ಚಿಕ್ಕನಾಯಕನಹಳ್ಳಿ: ಶ್ರೀ ಶ್ರೀ ಶ್ರೀ ಮೃತ್ಯುಂಜಯದೇಶಿಕೇಂದ್ರ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಮಡಿವಾಳ ಸಂಘದಿಂದ ಚಿಕ್ಕನಾಯಕನಹಳ್ಳಿ ಪಟ್ಟಣದ ವೀರ ಲಕ್ಕಮ್ಮ ಬಡಾವಣೆಯ ಮಡಿವಾಳರ ಜನಾಂಗದ ಜಾಗದಲ್ಲಿ ನಾಮಫಲಕ ಉದ್ಘಾಟಿಸುವ ಮುಖಾಂತರ ಶ್ರೀ ಮಡಿವಾಳ ಮಾಚಿದೇವರ ಜಯಂತಿಯನ್ನು ಶ್ರೀ ಶ್ರೀ ಶ್ರೀ ಮೃತ್ಯುಂಜಯದೇಶಿಕೇಂದ್ರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಈ ವೇಳೆ ಶ್ರೀಗಳು ಮಾತನಾಡಿ ಈ ಜಾಗದಲ್ಲಿ ಒಂದು ಸಮುದಾಯ ಭವನ ನಿರ್ಮಾಣವಾಗಬೇಕು ಮತ್ತು ನಿಮ್ಮ ಸಂಘಟನೆ ಇನ್ನೂ ಹೆಚ್ಚಾಗಿ ಕೆಲಸ ಮಾಡಬೇಕು ಹಾಗೂ ನಮ್ಮ ಮಠದಿಂದ ನಿಮ್ಮ ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ 1 ಲಕ್ಷರೂ ಧನಸಹಾಯ ನೀಡುವುದಾಗಿ ತಿಳಿಸಿದರು.ಗೋಡೆಕೆರೆ ಗ್ರಾಮದಲ್ಲೂ ಸಹ ಮಡಿವಾಳ ಜನಾಂಗದವರಿದ್ದಾರೆ,ಎಲ್ಲರೂ ಸೇರಿ ಊರಿನಲ್ಲಿ ಹಣ ಸಂಗ್ರಹಿಸಿ 1 ಲಕ್ಷರೂ ಕೊಡುವುದಾಗಿ ತಿಳಿಸಿದರು ಹಾಗೂ ಸಂಘಟನೆಗೆ ಮುಂದಾಗಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಶ್ರೀ ಚಿ.ನಿ.ಪುರುಷೋತ್ತಮ್ ರವರು ಮಾತನಾಡಿ ಆ ದಿನ ಈ ಜಾಗ ತೆಗೆದುಕೊಳ್ಳಲು ನಮ್ಮ ಹತ್ತಿರ ಹಣವಿರಲಿಲ್ಲ.ನಾವು ಅವರಿವರ ಹತ್ತಿರ ಹಣವನ್ನು ಸಂಗ್ರಹಿಸಿ ಈ ಜಾಗವನ್ನು ಪಡೆದಿದ್ದೇವೆ.ಇದು ಯಾವತ್ತಿಗೂ ನಮ್ಮ ಮಡಿವಾಳ ಜನಾಂಗದ ಅಭಿವೃದ್ಧಿಗಾಗಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ನಾಗರಾಜ್ ಅವರು ಮಾತನಾಡಿ ನಾನು ಸಮಾಜದ ಏಳಿಗೆಗಾಗಿ ದುಡಿಯುತ್ತೇನೆ ನನ್ನ ಜೊತೆ ಕೈಜೋಡಿಸಿ ಎಂದು ಕರೆಕೊಟ್ಟರು.ಈ ಸಂದರ್ಭದಲ್ಲಿ ಶ್ರೀ ಮಡಿವಾಳ ಮಾಚಿದೇವರ ಟ್ರಸ್ಟ್ ನ ಸರ್ವ ಸದಸ್ಯರಿಗೂ ಹಾಗೂ ಗೌರವಾಧ್ಯಕ್ಷರಿಗೂ ಅಧ್ಯಕ್ಷರಿಗೂ ಸಂಘದ ವತಿಯಿಂದ ಶ್ರೀ ಶ್ರೀ ಶ್ರೀ ಮೃತ್ಯುಂಜಯದೇಶಿಕೇಂದ್ರ ಮಹಾಸ್ವಾಮಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು.
ತಾಲ್ಲೂಕು ಮಡಿವಾಳ ಸಂಘದ ವತಿಯಿಂದ ಗೋಡೆಕೆರೆ ಚರ ಪಟ್ಟಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಮೃತ್ಯುಂಜಯದೇಶಿಕೇಂದ್ರ ಮಹಾಸ್ವಾಮೀಜಿಯವರಿಗೆ ಗೌರವಿಸಿ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ತಾಲ್ಲೂಕು ಮಡಿವಾಳ ಸಂಘ ಅಧ್ಯಕ್ಷರು/ಉಪಾಧ್ಯಕ್ಷರು/ಕಾರ್ಯಾಧ್ಯಕ್ಷರು/ ಕಾರ್ಯದರ್ಶಿಗಳು/ಸಂಘಟನಾ ಕಾರ್ಯದರ್ಶಿಗಳು/ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಮಡಿವಾಳ ಬಂಧುಗಳು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ