ಕಸ ವಿಲೇವಾರಿ, ಶೌಚಾಲಯಗಳ ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ ತಾಲೂಕು ಆದಾಗ ಇನ್ನಷ್ಟು ಕಷ್ಟ - ಯಳನಾಡು ಸ್ವಾಮೀಜಿ ಎಚ್ಚರಿಕೆ
ಹುಳಿಯಾರು ಹೋಬಳಿಯನ್ನು ತಾಲೂಕು ಮಾಡುವ ಬಗ್ಗೆ ಮೊದಲಿಗಿನಿಂದಲೂ ಕೂಗು ಇರುವಾಗ, ಈಗಿರುವ ಹೋಬಳಿ ಮಟ್ಟದ ಕಸ ವಿಲೇವಾರಿ ಮತ್ತು ಸಾರ್ವಜನಿಕ ಶೌಚಾಲಯಗಳ ಸಮಸ್ಯೆಗಳನ್ನೇ ಬಗೆಹರಿಸಲು ಸಾಧ್ಯವಾಗದಿದ್ದರೆ, ನಾಳೆ ದಿನ ಹುಳಿಯಾರು ತಾಲೂಕು ಆದಾಗ ಅದರ ಸಮಸ್ಯೆಗಳನ್ನು ನಿಭಾಯಿಸುವುದು ಇನ್ನಷ್ಟು ದುಸ್ತರವಾಗಲಿದೆ ಎಂದು ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ತಾಲೂಕು ಅರ್ಹತೆ ಇದ್ದರೂ ನಿರ್ಲಕ್ಷ್ಯ:
ಹುಳಿಯಾರು ಪಟ್ಟಣ ಪಂಚಾಯಿತಿ ಒಂದು ಹಳ್ಳಿ ಮತ್ತು ಪಟ್ಟಣದ ರೀತಿಯಲ್ಲಿದ್ದು, ಅದನ್ನು ಅಭಿವೃದ್ಧಿಪಡಿಸುವುದು ಕಷ್ಟದ ಸಮಸ್ಯೆ. ಆದರೆ ಹುಳಿಯಾರು ಒಂದು ಹೋಬಳಿ ಮಟ್ಟಕ್ಕಿಂತಲೂ ಮೀರಿ ತಾಲೂಕು ಆಗಲು ಅರ್ಹತೆ ಹೊಂದಿದೆ ಎಂದು ಈ ಹಿಂದಿನಿಂದಲೂ ಜನರ ಬೇಡಿಕೆ ಮತ್ತು ಕೂಗು ಇದೆ. ಇಷ್ಟೆಲ್ಲಾ ಅರ್ಹತೆ ಹೊಂದಿದ್ದರೂ, ಇಲ್ಲಿನ ಆಡಳಿತ ಹೋಬಳಿ ಮಟ್ಟದ ಸಮಸ್ಯೆಗಳನ್ನೇ ಬಗೆಹರಿಸಲು ಆಗದಿದ್ದರೆ, ತಾಲೂಕು ಮಟ್ಟದ ಸಮಸ್ಯೆಗಳನ್ನು ಬಗೆಹರಿಸುವುದು ಇನ್ನು ದೊಡ್ಡ ಸವಾಲಾಗಲಿದೆ. ಆಡಳಿತವು ಕೇವಲ ಭರವಸೆಗಳನ್ನು ನೀಡದೆ, ತಕ್ಷಣವೇ ಕಣ್ಣುಬಿಟ್ಟು ನೋಡಿ, ಹೋರಾಟ ನಿಲ್ಲಿಸಿ, ರೈತರಿಗೆ ಕೆಲಸ ಮಾಡಲು, ಧಾನ್ಯ ಬೆಳೆಯಲು ಅವಕಾಶ ಕಲ್ಪಿಸಬೇಕು. ರೈತ ದೇಶದ ಬೆನ್ನೆಲುಬು, ರೈತ ಇಲ್ಲದಿದ್ದರೆ ನಾವೂ, ನೀವೂ ಯಾರೂ ಇಲ್ಲ. ರೈತರು ಪ್ರತಿಭಟನೆ ಮಾಡುವುದು ಸರಿಯಲ್ಲ, ಅವರು ಮನೆಯಲ್ಲಿದ್ದುಕೊಂಡು ಕೃಷಿ ಮಾಡಬೇಕು.
ಕಸ ವಿಲೇವಾರಿ ಮತ್ತು ಶೌಚಾಲಯಗಳ ವ್ಯವಸ್ಥೆ ಸುಧಾರಣೆಗೆ ಆಗ್ರಹ:
ಇಡೀ ರಾಷ್ಟ್ರದಲ್ಲಿ ಕಸದ ಸಮಸ್ಯೆ ಇದೆ. ಸ್ವಚ್ಛತೆ ನಮ್ಮ ಮನೆಯಿಂದಲೇ ಶುರುವಾಗಲಿ ಎಂಬಂತೆ ನಮ್ಮ ಮನೆ ಮುಂದೆ ಚೆನ್ನಾಗಿರಬೇಕು, ಇನ್ನೊಬ್ಬರ ಮನೆ ಮುಂದೆ ಹೇಗಾದರೂ ಇರಲಿ ಎಂಬ ಮನಸ್ಥಿತಿ ಬಿಟ್ಟು, ವ್ಯವಸ್ಥಿತವಾಗಿ ಸ್ವಚ್ಛತೆ ಕಾಪಾಡಬೇಕು. ಅಂತೆಯೇ, ಸರ್ಕಾರ ಮನೆಮನೆಗೆ ಶೌಚಾಲಯ ಸೇರಿದಂತೆ ಉತ್ತಮ ವ್ಯವಸ್ಥೆಗಳನ್ನು ಕೊಡುತ್ತಾ ಬಂದಿದ್ದರೂ, ಸಾರ್ವಜನಿಕ ಶೌಚಾಲಯಗಳ ಬಗ್ಗೆ ಮಾತ್ರ ಬಹಳಷ್ಟು ಉದಾಸೀನತೆ ಇದೆ. ಸಾರ್ವಜನಿಕರು ಶೌಚಾಲಯವನ್ನು ಸರಿಯಾಗಿ ಬಳಸದೇ ಇರುವುದರಿಂದ, ಅದರ ನಿರ್ವಹಣೆ ಸವಾಲಾಗಿದೆ. ನಮ್ಮ ಮನೆ ಶೌಚಾಲಯವನ್ನು ಸ್ವಚ್ಛವಾಗಿಡುವಂತೆ, ಸಾರ್ವಜನಿಕ ಶೌಚಾಲಯಗಳನ್ನೂ ಪೂಜಾ ಮಂದಿರದಷ್ಟೇ ಮಹತ್ವ ಕೊಟ್ಟು ಒಳ್ಳೆಯ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಹೊರಗಿನಿಂದ ಬರುವ ಜನರಿಗೆ ಶೌಚಾಲಯ ಸೌಲಭ್ಯ ಇಲ್ಲದೆ ಪರದಾಡುವ ಪರಿಸ್ಥಿತಿ ಇದೆ. ಆಡಳಿತ ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ, ರೈತರು ಧರಣಿ ಕೂರಲು ಅವಕಾಶ ಕೊಡದೇ ಆದಷ್ಟು ಬೇಗ ಉತ್ತಮ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸ್ವಾಮೀಜಿಗಳು ಕಳಕಳಿಯ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಚಂದ್ರಪ್ಪ, ಶ್ರೀ ಆಂಜನೇಯ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಡಗಿ ರಾಮಣ್ಣ, ಕಾರ್ಯದರ್ಶಿ ಧನಂಜಯ ಮೂರ್ತಿ, ಪೈಲ್ವಾನ್ ಜಯಣ್ಣ, ನಂದಾವಾಡಗಿ, ಎಬಿವಿಪಿ ಗುರುಪ್ರಸಾದ್, ಬಸವರಾಜು, ಪ್ರಶಾಂತ್, ಲಕ್ಷ್ಮಿ, ಜಯಲಕ್ಷ್ಮಮ್ಮ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಸೇರಿದಂತೆ ರೈತಸಂಘದ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ