ಕಳೆದ ಹಲವಾರು ದಶಕಗಳಿಂದ ಹುಳಿಯಾರಿನಲ್ಲಿ ಹಿಂದೂ ರುದ್ರಭೂಮಿ ಇಲ್ಲದಿರುವುದು ಸಮಸ್ಯೆಯಾಗಿದೆ.ಹಿಂದೆ ಜನಸಂಖ್ಯೆ ಕಡಿಮೆಯಿದ್ದು ಹೇಗೋ ಆಗುತ್ತಿತ್ತು.ಇದೀಗ ಹುಳಿಯಾರು ಪಟ್ಟಣ ಅಭಿವೃದ್ಧಿಯಾಗಿದ್ದು ಜನಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಅಲ್ಲದೆ ರುದ್ರಭೂಮಿಗೆ ಸ್ಥಳ ಕಾಯ್ದಿರಿಸುವಂತೆ ಸುತ್ತೋಲೆ ಸಹ ಸರ್ಕಾರದಿಂದ ಬಂದಿದ್ದು , ಅಧಿಕಾರಿಗಳು ಈಗಾಲಾದಾರೂ ಇಲ್ಲಿನ ಜನಕ್ಕೆ ಅತಿ ಅಗತ್ಯವಿರುವ ಹಿಂದೂ ರುದ್ರಭೂಮಿಗೆ ಸ್ಥಳ ಗುರುತಿಸಿ ಅಭಿವೃದ್ಧಿಪಡಿಸುವಂತೆ ಅವರು ಮನವಿ ಮಾಡಿದ್ದಾರೆ.
ರುದ್ರಭೂಮಿ ಅಗತ್ಯತೆ ಬಗ್ಗೆ ಕಳೆದ ಎಂಟು ತಿಂಗಳ ಹಿಂದೆ ನಾನೇ ಖುದ್ದಾಗಿಹ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಇದೇ ತಿಂಗಳ 9 ರಂದು ಅಂದರೆ ದಿನಾಂಕ: 9-2-2022 ರಂದು ಪಟ್ಟಣ ಪಂಚಾಯಿತಿಯ ಪ್ರಥಮ ಸಭೆ ನಡೆಯಲಿದ್ದು,ಅಂದಿನ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಂಡು ಸಾರ್ವಜನಿಕರ ಸಮಸ್ಯೆಗೆ ಇತಿಶ್ರೀ ಹಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ