ಕರ್ನಾಟಕ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ನಿಗಮದ ಮೂಲಕ ವಸತಿ ಯೋಜನೆ ಕಲ್ಪಿಸುವ ಬಗ್ಗೆ /2018 ನೇ ಸಾಲಿನಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮ ರಾಜ್ಯದಲ್ಲಿ ಸ್ಥಾಪನೆ ಯಾಗಿದ್ದು,ಪ್ರಸ್ತುತ ಸಾಲಿನಲ್ಲಿ ಸ್ವಯಂ ಉದ್ಯೋಗ ಹಾಗು ಹೈನುಗಾರಿಕೆಗೆ ಉತ್ತೇಜನ,ಸಾಂದಿಪಿನಿ ಶಿಷ್ಯ ವೇತನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿರುವುದು ಸ್ವಾಗತಾರ್ಹ.
ಕರ್ನಾಟಕ ರಾಜ್ಯದ ಎಲ್ಲಾ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಅನೇಕ ಸಮಾಜ ಬಾಂಧವರು ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದು ನಿವೇಶನ ಇದ್ದರೂ ಮನೆ ನಿರ್ಮಿಸಿಕೊಳ್ಳುಲು ಆರ್ಥಿಕ ಸಮಸ್ಯೆ ಎದುರಾಗಿದೆ.ವಸತಿ ಹೀನರ ಸಮಸ್ಯೆ ಶೋಚನೀಯವಾಗಿದೆ,
ಬ್ರಾಹ್ಮಣ ಜನಾಂಗದವರು ಮೇಲ್ನೋಟಕ್ಕೆ ಸ್ಥಿತಿವಂತರಂತೆ ಕಂಡರೂ ಜೀವನ ನಿರ್ವಹಣೆಗೆ ಸಾಲ ಸೋಲ ಮಾಡಿಕೊಂಡು ಅತಂತ್ರರಾಗಿದ್ದಾರೆ,ಗ್ರಾಮ ಪಂಚಾಯಿತಿ,ಪಟ್ಟಣ ಪಂಚಾಯಿತಿ,ಪುರಸಭೆ,ನಗರಸಭೆ ಮುಖಾಂತರ ನೀಡುತ್ತಿರುವ ಆಶ್ರಯ,ಬಸವ ವಸತಿ,ಇಂದಿರಾ ಅವಾಜ್ ಮನೆಗಳು ಬ್ರಾಹ್ಮಣರ ಕೈಗೆ ಎಟಕುತ್ತಿಲ್ಲ.ಸ್ಥಳೀಯ ಸಂಸ್ಥೆಗಳಲ್ಲಿ ಸಾಮನ್ಯ ವರ್ಗಕ್ಕೆ ಎಲ್ಲಾ ಸಮುದಾಯದವರು ಅರ್ಜಿ ಸಲ್ಲಿಸುವುದರಿಂದ ಬ್ರಾಹ್ಮಣರ ಪ್ರಯತ್ನ ವಿಫಲವಾಗಿದೆ. ದೌರ್ಜನ್ಯ, ದಬ್ಬಾಳಿಕೆಯನ್ನು ವಿರೋಧಿಸುವ,ಶಾಂತಿಯಿಂದ ಸಹನೆಯಿಂದ ಎಲೆಮರೆ ಕಾಯಿಯಂತೆ ಜೀವನ ನಡೆಸುವ ನಮ್ಮ ಸಮಾಜ ಬಾಂಧವರಿಗೆ ಕರ್ನಾಟಕ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ನಿಗಮದ ವತಿಯಿಂದ ವಿಶೇಷವಾಗಿ ವಸತಿ ಯೋಜನೆ ಘೋಷಸಿ ಅನುಷ್ಠಾನ ಗೊಳಿಸುವಂತೆ ಶೆಟ್ಟಿಕೆರೆ ತೇಜು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ