ಹುಳಿಯಾರು-ಕೆಂಕರೆಯ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಘಟಕವು, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ. ಮೋಹನ್ ಕುಮಾರ್ ಎಂ.ಜೆ. ಇವರ ನೇತೃತ್ವದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ "ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು-ಚಿಕ್ಕನಾಯಕನಹಳ್ಳಿ ಘಟಕ”ದ ಕಾರ್ಯಾಲಯದ ಉದ್ಘಾಟನೆ ಮತ್ತು "ಕವಿಗೋಷ್ಠಿ" ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.
ಕಾಲೇಜಿನ ಯುವ ಕವಿ-ಕವಯಿತ್ರಿಯರಾದ ಚಂದನ ಕೆ.ಪಿ.(ಪ್ರಥಮ ಬಿ.ಎ.), ಮಾರುತಿ ಎಚ್.ಆರ್.(ಪ್ರಥಮ ಬಿ.ಎ.), ರಂಜಿತ ಆರ್.(ಪ್ರಥಮ ಬಿ.ಎ.),ಪೂಜಾಶ್ರೀ ವಿ.(ಪ್ರಥಮ ಬಿ.ಎ.), ಸಹನ ಕೆ.(ದ್ವಿತೀಯ ಬಿ.ಕಾಂ.),ಗೀತಾ ಟಿ.ಆರ್.(ದ್ವಿತೀಯ ಬಿ.ಕಾಂ.) ಇವರು ತಮ್ಮ ಸ್ವರಚಿತ ಕವನಗಳನ್ನು ವಾಚಿಸುವ ಮೂಲಕ ನೆರೆದಿದ್ದ ಸಭಿಕರ ಮನಸೂರೆಗೊಂಡರು. ವಿದ್ಯಾರ್ಥಿಗಳ ಕವಿತೆಗಳು ಪ್ರಕೃತಿ ಆರಾಧನೆ,ತಂದೆ-ತಾಯಿಯರ ತ್ಯಾಗ,ಭಾವೈಕ್ಯತೆ,ದೇಶಭಕ್ತಿ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ್ದು ವಿಶೇಷವಾಗಿತ್ತು. ತಾಲ್ಲೂಕಿನ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಒಟ್ಟು ಇಪ್ಪತ್ತನಾಲ್ಕು ಕವಿಗಳು ಗೋಷ್ಠಿಯಲ್ಲಿ ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಬಿ.ಎಂ.ಎಸ್. ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಮೋಹನ್ ಕುಮಾರ್ ಎಂ.ಜೆ., ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಜಾನಪದ ವಿದ್ವಾಂಸ ಶ್ರೀ ಕಂಟಲಗೆರೆ ಸಣ್ಣಹೊನ್ನಯ್ಯ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.ಚಿಕ್ಕನಾಯಕನಹಳ್ಳಿ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಹನುಮಂತರಾಜು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಚಿಕ್ಕನಾಯಕನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಂ.ಎಸ್. ರವಿಕುಮಾರ್ ಕಟ್ಟೇಮನೆ ಉಪಸ್ಥಿತರಿದ್ದರು. ದಯಾನಂದ್ ಹುಳಿಯಾರು ಸ್ವಾಗತಿಸಿದರು. ನವೀನ್ ರಾವತ್ ನಿರೂಪಿಸಿದರು, ಮಂಜುನಾಥ್ ಹಂದನಕೆರೆ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ