ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರು :ಹೊಸಹಳ್ಳಿಯಲ್ಲಿ ಸಂಭ್ರಮದ ಶಿವಾಜಿ ಜಯಂತಿ

ಹುಳಿಯಾರು ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ್ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.  ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ತುಮಕೂರು ಜಿಲ್ಲಾ ಬೌದ್ಧಿಕ್ ಪ್ರಮುಖ್ ಭರತ್ ಹುಳಿಯಾರು ರವರು ಶಿವಾಜಿ ಕುರಿತು ನುಡಿ ನಮನ ಸಲ್ಲಿಸಿದರು. ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಹೆಚ್.ಜಯಣ್ಣ ಮಾತನಾಡಿದರು. ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಹೆಚ್.ಜಯಣ್ಣನವರು,ಗ್ರಾಮ ಪಂಚಾಯಿತಿ ಸದಸ್ಯರಾದ ಪುಟ್ಟಸ್ವಾಮಿರವರು ಹಾಗೂ ಕಲ್ಪನಾರವರು, ಮರಾಠ ಸಮಾಜದ ಸುರೇಶ್, ಗಂಗಣ್ಣ, ನಾಗೋಜಿರಾವ್‌, ಕಾರ್ಯಕ್ರಮದ ರೂವಾರಿ M.N.C. ಚಂದ್ರಶೇಖರ್ ಸೇರಿದಂತೆ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

ಹುಳಿಯಾರಿನ ಬಿ.ಎಂ.ಎಸ್. ಕಾಲೇಜಿನಲ್ಲಿಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನ ಆಚರಣೆ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ಐ.ಕ್ಯೂ.ಎ.ಸಿ., ಎನ್.ಎಸ್.ಎಸ್., ಸಾಂಸ್ಕೃತಿಕ ಹಾಗೂ ಕನ್ನಡ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸಲಾಯಿತು.   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಅವರು ಮಾತೃಭಾಷೆ ಎಂದರೇನು? ಎಂಬ ಪ್ರಶ್ನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು.ಮಾತೃಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಪ್ರಶ್ನೆ ಬಂದಾಗ ನಾವು ಆ ಜವಾಬ್ದಾರಿಯನ್ನು ಸರ್ಕಾರದ ಕಡೆಗೆ ಬೆಟ್ಟು ಮಾಡಿ ತೋರಿಸುವುದನ್ನು ಬಿಟ್ಟು, ವ್ಯಕ್ತಿಯಾಗಿ ನಮ್ಮ ಜವಾಬ್ದಾರಿಗಳೇನು? ಮಾತೃ ಭಾಷೆಯನ್ನು ಬೆಳೆಸುವಲ್ಲಿ ನಮ್ಮ ಪಾಲು ಏನು? ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮಾತೃಭಾಷೆಯನ್ನು ಹೆಚ್ಚು ಬಳಸುವ ಮೂಲಕ, ಸ್ಪಷ್ಟವಾಗಿ ಬರೆಯುವ ಮೂಲಕ, ಮಾತೃಭಾಷೆಯಲ್ಲಿ ಜ್ಞಾನವನ್ನು ಸೃಷ್ಟಿಸುವ ಮೂಲಕ ಹಾಗೂ ನಮ್ಮ ಭಾಷೆಯ ಸಾಹಿತ್ಯವನ್ನು ಜಗತ್ತಿನ ಭಾಷೆಗಳಿಗೆ ಅನುವಾದಿಸುವ ಮೂಲಕವೂ ಮಾತೃಭಾಷೆಯನ್ನು ಬೆಳೆಸಬಹುದು ಎಂದು ಅಭಿಪ್ರಾಯಪಟ್ಟರು.  ಕಾರ್ಯಕ್ರಮದ ಸಂಚಾಲಕರಾದ ಕನ್ನಡ ಪ್ರಾಧ್ಯಾಪಕ ಡಾ. ಮೋಹನ್ ಕುಮಾರ್ ಎಂ. ಜೆ . ಅವರು "ಮಾತೃಭಾಷಾ ದಿನ"ದ ಹಿನ್ನೆಲೆ ಹಾಗೂ ಮಹತ್ವವನ್ನು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಕನ್ನಡ ಕರ್ನಾಟಕದ ಆಡ

ಕರ್ನಾಟಕ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ನಿಗಮದ ಮೂಲಕ ವಸತಿ ಯೋಜನೆ ಕಲ್ಪಿಸಲು ಒತ್ತಾಯ

ಕರ್ನಾಟಕ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ನಿಗಮದ ಮೂಲಕ ವಸತಿ ಯೋಜನೆ ಕಲ್ಪಿಸುವ ಬಗ್ಗೆ /2018 ನೇ ಸಾಲಿನಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮ ರಾಜ್ಯದಲ್ಲಿ  ಸ್ಥಾಪನೆ ಯಾಗಿದ್ದು,ಪ್ರಸ್ತುತ ಸಾಲಿನಲ್ಲಿ ಸ್ವಯಂ ಉದ್ಯೋಗ ಹಾಗು ಹೈನುಗಾರಿಕೆಗೆ ಉತ್ತೇಜನ,ಸಾಂದಿಪಿನಿ ಶಿಷ್ಯ ವೇತನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿರುವುದು ಸ್ವಾಗತಾರ್ಹ. ಕರ್ನಾಟಕ ರಾಜ್ಯದ ಎಲ್ಲಾ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಅನೇಕ ಸಮಾಜ ಬಾಂಧವರು ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದು ನಿವೇಶನ ಇದ್ದರೂ ಮನೆ ನಿರ್ಮಿಸಿಕೊಳ್ಳುಲು ಆರ್ಥಿಕ ಸಮಸ್ಯೆ ಎದುರಾಗಿದೆ.ವಸತಿ ಹೀನರ ಸಮಸ್ಯೆ ಶೋಚನೀಯವಾಗಿದೆ, ಬ್ರಾಹ್ಮಣ ಜನಾಂಗದವರು ಮೇಲ್ನೋಟಕ್ಕೆ ಸ್ಥಿತಿವಂತರಂತೆ ಕಂಡರೂ ಜೀವನ ನಿರ್ವಹಣೆಗೆ ಸಾಲ ಸೋಲ ಮಾಡಿಕೊಂಡು ಅತಂತ್ರರಾಗಿದ್ದಾರೆ,ಗ್ರಾಮ ಪಂಚಾಯಿತಿ,ಪಟ್ಟಣ ಪಂಚಾಯಿತಿ,ಪುರಸಭೆ,ನಗರಸಭೆ ಮುಖಾಂತರ ನೀಡುತ್ತಿರುವ ಆಶ್ರಯ,ಬಸವ ವಸತಿ,ಇಂದಿರಾ ಅವಾಜ್ ಮನೆಗಳು ಬ್ರಾಹ್ಮಣರ ಕೈಗೆ ಎಟಕುತ್ತಿಲ್ಲ.ಸ್ಥಳೀಯ ಸಂಸ್ಥೆಗಳಲ್ಲಿ ಸಾಮನ್ಯ ವರ್ಗಕ್ಕೆ ಎಲ್ಲಾ ಸಮುದಾಯದವರು ಅರ್ಜಿ ಸಲ್ಲಿಸುವುದರಿಂದ ಬ್ರಾಹ್ಮಣರ ಪ್ರಯತ್ನ ವಿಫಲವಾಗಿದೆ. ದೌರ್ಜನ್ಯ, ದಬ್ಬಾಳಿಕೆಯನ್ನು ವಿರೋಧಿಸುವ,ಶಾಂತಿಯಿಂದ ಸಹನೆಯಿಂದ ಎಲೆಮರೆ ಕಾಯಿಯಂತೆ ಜೀವನ ನಡೆಸುವ ನಮ್ಮ ಸಮಾಜ ಬಾಂಧವರಿಗೆ ಕರ್ನಾಟಕ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ನಿಗಮದ ವತಿಯಿಂದ ವಿಶೇಷವ

ಹುಳಿಯಾರು ಪಪಂ:ನಾಪತ್ತೆಯಾಗಿದ್ದ MR ಕಡತ ಕಚೇರಿಗೆ ಹಿಂದಿರುಗಿಸಿದ ಬಿಲ್ ಕಲೆಕ್ಟರ್

ಹುಳಿಯಾರು ಪಪಂ:ನಾಪತ್ತೆಯಾಗಿದ್ದ MR ಕಡತ ಹಿಂದಿರುಗಿಸಿದ ಬಿಲ್ ಕಲೆಕ್ಟರ್ ಪೊಲೀಸ್ ಠಾಣೆಗೆ ದೂರು ನೀಡುವ ಮೊದಲೇ ಪತ್ತೆಯಾದ  MR ಪುಸ್ತಕ ಕಚೇರಿಯಿಂದ ನಾಪತ್ತೆಯಾಗಿದ್ದ MR ಕಡತವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷರಿಗೆ ಹಿಂತಿರುಗಿಸುತ್ತಿರುವ ಪಟ್ಟಣ ಪಂಚಾಯಿತಿ ಸಿಬ್ಬಂದಿ ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಎಂಆರ್ ಪುಸ್ತಕ ನಾಪತ್ತೆಯಾಗಿದ್ದು, ಇದೇ ಪುಸ್ತಕದಿಂದ ಹಲವಾರು ಅಕ್ರಮ ಖಾತೆಗಳನ್ನು ಲಕ್ಷಾಂತರ ರೂಪಾಯಿ ರೂಪಾಯಿ ಹಣ ಪಡೆದು ಮಾಡಲಾಗಿದೆ ಎಂಬ ಆರೋಪ ಪಂಚಾಯತಿಯ ಪ್ರಥಮ ಸಭೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿ, ಕಡತ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಿರ್ಧರಿಸಿ ಇನ್ನೇನು ಹೊರಡಬೇಕು ಎನ್ನುವ ಸಮಯದಲ್ಲಿ ಕಡತದ ಸುಳಿವು ಪತ್ತೆಯಾಗಿ,ಇದಕ್ಕೆ ಕಾರಣರಾದವರು ಸಭೆಯಲ್ಲಿ ಕೈಮುಗಿದು ಕ್ಷಮೆ ಕೇಳಿದ ಪ್ರಕರಣ ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಜರುಗಿದೆ. ನಡೆದಿದ್ದೇನು :  ರಂಗಯ್ಯ ಬಿನ್ ಲೇಟ್ ನರಸಿಂಹಯ್ಯ ಎಂಬವರಿಗೆ ಸೇರಿದ ಆರ್‌ಸಿಸಿ ಮನೆಗೆ ಮಾಡಿರುವ ಖಾತೆ ಅಕ್ರಮವಾಗಿದೆ ಎಂದು ಹಾಗೂ ಇದನ್ನು 2018 -19 ನೇ ಸಾಲಿನಲ್ಲಿ ವಿತರಿಸಲಾಗಿದ್ದು ಆಗ ಪಟ್ಟಣ ಪಂಚಾಯಿತಿ ಅಸ್ತಿತ್ವದಲ್ಲಿತ್ತು. ಸದ್ಯ ವಿತರಿಸಲಾಗಿರುವ ನಮೂನೆ 11ರಲ್ಲಿ ಇರುವ ಸಹಿಯು ಈ ಹಿಂದೆ 2016 ನೇ ಸಾಲಿನಲ್ಲಿ ಹುಳಿಯಾರು ಗ್ರಾಮ ಪಂಚಾಯಿತಿಯಲ್ಲಿ PDO ಆಗಿ ಕಾರ್ಯನಿರ್ವಹಿಸಿದ್ದ ಸಿದ್ದರಾಮಯ್ಯನವರದಾಗಿದ್ದು ಇದು ಹೇಗೆ ಸಾಧ್ಯ, PDO ಸ

ಹುಳಿಯಾರು ಪಟ್ಟಣ ಪಂಚಾಯಿತಿ ಸಭೆಯಲ್ಲಿ ಮುಗಿಯದ ಮಳಿಗೆ ವಿವಾದ

ಹುಳಿಯಾರು ಪಟ್ಟಣ ಪಂಚಾಯಿತಿ ಸಭೆಯಲ್ಲಿ ಮುಗಿಯದ ಮಳಿಗೆ ವಿವಾದ ಮಳಿಗೆ ವಿಚಾರದ ಬಗ್ಗೆ ಮೌನ ಮುರಿಯದ ಮುಖ್ಯಾಧಿಕಾರಿ ಹುಳಿಯಾರು ಪಟ್ಟಣ ಪಂಚಾಯಿತಿಗೆ ಸೇರಿದ ಮಳಿಗೆಗಳ ಮರು ಹರಾಜಿಗೆ ತಡೆಯಾಜ್ಞೆ ಇರುವುದನ್ನೇ ನೆಪಮಾಡಿಕೊಂಡು ಕಳೆದ ಮೂರು ವರ್ಷಗಳಿಂದಲೂ ಹಾಲಿ ಮಳಿಗೆದಾರರನ್ನೇ ಮುಂದುವರಿಸಿಕೊಂಡು ಬರುತ್ತಿರುವ ಬಗ್ಗೆ ಹುಳಿಯಾರು ಪಟ್ಟಣ ಪಂಚಾಯಿತಿ ಸಭೆಯಲ್ಲಿ ಸದಸ್ಯರುಗಳ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು ಮುಖ್ಯಾಧಿಕಾರಿಗಳು ಹರಾಜು ಪ್ರಕ್ರಿಯೆಗೆ ಮುಂದಾಗದೆ,ಕೋರ್ಟ್ ತಡೆಯಾಜ್ಞೆಯನ್ನು ಸಹ ತೆರವು ಮಾಡಿಸದೆ ಕಾಲಹರಣ ಮಾಡುತ್ತಿದ್ದು ಇದರಿಂದ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಹುಳಿಯಾರು ಪಟ್ಟಣ ಪಂಚಾಯಿತಿಯ ಮೊದಲನೆಯ ಸಭೆಯ ಮುಂದುವರೆದ ಇಂದಿನ ಸಭೆಯಲ್ಲಿಯೂ ಮರುಕಳಿಸಿತು. ಸಭೆಯ ಆರಂಭದಲ್ಲೇ ಪಟ್ಟಣ ಪಂಚಾಯಿತಿ ನಾಮಿನಿ ಸದಸ್ಯೆ ಗೀತಾ ಅಶೋಕ್ ಬಾಬು ಮಳಿಗೆ ವಿಚಾರವಾಗಿ ಪಟ್ಟಣ ಪಂಚಾಯಿತಿಯ ಕ್ರಮದ ಬಗ್ಗೆ ತಮ್ಮ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದರು. ಮಳಿಗೆಯ ಸ್ಥಿತಿಗತಿ ಏನಾಗಿದೆ ಎಂಬುದರ ಬಗ್ಗೆ ಎಲ್ಲಾ ಸದಸ್ಯರಿಗೂ ಸಂಪೂರ್ಣ ಕಡತ ತೋರಿಸುವಂತೆಯೂ, ಹಾಗೂ ಮಳಿಗೆಯ ಕೋರ್ಟ್ ಪ್ರಕ್ರಿಯೆಯನ್ನು ನಿರ್ವಹಿಸುತ್ತಿರುವ ವಕೀಲರ ಮಾಹಿತಿಯನ್ನು ಒದಗಿಸುವಂತೆಯೂ ಪಟ್ಟುಹಿಡಿದರು. ಸರ್ಕಾರಿ ವಕೀಲರನ್ನು ನೇಮಿಸಿಕೊಳ್ಳುವುದರ ಬದಲು ಖಾಸಗಿ ವಕೀಲರನ್ನು ನೇಮಿಸಿಕೊಂಡಿರುವುದರ ಬಗ್ಗೆ ವಿವರಣೆ ಕೇಳಿದರು.

ತಾಲ್ಲೂಕು ಮಟ್ಟದ ಕವಿಗೋಷ್ಠಿಯಲ್ಲಿ ಹುಳಿಯಾರು ಬಿ.ಎಂ.ಎಸ್. ಕಾಲೇಜಿನ ಯುವಕವಿಗಳ ಕಲರವ

ಹುಳಿಯಾರು-ಕೆಂಕರೆಯ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಘಟಕವು , ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ  ಡಾ. ಮೋಹನ್ ಕುಮಾರ್ ಎಂ.ಜೆ . ಇವರ ನೇತೃತ್ವದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ  "ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು-ಚಿಕ್ಕನಾಯಕನಹಳ್ಳಿ ಘಟಕ”ದ ಕಾರ್ಯಾಲಯದ ಉದ್ಘಾಟನೆ‌ ಮತ್ತು "ಕವಿಗೋಷ್ಠಿ" ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ಕಾಲೇಜಿನ ಯುವ ಕವಿ-ಕವಯಿತ್ರಿಯರಾದ ಚಂದನ ಕೆ.ಪಿ.(ಪ್ರಥಮ ಬಿ.ಎ.), ಮಾರುತಿ ಎಚ್.ಆರ್.(ಪ್ರಥಮ ಬಿ.ಎ.), ರಂಜಿತ ಆರ್.(ಪ್ರಥಮ ಬಿ.ಎ.),ಪೂಜಾಶ್ರೀ ವಿ.(ಪ್ರಥಮ ಬಿ.ಎ.), ಸಹನ ಕೆ.(ದ್ವಿತೀಯ ಬಿ.ಕಾಂ.),ಗೀತಾ ಟಿ.ಆರ್.(ದ್ವಿತೀಯ ಬಿ.ಕಾಂ.) ಇವರು ತಮ್ಮ ಸ್ವರಚಿತ ಕವನಗಳನ್ನು ವಾಚಿಸುವ ಮೂಲಕ ನೆರೆದಿದ್ದ ಸಭಿಕರ ಮನಸೂರೆಗೊಂಡರು.  ವಿದ್ಯಾರ್ಥಿಗಳ ಕವಿತೆಗಳು ಪ್ರಕೃತಿ ಆರಾಧನೆ,ತಂದೆ-ತಾಯಿಯರ ತ್ಯಾಗ,ಭಾವೈಕ್ಯತೆ,ದೇಶಭಕ್ತಿ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ್ದು ವಿಶೇಷವಾಗಿತ್ತು.  ತಾಲ್ಲೂಕಿನ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಒಟ್ಟು ಇಪ್ಪತ್ತನಾಲ್ಕು ಕವಿಗಳು ಗೋಷ್ಠಿಯಲ್ಲಿ ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು.  ಬಿ.ಎಂ.ಎಸ್. ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಮೋಹನ್ ಕುಮಾರ್ ಎಂ.ಜೆ., ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಜಾನಪದ ವಿದ್ವಾಂಸ ಶ್ರೀ ಕಂಟಲಗೆರೆ ಸಣ್ಣ

ಹುಳಿಯಾರು ಪಪಂ:ಕೂತುಹಲ ಮೂಡಿಸಿದ ಪಪಂ.ಮುಖ್ಯಾಧಿಕಾರಿಯ ರಜಾ

ಹುಳಿಯಾರು ಪಟ್ಟಣ ಪಂಚಾಯಿತಿಯ 9ನೇ ತಾರೀಕಿನಂದು ನಡೆದ ಪ್ರಥಮ ಸಾಮಾನ್ಯ ಸಭೆಯ ಇಡೀದಿನ ಗೌಜು ಗದ್ದಲದಿಂದ ಕೂಡಿದ ಹಿನ್ನೆಲೆಯಲ್ಲಿ, ಸಂಪೂರ್ಣವಾಗಿ ಕಡೆಗೆ ಅಧ್ಯಕ್ಷರು ಸಭೆಯನ್ನು ಮತ್ತೊಂದು ದಿನಕ್ಕೆ ಮುಂದೂಡಲಾಗಿದೆ ಘೋಷಿಸಿದ್ದರಲ್ಲದೆ 15-2-22 ಕ್ಕೆ ನಿಗದಿ ಮಾಡಿ ಅಂದು ಎಲ್ಲಾ ಸದಸ್ಯರುಗಳಿಗೂ ಪೂರ್ಣ ಮಾಹಿತಿ ನೀಡುವುದಾಗಿ ಸಮಾಧಾನಪಡಿಸಿದ್ದರು.  ಆದರೆ ಇದೀಗ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ರವರು ಆ ದಿನ ಸಾಂದರ್ಭಿಕ ರಜೆ ಮಂಜೂರು ಮಾಡುವಂತೆ ಯೋಜನಾ ನಿರ್ದೇಶಕರಿಗೆ ಕೋರಿರುವ ಹಿನ್ನೆಲೆಯಲ್ಲಿ ಆ ದಿನ ಸಾಮಾನ್ಯ ಸಭೆ ನಡೆಯುವುದೊ, ಇಲ್ಲವೊ ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ. ಏಕೆಂದರೆ ಮುಂದಿನ ಸಭೆಯಲ್ಲಿ ಜಮಾಖರ್ಚಿನ ಮಾಹಿತಿಯನ್ನು ದಾಖಲೆ ಸಮೇತ ಹಾಜರ್ ಪಡಿಸುವಂತೆ ಈಗಾಗಲೆ‌ ನಡೆದಿರುವ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಮುಖ್ಯಾಧಿಕಾರಿಗಳಿಗೆ  ಸೂಚಿಸಿದ್ದರು. ಅದಕ್ಕೆ ಒಪ್ಪಿಗೆ ಸೂಚಿಸಿದ್ದ  ಮುಖ್ಯಾಧಿಕಾರಿಗಳು,ಇದೀಗ ದಿಢೀರನೆ 15-2-22ರ ವರೆಗೆ ಮೂರುದಿನ‌ ರಜಾ ಕೊರಿ ಜಿಲ್ಲಾ ಯೋಜನಾ ನಿರ್ದೆಶಕರಿಗೆ ಪತ್ರ  ಬರೆದು ತೆರಳಿದ್ದಾರೆ.ಮುಖ್ಯಾಧಿಕಾರಿಗಳ ಈ ನಡೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.

ನ್ಯಾಕ್ ಪೀರ್ ಕಮಿಟಿಯಿಂದ ಬಿ.ಎಂ.ಎಸ್ ಕಾಲೇಜು ಬಗ್ಗೆ ಮೆಚ್ಚುಗೆ

ಹುಳಿಯಾರಿನ ಬಿ.ಎಂ.ಎಸ್.ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ತಂಡವು 2ನೇ ದಿನವಾದ ಬುಧವಾರ ಕೂಡ ಪರಿಶೀಲನೆ ನಡೆಸಿತು. ಮೊದಲು ಕಾಲೇಜಿನ ಕಛೇರಿಗೆ ಭೇಟಿ ನೀಡಿ ಹಲವಾರು ದಾಖಲೆ ಪರಿಶೀಲಿಸಿದರು.ವಿದ್ಯಾರ್ಥಿಗಳ ಪ್ರವೇಶಾತಿ,ಕಾಲೇಜು ಸಂಗ್ರಹಿಸುವ ವಿವಿಧ ಶುಲ್ಕಗಳ ಮಾಹಿತಿ,ಪ್ರವೇಶಾತಿ ಸಮಯದಲ್ಲಿ ನೀಡಲಾಗುವ ಕಾಲೇಜು ಕೈಪಿಡಿ,ವಿದ್ಯಾರ್ಥಿಗಳಿಗೆ ನೀಡಲಾಗುವ ಶಿಷ್ಯವೇತನ, ಪರೀಕ್ಷಾ ಸಂಬಂಧಿತ ಶುಲ್ಕ,ಪ್ರವೇಶ ಪತ್ರ, ಅಂಕಪಟ್ಟಿ ವಿತರಣೆ....ಹೀಗೆ ಹಲವಾರು ವಿಷಯಗಳ ಕುರಿತು ದಾಖಲೆ ಪರಿಶೀಲಿಸಿದರು.ಕೆಲವು ಸಲಹೆ-ಸೂಚನೆ ನೀಡಿದರು.ಕಾಲೇಜು ಕೈಪಿಡಿ ಪುಸ್ತಕ ಆಕರ್ಷಣಿಯವಾಗಿರಲಿ ಎಂದು ಸಲಹೆ ನೀಡಿದರು. IQAC ಸಂಚಾಲಕರಾದ ಡಾ.ಸುಷ್ಮಾ ಎಲ್.ಬಿರಾದಾರ್ ಅವರು ನ್ಯಾಕ್ ಪೀರ್ ತಂಡಕ್ಕೆ ಸೂಕ್ತ ದಾಖಲೆ ಒದಗಿಸಿ ಸ್ಪಷ್ಟನೆ ನೀಡಿದರು.ವೇಳಾಪಟ್ಟಿ ಪ್ರಕಾರ ಎಲ್ಲಾ ದಾಖಲೆಗಳ ಪರಿಶೀಲನೆ ಹಾಗೂ ಸ್ಪಷ್ಟನೆ ಪಡೆದ ನಂತರ ಮುಕ್ತಾಯ ಸಭೆ ಏರ್ಪಡಿಸಲಾಯಿತು. ಈ ಸಭೆಯಲ್ಲಿ ನ್ಯಾಕ್ ಪೀರ್ ತಂಡದ ಸದಸ್ಯರು,ಪ್ರಾಂಶುಪಾಲರು, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದರು.IQAC ಸಂಚಾಲಕರಾದ ಡಾ.ಸುಷ್ಮಾ ಎಲ್ ಬಿರಾದಾರ್ ಸ್ವಾಗತಿಸಿದರು. ನ್ಯಾಕ್ ತಂಡದ ಮುಖ್ಯಸ್ಥರಾದ ಡಾ.ಕೇಸರಿ ಲಾಲ್ ವರ್ಮಾರವರು ಕಾಲೇಜಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೋಬಳಿ ಪ್ರದೇಶದಲ್ಲಿದ್ದರೂ ಇಲ್ಲಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕರ ಪರಿಶ್ರಮದಿಂದ ಕಾಲೇಜು ಉತ್ತಮ ಬೆ

ಹುಳಿಯಾರಿನ ಶ್ರೀ ಕನಕದಾಸ ವೃತ್ತದಲ್ಲಿ ಸರ್ಕಾರದ ವತಿಯಿಂದ ಶ್ರೀ ಕನಕದಾಸರ ಪುತ್ಥಳಿ ನಿರ್ಮಿಸಿ:ಪ್ರೀತಿ.ಎನ್. ರಾಘವೇಂದ್ರ

ಹುಳಿಯಾರು:ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರು ಎರಡು ವರ್ಷಗಳ ಹಿಂದೆ ಹುಳಿಯಾರಿನ ಶ್ರೀ ಕನಕದಾಸ ವೃತ್ತದಲ್ಲಿ ಕನಕದಾಸರ ಪುತ್ಥಳಿ ಯನ್ನು ಸರ್ಕಾರದ ವತಿಯಿಂದಲೇ ನಿರ್ಮಿಸಿಕೊಡುತ್ತೇವೆಂದು ಆಶ್ವಾಸನೆ ನೀಡಿದ್ದರು.ಆದರೆ ಇಲ್ಲಿಯವರೆಗೂ ಯಾವುದೇ ಪುತ್ಥಳಿ ನಿರ್ಮಾಣ ಕಾರ್ಯ ಪ್ರಾರಂಭಿಸಿರುವುದಿಲ್ಲ.ಆದ್ದರಿಂದ ತಾವುಗಳು ಘನ ಸರ್ಕಾರಕ್ಕೆ ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ ಈ ಮನವಿ ಪತ್ರವನ್ನು ಸಲ್ಲಿಸಿ ಅತೀ ಶೀಘ್ರವಾಗಿ ಪುತ್ಥಳಿ ನಿರ್ಮಾಣ ಮಾಡಲು ಶಿಫಾರಸ್ಸು ಮಾಡುವಂತೆ ಪಟ್ಟಣ ಪಂಚಾಯಿತಿ ಸದಸ್ಯೆ ಪ್ರೀತಿ.ಎನ್. ರಾಘವೇಂದ್ರ ಹಾಗೂ ಎಸ್ಆರ್‌ಎಸ್ ದಯಾನಂದ್ ಹುಳಿಯಾರು ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದ್ದಾರೆ.

ಹುಳಿಯಾರು ಪಟ್ಟಣ ಪಂಚಾಯಿತಿ ಮಳಿಗೆಯ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳಿ: ಎಸ್ಆರ್‌ಎಸ್ ದಯಾನಂದ್

ಹುಳಿಯಾರು ಪಟ್ಟಣ ಪಂಚಾಯಿತಿಗೆ ಸೇರಿದ 52 ಮಳಿಗೆಗಗಳಿಗೂ ಕೋರ್ಟ್ ತಡೆಯಾಜ್ಞೆ ಇದೆ ಎಂದು ಅಧಿಕಾರಿಗಳು ಕಳೆದ ಮೂರು ವರ್ಷದಿಂದಲೂ ಹೇಳುತ್ತಾ ಬಂದಿದ್ದು, ಇದರಿಂದಾಗಿ ಪಂಚಾಯ್ತಿಗೆ ಬರಬೇಕಿದ್ದ ಲಕ್ಷಾಂತರ ರೂಪಾಯಿ ಆದಾಯದ ಮೂಲಕ್ಕೆ ಕುತ್ತಾಗಿದ್ದು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈ ಕೂಡಲೇ ಸಂಬಂಧಿಸಿದ ವಕೀಲರನ್ನು ಸಂಪರ್ಕಿಸಿ ತಡೆಯಾಜ್ಞೆ ತೆರವು ಮಾಡಿಸಲು ಕ್ರಮಕೈಗೊಳ್ಳಿ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಎಸ್ಆರ್‌ಎಸ್ ದಯಾನಂದ್ ಸೇರಿದಂತೆ ಹಲವು ಸದಸ್ಯರು ಆಗ್ರಹಿಸಿದರು. ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಪಂಚಾಯಿತಿ ಮಳಿಗೆಗಳ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. https://youtu.be/U-Teky97ltw ಹುಳಿಯಾರು ಪಟ್ಟಣ ಪಂಚಾಯಿತಿ ಮಳಿಗೆಯ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳಿ ಹುಳಿಯಾರು ಪಟ್ಟಣ ಪಂಚಾಯಿತಿಗೆ ಸೇರಿದ 52 ಮಳಿಗೆಗಳಿದ್ದು, ಕಳೆದ ಹಲವು ದಶಕಗಳಿಂದಲೂ ಹರಾಜು ಪ್ರಕ್ರಿಯೆ ನಡೆಯದೆ, ಆಗ ಹರಾಜಿನಲ್ಲಿ ಕೊಂಡಿದ್ದ ವರ್ತಕರುಗಳೇ ಈಗಲೂ ಮುಂದುವರೆದಿದ್ದು, ಪಂಚಾಯಿತಿ ಕರಾರಿನ ಅವಧಿ ಮುಗಿದಿದ್ದ ಇವರನ್ನು ತೆರವುಗೊಳಿಸಿ ಮರು ಹರಾಜು ಪ್ರಕ್ರಿಯೆ ಮಾಡುವ ಸಂದರ್ಭದಲ್ಲಿ ಇವರುಗಳು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದ ಸಂಬಂಧ ಇದುವರೆಗೂ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ಆದಾಯಕ್ಕೆ ಕುತ್ತು ಬಂದಿದೆ. ಅಧಿಕಾರಿಗಳು ಹರಾಜು ಪ

ಹುಳಿಯಾರು ಪಟ್ಟಣ ಪಂಚಾಯಿತಿ ಸಭೆ ಮಂಗಳವಾರಕ್ಕೆ ಮುಂದೂಡಿದ ಅಧ್ಯಕ್ಷ ಕಿರಣ್ ಕುಮಾರ್

ಅಧಿಕಾರಿಗಳ ಮೌನ, ದಾಖಲೆಗಳ ಕೊರತೆ ಹಾಗೂ ಅಸಮರ್ಪಕ ಉತ್ತರಗಳಿಂದ ಬೇಸತ್ತು, ಸಭೆ ಮುಂದೂಡಿದ ಅಧ್ಯಕ್ಷ ಕಿರಣ ಕುಮಾರ್ ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿಯ ಬಹುನಿರೀಕ್ಷಿತ ಇಂದಿನ ಪ್ರಥಮ ಸಭೆಯ ಆರಂಭದಿಂದಲೂ ಸದಸ್ಯರುಗಳಿಂದ ಪ್ರಶ್ನೆಗಳ ಸುರಿಮಳೆ, ಅದಕ್ಕೆ ಸಮರ್ಪಕ ಉತ್ತರ ನೀಡಬೇಕಾಗಿದ್ದ ಅಧಿಕಾರಿಗಳ ನಿರುತ್ತರ, ಹಾಗೂ ಸದಸ್ಯರುಗಳು ಕೇಳಿದ ಪ್ರಶ್ನೆಗಳಿಗೆ ದಾಖಲೆಗಳ ಕೊರತೆಯಿಂದ ತೀವ್ರ ಅಸಮಾಧಾನಗೊಂಡ ಅಧ್ಯಕ್ಷ ಕಿರಣ್ ಕುಮಾರ್ ಸಭೆಯನ್ನು ಏಕಾಏಕಿ ಮಂಗಳವಾರಕ್ಕೆ ಮುಂದೂಡಿದರು. ಸಭೆಯ ಆರಂಭದ ಪ್ರಥಮದಲ್ಲಿಯೇ ಹಲವರು ಸದಸ್ಯರುಗಳು ಯಾವುದೇ ಸದಸ್ಯರುಗಳಿಗೆ ಪ್ರಮಾಣ ವಚನ ಪ್ರಮಾಣವಚನ ಭೋದಿಸದೆ ಸಭೆ ನಡೆಸುವ ಹಾಗಿಲ್ಲವೆಂದು ಸ್ಪಷ್ಟವಾದ ನಿರ್ದೇಶನ ಇದ್ದರೂ ಸಹ ನೀವು ಪ್ರಮಾಣ ವಚನ ಬೋಧಿಸಿದೆ ಸಭೆ ಹೇಗೆ ಕರೆಯುತ್ತೀರಿ, ಇದು ಕಾನೂನಿನ ಉಲ್ಲಂಘನೆ ಆಗುವುದಿಲ್ಲವೇ ಎಂದು ಆರಂಭಗೊಂಡ ಪ್ರಶ್ನೆಗಳ ಸುರಿಮಳೆ, ಸಂಜೆ 5:00 ರವರೆಗೂ ನಡೆದ ಸಭೆಯಲ್ಲಿ ಪ್ರತಿಧ್ವನಿಸುತ್ತಲೇ ಇತ್ತು.  ನಂತರ ಮುಂದುವರೆದ ಸಭೆಯಲ್ಲಿ ಖರ್ಚಿನ ಲೆಕ್ಕಾಚಾರದಲ್ಲಿ ಬಿಲ್ ನೀಡಲು ವಿಫಲರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪ್ರಶ್ನೆ ಕೇಳಿದ ಸದಸ್ಯರಿಗೆ ಬಿಲ್ ಹುಡುಕುವ ನೆಪದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಸಭೆಯಿಂದ ಆಚೆಗುಳಿದರು. ಇದರಿಂದ ಸಿಟ್ಟಿಗೆದ್ದ ಸದಸ್ಯರು ಅಧಿಕಾರಿಗಳು ನಿಮ್ಮ ಮಾತು ಕೇಳದಿದ್ದರೆ ಹೇಗೆ ಎಂದು ಅಧ್ಯಕ್ಷರ