ದೊಡ್ಡಬಿದರೆ ಗ್ರಾಮದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಪಾತಲಿಂಗೇಶ್ವರ ಸ್ವಾಮಿ,ಲಕ್ಕಮ್ಮದೇವಿ ಹಾಗೂ ಶ್ರೀ ಕರಿಯಮ್ಮ ಬೇವಿನಳಮ್ಮ ದೇವಿಯವರ ದೇವಾಲಯದ ಶಿಖರ ಮತ್ತು ಕಳಸ ಸ್ಥಾಪನೆ ಹಾಗೂ ಸ್ಥಿರಬಿಂಬ ಕುಂಭಾಭಿಷೇಕ ಮಹೋತ್ಸವ
ಹುಳಿಯಾರು ಸಮೀಪದ ದೊಡ್ಡಬಿದರೆ ಗ್ರಾಮದಲ್ಲಿ ಶ್ರೀ ಪಾತಲಿಂಗೇಶ್ವರ ಸ್ವಾಮಿ,ಲಕ್ಕಮ್ಮದೇವಿ ಹಾಗೂ ಶ್ರೀ ಕರಿಯಮ್ಮ ಬೇವಿನಳಮ್ಮ ದೇವಿ ಯವರ ದೇವಾಲಯದ ಶಿಖರ ಮತ್ತು ಕಳಸ ಸ್ಥಾಪನೆ ಹಾಗೂ ಸ್ಥಿರಬಿಂಬ ಕುಂಭಾಭಿಷೇಕ ಮಹೋತ್ಸವ ಇದೇ ಫೆ.4ರ ಶುಕ್ರವಾರದಿಂದ, ಫೆ. 7ರ ಸೋಮವಾರದವರೆಗೆ ಶ್ರದ್ಧಾಭಕ್ತಿಯಿಂದ ಜರುಗಿತು.
ಹೊನ್ನವಳ್ಳಿ ಮಠದ ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮಿಗಳು ಕಳಸಾರೋಹಣ ನೆರವೇರಿಸಿದರು.
ಕರ್ನಾಟಕ ರಾಜ್ಯ ಜೈವಿಕ ಇಂಧನ ನಿಗಮ-ಮಂಡಳಿ ಅಧ್ಯಕ್ಷ ಹಾಗೂ ಮಾಜಿ ಶಾಸಕರಾದ ಕೆ.ಎಸ್.ಕಿರಣ್ ಕುಮಾರ್ ದೇವಾಲಯಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.ಚಿಕ್ಕಬಿದರೆ ಕರಿಯಮ್ಮ ದೇವಿ ಹಾಗೂ ಕೋಡಿಹಳ್ಳಿ ಕೊಲ್ಲಾಪುರದಮ್ಮ ದೇವರುಗಳು ಜಾತ್ರೆಗೆ ಆಗಮಿಸಿದ್ದವು.ಗಂಗಾಪೂಜೆ ಗಣಪತಿ ಪೂಜೆ,ನಾಂದಿ ಸಮಾರಾಧನೆ ಪೂಜೆ,ಅಷ್ಟದಿಕ್ಪಾಲಕರ ಪೂಜೆ, ನವಗ್ರಹ ಹೋಮ, ಮೃತ್ಯುಂಜಯ ಹೋಮ,ವಾಸ್ತು ಹೋಮ,ದುರ್ಗಾ ಹೋಮ, ಶ್ರೀಸೂಕ್ತ ಹೋಮ,ಕಾಳಹೋಮ ಜರುಗಿತು.ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಸ್ವಾಮಿಯ ಹಾಗೂ ಅಮ್ಮನವರ ನೂರಾರು ಭಕ್ತರು ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.ಪಾತಲಿಂಗೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಕರಿಯಮ್ಮದೇವಿ ದೇವಸ್ಥಾನ ಟ್ರಸ್ಟ್ ಸದಸ್ಯರುಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ