ಮಹಿಳೆಯರಿಗೆ ಶಾಸಕಾಂಗದಲ್ಲಿ ಮೀಸಲಾತಿ ದಿಟ್ಟ ಹೆಜ್ಜೆ :ಶೀನಪ್ಪ
ಮಹಿಳೆಯರಿಗೆ ಶಾಸಕಾಂಗದಲ್ಲೂ ಮೀಸಲಾತಿ ಕಲ್ಪಿಸುವ ಮುಖಾಂತರ ದಿಟ್ಟ ಹೆಜ್ಜೆ ಇಟ್ಟಂತಾಗಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಜಿ.ಎಂ.ಶೀನಪ್ಪ ಸರ್ಕಾರದ ಕ್ರಮವನ್ನು ಶ್ಲಾಘಿಸಿದರು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ಘಾಟಿಸಿ ಮಾತನಾಡಿದ ಅವರು ಇಂದು ಎಲ್ಲಾ ರಂಗದಲ್ಲು ಮಹಿಳೆಯರು ಪುರುಷರಿಗೆ ಸರಿಸಮನಾಗಿ ಕಾರ್ಯ ನಿರ್ವಹಿಸುತ್ತಿದ್ದು ಮಹಿಳೆಯರ ಪಾತ್ರ ಹೆಚ್ಚಿನದಾಗಿದೆ.ಮಹಿಳೆಯರಿಗೆ ಕಾನೂನಿನ ನೆರವು ಕೂಡ ಅಗತ್ಯವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಕೀಲ ಎಸ್.ಎಚ್.ಚಂದ್ರಶೇಖರ್ ಅವರು ಮಹಿಳಾ ದೌರ್ಜನ್ಯಗಳು ಮತ್ತು ಕಾನೂನು ಬಗ್ಗೆ ಮಾತನಾಡಿ ಮಹಿಳೆಯರಿಗೆ ಮನೆಯಿಂದಲೇ ದೌರ್ಜನ್ಯಗಳು ಆರಂಭವಾಗುತ್ತಿದ್ದು ಮಹಿಳೆಯರ ಮೇಲೆ ಅವಾಚ್ಯ ಶಬ್ಧ ಬಳಸುವುದು, ಬೈಯುವುದು, ಹೊಡೆಯುವುದು, ಸುಳ್ಳು ಆರೋಪ ಮಾಡುವುದು, ಸಿಗರೇಟು,ಬೀಡಿಯಿಂದ ಸುಡುವುದು ಹಾಗೂ ದುಶ್ಚಟಗಳಿಗೆ ವಡವೆ ಮಾರುವುದು ಎಲ್ಲವೂ ಶಿಕ್ಷಾರ್ಹ ಅಪರಾಧವಾಗಿದ್ದು ಇಂತಹ ಕಿರುಕುಳಗಳಿಗೆ ತಕ್ಷಣದಲ್ಲಿಯೇ ಜೀವನಾಂಶದಂತಹ ನ್ಯಾಯ ಸಿಗುತ್ತದೆ ಎಂದು ಮಾಹಿತಿ ನೀಡಿದರು.

ಮಹಿಳೆಯರ ಹಕ್ಕುಗಳು ಮತ್ತು ಕಾನೂನು ಬಗ್ಗೆ ವಕೀಲ ಕೆ.ಆರ್.ಚನ್ನಬಸವಯ್ಯ ಮಾತನಾಡಿ ಕುಟುಂಬ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ಸಾಂತ್ವಾನ ಕೇಂದ್ರಗಳನ್ನು ತೆರೆದು ತಾತ್ಕಾಲಿಕ ವಸತಿ, ವಿದ್ಯಾಭ್ಯಾಸ, ಕರಕುಶಲತೆಯ ತರಬೇತಿ ಕೊಡಲಾಗುತ್ತಿದೆ. ಮಹಿಳಾ ಆಯೋಗ ರಚಿಸಿ ದೌರ್ಜನ್ಯಕ್ಕೊಳಗಾದವರಿಗೆ ಜೀವನಾಂಶ ಹಾಗೂ ದೌರ್ಜನ್ಯವೆಸಗಿದವರಿಗೆ ಶಿಕ್ಷೆ ಕೊಡಿಸುವುದು, ಅಭಿವೃದ್ಧಿ ನಿಗಮ ಸ್ಥಾಪಿಸಿ ಮಹಿಳೆಯರು ಸ್ವಸಾಮಥ್ರ್ಯ ಬೆಳೆಸಿಕೊಳ್ಳಲು ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ಕೊಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.
ಚಿ.ನಾ.ಹಳ್ಳಿ ಸಿಪಿಐ ರವಿಪ್ರಸಾದ್ ಅವರು ಮಾತನಾಡಿ ವ್ಯಕ್ತಿತ್ವ, ಶಕ್ತಿ, ಬುದ್ದಿಯಲ್ಲಿ ಪುರುಷರಿಗೆ ಸರಿಸಮನಾದ ಮಹಿಳೆಯರು ಅಧಿಕಾರ ಅನುಭವಿಸ ಬೇಕೆನ್ನುವುದು ಸಂವಿದಾನದ ಮೂಲ ಆಶಯವಾಗಿದೆ. ಅದರಂತೆ ಭಾರತ ದೇಶ ಇತರ ದೇಶಕ್ಕಿಂತ ಹೆಚ್ಚಾಗಿ ಸ್ತ್ರೀಯರಿಗೆ ಅಧಿಕಾರದ ಸ್ಥಾನಮಾನ ನೀಡಿದ್ದು ಪ್ರಧಾನ ಮಂತ್ರಿ, ರಾಷ್ಟ್ರಪತಿ, ಮುಖ್ಯಮಂತ್ರಿ ಹೀಗೆ ವಿವಿಧ ಹಂತದ ಅಧಿಕಾರವನ್ನು ನೀಡಿದ್ದು ಈಗ ಶೇ.33 ರಷ್ಟು ಮೀಸಲಾತಿ ನೀಡಲಾಗುತ್ತಿದ್ದು ಸಮರ್ಪಕವಾಗಿ ಬಳಕೆ ಮಾಡುವಂತಾಗಬೇಕು ಎಂದರು. .ಅಧಿಕಾರದಲ್ಲಿರುವ ಮಹಿಳೆಯರು ತಮ್ಮ ಪತಿ ಹೇಳಿದ ರೀತಿ ಅಧಿಕಾರ ನಡೆಸುವ ಹಾಗೂ ಅವರು ಹೇಳಿದಕ್ಕೆಲ್ಲ ಸಹಿ ಹಾಕುವಂತಾದರೆ ಸರ್ಕಾರ ಮಹಿಳೆಯರಿಗೆ ಅಧಿಕಾರ ಕೊಟ್ಟಿರುವುದು ವ್ಯರ್ಥವಾಗುತ್ತದೆ. ಹಾಗಾಗಿ ಪತಿಯ ತಾಳದಂತೆ ಅಧಿಕಾರ ನಡೆಸುವುದ ಬಿಟ್ಟು ಸ್ವತಂತ್ರವಾಗಿ ಆಲೋಚಿಸಿ ಅಧಿಕಾರ ನಡೆಸಬೇಕು ಎಂದು ಕರೆ ನೀಡಿದರು.
ಕೆಂಕೆರೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ತಮ್ಮಯ್ಯ ಮಾತನಾಡಿ ಮಹಿಳೆಯರಿಗೆ ರಾಜಕೀಯ ಸ್ವಾತಂತ್ರ ಸಿಕ್ಕರೆ ಸಾಲದು ಆರ್ಥಿಕ ಸ್ವಾತಂತ್ರವೂ ಸಿಗಬೇಕು. ರಾಜರ ಆಳ್ವಿಕೆಯ ಕಾಲ, ಸ್ವಾತಂತ್ರ್ಯ ಹೋರಾಟದಲ್ಲೂ ಸ್ತ್ರೀಯರು ದೇಶಕ್ಕೆ ಹೆಚ್ಚು ಕೊಡುಗೆಯನ್ನು ನೀಡಿದ್ದು ಹೆಚ್ಚಾಗಿ ಮಹಿಳೆಯರು ಅನಕ್ಷರಸ್ಥರಾದ ಕಾರಣ ಇಂದಿನ ಕಾನೂನು ಹಾಗೂ ಕಾಯ್ದೆಯ ಅರಿವು ಸಿಗದೆ ಹಿಂದುಳಿಯುತ್ತಿದ್ದು ಇನ್ನಾದರೂ ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಉನ್ನತ ಶಿಕ್ಣದವರೆವಿಗೂ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.
ಕೆಂಕೆರೆ ಗ್ರಾ.ಪಂ.ಅಧ್ಯಕ್ಷೆ ಸಾವಿತ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ನ್ಯಾಯಾಧೀಶೆ ಎನ್.ಶೀಲಾ, ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಬಸವರಾಜು, ಸಹಾಯಕ ಸರ್ಕಾರಿ ಅಭಿಯೋಜಕರಾದ ಆರ್.ಟಿ.ಆಶಾ, ಎಂ.ವಿ.ಶಿವಾನಂದ್, ಮತ್ತಿತರರು ಇದ್ದರು. ವಕೀಲರಾದ ಕೆ.ಎಂ.ರಾಜಶೇಖರ್ ಸ್ವಾಗತಿಸಿ ಸದಾಶಿವಯ್ಯ ನಿರೂಪಿಸಿ , ವಿಶ್ವನಾಥ್ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ