ಕಸ ವಿಲೇವಾರಿ, ಶೌಚಾಲಯಗಳ ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ ತಾಲೂಕು ಆದಾಗ ಇನ್ನಷ್ಟು ಕಷ್ಟ - ಯಳನಾಡು ಸ್ವಾಮೀಜಿ ಎಚ್ಚರಿಕೆ
ಕಸ ವಿಲೇವಾರಿ, ಶೌಚಾಲಯಗಳ ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ ತಾಲೂಕು ಆದಾಗ ಇನ್ನಷ್ಟು ಕಷ್ಟ - ಯಳನಾಡು ಸ್ವಾಮೀಜಿ ಎಚ್ಚರಿಕೆ ಹುಳಿಯಾರು : ಹುಳಿಯಾರು ಪಟ್ಟಣ ಪಂಚಾಯಿತಿ ಮುಂದೆ ರಾಜ್ಯ ರೈತ ಸಂಘದ ಅಧ್ಯಕ್ಷ ಚಂದ್ರಪ್ಪ ನೇತೃತ್ವದಲ್ಲಿ 23 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಯಳನಾಡು-ಅರಸೀಕೆರೆ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮಿಜಿಗಳು ಭೇಟಿ ನೀಡಿ ಬೆಂಬಲ ಸೂಚಿಸಿ, ಆಡಳಿತದ ನಿರ್ಲಕ್ಷ್ಯದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹುಳಿಯಾರು ಹೋಬಳಿಯನ್ನು ತಾಲೂಕು ಮಾಡುವ ಬಗ್ಗೆ ಮೊದಲಿಗಿನಿಂದಲೂ ಕೂಗು ಇರುವಾಗ , ಈಗಿರುವ ಹೋಬಳಿ ಮಟ್ಟದ ಕಸ ವಿಲೇವಾರಿ ಮತ್ತು ಸಾರ್ವಜನಿಕ ಶೌಚಾಲಯಗಳ ಸಮಸ್ಯೆಗಳನ್ನೇ ಬಗೆಹರಿಸಲು ಸಾಧ್ಯವಾಗದಿದ್ದರೆ, ನಾಳೆ ದಿನ ಹುಳಿಯಾರು ತಾಲೂಕು ಆದಾಗ ಅದರ ಸಮಸ್ಯೆಗಳನ್ನು ನಿಭಾಯಿಸುವುದು ಇನ್ನಷ್ಟು ದುಸ್ತರವಾಗಲಿದೆ ಎಂದು ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು. ತಾಲೂಕು ಅರ್ಹತೆ ಇದ್ದರೂ ನಿರ್ಲಕ್ಷ್ಯ: ಹುಳಿಯಾರು ಪಟ್ಟಣ ಪಂಚಾಯಿತಿ ಒಂದು ಹಳ್ಳಿ ಮತ್ತು ಪಟ್ಟಣದ ರೀತಿಯಲ್ಲಿದ್ದು, ಅದನ್ನು ಅಭಿವೃದ್ಧಿಪಡಿಸುವುದು ಕಷ್ಟದ ಸಮಸ್ಯೆ. ಆದರೆ ಹುಳಿಯಾರು ಒಂದು ಹೋಬಳಿ ಮಟ್ಟಕ್ಕಿಂತಲೂ ಮೀರಿ ತಾಲೂಕು ಆಗಲು ಅರ್ಹತೆ ಹೊಂದಿದೆ ಎಂದು ಈ ಹಿಂದಿನಿಂದಲೂ ಜನರ ಬೇಡಿಕೆ ಮತ್ತು ಕೂಗು ಇದೆ. ಇಷ್ಟೆಲ್ಲಾ ಅರ್ಹತೆ ಹೊಂ...