ಹುಳಿಯಾರು ಪಟ್ಟಣ ಪಂಚಾಯಿತಿಯ 9ನೇ ತಾರೀಕಿನಂದು ನಡೆದ ಪ್ರಥಮ ಸಾಮಾನ್ಯ ಸಭೆಯ ಇಡೀದಿನ ಗೌಜು ಗದ್ದಲದಿಂದ ಕೂಡಿದ ಹಿನ್ನೆಲೆಯಲ್ಲಿ, ಸಂಪೂರ್ಣವಾಗಿ ಕಡೆಗೆ ಅಧ್ಯಕ್ಷರು ಸಭೆಯನ್ನು ಮತ್ತೊಂದು ದಿನಕ್ಕೆ ಮುಂದೂಡಲಾಗಿದೆ ಘೋಷಿಸಿದ್ದರಲ್ಲದೆ 15-2-22 ಕ್ಕೆ ನಿಗದಿ ಮಾಡಿ ಅಂದು ಎಲ್ಲಾ ಸದಸ್ಯರುಗಳಿಗೂ ಪೂರ್ಣ ಮಾಹಿತಿ ನೀಡುವುದಾಗಿ ಸಮಾಧಾನಪಡಿಸಿದ್ದರು.
ಆದರೆ ಇದೀಗ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ರವರು ಆ ದಿನ ಸಾಂದರ್ಭಿಕ ರಜೆ ಮಂಜೂರು ಮಾಡುವಂತೆ ಯೋಜನಾ ನಿರ್ದೇಶಕರಿಗೆ ಕೋರಿರುವ ಹಿನ್ನೆಲೆಯಲ್ಲಿ ಆ ದಿನ ಸಾಮಾನ್ಯ ಸಭೆ ನಡೆಯುವುದೊ, ಇಲ್ಲವೊ ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ.
ಏಕೆಂದರೆ ಮುಂದಿನ ಸಭೆಯಲ್ಲಿ ಜಮಾಖರ್ಚಿನ ಮಾಹಿತಿಯನ್ನು ದಾಖಲೆ ಸಮೇತ ಹಾಜರ್ ಪಡಿಸುವಂತೆ ಈಗಾಗಲೆ ನಡೆದಿರುವ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದರು.
ಅದಕ್ಕೆ ಒಪ್ಪಿಗೆ ಸೂಚಿಸಿದ್ದ ಮುಖ್ಯಾಧಿಕಾರಿಗಳು,ಇದೀಗ ದಿಢೀರನೆ 15-2-22ರ ವರೆಗೆ ಮೂರುದಿನ ರಜಾ ಕೊರಿ ಜಿಲ್ಲಾ ಯೋಜನಾ ನಿರ್ದೆಶಕರಿಗೆ ಪತ್ರ ಬರೆದು ತೆರಳಿದ್ದಾರೆ.ಮುಖ್ಯಾಧಿಕಾರಿಗಳ ಈ ನಡೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ