ಹುಳಿಯಾರಿನ ಶ್ರೀ ಕನಕದಾಸ ವೃತ್ತದಲ್ಲಿ ಸರ್ಕಾರದ ವತಿಯಿಂದ ಶ್ರೀ ಕನಕದಾಸರ ಪುತ್ಥಳಿ ನಿರ್ಮಿಸಿ:ಪ್ರೀತಿ.ಎನ್. ರಾಘವೇಂದ್ರ
ಹುಳಿಯಾರು:ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರು ಎರಡು ವರ್ಷಗಳ ಹಿಂದೆ ಹುಳಿಯಾರಿನ ಶ್ರೀ ಕನಕದಾಸ ವೃತ್ತದಲ್ಲಿ ಕನಕದಾಸರ ಪುತ್ಥಳಿಯನ್ನು ಸರ್ಕಾರದ ವತಿಯಿಂದಲೇ ನಿರ್ಮಿಸಿಕೊಡುತ್ತೇವೆಂದು ಆಶ್ವಾಸನೆ ನೀಡಿದ್ದರು.ಆದರೆ ಇಲ್ಲಿಯವರೆಗೂ ಯಾವುದೇ ಪುತ್ಥಳಿ ನಿರ್ಮಾಣ ಕಾರ್ಯ ಪ್ರಾರಂಭಿಸಿರುವುದಿಲ್ಲ.ಆದ್ದರಿಂದ ತಾವುಗಳು ಘನ ಸರ್ಕಾರಕ್ಕೆ ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ ಈ ಮನವಿ ಪತ್ರವನ್ನು ಸಲ್ಲಿಸಿ ಅತೀ ಶೀಘ್ರವಾಗಿ ಪುತ್ಥಳಿ ನಿರ್ಮಾಣ ಮಾಡಲು ಶಿಫಾರಸ್ಸು ಮಾಡುವಂತೆ ಪಟ್ಟಣ ಪಂಚಾಯಿತಿ ಸದಸ್ಯೆ ಪ್ರೀತಿ.ಎನ್. ರಾಘವೇಂದ್ರ ಹಾಗೂ ಎಸ್ಆರ್‌ಎಸ್ ದಯಾನಂದ್ ಹುಳಿಯಾರು ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ