ತಿಪಟೂರು : ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಹಿರಿಯರ ದಿನಾಚರಣೆ ಅಂಗವಾಗಿ ತಿಪಟೂರಿನ ಶ್ರೀ ಶಾರದಾದೇವಿ ಚಾರಿಟಬಲ್ ಟ್ರಸ್ಟ್ (ರಿ.)ನ ಹಿರಿಯರ ಮನೆಯಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ತಿಪಟೂರಿನ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಹಾಗೂ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಭರತ್ ಚಂದ್ರ ಕೆ.ಎಸ್. ಅವರು ಹಿರಿಯರ ಮನೆಯಲ್ಲಿ ವಾಸಿಸುತ್ತಿರುವ ಹಿರಿಯರಿಗೆ ಕಾನೂನು ಕುರಿತು ಉಪಯುಕ್ತ ಮಾಹಿತಿ ನೀಡಿದರು. ಹಿರಿಯರು ತಮ್ಮ ಹಕ್ಕುಗಳು, ಆಸ್ತಿ ಹಂಚಿಕೆ, ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ ಸೇರಿದಂತೆ ವಿವಿಧ ಕಾನೂನು ಅಂಶಗಳ ಬಗ್ಗೆ ಅರಿವು ಪಡೆಯುವಂತೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ವಳಗರೆಹಳ್ಳಿ ರಾಮಣ್ಣ, ಬದುಕು ಸಾಂತ್ವನ ಕೇಂದ್ರದ ನಂದಕುಮಾರ್, ಜನಜಾಗೃತಿ ವೇದಿಕೆಯ ಸದಸ್ಯ ಹಾಗೂ ಮಾಜಿ ನಗರಸಭಾ ಸದಸ್ಯ ತರಕಾರಿ ಗಂಗಾಧರ್, ಟ್ರಸ್ಟಿಗಳಾದ ಶ್ರೀಮತಿ ಚೆನ್ನಂಬಿಕ, ತಾಲೂಕು ಕಾನೂನು ಸೇವಾ ಸಲಹಾ ಸಮಿತಿ ಸದಸ್ಯ ಡಿ. ಅಶೋಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
(ವರದಿ: ಹುಳಿಯಾರು ಬಾಬು)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ