಾರೆ ಅದೇ ರೀತಿ ತಮ್ಮ ಅಜುಬಾಜಿನವರ ಬಗ್ಗೆ ಯೋಚಿಸಿ ಅವರು ನಮ್ಮಂತೆಯೇ ಎಂದು ಬಾವಿಸಿ,ಸಹಬಾಳ್ವೆ,ಸಹಕಾರದಿಮದ ಬಾಳಬೇಕಿದೆ ಎಂದು ಕಿವಿಮಾತು ಹೇಳಿದರು.ಇಂತಹ ಸಮಾರಂಭಗಳಿಗೆ ಜನರು ಬಾಗವಹಿಸದೆ ವಿಷಯದ ವಿನಿಮಯವಾಗುತ್ತಿಲ್ಲ,ಅದರಿಂದ ಜನರಲ್ಲಿ ಸ್ವಚ್ಚತೆ,ಅದರ ಬಗ್ಗೆ ಅರಿವು ಸಹ ಇಲ

ಪೋಟೊ ಕ್ಯಾಪ್ಷನ್

ಹುಳಿಯಾರು ಹೋಬಳಿ ಹೊಸಹಳ್ಳಿಯಲ್ಲಿ ನೂತನವಾಗಿ ಉದ್ಘಾಟನೆಗೊಂಡ ಶ್ರೀವೆಂಕಟೇಶ್ವರ ಸ್ವಾಮಿಯ ದೇವಾಲಯದ ಒಂದು ನೋಟ. ಹುಳಿಯಾರು ಹೋಬಳಿ ಹೊಸಹಳ್ಳಿಯ ಶ್ರೀವೆಂಕಟೇಶ್ವರ ಸ್ವಾಮಿಯ ನೂತನ ದೇವಾಲಯದ ಉದ್ಘಾಟನೆಯ ಧಾಮರ್ಿಕ ಸಮಾರಂಭಕ್ಕೆ ಅಬಕಾರಿ ಸಚಿವ ರೇಣುಕಾಚಾರ್ಯ ಆಗಮಿಸಿದ್ದರು.ಜೊತೆಯಲ್ಲಿ ಮಾಜಿ ಶಾಸಕ ಕಿರಣ್ ಕುಮಾರ್, ತಾ.ಪಂ.ಅಧ್ಯಕ್ಷ ಸೀತಾರಾಂ,ಸದಸ್ಯ ಕೆಂಕೆರೆ ನವೀನ್,ಗ್ರಾಮಸ್ಥರು ಇದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಕೆಂಕೆರೆ ಕೃಷ್ಣಮೂರ್ತಿ ವಿಧಿವಶ

ಹುಳಿಯಾರು ಹೋಬಳಿ ಕೆಂಕೆರೆಯ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಕೃಷ್ಣಮೂರ್ತಿ(88) ಶುಕ್ರವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ಮೃತರಾಗಿದ್ದಾರೆ. ಇವರು ಧರ್ಮರತ್ನಾಕರ,ಸಮಾಜ ಸೇವಾ ವಿಭೂಷಣ ಪ್ರಶಸ್ತಿಗಳಿಗೆ ಬಾಜನರಾಗಿದ್ದು, ಹುಳಿಯಾರಿನ ಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ರದರ್ಶಿಗಳಾಗಿದ್ದರು. ಮೃತರಿಗೆ ಒಬ್ಬ ಮಗ,ಮೂವರು ಮೊಮ್ಮಕ್ಕಳು ಇದ್ದಾರೆ..ಮಾಜಿ ಶಾಸಕ ಕಿರಣ್ ಕುಮಾರ್,ತಹಶೀಲ್ದಾರ್ ಉಮೇಶ್ಚಂದ್ರ, ಎಎಸೈ,ಡಿ,ಎಸ್,ಎಸ್ ಮುಖಂಡರು,ತಾ.ಪಂ.ಸದಸ್ಯ ನವೀನ್,ಕೆಂಕೆರೆ ಗ್ರಾ.ಪಂ.ಸದಸ್ಯರು ಸೇರಿದಂತೆ ಬಸವೇಶ್ವರ ಶಾಲೆಯ ಶಿಕ್ಷಕರು,ಮಕ್ಕಳು ಮೃತರ ಅಂತಿಮ ದರ್ಶನ ಪಡೆದು,ಕಂಬನಿ ಮಿಡಿದಿದ್ದಾರೆ.ಶನಿವಾರ ಮೃತರ ಅಂತ್ಯಕ್ರಿಯೆ ನೆರವೇರಿತು.

ಹುಳಿಯಾರು ಹೋಬಳಿ ನಂದಿಹಳ್ಳಿಯಲ್ಲಿ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದವತಿಯಿಂದ ಹಮ್ಮಿಕೊಂಡಿದ್ದ 2011-12ನೇ ಸಾಲೀನ ಎನ್.ಎಸ್.ಎಸ್ ಶಿಬಿರವನ್ನ

ಪ್ರಸ್ತುತ ಸಮಾಜದ ಜನಜೀವನ ಅಭಿವೃದ್ದಿಯಾದಂತೆ,ಆವಿಷ್ಕಾರಗಳುಂಟಾದಂತೆ ಜನರಲ್ಲಿ ನಮ್ಮ ಪರಂಪರೆಯ ಬಗೆಗಿನ ಗಮನವೇ ಇಲ್ಲದಂತಾಗಿದೆ.ಆದರೆ ಇಂತಹ ಸಾಂಪ್ರದಾಯಿಕ ಭಕ್ತಿಯ ಪರಂಪರೆಯು ಇಂದಿಗೂ ಸಹ ಹಳ್ಳಿಗಾಡು ಪ್ರದೇಶಗಳಲ್ಲಿ ಜಿವಂತವಾಗಿದೆ ಎಂದು ಕುಪ್ಪೂರು ಮಠದ ಡಾ ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಪಟ್ಟರು. ಹುಳಿಯಾರು ಹೋಬಳಿಯ ಹೊಸಹಳ್ಳಿಯಲ್ಲಿ ನೂತನವಾಗಿ ಉದ್ಘಾಟನೆಗೊಂಡ ಶ್ರೀವೆಂಕಟೇಶ್ವರ ಸ್ವಾಮಿ ದೇವಾಲಯದ ಧಾರ್ಮಿಕ ಸಮಾರಂಭಕ್ಕೆ ಆಗಮಿಸಿದ್ದ ಅವರು ತಮ್ಮ ಆಶೀರ್ವಚನ ನೀಡಿದರು. ಈ ವರ್ಷ ಎಲ್ಲಾ ದೇವಾಲಯಗಳಿಗೂ ಶುಕ್ರದೆಸೆ ಪ್ರಾರಂಭವಾದಂತೆ ಕಾಣುತ್ತಿದೆ ಕಾರಣ ಸುಮಾರು ವರ್ಷಗಳಿಂದ ಜಿರ್ಣೋದ್ದಾರವಾದ ದೇವಾಲಯಗಳು ಈಗ ಉದ್ಘಾಟನೆಯಾಗುತ್ತವೆ,ಹಿಂದಿನ ಕಾಲದಲ್ಲಿ ರಾಜರುಗಳು ಮಠಮಾನ್ಯಗಳಿಗೆ ದೇಣಿಗೆ ರೂಪದಲ್ಲಿ ಸಂಪತ್ತು ನೀಡುತ್ತಿದ್ದರು ಅದರಂತೆ ಇಂದು ಬಿಜೆಪಿ ಸರ್ಕಾರ ತನ್ನ ಮೂರುವರೆವರ್ಷದ ಅಧಿಕಾರವಧಿಯಲ್ಲಿ ಮಠಮಾನ್ಯಗಳಿಗೆ ದೇಣಿಗೆಯನ್ನು ನೀಡಿದ್ದು,ಸಾರ್ವಜನಿಕ ಕಾರ್ಯಗಳಿಗೆ,ಮಕ್ಕಳ ವಿದ್ಯಾಭ್ಯಾಸಕ್ಕೆ,ಸಮಾಜಸೇವೆಗೆ ಉಪಯುಕ್ತವಾಗುವಂತೆ ಮಾಡಿದೆ,ಆದರೆ ಅದನ್ನು ಕೆಲವರು ಟೀಕಿಸುತ್ತಿದ್ದಾರೆ ಅದು ತಪ್ಪು ಮಠಗಳಲ್ಲಿಯೂ ಸಹ ಜನಪರ ಕಾರ್ಯಗಳು ನಡೆಯುತ್ತವೆ ಎಂದರು.ಮತದಾರರು ತಮ್ಮ ಮತ ಹಾಕುವುದಕ್ಕಿಂತ ಮುಂಚೆ ಒಮ್ಮೆ ಯೋಚಿಸಿ ನಮಗೆ,ನಮ್ಮ ಸಮಾಜಕ್ಕೆ ಯಾರು ಉತ್ತಮ ಸೇವಯನ್ನು ಮಾಡುತ್ತಾರೆ ಅಂತಹವರನ್ನು ಗುರ್ತಿಸಿ ಮತಚಲಾಯಿಸಿ ಎಂದು ಕಿವಿಮಾತು

ಪೋಟೊಕ್ಯಾಪ್ಷನ್

ಹುಳಿಯಾರಿನ ಬಿ.ಎಂ.ಎಸ್.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ ಹಾಗೂ ರೆಡ್ ರಿಬ್ಬನ್ ವತಿಯಿಂದ ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಸಲಾಯಿತು. ಹುಳಿಯಾರು ಹೋಬಳಿ ನಂದಿಹಳ್ಳಿ ಸ.ಹಿ.ಪ್ರಾ ಶಾಲೆಯಲ್ಲಿನ ಪುಟಾಣಿ ವಿಜ್ಞಾನ ಬಳಗ ಆಯೋಜಿಸಿದ್ದ ರಾಜ್ಯಮಟ್ಟದ ಗಣಿತ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ 3ನೇ ಸ್ಥಾನ ಹಾಗೂ ಜಿಲ್ಲೆ,ತಾಲ್ಲೂಕು ಮಟ್ಟದಲ್ಲಿ 5,6ನೇ ರ್ಯಾಂಕ್ ಗಳಿಸಿದ ಮಕ್ಕಳಿಗೆ ಮುಖ್ಯಶಿಕ್ಷಕರು ಪ್ರಶಸ್ತಿಪತ್ರ ವಿತರಿಸಿದರು. ಶಿಕ್ಷಕರು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ನಿಯಮಿತ ಅವಧಿಯಲ್ಲಿ ವಿದ್ಯುತ್ ಉಪಸ್ಥಾವರ ಪ್ರಾರಂಭವಾಗದಿದ್ದರೆ ಮತ್ತೆ ಧರಣಿ

ಹುಳಿಯಾರು ಸಮೀಪದ ದಸೂಡಿಯಲ್ಲಿ ಇನ್ನೂ ಪ್ರಾರಂಭವಾಗದ ವಿದ್ಯುತ್ ಉಪಸ್ಥಾವರವನ್ನು ಶೀಘ್ರವೇ ಪ್ರಾರಂಭಿಸಿ ಎಂದು ಆಗ್ರಹಿಸಿ ಧರಣಿಯಲ್ಲಿ ನಿರತರಾದ ರೈತರು,ಸಾರ್ವಜನಿಕರು. ಜಿಲ್ಲೆಯ ಗಡಿಭಾಗದ ಪ್ರದೇಶಗಳಾದ ದಸೂಡಿ,ಗಾಣಧಾಳು,ಹೋಯ್ಸಳಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳಪಡುವ ಗ್ರಾಮಗಳಿಗೆ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ವಿದ್ಯುತ್ ಇಲಾಖೆಯಿಂದ ದಸೂಡಿ ಗ್ರಾಮದಲ್ಲಿ ಕಳೆದ 10ವರ್ಷಗಳ ಹಿಂದೆ ಶಂಕುಸ್ಥಾಪನೆಯಾಗಿದ್ದ 66/11 ಕೆವಿ ಸಾಮರ್ಥ್ಯದ ವಿದ್ಯುತ್ ಉಪಸ್ಥಾವರ ಇಂದಿಗೂ ಸಹ ಪ್ರಾರಂಭವಾಗದೆ ನೆನೆಗುದಿಗೆ ಬಿದ್ದಿದ್ದು ಇಲ್ಲಿನ ಗ್ರಾಮಗಳ ರೈತರು,ಸಾರ್ವಜನಿಕರು ಕಳೆದ 4ತಿಂಗಳ ಹಿಂದೆ ಧರಣಿ ನಡೆಸಿದ್ದರು. ಆಗ ಜನವರಿ 10ರೊಳಗೆ ಉಪಸ್ಥಾವರ ಪ್ರಾರಂಭಿಸುವ ಭರವಸೆ ನೀಡಿದ್ದ ಅಧಿಕಾರಿಗಳು ಅದನ್ನು ಮರೆತು ಸುಮ್ಮನೆ ಇಲ್ಲ ಸಲ್ಲದ ಸಬೂಬು ಹೇಳುತ್ತಾ ಕುತಿದ್ದಾರೆ.ಇದನ್ನು ಕಂಡ ರೈತರು,ಸಾರ್ವಜನಿಕರು ಬುಧವಾರದಂದು ಪುನಃ ಧರಣಿ ನಡೆಸಿ, ಉಪಸ್ಥಾವರ ಪ್ರಾರಂಭವಾಗುವವರೆಗೂ ಧರಣಿ ಕೈಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಈ ಗ್ರಾಮಗಳಿಗೆ ಹುಳಿಯಾರಿನ ವಿದ್ಯುತ್ ಉಪಸ್ಥಾವರದಿಂದ ವಿದ್ಯುತ್ ಪೂರೈಸಲಾಗುತ್ತಿತ್ತು.ಆದರೆ ಉತ್ತಮವಾದ ವೋಲ್ಟೇಜ್ ಪೋರೈಕೆ ಆಗದೆ ದೀಪದ ಬೆಳಕಿಗಿಂತ ಕಡಿಮೆ ವೋಲ್ಟೇಜ್ ಇರುತ್ತಿತ್ತು.ಇದರಿಂದ ಮಕ್ಕಳ ಓದಿಗೆ,ರೈತರಿಗೆ ತಮ್ಮ ಬೆಳೆಗಳಿಗೆ ನೀರುಹಾಯಿಸುವುದಕ್ಕೆ ,ಕುಡಿಯುವ ನೀರಿಗೂ ತೊಂದರೆಯಾಗಿತ್ತು. ಈ ಸಮಸ್ಯೆಯನ್ನು ನಿವಾರಿಸ

ರಾಜಕೀಯವೆಂಬುದು ತಪಸ್ಸಿದ್ದಂತೆ : ಜಾಫರ್ ಷರೀಪ್

ರಾಜಕೀಯವೆಂಬುದು ಶ್ರದ್ಧೆ ಭಕ್ತಿಯಿಂದ ನಡೆಸುವ ತಪಸ್ಸಿದ್ದಂತೆ, ತಪಸನ್ನಾಚರಿಸುವಾಗ ಯಾವರೀತಿ ಶುಚಿಯಾದ ಮನಸ್ಸು ಹೊಂದಿ ಆಚರಿಸುತ್ತೇವೆ ಅದೇ ರೀತಿ ರಾಜಕೀಯದಲ್ಲೀ ನಡೆದು ಕೊಳ್ಳಬೇಕೆಂದು ಮಾಜಿ ಕೇಂದ್ರ ರೈಲ್ವೆ ಮಂತ್ರಿ ಜಾಫರ್ ಷರೀಪ್ ಅಭಿಪ್ರಾಯಪಟ್ಟರು. ಸೋಮವಾರ ಹುಳಿಯಾರಿನ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದ ಅವರು,ರಹಮತ್ತುಲ್ಲಾ ಅವರ ಮನೆಯಲ್ಲಿ ಪತ್ರಿಯವರೊಂದಿಗೆ ಮಾತನಾಡಿದರು. ಇಂದು ದೇಶಾದ್ಯಂತ ನಡೆಯುತ್ತಿರುವ ಭ್ರಷ್ಟಾಚಾರ,ಲಂಚಗುಳಿತನ ದೇಶದಿಂದಲೇ ತೊಲಗಬೇಕಾದರೆ ಅದು ಇಂದಿನ ಯುವಶಕ್ತಿಯಿಂದ ಮಾತ್ರ ಸಾಧ್ಯ. ಅಲ್ಲದೆ ಪ್ರಜಾಪ್ರಭುತ್ವದ ರಕ್ಷಣೆಯೂ ಅಗಲಿದೆ ಎಂದರು.ರೈಲ್ವೆ ನೀತಿಯು ಜನಸಾಮಾನ್ಯರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಕೊಂಡೈಯುವುದಲ್ಲ, ದೇಶದೇಶಗಳ ನಡುವೆ ಉತ್ತಮ ಭಾಂದವ್ಯವನ್ನುಂಟು ಮಾಡಿ ರಾಷ್ಟ್ರ-ರಾಷ್ಟ್ರಗಳ ನಡುವೆ ಸ್ನೇಹ ಸಹಬಾಳ್ವೆ ಮೂಡುವಂತೆ ಸೌಹಾರ್ದತೆಯನ್ನು ಬೆಳೆಸುವ ಕಾರ್ಯ ಮಾಡಬೇಕು.ಅಲ್ಲದೆ ಪ್ರಸ್ತುತ ರಾಜಕೀಯದಲ್ಲಿನ ಏರಿಳಿತಗಳು,ಎಡರು,ತೊಡರುಗಳ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ಬೈಜುಸಾಬ್,ರಹಮತ್ತುಲ್ಲಾ,ಜಾಫರ್ ಸಾಬ್,ಜಲಾಲ್ ಸಾಬ್ ಸೇರಿದಂತೆ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.