ಹುಳಿಯಾರು: ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದೆಹಲಿಯ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತೆ ಪರಿಷತ್ತಿನ ಕಮಿಟಿ(NAAC PEER TEAM) ಇಂದು ಭೇಟಿ ನೀಡಿತು.
ದೆಹಲಿಯಿಂದ ಆಗಮಿಸಿದ ಸಮಿತಿಯವರನ್ನು ಸ್ವಾಗತಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬಿ.ಆರ್ ಕೃಷ್ಣಮೂರ್ತಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಕುರಿತು ಪ್ರತಿ ಐದು ವರ್ಷಕ್ಕೊಮ್ಮೆ ಮೌಲ್ಯಮಾಪನ ನಡೆಸುವ ನ್ಯಾಕ್ ಕಮಿಟಿ ಇದೀಗ ಮೂರನೇ ಆವೃತ್ತಿಯ ನ್ಯಾಕ್ ಮೌಲ್ಯಮಾಪನ ಪ್ರಕ್ರಿಯೆಗಾಗಿ ಇಂದು ಕಾಲೇಜಿಗೆ ಭೇಟಿ ನೀಡಿದ್ದು ನಾಳೆಯೂ ಸಹ ಪ್ರಗತಿ ಪರಿಶೀಲನೆ ನಡೆಸಲಿದೆ ಎಂದರು.ಚತ್ತೀಸ್ ಘಡ್ ನ ಪಂಡಿತ್ ರವಿಶಂಕರ್ ಶುಕ್ಲಾ ಯುನಿವರ್ಸಿಟಿಯ ವೈಸ್ ಚಾನ್ಸಲರ್ ಡಾ|| ಕೇಶಾರಿ ಲಾಲ್ ವರ್ಮಾ, ಉತ್ತರಪ್ರದೇಶದ ಅಲಿಘರ್ ಮುಸ್ಲಿಂ ಯುನಿವರ್ಸಿಟಿಯ ಡೈರೆಕ್ಟರ್ ಡಾ|| ಜಾವಿದ್ ಅಕ್ತರ್, ಮಹಾರಾಷ್ಟ್ರದ ಬುಲ್ದಾನದ ಲೇ.ಕು.ದುರ್ಗಾ ಬನ್ಮೇರ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಡಾ|| ಪ್ರಕಾಶ್ ಕೆ ಬನ್ಮೇರು ಅವರ ತಂಡ ಆಗಮಿಸಿದ್ದು ಕಾಲೇಜಿನ ಆಡಳಿತ, ಶೈಕ್ಷಣಿಕ ಪ್ರಕ್ರಿಯೆ, ಫಲಿತಾಂಶ, ಮೂಲಸೌಕರ್ಯ, ಕಲಿಕಾ ಸಂಪನ್ಮೂಲಗಳ ಪರಿಶೀಲನೆ ಸೇರಿದಂತೆ ವಿದ್ಯಾರ್ಥಿಗಳ ವ್ಯಾಸಂಗದ ಪ್ರಗತಿ ಕುರಿತು ಸಂವಾದ ನಡೆಸಿ ಮಾಹಿತಿ ಪಡೆಯಿತು.ಕಾಲೇಜಿನ ವಿವಿಧ ವಿಭಾಗಗಳ ಚಟುವಟಿಕೆಗಳ ಬಗ್ಗೆ ,ಹಾಗೂ ಕಾಲೇಜಿನಲ್ಲಿ ದೊರೆಯಲ್ಲಿರುವ ಮೂಲಸೌಕರ್ಯಗಳ ಬಗ್ಗೆ ನ್ಯಾಕ್ ತಂಡದವರು ಪಶೀಲಿಸಿದರು.
ನ್ಯಾಕ್ ಸಮಿತಿಯು ಕಾಲೇಜು ಅಭಿವೃದ್ಧಿ ಸಮಿತಿ ಸೇರಿದಂತೆ ಹಳೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿತು.ಈ ಸಮಯದಲ್ಲಿ ನ್ಯಾಕ್ ಕಮಿಟಿ ಕೋ-ಆರ್ಡಿನೇಟರ್ ಡಾ|| ಸುಷ್ಮಾ ಬಿರಾದಾರ್, ಡಾ|| ಲೋಕೇಶ್ ನಾಯಕ್, ಪ್ರೊ.ಮಲ್ಲಿಕಾರ್ಜುನ ಸೇರಿದಂತೆ ಹಾಲಿ ವಿದ್ಯಾರ್ಥಿಗಳ ಪೋಷಕರು,ಕಾಲೇಜಿನ ಹಳೆ ವಿದ್ಯಾರ್ಥಿಗಳು, ಕಾಲೇಜಿನ ಹಿತೈಷಿಗಳು ಹಾಜರಿದ್ದರು
.
.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ