ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಅಪರಿಚಿತ ವೃದ್ಧ ಮಹಿಳೆ ಸಾವು; ವಾರಸುದಾರರಿಗೆ ಹುಡುಕಾಟ
ಹುಳಿಯಾರು : ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಾರೋಗ್ಯದಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸುಮಾರು 50 ರಿಂದ 60 ವರ್ಷದ ಅಪರಿಚಿತ ವೃದ್ಧ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಮೃತರ ಹೆಸರು, ವಿಳಾಸ ಮತ್ತು ವಾರಸುದಾರರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರಕರಣದ ವಿವರಗಳು :
ದಿನಾಂಕ: 10/08/2025 ರಂದು ಬೆಳಿಗ್ಗೆ ಸುಮಾರು 9:00 ಗಂಟೆ ಸಮಯದಲ್ಲಿ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯ ಪೋಚಕಟ್ಟೆ ಬಸ್ ನಿಲ್ದಾಣದ ಬಳಿ ರಸ್ತೆ ಪಕ್ಕದಲ್ಲಿ ಈ ವೃದ್ಧ ಮಹಿಳೆಯು ಅನಾರೋಗ್ಯದಿಂದ ಅಸ್ವಸ್ಥಳಾಗಿ ಮಲಗಿದ್ದರು. ಸ್ಥಳೀಯ ಸಾರ್ವಜನಿಕರು ತಕ್ಷಣವೇ 108 ಆಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಅವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ದೀರ್ಘಕಾಲದ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 28/09/2025 ರಂದು ಆ ಮಹಿಳೆ ಮೃತರಾಗಿದ್ದಾರೆ. ಮೃತರಾದ ವೃದ್ಧ ಮಹಿಳೆಯ ದೇಹವು ಪ್ರಸ್ತುತ ತುಮಕೂರು ಜಿಲ್ಲಾ ಆಸ್ಪತ್ರೆಯ ಶವಗಾರದ ಶೈತ್ಯಗಾರದಲ್ಲಿ ಇರಿಸಲಾಗಿದೆ.
ಮೃತರ ಹೆಸರು, ವಿಳಾಸ ಮತ್ತು ವಾರಸುದಾರರ ಕುರಿತು ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಈ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಪ್ರಕರಣವನ್ನು ದಾಖಲಿಸಲಾಗಿದೆ.
ಮಾಹಿತಿ ನೀಡಲು ಮನವಿ:
ಮೃತ ಅಪರಿಚಿತ ವೃದ್ಧ ಮಹಿಳೆಯ ಕುರಿತು ಮಾಹಿತಿ ತಿಳಿದಿರುವವರು ಅಥವಾ ವಾರಸುದಾರರು ಕೂಡಲೇ ಹುಳಿಯಾರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ.
ಸಂಪರ್ಕ ಸಂಖ್ಯೆಗಳು:
* 08133-256150
* 9480802972
* 9480802939
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ