ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಹಿಳೆಯರು ಸಾಧನೆಯ ಮೂಲಕ ಗುರುತಿಸಿಕೊಳ್ಳಬೇಕು: ಪಾರ್ವತಿ ಯಾದವ್

ನಾವು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಬುದಕ್ಕಿಂತ ನಾವು ಎಷ್ಟು ಸಾಧನೆ ಮಾಡಿದ್ದೇವೆ ಎಂಬುದೇ ಮುಖ್ಯವಾಗಿದ್ದು ಮಹಿಳೆಯರು ಸಾಧನೆಯ ಮೂಲಕ ಗುರುತಿಸಿಕೊಳ್ಳುವಂತಾಗಬೇಕು ಎಂದು ಹುಳಿಯಾರು ಪಿಎಸ್ಐ ಶ್ರೀಮತಿ ಪಾರ್ವತಿ ಎನ್ ಯಾದವ್ ಕಿವಿಮಾತು ಹೇಳಿದರು.A ಹುಳಿಯಾರಿನ ಬಸವೇಶ್ವರ ಪ್ರೌಢಶಾಲೆಯಲ್ಲಿ ಬಸವೇಶ್ವರ ನಗರ, ಇಂದಿರಾನಗರ ಮತ್ತು ಆಝಾದ್ ನಗರಗಳ ಸ್ತ್ರೀಶಕ್ತಿ ಸಂಘಗಳು, ಸೃಜನಾ ಮಹಿಳಾ ಸಂಘಟನೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಇತ್ತೀಚೆಗೆ ಮಹಿಳೆಯರು ದುಡಿಯುವ ನೆಪದಿಂದಲ್ಲಾದರೂ ಮನೆಯಿಂದ ಹೊರಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಅದರಲ್ಲೂ ಈ ಕಾರ್ಯಕ್ರಮಕ್ಕೆ ಮುಸ್ಲೀಂ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಸೇರಿರುವುದು ಅಭಿನಂದನೀಯ ಎಂದರು. ಸೃಜನಾ ಸಂಘಟನೆಯ ಕಾರ್ಯದರ್ಶಿ ಎನ್.ಇಂದಿರಮ್ಮ ಅವರು ವಿಶ್ವ ಮಹಿಳಾ ದಿನದ ಮಹತ್ವ ಕುರಿತು ಮಾತನಾಡುತ್ತ ಸಮಾಜದಲ್ಲಿ ಮಹಿಳೆತರ ಪ್ರಾಮುಖ್ಯತೆ ಬಹಳವಿದ್ದು ಮಹಿಳೆ ಮನೆಯಲ್ಲಿ ಇಲ್ಲದಿದ್ದರೆ ಎಲ್ಲವೂ ಅಸ್ತವ್ಯಸ್ಥವಾಗುತ್ತದೆ.ಒಂದು ವರ್ಷಕ್ಕೆ ಒಂದು ದಿನ ಮಾತ್ರವೇ ಮಹಿಳಾ ದಿನವಲ್ಲ. ಪ್ರತಿ ದಿನವೂ ಮಹಿಳಾ ದಿನವೇ ಆಗಿರುತ್ತದೆ.ಒಟ್ಟಾರೆ ಮುಂದಿನ ದಿನದಲ್ಲಿ ಸ್ತ್ರೀಶಕ್ತಿ ಸಂಘಟನೆಗಳು ಮತ್ತು ಇತರ ಮಹಿಳಾ ಸಂಘಟನೆಗಳು ಒಗ್ಗೂಡುವ ಅಗತ್ಯವಿದೆ ಎಂದು ಹೇಳಿದರು. ತುಮಕೂರು ವಿಜ್ಞಾನ ಕೇಂದ್ರದ ಕಾರ್ಯದರ್ಶಿ ರಾಮಕೃಷ್ಣಪ್ಪ ಅವರು ಮಾತನಾಡಿ

ನಂದಿಹಳ್ಳಿಯಲ್ಲಿ ರಥೋತ್ಸವ

ನಂದಿಹಳ್ಳಿಯಲ್ಲಿ ಶ್ರೀ ನಂದಿ ಬಸವೇಶ್ವರಸ್ವಾಮಿಯ ಸಂಭ್ರಮದ ರಥೋತ್ಸವ ಹುಳಿಯಾರು ಹೋಬಳಿ ನಂದಿಹಳ್ಳಿ ಗ್ರಾಮದಲ್ಲಿ ಭಕ್ತ ಸಾಗರದ ಸಂಭ್ರಮದ ನಡುವೆ ಶ್ರೀ ನಂದಿ ಬಸವೇಶ್ವರ ಸ್ವಾಮಿಯವರ ಮುತ್ತಿನ ವಾಹನ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ಗಂಗಾಪೂಜೆ, ಹಣ್ಣುಕಾಯಿ ಸೇವೆ, ಮಹಾಮಂಗಳಾರತಿ, ಪನಿವಾರ ಸೇವೆ ಮುಂತಾದ ಧಾರ್ಮಿಕ ಕೈಂಕರ್ಯ ನಡೆಯುವುದರ ಮೂಲಕ ಕಳೆದ ಐದು ದಿನಗಳಿಂದ ವೈಭವದಿಂದ ನಡೆಯುತ್ತಿದ್ದ ಶ್ರೀ ನಂದಿ ಬಸವೇಶ್ವರಸ್ವಾಮಿ ಜಾತ್ರೆಗೆ ಸೋಮವಾರ ವಿಧ್ಯುಕ್ತವಾಗಿ ತೆರೆ ಎಳೆಯಲಾಯಿತು. ಧ್ವಜಾರೋಹಣದೊಂದಿಗೆ ಪ್ರಾರಂಭವಾದ ಐದು ದಿನಗಳ ಕಾಲದ ಜಾತ್ರಾ ಮಹೋತ್ಸವದಲ್ಲಿ ಶ್ರೀಆಂಜನೇಯಸ್ವಾಮಿಯವರಿಗೆ ಕುಂಕುಮಾರ್ಚನೆ, ಅಭಿಷೇಕ, ಮಂಗಳಾರತಿ, ಬಿಲ್ಲುಗೂಡು ಸೇವೆ, ಮಹಾಮಂಗಳಾರತಿ, ಪಾನಕ ಫನಿವಾರ ವಿನಿಯೋಗ, ಶ್ರೀ ನಂದಿ ಬಸವೇಶ್ವರಸ್ವಾಮಿಯವರಿಗೆ ರುದ್ರಾಭಿಷೇಕ, ದೇವತೆಗಳ ಕೂಡು ಭೇಟಿ, ನೂರೊಂದು ಎಡೆ ಸೇವೆ, ಗುರುಪರುವಿನೊಂದಿಗೆ ಅನ್ನ ಸಂತರ್ಪಣೆ, ದೋಣಿಸೇವೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಶ್ರೀ ಶನೇಶ್ವರಸ್ವಾಮಿ, ನಿರುಗಲ್ ಶ್ರೀ ದುರ್ಗಮ್ಮ, ರಾಯರಹಟ್ಟಿ ಶ್ರೀ ಕ್ಯಾತಲಿಂಗೇಶ್ವರಸ್ವಾಮಿ, ಶ್ರೀ ಆಂಜನೇಯಸ್ವಾಮಿ, ಶ್ರೀ ಚೌಡಮ್ಮ ದೇವರುಗಳು ಆಗಮಿಸಿದ್ದು ಬೆಂಗಳೂರಿನ ವೀರಭದ್ರೇಶ್ವರ ಕುಣಿತ, ಸಿಂಗಾಪುರದ ಡೊಳ್ಳುಕುಣಿತ, ತಿಪಟೂರಿನ ನಾಸಿಕ್ ಡೋಲ್, ಸಿಡಿಮದ್ದು, ನಗಾರಿ ಹಾಗೂ ಮಂಗಳವಾದ್ಯಗಳು ವಿಷೇಶ ಮೆರಗು ತಂದಿತ್ತು. ಬೆಸ್ಕಾಂನ ಎನ್.ಬ

ಹುಳಿಯಾರಿನಲ್ಲಿ ಸಂಭ್ರಮದ ರಾಮನವಮಿ

ಹುಳಿಯಾರು ಪಟ್ಟಣದ ಮನೆಮನೆಗಳಲ್ಲಿ, ದೇವಸ್ಥಾನಗಳಲ್ಲಿ ಕೋಸಂಬರಿ ಬೇಲದ ಹಣ್ಣಿನ ಪಾನಕ ಸಂತರ್ಪಣೆ ಮಾಡುತ್ತ ಶ್ರೀರಾಮಚಂದ್ರ ಜನ್ಮ ದಿನವಾದ ರಾಮನವಮಿ ಹಬ್ಬವನ್ನು ಇಂದು ಅದ್ಧೂರಿಯಾಗಿ ಆಚರಿಸಲಾಯಿತು. ಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯ ಇಂದಿನ ಬೆಳಗಿನಿಂದಲೇ ಮನೆಗಳಲ್ಲಿ,ಗುಡಿಗೋಪುರಗಳಲ್ಲಿ ಶ್ರೀರಾಮನಿಗೆ ಮತ್ತು ಆಂಜನೇಯನಿಗೆ ವಿಶೇಷ ಅರ್ಚನೆ, ಪೂಜೆ ಕೈಂಕರ್ಯಗಳು ವಿಜೃಂಭಣೆಯಿಂದ ಜರುಗಿದವು. ಪ್ರತಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಬೇಸಿಗೆಯ ಧಗೆಯನ್ನು ತಣ್ಣಗಾಗಿಸಲು ಪಾನಕ, ಕೋಸಂಬರಿ, ಮಜ್ಜಿಗೆ ಸಂತರ್ಪಣೆ ನಡಯಿತು.ಬ್ರಾಹ್ಮಣ ಸಂಘದಿಂದ ರಂಗನಾಥ ದೇವಾಲಯದಲ್ಲಿ ರಾಮ ಅಷ್ಟೋತ್ತರ,ರಾಮ ರಕ್ಷಾ ಸ್ತೋತ್ರ,ರಾಮ ಅಷ್ಟಕ ,ರಾಮ ಸಹಸ್ರನಾಮ ಜಪಿಸಿತಲ್ಲದೆ ವಿಪ್ರ ಮಹಿಳಾ ಸಂಘದಿಂದ ರಾಮಕೀರ್ತನೆಯ ಭಜನೆ ಮಾಡಲಾಯಿತು. ಗಾಂಧಿಪೇಟೆಯ ಶ್ರೀಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ರಾಮನಿಗೆ ಅಭಿಷೇಕ ಮತ್ತು ಅರವಟಿಗೆ ಉತ್ಸವ ಅತ್ಯಂತ ಸಂಭ್ರಮಾಚರಣೆಯಿಂದ ನಡೆಯಿತು.ಆರ್ಯವೈಶ್ಯ ಮಂಡಳಿಯಿಂದ ಶ್ರೀ ರಾಮನ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಆಂಜನೇಯ ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಹಾಗೂ ಆಗಮಿಸಿದ್ದ ಗ್ರಾಮದೇವತೆಗಳಾದ ಹುಳಿಯಾರಮ್ಮ,ದುರ್ಗಮ್ಮ ಮತ್ತು ಲಿಂಗಪ್ಪನಪಾಳ್ಯದಿಂದ ಆಗಮಿಸಿದ್ದ ಶ್ರೀರಾಮ ಮೂರ್ತಿಗೆ ಪೂಜೆ ಸಲ್ಲಿಸಿ ಬಂದಿದ್ದ ಭಕ

ಲಿಂಗಪ್ಪನಪಾಳ್ಯದಲ್ಲಿ ರಾಮನವಮಿ ಊರಹಬ್ಬ

ಈ ಗ್ರಾಮದಲ್ಲಿ ರಾಮನವಮಿ ಊರಹಬ್ಬ ಎಲ್ಲೆಡೆ ಸಾಮಾನ್ಯವಾಗಿ ಯುಗಾದಿ, ದೀಪಾವಳಿ ಹಬ್ಬಗಳನ್ನು ಕುಟುಂಬಗಳಲ್ಲಿ ಭರ್ಜರಿಯಾಗಿ ಸಂಭ್ರಮದಿಂದ ಆಚರಿಸಿ ರಾಮನವಮಿಯಲ್ಲಿ ದೇವಸ್ಥಾನಕ್ಕೆ ತೆರಳಿ ಪೂಜಯಲ್ಲಿ ಪಾಲ್ಗೊಳ್ಳುವುದು ಪಾರಿಪಾಟವಿದ್ದರೆ ಇಲ್ಲೊಂದು ಗ್ರಾಮದಲ್ಲಿ ರಾಮನವಮಿಯನ್ನು ಆಚರಿಸುವ ರೀತಿಯೇ ಬೇರೆ. ಇಲ್ಲಿ ಒಂಬತ್ತು ದಿನಗಳ ಕಾಲ ನಡೆಯೋ ರಾಮನ ಉತ್ಸವ ಒಂದರ್ಥದಲ್ಲಿ ವಿಶೇಷವೇ ಸರಿ.ಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಬರುವ ರಾಮನವಮಿಯನ್ನು ಕುಟುಂಬದ ಮುಖ್ಯ ಹಬ್ಬವಾಗಿ ಆಚರಿಸುವ ಮೂಲಕ 9 ದಿನಗಳ ಕಾಲ ವಸಂತ ನವರಾತ್ರಿಯನ್ನು ಊರಿನಲ್ಲಿ ಆಚರಿಸುವುದು ರೂಢಿಯಲ್ಲಿದೆ. ನವರಾತ್ರಿ ಎಂದರೆ ಶರನ್ನವರಾತ್ರಿ ಹಾಗೂ ಮೈಸೂರು ದಸರ ನೆನಪಿಗೆ ಬರುತ್ತದೆ. ಆದರೆ ಮತ್ತೊಂದು ನವರಾತ್ರಿಯ ಆಚರಣೆ ಇಲ್ಲಿ ನಡೆದುಕೊಂಡು ಬರುತ್ತಿದೆ. ಶರನ್ನವರಾತ್ರಿ ದುರ್ಗಾಪೂಜೆಗೆ ಮೀಸಲಾದರೆ ಇಲ್ಲಿ ಆಚರಣೆಯಲ್ಲಿರುವ ವಸಂತ ನವರಾತ್ರಿ ಶ್ರೀರಾಮನಿಗೆ ಮೀಸಲು. ಹೊಸ ಸಂವತ್ಸರದ ಅಂದರೆ ಯುಗಾದಿಯ ಮೊದಲ ದಿನದಿಂದ ಪ್ರಾರಂಭಿಸಿ ರಾಮನು ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ರಾಮನ ಪೂಜೆ ಸಲ್ಲಿಸಿದ ನಂತರ ಅಂತ್ಯಗೊಳ್ಳುತ್ತದೆ. ಯುಗಾದಿ ಕಳೆದು ಒಂಬತ್ತನೆ ದಿನವೇ ಶ್ರೀ ರಾಮ ನವಮಿ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂ

ಗಂಟೇನಹಳ್ಳಿಯಲ್ಲಿ ರೈತ ಸಂಘದ ಗ್ರಾಮ ಘಟಕ ಅಸ್ಥಿತ್ವಕ್ಕೆ

ಕಂದಿಕೆರೆ ಹೋಬಳಿ ಗಡಿಗ್ರಾಮವಾದ ಗಂಟೇನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕ ಅಸ್ಥಿತ್ವಕ್ಕೆ ಬಂದಿದ್ದು ಗೌರವ ಅಧ್ಯಕ್ಷರಾಗಿ ಬಂಡೀಮನೆ ಲೋಕೇಶ್ ಅವರು ಆಯ್ಕೆಯಾಗಿದ್ದರೆ. ಗ್ರಾಮ ಘಟಕದ ಅಧ್ಯಕ್ಷರಾಗಿ ಜಿ.ಮುದ್ದರಂಗಯ್ಯ, ಉಪಾಧ್ಯಕ್ಷರಾಗಿ ಬುಡೇನ್ ಸಾಬ್, ಕಾರ್ಯದರ್ಶಿಯಾಗಿ ಜಿ.ಆರ್.ವಸಂತಕುಮಾರ್, ಸಹಕಾರ್ಯದರ್ಶಿಯಾಗಿ ಬಿ.ಎಂ.ಗಜೇಂದ್ರ ಹಾಗೂ ಖಜಾಂಜಿಯಾಗಿ ಬಿ.ಕೆ.ಕುಮಾರಯ್ಯ, ಸಂಚಾಲಕರುಗಳಾಗಿ ಜಿ.ಎಸ್.ಕರಿಯಣ್ಣ, ಜಿ.ಕೆ.ನಾಗರಾಜು, ಜಿ.ಕೆ.ಫೈಯಾಜ್, ಟಿ.ನಾಗರಾಜು, ಮಂಜಣ್ಣ, ಜಿ.ಬಿ.ಮೋಹನ್ ಅವರುಗಳು ಆಯ್ಕೆಯಾಗಿದ್ದಾರೆ. ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸೋಮಗುದ್ದ ರಂಗಸ್ವಾಮಿ, ರಾಜ್ಯ ಹಸಿರು ಸೇನೆ ಸಂಚಾಲಕ ಕೆಂಕೆರೆ ಸತೀಶ್, ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಪಿ.ಮಲ್ಲೇಶ್, ಹುಳಿಯಾರು ಹೋಬಳಿ ರೈತ ಸಂಘದ ಅಧ್ಯಕ್ಷ ತಮ್ಮಡಿಹಳ್ಳಿ ಮಲ್ಲಿಕಣ್ಣ, ತಾಲೂಕು ಉಪಾಧ್ಯಕ್ಷ ಎ.ಬಿ.ಪ್ರಕಾಶಯ್ಯ, ಟ್ರಾಕ್ಟರ್ ಮಾಲೀಕರ ಸಂಘದ ಅಧ್ಯಕ್ಷ ಕಾಡಿನರಾಜ ನಾಗರಾಜು, ಗಂಗಣ್ಣ ಮತ್ತಿತರ ರೈತ ಮುಖಂಡರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಬಸ್ ಎಜೆಂಟರ ಸಂಘದಿಂದ ಪರಿಹಾರ ವಿತರಣೆ

ಇತ್ತಿಚೆಗಷ್ಟೆ ಅಪಘಾತಕ್ಕೀಡಾಗಿ ತನ್ನ ಕೈ ಹಾಗೂ ಕಾಲು ಕಳೆದುಕೊಂಡಿದ್ದ ಚಾಲಕನಿಗೆ ಖಾಸಗಿ ಬಸ್ಸಿನ ಏಜೆಂಟರ ಸೇವಾ ಛಾರಿಟಬಲ್ ಟ್ರಸ್ಟ್ ವತಿಯಿಂದ ಪರಿಹಾರ ಧನ ವಿತರಿಸಲಾಯಿತು. ಕೊಂಡ್ಲಿಕ್ರಾಸ್ ಸಮೀಪ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಮರ್ಚಂಟ್ ಬಸ್ ಚಾಲಕ ವಾಜೀದ್ ಎಂಬುವವರು ಕೈ ಹಾಗೂ ಕಾಲು ಕಳೆದುಕೊಂಡಿದ್ದು ಹುಳಿಯಾರಿನ ಖಾಸಗಿ ಬಸ್ ಏಜೆಂಟರ ಸಂಘದ ಪದಾಧಿಕಾರಿಗಳು ಈತನ ಆರೋಗ್ಯ ಚೇತರಿಕೆಗೆ ಚಿಕಿತ್ಸೆಗೆ ಸಹಕರಿಸಿದರಲ್ಲದೆ ಸದ್ಯದ ಪರಿಸ್ಥಿತಿಯಲ್ಲಿ ಸಂಸಾರ ನಿರ್ವಹಣೆಗಾಗಿ ಮಾನವೀಯತೆ ದೃಷ್ಠಿಯಿಂದ ಈತನ ಪತ್ನಿ ರೇಷ್ಮಾಬಾನು ಅವರಿಗೆ 3 ಸಾವಿರ ರು. ನಗದು ಹಣವನ್ನು ಪರಿಹಾರವಾಗಿ ನೀಡಿ ಇತರರಿಗೆ ಮಾದರಿಯಾಗಿದ್ದಾರೆ. ಬಸ್ ಎಜೆಂಟರ ಸಂಘದ ಅಧ್ಯಕ್ಷ ಎಂ.ವಿ.ಲೋಕೇಶ್, ಖಜಾಂಜಿ ಎಚ್.ಕೆ.ವಿಶ್ವನಾಥ್, ಕಾರ್ಯದರ್ಶಿ ಮಹಮದ್ ಇಂತಿಯಾಜ್, ಉಪಾಧ್ಯಕ್ಷ ಕುಮಾರ್, ಎಚ್.ಎನ್.ರಾಘವೇಂದ್ರ, ಮೋಹನ್ ಕುಮಾರ್, ರಾಮಚಂದ್ರ, ರೇಣುಕ ಅವರು ಪರಿಹಾರ ವಿತರಣೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಹಿಳೆಯರಿಗೆ ಶಾಸಕಾಂಗದಲ್ಲಿ ಮೀಸಲಾತಿ:ದಿಟ್ಟ ಹೆಜ್ಜೆ

ಮಹಿಳೆಯರಿಗೆ ಶಾಸಕಾಂಗದಲ್ಲಿ ಮೀಸಲಾತಿ ದಿಟ್ಟ ಹೆಜ್ಜೆ :ಶೀನಪ್ಪ ಮಹಿಳೆಯರಿಗೆ ಶಾಸಕಾಂಗದಲ್ಲೂ ಮೀಸಲಾತಿ ಕಲ್ಪಿಸುವ ಮುಖಾಂತರ ದಿಟ್ಟ ಹೆಜ್ಜೆ ಇಟ್ಟಂತಾಗಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಜಿ.ಎಂ.ಶೀನಪ್ಪ ಸರ್ಕಾರದ ಕ್ರಮವನ್ನು ಶ್ಲಾಘಿಸಿದರು. ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ಘಾಟಿಸಿ ಮಾತನಾಡಿದ ಅವರು ಇಂದು ಎಲ್ಲಾ ರಂಗದಲ್ಲು ಮಹಿಳೆಯರು ಪುರುಷರಿಗೆ ಸರಿಸಮನಾಗಿ ಕಾರ್ಯ ನಿರ್ವಹಿಸುತ್ತಿದ್ದು ಮಹಿಳೆಯರ ಪಾತ್ರ ಹೆಚ್ಚಿನದಾಗಿದೆ.ಮಹಿಳೆಯರಿಗೆ ಕಾನೂನಿನ ನೆರವು ಕೂಡ ಅಗತ್ಯವಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಕೀಲ ಎಸ್.ಎಚ್.ಚಂದ್ರಶೇಖರ್ ಅವರು ಮಹಿಳಾ ದೌರ್ಜನ್ಯಗಳು ಮತ್ತು ಕಾನೂನು ಬಗ್ಗೆ ಮಾತನಾಡಿ ಮಹಿಳೆಯರಿಗೆ ಮನೆಯಿಂದಲೇ ದೌರ್ಜನ್ಯಗಳು ಆರಂಭವಾಗುತ್ತಿದ್ದು ಮಹಿಳೆಯರ ಮೇಲೆ ಅವಾಚ್ಯ ಶಬ್ಧ ಬಳಸುವುದು, ಬೈಯುವುದು, ಹೊಡೆಯುವುದು, ಸುಳ್ಳು ಆರೋಪ ಮಾಡುವುದು, ಸಿಗರೇಟು,ಬೀಡಿಯಿಂದ ಸುಡುವುದು ಹಾಗೂ ದುಶ್ಚಟಗಳಿಗೆ ವಡವೆ ಮಾರುವುದು ಎಲ್ಲವೂ ಶಿಕ್ಷಾರ್ಹ ಅಪರಾಧವಾಗಿದ್ದು ಇಂತಹ ಕಿರುಕುಳಗಳಿಗೆ ತಕ್ಷಣದಲ್ಲಿಯೇ ಜೀವನಾಂಶದಂತಹ ನ್ಯಾಯ ಸಿಗುತ್ತದೆ ಎಂದು ಮಾಹಿತಿ ನೀಡಿದರು. ಮಹಿಳೆಯರ ಹಕ್ಕುಗಳು ಮತ್ತು ಕಾನೂನು ಬಗ್ಗೆ ವಕೀಲ ಕೆ.ಆರ್.ಚನ್ನಬಸವಯ್ಯ ಮಾತನಾಡಿ ಕುಟುಂಬ ದೌರ್ಜನ್ಯಕ್ಕೆ ಒಳಗಾಗುವ ಮ

ಬಿದಿಗೆ ಚಂದ್ರನ ದರ್ಶನ

ಚಾಂದ್ರಮಾನ ಯುಗಾದಿ ಪ್ರಯುಕ್ತ ಇಂದು ಬಿದಿಗೆ ಚಂದ್ರನ ನೋಡುವುದು ವಾಡಿಕೆ.ವಿಪರ್ಯಾಸ ಅಂದರೆ ಗಣೇಶ ಹಬ್ಬದ ದಿನ ಇದೆ ಚಂದ್ರನ ನೋಡಿದ್ರೆ ಇಲ್ಲದ ದೋಷ ಬರುತ್ತೆ.ಆದರೆ ಯುಗಾದಿ ದಿನ ಮಾತ್ರ ಬಿದಿಗೆ ಚಂದ್ರನನ್ನು ಕಂಡರೆ ಪುಣ್ಯಬರುತ್ತೆ ಅಂತಾರೆ.ಮೋಡದ ಮರೆಯಲ್ಲಿ ಚಿಕ್ಕದಾಗಿ ಕಾಣಿಸುವ ಚಂದ್ರನ ಹುಡುಕಾಡಿ ಅಂತೂ ಇಂತೂ ಕಡೆಗೂ ಯಾರೊಬ್ಬರಿಗೊ ಕಂಡ ಚಂದ್ರನನ್ನು ಇತರರಿಗೆ ತೋರಿಸಿ ಸಂಭ್ರಮಿಸುತಿರುವ ದೃಶ್ಯ ಕಂಡುಬಂದಿದ್ದು ಹೀಗೆ.

ವರ್ಷದ ತೊಡಕು: ಭರ್ಜರಿ ಮಾಂಸದ ವ್ಯಾಪಾರ

ವರ್ಷದ ತೊಡಕು: ಭರ್ಜರಿ ಮಾಂಸದ ವ್ಯಾಪಾರ ಯುಗಾದಿ ಹಬ್ಬದ ಮೊದಲ ದಿನ ಎಲ್ಲರೂ ಒಬ್ಬಟ್ಟಿನ ಸಿಹಿತಿಂದು ಹಬ್ಬವನ್ನು ಆಚರಿಸಿದರೆ ಗ್ರಾಮೀಣ ಭಾಗದಲ್ಲಿ ಯುಗಾದಿ ಹಬ್ಬದ ಮಾರನೆಯ ದಿನ ಸಸ್ಯಹಾರಿಗಳು ನುಗ್ಗೆಕಾಯಿ ಸಾರು ಮಾಡಿ ಊಟ ಮಾಡುವುದು ಹಾಗೂ ಮಾಂಸಹಾರಿ ವರ್ಗದ ಜನ ಹಬ್ಬವನ್ನು ಕೇವಲ ಒಬ್ಬಟ್ಟಿನ ಊಟಕ್ಕೆ ಸೀಮಿತಗೊಳಿಸದೆ ಕುರಿ ಕೋಳಿ ಅಡಿಗೆ ಮಾಡಿ ಮಾಂಸಾಹಾರಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ವರ್ಷದ ತೊಡಕು ಆಚರಿಸುವುದು ಸಾಮಾನ್ಯ.ಮಾಂಸಾಹಾರಿ ಪ್ರೇಮಿಗಳು ಯುಗಾದಿಗಿಂತ ಈ ದಿನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತ ಬಂದಿದ್ದು ಇಂದು ಸಂಬಂಧಿಗಳನ್ನು ಹಾಗೂ ಸ್ನೇಹಿತರನ್ನು ಊಟಕ್ಕೆ ಕರೆಯುವುದು ವಾಡಿಕೆ. ಹಬ್ಬದ ಹೊಸ ತೊಡಕು ಪ್ರಯುಕ್ತ ಮುಂಜಾನೆಯಿಂದಲೆ ಪಟ್ಟಣದ ವಿವಿಧ ಮಾಂಸಾಹಾರಿ ಅಂಗಡಿಗಳಲ್ಲಿ ಮಾಂಸದ ವ್ಯಾಪಾರ ಭರ್ಜರಿಯಾಗಿ ನಡೆಯಿತು.ಖಾರದ ಹಬ್ಬಕ್ಕಾಗಿ ಕುರಿ ಕೋಳಿ ಕೊಳ್ಳಲು ಅಕ್ಕ-ಪಕ್ಕದ ಹಳ್ಳಿಗಳ ಜನ ಪಟ್ಟಣಕ್ಕೆ ಬಂದ ಕಾರಣ ಒಂದು ರೀತಿಯ ಜಾತ್ರಾ ವಾತಾವರಣ ಉಂಟಾಗಿತ್ತು.ಮಧ್ಯಾನ್ಹದವರೆಗೂ ಲಾರಿಗಟ್ಟಲೆ ಕೋಳಿ ಭೀಕರಿಯಾಯ್ತು. 40 ರಿಂದ 50 ರು. ಬೆಲೆಯ ಫಾರಂ ಕೋಳಿ ಇಂದು 60 ರಿಂದ 70 ರು. ಗೆ ಮಾರಾಟವಾಯಿತು.ಮಧ್ಯಾಹ್ನದೊಳಗೆ ಕೋಳಿ ಖಾಲಿಯಾಗಿದ್ದು ಕೊನೆ ಕೊನೆಯಲ್ಲಿ 100ರಿಂದ ೧೫೦ ರು.ಗಳಿಗೆ ಕೋಳಿ ಬೆಲೆ ಏರಿ ವ್ಯಾಪಾರಿಗಳಿಗೆ ಲಾಟರಿ ಹೊಡೆದಂತೆ ವ್ಯಾಪಾರ ವಹಿವಾಟು ನಡೆಯಿತು. ಹಳ್ಳಿಗಳಿಂದ ಬಂದ ರೈತರು ಕೈಯಲ್ಲಿ ಮೂರ್ನಾಲ್ಕು ಕೋಳಿ ನೇತು ಹಾ

ಹುಳಿಯಾರಿನಲ್ಲಿ ಸಂಭ್ರಮದ ಯುಗಾದಿ ಆಚರಣೆ

ಹುಳಿಯಾರಿನಲ್ಲಿ ಸಂಭ್ರಮದ ಯುಗಾದಿ ಆಚರಣೆ ಹೊಸವರ್ಷಕ್ಕೆ ಮುನ್ನುಡಿಯಾಗಿರುವ ಹಿಂದೂ ಸಂಪ್ರದಾಯದ ಪ್ರಮುಖ ಹಾಗೂ ವಿಕೃತಿನಾಮ ಸಂವತ್ಸರದ ಮೊದಲ ದಿನವಾದ ಯುಗಾದಿ ಹಬ್ಬವನ್ನು ಮಂಗಳವಾರದಂದು ಹುಳಿಯಾರಿನಲ್ಲಿ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಸಂಪ್ರದಾಯದಂತೆ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮನೆಮಂದಿಯೆಲ್ಲ ಅಭ್ಯಂಜಯ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಜೀವನದಲ್ಲಿ ಕಷ್ಟಸುಖ ಸಮನಾಗಿ ಸ್ವೀಕಸಬೇಕೆಂಬ ಸಂಕೇತ ಸಾರುವ ಬೇವು-ಬೆಲ್ಲ ಸೇವಿಸಿದರು. ಸಂಜೆ ಕುಟುಂಬದೊಡನೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಹಬ್ಬದ ಪ್ರಯುಕ್ತ ಇಲ್ಲಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ವಾಸವಿ ಹಾಗೂ ಬನಶಂಕರಿ ದೇವಾಲಯಗಳಲ್ಲಿ ಸಾಮೂಹಿಕ ಪಂಚಾಂಗ ಶ್ರವಣ ನಡೆಯಿತು. ನೂರಾರು ಮಂದಿ ಈ ವರ್ಷದ ಭವಿಷ್ಯಮ ಮಳೆ-ಬೆಳೆ, ಗ್ರಹ-ನಕ್ಷತ್ರಗಳ ಬಲಾಬಲ, ಮನೆಯ ಮಂದಿಯ ಭವಿಷ್ಯ ಕೇಳುತ್ತಿದ್ದು ವಿಶೇಷವಾಗಿತ್ತು. ಸಂಜೆ ಬಿದಿಗೆ ಚಂದ್ರನ ದರ್ಶನ ಪಡೆದರು. ಒಟ್ಟಾರೆ 2 ದಿನಗಳ ಕಾಲ ಯುಗಾದಿ ಸಂಭ್ರಮ ತುಂಬಿ ತುಳುಕುತ್ತಿತ್ತು. ಜೂಜಾಟಕ್ಕೆ ಕಡಿವಾಣ : ಯುಗಾದಿ ಹಬ್ಬ ಬೇವು ಬೆಲ್ಲದಷ್ಟೆ ಈ ಭಾಗದಲ್ಲಿ ಜೂಜಾಟಕ್ಕೆ ಪ್ರಸಿದ್ಧಿ. ಬೇರೆ ಬೇರೆ ಊರುಗಳಿಂದ ಇಲ್ಲಿನ ಜೂಜಾಡಲು ಜನ ಆಗಮಿಸುವುದರಿಂದ ಬಸ್ ನಿಲ್ದಾಣ ಎನ್ನದೆ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ಬೀದಿಗಳಲ್ಲಿ ಶಾಮಿಯಾನ ಹಾಕಿ 3 ದಿನಗಳ ಕಾಲ ಅಹೋ ರಾತ್ರಿ ಜೂಜಾಡುವುದು ವಾಡಿಕೆ.ಕ

ಹುಳಿಯಾರು ಹೋಬಳಿ ಗ್ರಾ.ಪಂ.ಚುನಾವಣೆ ಮೀಸಲಾತಿ ಪ್ರಕಟ

ಹುಳಿಯಾರು ಹೋಬಳಿಯ 10 ಗ್ರಾಮಪಂಚಾಯ್ತಿಗಳ 191 ಸ್ಥಾನಗಳಿಗಾಗಿ ನಡೆಯುವ ಚುನಾವಣೆಗೆ ಕ್ಷೇತ್ರವಾರು ಸ್ಥಾನ ಹಂಚಿಕೆಯ ಮೀಸಲಾತಿ ಪ್ರಕಟಿಸಲಾಗಿದ್ದು ಇದರ ವಿವರ ಕೆಳಕಂಡತಿದೆ. ದಸೂಡಿ(18 ಸ್ಥಾನ): ದಸೂಡಿ1- ಎಸ್ಸಿ, ಎಸ್ಟಿ ಮಹಿಳೆ, ಬಿಸಿಎಂ ಅ, ಜನರಲ್ ಮಹಿಳೆ, ದಸೂಡಿ2- ಬಿಸಿಎಂ ಅ ಮಹಿಳೆ, ಜನರಲ್, ಬಿಸಿಎಂ ಬ, ದಸೂಡಿ3- ಎಸ್ಸಿ ಮಹಿಳೆ, ಬಿಸಿಎಂ ಅ, ಮರೆನಡು-ಎಸ್ಸಿ, ಎಸ್ಟಿ, ಬಿಸಿಎಂ ಅ ಮಹಿಳೆ, ಜನರಲ್, ದಬ್ಬಗುಂಟೆ1- ಬಿಸಿಎಂ ಅ, ಜನರಲ್, ಜನರಲ್ ಮಹಿಳೆ, ದಬ್ಬಗುಂಟೆ-2 ಎಸ್ಸಿ ಮಹಿಳೆ, ಜನರಲ್. ಹೊಯ್ಸಲಕಟ್ಟೆ(20ಸ್ಥಾನ): ಹೊಯ್ಸಲಕಟ್ಟೆ1- ಎಸ್ಸಿ ಮಹಿಳೆ, ಬಿಸಿಎಂ ಅ, ಜನರಲ್. ಹೊಯ್ಸಲಕಟ್ಟೆ2- ಎಸ್ಸಿ, ಜನರಲ್ ಮಹಿಳೆ, ಲಕ್ಕೇನಹಳ್ಳಿ-ಬಿಸಿಎಂ ಅ ಮಹಿಳೆ, ಜನರಲ್ ಮಹಿಳೆ, ಬೆಳ್ಳಾರ1- ಎಸ್ಸಿ ಮಹಿಳೆ, ಬಿಸಿಎಂ ಅ ಮಹಿಳೆ, ಬಿಸಿಎಂ ಅ, ಬೆಳ್ಳಾರ2- ಎಸ್ಟಿ ಮಹಿಳೆ, ಬಿಸಿಎಂ ಅ, ಜನರಲ್, ಅಂಬಾರಪುರ- ಜನರಲ್ ಮಹಿಳೆ, ಕಲ್ಲೇನಹಳ್ಳಿ-ಎಸ್ಸಿ, ಬಿಸಿಎಂ ಬ ಮಹಿಳೆ, ಜನರಲ್, ನುಲೇನೂರು- ಎಸ್ಸಿ, ಬಿಸಿಎಂ ಅ, ಜನರಲ್, ಗಾಣದಾಳು(18ಸ್ಥಾನ): ಗಾಣದಾಳು_ ಎಸ್ಸಿ, ಎಸ್ಟಿ ಮಹಿಳೆ, ಬಿಸಿಎಂ ಅ, ಸೋಮನಹಳ್ಳಿ- ಎಸ್ಸಿ ಮಹಿಳೆ, ಎಸ್ಸಿ, ಬಿಸಿಎಂ ಅ ಮಹಿಳೆ, ಗುರುವಾಪುರ- ಜನರಲ್, ಜನರಲ್ ಮಹಿಳೆ, ಮೇಲನಹಳ್ಳಿ- ಎಸ್ಸಿ ಮಹಿಳೆ, ಬಿಸಿಎಂ ಬ, ಜನರಲ್ ಮಹಿಳೆ, ಯಗಚಿಹಳ್ಳಿ-ಬಿಸಿಎಂ ಅ, ಬಿಸಿಎಂ ಅ ಮಹಿಳೆ, ಜನರಲ್, ಕಂಪನಹಳ್ಳಿ- ಜನರಲ್. ಜನರಲ್ ಮಹಿಳೆ, ಕುರಿಹಟ್ಟಿ-ಬಿಸಿಎಂ

18 ತಿಂಗಳಲ್ಲೆ ಕರುವಿಗೆ ಜನ್ಮ

ಕೇವಲ 18 ತಿಂಗಳಲ್ಲಿಯೇ ಎಚ್ಎಫ್ (ಮಿಶ್ರತಳಿ) ಹಸುವೊಂದು ಕರುವಿಗೆ ಜನ್ಮ ನೀಡಿದ ಅಪರೂಪದ ಸಂಗತಿ ಹುಳಿಯಾರು ಹೋಬಳಿ ಕಂಪನಹಳ್ಳಿ ಗ್ರಾಮದಲ್ಲಿ ದಾಖಲಾಗಿದೆ. ಸಾಮಾನ್ಯವಾಗಿ ಹಸುಗಳು 18 ತಿಂಗಳಿಗೆ ಪ್ರೌಢಾವಸ್ಥೆ ತಲುಪಿ ಅಲ್ಲಿಂದ 9 ತಿಂಗಳ ನಂತರ ಅಂದರೆ 27 ತಿಂಗಳಿಗೆ ಕರುವಿಗೆ ಜನ್ಮ ನೀಡುತ್ತವೆ. ಆದರೆ ಕಂಪನಹಳ್ಳಿ ಕೆ.ಡಿ.ರಂಗನಾಥ್ ಅವರ ಹಸು ಮಾತ್ರ ಕೇವಲ 9 ತಿಂಗಳಲ್ಲೇ ಪ್ರೌಢಾವಸ್ಥೆ ತಲುಪಿ 18 ತಿಂಗಳಿಗೆ ಮೊದಲನೇ ಕರುವಿಗೆ ಜನ್ಮ ನೀಡಿ ಅಚ್ಚರಿಗೆ ಕಾರಣವಾಗಿದೆ. ಇಲ್ಲಿನ ಪಶು ಆಸ್ಪತ್ರೆ ವ್ಯಾಪ್ತಿಯಲ್ಲಿ ಇದುವರೆವಿಗೂ ಹೆಚ್ಚಾಗಿ ಹಸುಗಳಲ್ಲಿ ಅನೀಮಿಯ, ಲವಣಾಂಶದ ಕೊರತೆ, ಜೀವಸತ್ವದ ಕೊರತೆ ಹಾಗೂ ಜಂತು ಹುಳು ಬಾದೆ ಕಂಡುಬಂದು 18 ತಿಂಗಳಾದರೂ ಪ್ರೌಢಾವಸ್ಥೆ ತಲುಪುತ್ತಿರಲಿಲ್ಲ. ಅಲ್ಲೊಂದು ಇಲ್ಲೊಂದರಂತೆ ಎಚ್ಎಫ್ ಹಸುಗಳು 11 ರಿಂದ 12 ತಿಂಗಳಲ್ಲಿ ಪ್ರೌಢಾವಸ್ಥೆ ತಲುಪಿ ಕರು ಹಾಕಿದ್ದು ಕಂಡುಬಂದಿದ್ದು ಕೇವಲ 9 ತಿಂಗಳಲ್ಲೇ ಪ್ರೌಢಾವಸ್ಥೆ ತಲುಪಿ 18 ತಿಂಗಳಲ್ಲಿ ಕರುಹಾಕಿರುವುದು ಇದೇ ಮೊದಲನೇಯದಾಗಿದೆ. ಹೆಚ್ಚು ಗಿಣ್ಣದ ಹಾಲು ಕುಡಿಸಿರುವುದು, ಉತ್ತಮ ಹಿಂಡಿ, ಬೂಸ, ಹಸಿರು ಮೇವು ಕೊಟ್ಟಿರುವುದು ಹಾಗೂ ಕಾಲಕಾಲಕ್ಕೆ ಜಂತುನಾಶಕ ಔಷಧಿ ಹಾಕಿಸಿರುವುದು, ಅಲ್ಲದೆ ದನದಕೊಟ್ಟಿಗೆಯನ್ನು ಸ್ವಚ್ಚವಾಗಿ ಇಟ್ಟು ಬೆಳೆಸಿರುವುದರಿಂದ ಬಹು ಬೇಗ ಹಸು ಪ್ರೌಢಾವಸ್ಥೆ ತಲುಪಿ ಕರು ಹಾಕಿದೆ ಎಂದು ಇಲ್ಲಿನ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಹಾಗೂ ಈ ಹಸು ಸಾಕಾ

ರೈತ ಸಂಘಕ್ಕೆ ಪ್ರಾಮಾಣಿಕರೆ ಬೆನ್ನೆಲುಬು: ರಂಗಸ್ವಾಮಿ

ರೈತ ಸಂಘದ ಧ್ಯೇಯದ ಬಗ್ಗೆ ಲವಲೇಶವು ಅರಿಯದ ಕೆಲವರು ಹಣ ಗಳಿಸುವ ಸಲುವಾಗಿ ಹಸಿರು ಟವಲ್ ಹಾಕುತ್ತಿದ್ದಾರೆ. ರಸ್ತೆ, ನೀರಾವರಿ, ವಿದ್ಯುತ್ ಮುಂತಾದ ಮೂಲಸೌಲಭ್ಯ ಪಡೆದು ಅಭಿವೃದ್ಧಿ ಹೊಂದುವುದು ರೈತ ಸಂಘದ ನಿಜವಾದ ಧ್ಯೇಯ. ಈ ನಿಟ್ಟಿನಲ್ಲಿ ಕೌರವರ ರೀತಿ 100 ಮಂದಿ ವಂಚಕರನ್ನು ಸಂಘಕ್ಕೆ ಸೇರಿಸಿಕೊಳ್ಳುವುದ ಬಿಟ್ಟು ಪ್ರಾಮಾಣಿಕತೆ, ನಿಷ್ಠೆ, ತತ್ವವುಳ್ಳ ಐದೇಐದು ಮಂದಿ ಪಾಂಡವರಂತಹವರನ್ನು ಸೇರಿಸಿಕೊಳ್ಳುವುದು ಒಳಿತು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸೋಮಗುದ್ದ ರಂಗಸ್ವಾಮಿ ಅವರು ಅಭಿಪ್ರಾಯ ಪಟ್ಟರು. ಕಂದಿಕೆರೆ ಹೋಬಳಿ ಗಂಟೇನಹಳ್ಳಿಯಲ್ಲಿ ನಡೆದ ಕಂದಿಕೆರೆ ಹೋಬಳಿ ರೈತರ ಸಮಾವೇಶವನ್ನು ಸಸಿಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ರಾಜಕಾರಣಿಗಳು ಊರಿಗೆ ಬಂದಾಗ ಕೈಮುಗಿದು ಆರತಿ ಎತ್ತಿ ಸ್ವಾಗತಿಸಿ ಜೈಕಾರ ಕೂಗಿ ಮೆರವಣಿಗೆ ಮಾಡಿ ಭೂರಿ ಭೋಜನ ಮಾಡಿಸಿ ಕಳುಹಿಸುವುದು ರೈತರ ಬಹುದೊಡ್ಡ ದೌರ್ಬಲ್ಯ. ರಾಜಕಾರಣಿಗಳಿಂದ ನಾವಲ್ಲ, ನಮ್ಮಿಂದ ರಾಜಕಾರಣಿಗಳು ಎಂಬ ಸತ್ಯ ಅರಿತು ಅವರನ್ನು ನಿರ್ಲಕ್ಷ್ಯಿಸಿದಲ್ಲಿ ಅವರೇ ನಮ್ಮ ಮನೆ ಬಾಗಿಲಿಗೆ ಬಂದು ನಮ್ಮಗಳ ಕೆಲಸ ಮಾಡಿಕೊಡುತ್ತಾರೆ ಎಂದರು. ರಾಜ್ಯ ಹಸಿರು ಸೇನೆ ಅಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ ರಾಜ್ಯ ರೈತ ಸಂಘವು ರಾಜ್ಯದ ಅಷ್ಟೂ ರೈತ ಸಮುದಾಯದ ಹಿತ ಕಾಪಾಡುವ ಸಲುವಾಗಿದ್ದು ರೈತರ ವಾಹನ, ಮನೆ, ದಿನಸಿಯನ್ನು ಸಾಲಗಾರರು ಜಪ್ತಿ ಮಾಡಲು ಮುಂದಾದಲ್ಲಿ, ಅಧಿಕಾರಿಗಳು ಅನಗತ್ಯ ಕಿರುಕುಳ

ಕಾರೇಹಳ್ಳಿಯ ಶ್ರೀ ರಂಗನಾಥಸ್ವಾಮಿ ಜಾತ್ರೆ

ಕಾರೇಹಳ್ಳಿಯ ಶ್ರೀ ರಂಗನಾಥಸ್ವಾಮಿ ಜಾತ್ರೆ--------------------------------- ಹುಳಿಯರು ಹೋಬಳಿ ಕಾರೇಹಳ್ಳಿ ಅಂದ್ರೆ ದನಗಳ ಜಾತ್ರೆಗೆ ಭಾರಿ ಪ್ರಸಿದ್ದಿ.ಕಾರೇಹಳ್ಳಿಗೂ ದನಗಳಿಗೂ ಅವಿನಾಭಾವ ಸಂಬಂಧ. ಪ್ರತಿ ಭಾನುವಾರ ಇಲ್ಲಿ ದನಗಳ ಸಂತೆ ನಡೆಯುವುದರಿಂದ ಹಾಗು ಪ್ರತಿ ವರ್ಷ ನಡೆಯುವ ಶ್ರೀ ರಂಗನಾಥಸ್ವಾಮಿ ರಥೋತ್ಸವದ ಸಮಯದಲ್ಲಿ ದನಗಳ ಜಾತ್ರೆಯು ನಡೆಯುತ್ತ ಬಂದಿರುವುದರಿಂದಲ್ಲೂ ಕಾರೇಹಳ್ಳಿ ಅಂದರೆ ದನಗಳಜಾತ್ರೆ ಅಂತಲೇ ಹೆಸರುವಾಸಿ. ಹುಳಿಯಾರು ಶಿರಾ ರಸ್ತೆಯಲ್ಲಿ ಹುಳಿಯಾರಿನಿಂದ 8 ಕಿಮೀ ದೂರವಿರುವ ಕಾರೇಹಳ್ಳಿ ಧಾರ್ಮಿಕ ಕ್ಷೇತ್ರವಾಗಿ ಕೂಡ ಪ್ರಸಿದ್ದಿ ಹೊಂದಿದೆ.ಬೋರನಕಣಿವೆ ಜಲಾಶಯದ ಹಿನ್ನೀರಿನ ಪ್ರಶಾಂತ ಅಂಗಳದಲ್ಲಿ ದೇವಾಲಯವಿದ್ದು ಇಲ್ಲಿ ಒಡಮೂಡಿರುವ ರಂಗನಾಥಸ್ವಾಮಿ ಈ ಭಾಗದ ಬಹುಜನರ ಆರಾಧ್ಯ ದೈವ.ಈತ ಭಕ್ತರ ಕರೆಗೆ ಓಗೂಡುವುನೆಂತಲ್ಲೂ ಇಷ್ಟಾರ್ಥಗಳ ಸಿದ್ದಿಸುವುನೆಂತಲೂ ಲೋಕ ಪ್ರಸಿದ್ದಿ ಹೊಂದಿದ್ದು ಪ್ರತಿ ವರ್ಷ ಫಾಲ್ಗುಣ ಮಾಸದ ಶುದ್ದ ದಶಮಿಯಿಂದ ಜಾತ್ರ ಮಹೋತ್ಸವ ಹಾಗೂ ಅನ್ನ ಸಂತರ್ಪಣೆ ಅನುಚಾನವಾಗಿ ನಡೆಯುತ್ತ ಬಂದಿದೆ. 11 ದಿನಗಳ ಕಾಲ ನಡೆಯಲಿರುವ ಜಾತ್ರಾ ಮಹೋತ್ಸವ ಕಳೆದ 79 ವರ್ಷಗಳಿಂದಲೂ ಸತತವಾಗಿ ನಡೆಯುತ್ತಾ ಬಂದಿದ್ದು ಶ್ರೀ ರಂಗನಾಥಸ್ವಾಮಿ ರಥೋತ್ಸವದಷ್ಟೆ ದನಗಳ ಜಾತ್ರೆಯು ಐತಿಹ್ಯ ಹೊಂದಿದ್ದು ಜಿಲ್ಲೆಯಲ್ಲಿ ಉತ್ತಮ ರಾಸು ದೊರೆಯುವ ಸ್ಥಳವಾಗಿ ಪ್ರಸಿದ್ದಿ ಹೊಂದಿದೆ. ಪ್ರತಿ ವರ್ಷದಂ

ಹುಳಿಯಾರು ಎಪಿಎಂಸಿ ಅಧ್ಯಕ್ಷರಾಗಿ ಮೈನ್ಸ್ ಬಸವರಾಜು

ಹುಳಿಯಾರು ಎಪಿಎಂಸಿ ಅಧ್ಯಕ್ಷರಾಗಿ ಮೈನ್ಸ್ ಬಸವರಾಜು---------------------------------------------- ಹುಳಿಯಾರು: ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಮಂಗಳವಾರ ನಡೆದ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ಅವರು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಸಭೆಯಲ್ಲಿ 16 ಮಂದಿ ಸದಸ್ಯರಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಸರ್ಕಾರದ ನಾಮಾಂಕಿತ ಸದಸ್ಯರಾದ ಕೋಡಲಾಗರದ ಕೆ.ಪ್ರಭುಸ್ವಾಮಿ ಅವರ ಗೈರು ಹಾಜರಾತಿಯಲ್ಲಿ ಉಳಿದ 15 ಮಂದಿ ಹಾಜರಾಗಿದ್ದರು. ಸಿ.ಬಸವರಾಜು ಅವರ ವಿರುದ್ಧ ಪ್ರತಿಸ್ಪರ್ಧಿಯಾಗಿ ಮತ್ಯಾರೂ ಅರ್ಜಿ ಸಲ್ಲಿಸದ ಕಾರಣ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ಟಿ.ಸಿ.ಕಾಂತರಾಜು ಅವರು ತಿಳಿಸಿದ್ದಾರೆ.ಹಿಂದಿನ ಅಧ್ಯಕ್ಷ ಕೋಡಲಾಗರದ ಕೆ.ಎಸ್.ಲೋಕೇಶ್ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ತೆರವಾದ 1 ವರ್ಷ ಅವಧಿ ಅಧ್ಯಕ್ಷ ಸ್ಥಾನಕ್ಕೆ ಈ ಚುನಾವಣೆ ನಡೆದಿದೆ. ಚುನಾವಣಾ ಹಿಂದಿನ ದಿನದವರೆವಿಗೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ದಂಡು ಇತ್ತು.16 ಮಂದಿ ಸದಸ್ಯರಲ್ಲಿ 7 ಮಂದಿ ಬಿಜೆಪಿ ಬೆಂಬಲಿಗರೇ ಇದ್ದು ಅವರಲ್ಲೆ ಯಾರಾದರೊಬ್ಬರು ಆಯ್ಕೆಯಾಗುವ ಸಂಭವವಿದ್ದಾಗ್ಯೂ ಯಾರೂ ಅರ್ಜಿಹಾಕದೆ ಕಾಂಗ್ರೆಸ್ ಗೆ ಅಧ್ಯಕ್ಷ ಸ್ಥಾನ ದಕ್ಕಿರುವುದು, ಅಲ್ಲದೆ ಕಳೆದ ದಿನದವರೆವಿಗೂ ಅಧ್

ಹುಳಿಯಾರು ಬ್ರಹ್ಮಕುಮಾರೀಸ್ ನಿಂದ ಶಿವರಾತ್ರಿ

ಹುಳಿಯಾರು ಬ್ರಹ್ಮಕುಮಾರೀಸ್ ನಿಂದ ಶಿವರಾತ್ರಿ ಕಾರ್ಯಕ್ರಮ---------------------------------------------------------ಹುಳಿಯಾರಿನಲ್ಲಿ ಶಿವರಾತ್ರಿ ಬಹಳ ಸಂಭ್ರಮದ ಹಬ್ಬ.ಈಶ್ವರನ ದೇವಾಲಯದಲ್ಲಿ ಇಡೀ ದಿನ ವಿಶೇಷ ಪೂಜಾ ಕಾರ್ಯಕ್ರಮ .ಹಾಗೆಯೆ ನಮ್ಮೂರಿನ ಪ್ರಜಾಪಿತಾ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕೂಡ ಶಿವರಾತ್ರಿ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು. ಕಳೆದ 3 ವರ್ಷಗಳಿಂದ ಶಿವರಾತ್ರಿ ದಿನ ಈಶ್ವರನ ದೇವಾಲಯದಲ್ಲಿ ಮಹಾಶಿವರಾತ್ರಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಆಧ್ಯಾತ್ಮಿಕ ವಿಚಾರಧಾರೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.ಅಲ್ಲದೆ ಮಾರನೆಯ ದಿನ ಊರಿನ ರಾಜಬೀದಿಗಳಲ್ಲಿ ಹತ್ತಾರು ಶಿವಲಿಂಗಗಳ ರಥಯಾತ್ರೆ ನಡೆಸಿಕೊಂಡು ಬರುತ್ತಿದ್ದು ಅದರಂತೆ ಈ ಬಾರಿಯೂ ಸಹ ಬ್ರಹ್ಮಕುಮಾರಿ ಗೀತಕ್ಕನವರು ಇದನ್ನು ಮುಂದುವರಿಸಿ ಮತ್ತಷ್ಟು ಉತ್ಸಾಹದಿಂದ ನಡೆಸಿದರು. ಶಾಸಕ ಸಿ.ಬಿ.ಸುರೇಶ್ ಬಾಬು ಅವರು ಭಾಗವಹಿಸಿದ್ದುದು ವಿಶೇಷವಾಗಿತ್ತು. ಶಿವಲಿಂಗಗಳನ್ನು ಊರಿನ ಎಲ್ಲಾ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಮೆರವಣಿಗೆಯಲ್ಲಿ ಕೆಂಕೆರೆ, ಎಣ್ಣೇಗೆರೆ, ಹುಳಿಯಾರು, ಬೊಮ್ಮೇನಹಳ್ಳಿ, ಸಿಂಗಾಪುರ ಮುಂತಾದ ಭಾಗಗಳಿಂದ ಅಣ್ಣಂದಿರು ಹಾಗೂ ಅಕ್ಕಂದಿರು ಸೇರಿಕೊಂಡಿದ್ದರು. ರಂಗನಾಥ ಶೆಟ್ಟರು, ಬ್ಯಾಂಕ್ ಮರುಳಯ್ಯ, ದಾಸಪ್ಪ, ಉಪ್ಪನಕಟ್ಟೆ ಶಿವಕುಮಾರ್, ಕೃಷ್ಣಮೂರ್ತಾಚಾರ್ ಇವರುಗಳು ಮೆರವಣಿಗೆಯ ಮುಂಚೂಣಿಯಲಿದ್ದರು. ಹೋಬಳಿಯ ಸ

ನಗರ ಸಂಕೀರ್ತನೆ ಹಾಗೂ ಸುಪ್ರಭಾತ ಸೇವೆ

ಹುಳಿಯಾರಿನ ಭಜನ ಮಂಡಳಿಗಳು ಪ್ರತಿ ತಿಂಗಳ ಮೊದಲ ಭಾನುವಾರದಂದು ನಗರ ಸಂಕೀರ್ತನೆ ಹಾಗೂ ಸುಪ್ರಭಾತ ಸೇವೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.ಹಿಂದುಧರ್ಮ ಜಾಗೃತಿ ಹಾಗೂ ದಾಸ ಸಾಹಿತ್ಯ ಪ್ರಚಾರಕ್ಕಾಗಿ ಇಂತಹದೊಂದು ಕಾರ್ಯಕ್ರಮ ಅವಶ್ಯ ಎನ್ನುತ್ತಾರೆ ಮುಖ್ಯಪ್ರಾಣ ಭಜನ ಮಂಡಳಿಯ ಬಿ.ಗೋಪಾಲ್ ಹಾಗೂ ಹು.ಲ.ವೆಂಕಟೇಶ್.ತಿರುಪತಿ ತಿರುಮಲ ದಾಸಸಾಹಿತ್ಯ ಪ್ರಾಜೆಕ್ಟ್ ನ ಹತ್ತುಹಲವಾರು ಭಜನ ಮಂಡಳಿಗಳು ಅಂದು ಮುಂಜಾನೆ ಊರಿನ ಯಾವುದಾದರೊಂದು ದೇವಾಲಯದಲ್ಲಿ ಸೇರಿಕೊಂಡು ದೇವರಿಗೆ ನಮಿಸಿ ಅಲ್ಲಿಂದ ಭಜನೆ,ದೇವರ ನಾಮ ಹಾಡಿಕೊಂಡು ಪಟ್ಟಣ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಾರೆ.ಗಂಡಸರುಗಳು ಕಾವಿ ಧರಿಸಿ ದಾಸರ ತರಹ ಅಲಂಕಾರ ಮಾಡಿಕೊಂಡರೆ ಹೆಂಗಸರು ಭಜನ ಮಂಡಳಿಯ ಕೇಸರಿ ಸೀರೆ ಧರಿಸುತ್ತಾರೆ.ತಾಳ ತಂಬೂರಿ, ಹಾರ್ಮೊನಿಯಂ,ತಬಲ ನಾದುಅದ ಹಿಮ್ಮೆಳದಲ್ಲಿ ಕೋಲಾಟದ ಮೂಲಕ ಗಮನ ಸೆಳೆಯುತ್ತಾರೆ.ಸುಶ್ರಾವ್ಯವಾಗಿ ಎಲ್ಲರೂ ಎಕ ಕಾಲಕ್ಕೆ ಹಾಡುವುದು ಕೇಳುವುದೇ ಒಂದು ಸೊಗಸು.ಕೇಳಿದವರು ಕೆಲವು ಕ್ಷಣವಾದರೂ ಪರಮಾತ್ಮನ ಸನ್ನಿಧಿಗೆ ತಲುಪುವುದರಿಂದ ಇವರ ಶ್ರಮ ಸಾರ್ಥಕತೆ ಕಾಣುತ್ತದೆ.ಅಂಜಾನಾದ್ರಿ,ವೃಷಭಾದ್ರಿ,ಶೇಷಾದ್ರಿ,ಗರುಡಾದ್ರಿ, ಹೀಗೆ ಎಲ್ಲಾ ಮಂಡಳಿಗಳ ಸ್ತ್ರೀಪುರುಷರುಗಳು ಕೆಲವು ಘಂಟೆಗಳ ಕಾಲ ಪರಮಾತ್ಮನನ್ನು ಸ್ತುತಿಸಿ ವಾಪಸ್ಸು ದೇವಾಲಯಕ್ಕೆ ತೆರಳಿ ಮಹಾಮಂಗಳಾರತಿ ಪ್ರಸಾದ ವಿನಿಯೋಗದ ನಂತರ ಕಾರ್ಯಕ್ರಮ ಅಂತಮಗೊಳ್ಳುತ್ತದೆ.ಕೆಲವೊಮ್ಮೆ ಉಪನ್ಯಾಸ ಕೂಡ ಇರುತ್ತದೆ.

ನಗರ ಸಂಕೀರ್ತನೆ ಹಾಗೂ ಸುಪ್ರಭಾತ ಸೇವೆ

ಹುಳಿಯಾರಿನ ಭಜನ ಮಂಡಳಿಗಳು ಪ್ರತಿ ತಿಂಗಳ ಮೊದಲ ಭಾನುವಾರದಂದು ನಗರ ಸಂಕೀರ್ತನೆ ಹಾಗೂ ಸುಪ್ರಭಾತ ಸೇವೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.ಹಿಂದುಧರ್ಮ ಜಾಗೃತಿ ಹಾಗೂ ದಾಸ ಸಾಹಿತ್ಯ ಪ್ರಚಾರಕ್ಕಾಗಿ ಇಂತಹದೊಂದು ಕಾರ್ಯಕ್ರಮ ಅವಶ್ಯ ಎನ್ನುತ್ತಾರೆ ಮುಖ್ಯಪ್ರಾಣ ಭಜನ ಮಂಡಳಿಯ ಬಿ.ಗೋಪಾಲ್ ಹಾಗೂ ಹು.ಲ.ವೆಂಕಟೇಶ್.ತಿರುಪತಿ ತಿರುಮಲ ದಾಸಸಾಹಿತ್ಯ ಪ್ರಾಜೆಕ್ಟ್ ನ ಹತ್ತುಹಲವಾರು ಭಜನ ಮಂಡಳಿಗಳು ಅಂದು ಮುಂಜಾನೆ ಊರಿನ ಯಾವುದಾದರೊಂದು ದೇವಾಲಯದಲ್ಲಿ ಸೇರಿಕೊಂಡು ದೇವರಿಗೆ ನಮಿಸಿ ಅಲ್ಲಿಂದ ಭಜನೆ,ದೇವರ ನಾಮ ಹಾಡಿಕೊಂಡು ಪಟ್ಟಣ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಾರೆ.ಗಂಡಸರುಗಳು ಕಾವಿ ಧರಿಸಿ ದಾಸರ ತರಹ ಅಲಂಕಾರ ಮಾಡಿಕೊಂಡರೆ ಹೆಂಗಸರು ಭಜನ ಮಂಡಳಿಯ ಕೇಸರಿ ಸೀರೆ ಧರಿಸುತ್ತಾರೆ.ತಾಳ ತಂಬೂರಿ, ಹಾರ್ಮೊನಿಯಂ,ತಬಲ ನಾದುಅದ ಹಿಮ್ಮೆಳದಲ್ಲಿ ಕೋಲಾಟದ ಮೂಲಕ ಗಮನ ಸೆಳೆಯುತ್ತಾರೆ.ಸುಶ್ರಾವ್ಯವಾಗಿ ಎಲ್ಲರೂ ಎಕ ಕಾಲಕ್ಕೆ ಹಾಡುವುದು ಕೇಳುವುದೇ ಒಂದು ಸೊಗಸು.ಕೇಳಿದವರು ಕೆಲವು ಕ್ಷಣವಾದರೂ ಪರಮಾತ್ಮನ ಸನ್ನಿಧಿಗೆ ತಲುಪುವುದರಿಂದ ಇವರ ಶ್ರಮ ಸಾರ್ಥಕತೆ ಕಾಣುತ್ತದೆ.ಅಂಜಾನಾದ್ರಿ,ವೃಷಭಾದ್ರಿ,ಶೇಷಾದ್ರಿ,ಗರುಡಾದ್ರಿ, ಹೀಗೆ ಎಲ್ಲಾ ಮಂಡಳಿಗಳ ಸ್ತ್ರೀಪುರುಷರುಗಳು ಕೆಲವು ಘಂಟೆಗಳ ಕಾಲ ಪರಮಾತ್ಮನನ್ನು ಸ್ತುತಿಸಿ ವಾಪಸ್ಸು ದೇವಾಲಯಕ್ಕೆ ತೆರಳಿ ಮಹಾಮಂಗಳಾರತಿ ಪ್ರಸಾದ ವಿನಿಯೋಗದ ನಂತರ ಕಾರ್ಯಕ್ರಮ ಅಂತಮಗೊಳ್ಳುತ್ತದೆ.ಕೆಲವೊಮ್ಮೆ ಉಪನ್ಯಾಸ ಕೂಡ ಇರುತ್ತದೆ

ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಕೃಷಿಕ ಸಮಾಜ

ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಕೃಷಿಕ ಸಮಾಜದ ಅಧ್ಯಕ್ಷರಾಗಿ ತಿಮ್ಮನಹಳ್ಳಿ ನಟರಾಜು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹುಳಿಯಾರು ಪ್ರಜಾವಾಣಿ ವರದಿಗಾರ ರಂಗನಕೆರೆವಾಸಿಯಾದ R.C. ಮಹೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕೃಷಿಕ ಸಮಾಜಕ್ಕೆ ನೂತನವಾಗಿ ಆಯ್ಕೆಯಾದ ಇನ್ನಿತರ ಸದಸ್ಯರುಗಳು ಚಿಕ್ಕನಾಯಕನಹಳ್ಳಿಯ ಕೃಷಿ ಇಲಾಖೆಯ ಬಳಿ ತೆಗೆಸಿಕೊಂಡಿರುವ ಫೋಟೊ ಇದು.

ನಿತ್ಯಾನಂದ ಸ್ವಾಮಿಜಿ ಕಾಮಕಾಂಡ

20 ದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಆಶ್ರಮಗಳು..! ಲಕ್ಷಾಂತರ ಭಕ್ತರು..!! ಹೊಂದಿರುವ ನಿತ್ಯಾನಂದ ಸ್ವಾಮಿಜಿ ಕಾಮಕಾಂಡದಲ್ಲಿ ಸಿಕ್ಕಿಬಿದ್ದಿದ್ದಾರೆ. ನಿತ್ಯಾನಂದ ಸ್ವಾಮೀಜಿಯವರ ನಿಜ ನಾಮಧೇಯ ರಾಜಶೇಖರನ್.ಬೆಂಗಳೂರಿನ ಬಿಡದಿ ಬಳಿಯ ನಿತ್ಯಾನಂದನಿಗೆ ಸೇರಿದ ಸುಮಾರು 70 ಎಕರೆ ಪ್ರದೇಶದಲ್ಲಿ ಆಧುನಿಕ ಆಶ್ರಮವಿದೆ. ನಿತ್ಯವೂ ಅಲ್ಲಿ ನಿತ್ಯಾನಂದನ ಕೃಪೆಯಿಂದ ಜಪತಪಗಳು ನಡೆಯುತ್ತದೆ. ಹೊರ ಜಗತ್ತಿಗೆ ಸ್ವಾಮಿ ನಿತ್ಯಾನಂದರು ಆಧ್ಯಾತ್ಮ ಗುರು ಎಂದೇ ಚಿರಪರಿಚಿತರು.ದೇಶದ ಭಕ್ತರಲ್ಲದೇ, ವಿದೇಶಿ ಪ್ರಜೆಗಳು ಈ ಸ್ವಾಮಿಯ ಭಕ್ತರಾಗಿದ್ದಾರೆ. ವಿಶ್ವಾದ್ಯಂತ 32 ಕಡೆಗಳಲ್ಲಿ ಆತನ ಆಶ್ರಮಗಳಿವೆ. ಇಷ್ಟಲ್ಲದೇ ಆಲದ ಮರದ ಔಷಧಿಗಳನ್ನು ಉತ್ಪಾದಿಸಲಾಗುತ್ತಿದೆ, ಧ್ಯಾನ ಶಿಬಿರಗಳು ನಿರಂತರವಾಗಿ ನಡೆಯುತ್ತದೆ. ನಿತ್ಯಾನಂದ ತನ್ನ ಸ್ವಬಲದಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸುತ್ತಾನೆಂದು ಭಕ್ತರಲ್ಲಿ ನಂಬಿಕೆ ಮನೆಮಾಡಿದೆ. ಆಧ್ಯಾತ್ಮ, ಯೋಗ, ಲೈಂಗಿಕತೆ ಬಗ್ಗೆ ಇಂಗ್ಲಿಷಿನಲ್ಲಿ ಗಂಟೆಗಟ್ಟಲೆ ಭಾಷಣ ಹೊಡೆಯುತ್ತಿದ್ದ ನಿತ್ಯಾನಂದನ ಇತ್ತೀಚಿನ ನಡವಳಿಕೆ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ನಿತ್ಯಾನಂದ ಸ್ವಾಮಿಜಿ ಅವರು ತಮಿಳು ನಟಿಯೊಬ್ಬಳೊಂದಿಗೆ ರಾಸಲೀಲೆಯಲ್ಲಿ ತೊಡಗಿಕೊಂಡಿರುವ ವಿಡಿಯೋ ಚಿತ್ರಣವನ್ನು ಮುಂಚೂಣಿ ತಮಿಳು ಸುದ್ದಿ ವಾಹಿನಿ ಸನ್ ನ್ಯೂನ್ ಮೂಲಕ ಇಡೀ ಜಗತ್ತಿಗೆ ಬಿತ್ತರವಾಗಿದೆ.ವಿಡಿಯೋ ಚಿತ್ರಣದಲ್ಲಿ ನಟ

ಕ್ರೀಡಾಂಗಣ ನಿರ್ಮಾಣ ಸಹಾಯಾರ್ಥ ನಾಟಕ ಪ್ರದರ್ಶನ

ಹುಳಿಯಾರು ಒಳಾಂಗಣ ಕ್ರೀಡಾಂಗಣ ನಿರ್ಮಾಣ ಸಹಾಯಾರ್ಥ ಉಚಿತ ನಾಟಕ ಪ್ರದರ್ಶನಕ್ಕೆ ಸಿದ್ಧ: ಡಾ.ಮಾಸ್ಟರ್ ಹಿರಣ್ಣಯ್ಯ ---------------------------------- ರಂಗಕಲೆಯ ರೀತಿ ಕ್ರೀಡೆಯೂ ಸಹ ಮನರಂಜನಾ ಚಟುವಟಿಕೆಯಾಗಿದ್ದು ಹುಳಿಯಾರಿನಲ್ಲಿ ಕ್ರೀಡೆಗೆ ಒತ್ತು ನೀಡುವ ನಿಟ್ಟಿನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಸಹಾಯಾರ್ಥ ತಮ್ಮ ಸಂಸ್ಥೆಯಿಂದ ಉಚಿತ ನಾಟಕ ಪ್ರದರ್ಶನ ನೀಡುವುದಾಗಿ ನಟರತ್ನಾಕರ ಡಾ.ಮಾಸ್ಟರ್ ಹಿರಣ್ಣಯ್ಯ ಘೋಷಿಸಿದರು. ಹುಳಿಯಾರಿನಲ್ಲಿ ಶಿವರಾತ್ರಿ ಜಾಗರಣೆ ಅಂಗವಾಗಿ ಕೆನರಾ ಬ್ಯಾಂಕ್, ಸ್ಪೊರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಹಾಗೂ ನೆಹರು ಯುವ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಹೊನಲು ಬೆಳಕಿನ ಕ್ರೀಡಾಕೂಟವನ್ನು ಹಗ್ಗ ಜಗ್ಗಾಟ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಈ ಬೆನಿಫಿಟ್ ಶೋ ಸಂಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ವಹಿಸಿಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರಲ್ಲದೆ ಕಾರ್ಯಕ್ರಮ ಮುಗಿದ ನಂತರ ತಾವೇ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕ್ರೀಡಾಂಗಣ ನಿರ್ಮಾಣದ ತಮ್ಮ ನಿಲುವು ಹಾಗೂ ಆಶಯ ತಿಳಿಸಿ ಶೀಘ್ರ ಪ್ರದರ್ಶನದ ವ್ಯವಸ್ಥೆಯನ್ನು ಮಾಡುವಂತೆ ತಿಳಿಸಿದರು. ಜಾಗರಣೆ ಸಂಸ್ಕೃತಿ ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ ಇಡೀ ರಾತ್ರಿ ಹೊನಲು ಬೆಳಕಿನ ಕ್ರೀಡಾಕೂಟವನ್ನು ಏರ್ಪಡಿಸುವ ಮೂಲಕ ಯುವಕರಲ್ಲಿ ಮನರಂ

ಎಚ್.ಮೇಲನಹಳ್ಳಿಯಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡ ಎನ್ಎಸ್ಎಸ್ ಶಿಬಿರ

ಎಚ್.ಮೇಲನಹಳ್ಳಿಯಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡ ಎನ್ಎಸ್ಎಸ್ ಶಿಬಿರ ----------------------------------------------- ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹೋಬಳಿಯ ಎಚ್.ಮೇಲನಹಳ್ಳಿಯಲ್ಲಿ ಒಂದು ವಾರದ ಕಾಲ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಗ್ರಾಮ ನೈರ್ಮಲ್ಯ, ಇಂಗುಗುಂಡಿ, ಸಾಕ್ಷರತೆ ಬಗ್ಗೆ ಜಾಗೃತಿ, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಗ್ರಾಮದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಕೆಲಸಗಳನ್ನು ಮಾಡುವ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ ಶಿಬಿರದಲ್ಲಿ ಶಿಬಿರಾರ್ಥಿಗಳು ಗ್ರಾಮದಲ್ಲಿ ನೂತನವಾಗಿ 8 ಹಿಂಗುಗುಂಡಿಗಳನ್ನು ನಿರ್ಮಾಣ ಮಾಡಿದರು. ವರ್ಷಾನುಕಾಲ ಕಸಕಡ್ಡಿ, ಹೂಳು, ಕೊಳಚೆ ನೀರಿನಿಂದ ತುಂಬಿ ದುರ್ನಾತ ಬೀರುತ್ತಿದ್ದ ಚರಂಡಿಗಳನ್ನು ಸ್ವಚ್ಚಗೊಳಿಸಿದರು. ಅಂಬೇಡ್ಕರ್ ಭವನ ಹಾಗೂ ದೇವಸ್ಥಾನಗಳ ಸುತ್ತ ಬೆಳೆದಿದ್ದ ಮುಳ್ಳಿನ ಗಿಡಗಳನ್ನು ಕಿತ್ತು ಶುಭ್ರಗೊಳಿಸಿದರು. ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿನ ಗಿಡಗಳನ್ನು ಕಸಿಮಾಡಿದರು. ಅಲ್ಲದೆ, ಡಾ.ನಿರ್ಮಲಹೇಮಂತ್ ಅವರನ್ನು ಬರಮಾಡಿಕೊಂಡು ಸುಮಾರು 70ತಕ್ಕೂ ಹೆಚ್ಚು ಮಂದಿಗೆ ಉಚಿತ ದಂತ ಚಿಕಿತ್ಸೆ ಮಾಡಿಸಿರು. ಪಶುವೈದ್ಯ ಡಾ.ಮಂಜುನಾಥ್ ಅವರಿಂದ 400 ರಕ್ಕೂ ಹೆಚ್ಚು ಪ್ರಾಣಿಗಳ ಆರೋಗ್ಯ ತಪಾಸಣೆ ಮತ್ತು ಅಗತ್ಯ ಔಷಧಿ ಕೊಡಿಸಿದರು. ಸಕರ್ಾರಿ ವೈದ್ಯಾಧಿಕಾರಿ ಡಾ.ಸಿಎಸ್.ರಂಗನಾಥ್ ಅವರಿಂದ 96 ರೋಗಿಗಳಿಗೆ ಚಿಕಿತ್ಸೆ

ಹುಳಿಯಾರಿನ ಶಿವಲಿಂಗಕ್ಕೆ ಸೂರ್ಯ ಕಿರಣ ಸ್ಪರ್ಶ

ಹುಳಿಯಾರಿನ ಶಿವಲಿಂಗಕ್ಕೆ ಸೂರ್ಯ ಕಿರಣ ಸ್ಪರ್ಶ ---------------------------- ಹುಲಿಯಾರಿನ್ ಶಿವಲಿಂಗಕ್ಕೆ ಸೂರ್ಯ ಕಿರಣ ಸ್ಪರ್ಶ. ಪುರಾತನ ಈಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿಯ ಪ್ರಣಾಮದಾಟ. ಮನುಜ ಭಕ್ತಮಹಾಶಯರಿಗೆ ಸೂರ್ಯನ ಭಕ್ತಿ ಸಮರ್ಪಣೆಯ ಮಹಾದರ್ಶನ. ದೇವಸ್ಥಾನ ಶಿಲ್ಪಿಯ ವಾಸ್ತುಶಿಲ್ಪದ ಚಾಕುಚಕ್ಯತೆಯ ಅನಾವರಣ.ಇವಿಷ್ಟು ನಡೆದಿದ್ದು ಇಲ್ಲಿನ ಈಶ್ವರ ದೇವಾಲಯದಲ್ಲಿ. ಹೌದು! ಹೊಯ್ಸಳರ ಕಾಲದ ಇಲ್ಲಿನ ಈಶ್ವರ ದೇವಾಲಯದಲ್ಲಿ ಫೆ.27 ರ ಶನಿವಾರ ಹಂತ ಹಂತವಾಗಿ ಸೂರ್ಯನ ಕಿರಣಗಳು ಶಿವಲಿಂಗಕ್ಕೆ ನಮನ ಸಲ್ಲಿಸಿದವು. ಸೂರ್ಯ ದಕ್ಷಿಣಾಯದಿಂದ ಉತ್ತರಾಯಣಕ್ಕೆ ಚಲಿಸುವ ಕ್ಷಣದಲ್ಲಿ ಶಿವಲಿಂಗದ ಮೇಲೆ ಬೀಳುವಂತೆ ಮಾಡುವ ಅಂದಿನ ವಾಸ್ತುಶಿಲ್ಪಕಲೆಯಿಂದಾಗಿ ಇಂತಹ ಚಮತ್ಕಾರವನ್ನು ಎಲ್ಲರೂ ವೀಕ್ಷಿಸುವಂತಾಯಿತು. ಅದೂ ಸಾಮಾನ್ಯವಾಗಿ ಭಕ್ತರು ಬಸವನ ಕೊಡಿನಿಂದ ಶಿವನನ್ನು ವೀಕ್ಷಿಸಿ ಭಕ್ತಿ ಸಮರ್ಪಿಸುವ ರೀತಿಯಲ್ಲಿಯೇ ಸೂರ್ಯನ ಕಿರಣಗಳು ಬಸವನ ಕೊಡಿನಿಂದ ಹಾದು ಹೋಗಿ ಶಿವಲಿಂಗದ ಮೇಲೆ ಬೀಳುವ ದೃಶ್ಯ ಮನಮೋಹಕ. ಪ್ರತಿವರ್ಷ ಫೆಬ್ರವರಿ-ಮಾರ್ಚ್ ಮಾಹೆಯಲ್ಲಿ ಸಂಭವಿಸುವ ಈ ಕೌತುಕವನ್ನು ಈ ಬಾರಿಯೂ ಅಪಾರ ಭಕ್ತರು ನೋಡಿ ಪುಳಕಿತಗೊಂಡರು.ಈ ದೃಶ್ಯವನ್ನು ಸೆರೆ ಹಿಡಿದು ಪತ್ರಿಕೆಗೆ ನೀಡಿದವರು ಸ್ಟೂಡಿಯೋ ಜಯಣ್ಣ