ವಿಷಯಕ್ಕೆ ಹೋಗಿ

ನಿತ್ಯಾನಂದ ಸ್ವಾಮಿಜಿ ಕಾಮಕಾಂಡ







20 ದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಆಶ್ರಮಗಳು..! ಲಕ್ಷಾಂತರ ಭಕ್ತರು..!! ಹೊಂದಿರುವ ನಿತ್ಯಾನಂದ ಸ್ವಾಮಿಜಿ ಕಾಮಕಾಂಡದಲ್ಲಿ ಸಿಕ್ಕಿಬಿದ್ದಿದ್ದಾರೆ.
ನಿತ್ಯಾನಂದ ಸ್ವಾಮೀಜಿಯವರ ನಿಜ ನಾಮಧೇಯ ರಾಜಶೇಖರನ್.ಬೆಂಗಳೂರಿನ ಬಿಡದಿ ಬಳಿಯ ನಿತ್ಯಾನಂದನಿಗೆ ಸೇರಿದ ಸುಮಾರು 70 ಎಕರೆ ಪ್ರದೇಶದಲ್ಲಿ ಆಧುನಿಕ ಆಶ್ರಮವಿದೆ. ನಿತ್ಯವೂ ಅಲ್ಲಿ ನಿತ್ಯಾನಂದನ ಕೃಪೆಯಿಂದ ಜಪತಪಗಳು ನಡೆಯುತ್ತದೆ. ಹೊರ ಜಗತ್ತಿಗೆ ಸ್ವಾಮಿ ನಿತ್ಯಾನಂದರು ಆಧ್ಯಾತ್ಮ ಗುರು ಎಂದೇ ಚಿರಪರಿಚಿತರು.ದೇಶದ ಭಕ್ತರಲ್ಲದೇ, ವಿದೇಶಿ ಪ್ರಜೆಗಳು ಈ ಸ್ವಾಮಿಯ ಭಕ್ತರಾಗಿದ್ದಾರೆ. ವಿಶ್ವಾದ್ಯಂತ 32 ಕಡೆಗಳಲ್ಲಿ ಆತನ ಆಶ್ರಮಗಳಿವೆ. ಇಷ್ಟಲ್ಲದೇ ಆಲದ ಮರದ ಔಷಧಿಗಳನ್ನು ಉತ್ಪಾದಿಸಲಾಗುತ್ತಿದೆ, ಧ್ಯಾನ ಶಿಬಿರಗಳು ನಿರಂತರವಾಗಿ ನಡೆಯುತ್ತದೆ. ನಿತ್ಯಾನಂದ ತನ್ನ ಸ್ವಬಲದಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸುತ್ತಾನೆಂದು ಭಕ್ತರಲ್ಲಿ ನಂಬಿಕೆ ಮನೆಮಾಡಿದೆ. ಆಧ್ಯಾತ್ಮ, ಯೋಗ, ಲೈಂಗಿಕತೆ ಬಗ್ಗೆ ಇಂಗ್ಲಿಷಿನಲ್ಲಿ ಗಂಟೆಗಟ್ಟಲೆ ಭಾಷಣ ಹೊಡೆಯುತ್ತಿದ್ದ ನಿತ್ಯಾನಂದನ ಇತ್ತೀಚಿನ ನಡವಳಿಕೆ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದರು.
ಇದೀಗ ನಿತ್ಯಾನಂದ ಸ್ವಾಮಿಜಿ ಅವರು ತಮಿಳು ನಟಿಯೊಬ್ಬಳೊಂದಿಗೆ ರಾಸಲೀಲೆಯಲ್ಲಿ ತೊಡಗಿಕೊಂಡಿರುವ ವಿಡಿಯೋ ಚಿತ್ರಣವನ್ನು ಮುಂಚೂಣಿ ತಮಿಳು ಸುದ್ದಿ ವಾಹಿನಿ ಸನ್ ನ್ಯೂನ್ ಮೂಲಕ ಇಡೀ ಜಗತ್ತಿಗೆ ಬಿತ್ತರವಾಗಿದೆ.ವಿಡಿಯೋ ಚಿತ್ರಣದಲ್ಲಿ ನಟಿಯ ಮುಖವನ್ನು ಮಾಸ್ಕ್ ಮಾಡಲಾಗಿದ್ದು ಸ್ವಾಮೀಜಿ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯಗಳನ್ನು ತೋರಿಸಲಾಗಿದೆ. ಆದರೆ ನಟಿಯ ಹೆಸರನ್ನು ಬಹಿರಂಗಪಡಿಸದೆ, ಇಂಗ್ಲಿಷ್ ವರ್ಣಮಾಲೆಯ 'R' ಅಕ್ಷರದಿಂದ ನಟಿಯ ಹೆಸರು ಆರಂಭವಾಗುತ್ತದೆ ಎಂಬ ಸಣ್ಣ ಸುಳಿವನ್ನು ಸನ್ ನ್ಯೂಸ್ ಕೊಟ್ಟಿದೆ.ಸ್ವಾಮೀಜಿಯ ರಾಸಲೀಲೆಯ ವಿಡಿಯೋ ಚಿತ್ರಣ ಅವರ ಹಿನ್ನೆಲೆ ಮತ್ತು ಜೀವನ ಶೈಲಿ ಕುರಿತು ಹಲವಾರು ಪ್ರಶ್ನೆಗಳನ್ನು ಎತ್ತಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಸಲೀಲೆಯಲ್ಲಿ ತೊಡಗಿಕೊಂಡ ನಟಿಯ ಹೆಸರನ್ನು ಕೆಲವು ಪತ್ರಿಕೆಗಳು ರಾಗಸುಧಾ ಎಂದುಮತ್ತೆ ಕೆಲವರು ರಂಜಿತಾ ಎಂದು ಅನುಮಾನ ವ್ಯಕ್ತಪಡಿಸಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಎಲ್ಲೂ ದಾಖಲಾಗಿಲ್ಲ. ತಮಿಳಿನ ನಕ್ಕೀರನ್ ಪತ್ರಿಕೆಯ ಪ್ರಕಾರ ಸ್ವಾಮೀಜಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿಕೊಂಡಿದ್ದ ನಟಿಯ ಹೆಸರು ರಂಜಿತಾ ಎನ್ನಲಾಗಿದೆ.
ತಮಿಳುನಾಡು, ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ ಸ್ವಾಮಿ ನಿತ್ಯಾನಂದ ಅವರಿಗೆ ಲಕ್ಷಾಂತರ ಭಕ್ತಾಧಿಗಳಿದ್ದು ಅವರೆಲ್ಲಾ ವಿಡಿಯೋ ನೋಡಿ ವಿಚಲಿತರಾಗಿದ್ದಾರೆ. ಇದು ಪ್ರಸಾರವಾದಾಗಿನಿಂದ ಸಾರ್ವಜನಿಕರಿಗೆ ಮತ್ತು ಪೊಲೀಸರಿಗೆ ಸಿಕ್ಕಿ ಬೀಳುವ ಮೊದಲೇ ನಿತ್ಯಾನಂದಸ್ವಾಮಿಜಿ ಆಶ್ರಮದಿಂದ ತಲೆಮರೆಸಿಕೊಂಡಿದ್ದಾರೆ. ವಿದೇಶಕ್ಕೆ ಹೋಗಿ ಮೈಮರೆಸಿಕೊಂಡಿರಬೇಕೆಂಬ ಗುಮಾನಿಯೂ ಇದೆ.ಸ್ವಾಮೀಜಿಯ ಆಶ್ರಮಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕಳೆದ ರಾತ್ರಿ ಬೆಂಗಳೂರು ಸಮೀಪದ ಬಿಡದಿಯ ಆಶ್ರಮದಲ್ಲಿದ್ದ ಅನೇಕ ಭಕ್ತರು, ಪ್ರತಿಭಟನೆಯ ಭೀತಿಯಿಂದ ಆಶ್ರಮವನ್ನು ಖಾಲಿ ಮಾಡಿದ್ದಾರೆ. ಬಿಡದಿ ಆಶ್ರಮದಲ್ಲಿ ಅನೇಕಾನೇಕ ವಿದೇಶಿ ಭಕ್ತರುಗಳಿದ್ದರು ಎನ್ನಲಾಗಿದೆ.

ಬಿಡದಿ ಬಳಿಯಿರುವ ನಿತ್ಯಾನಂದನ ಆಶ್ರಮದಲ್ಲಿ ಮೂರು ಕುಟೀರಗಳಿಗೆ ಬೆಂಕಿ ಇಡಲಾಗಿದೆ. ಅಲ್ಲದ್ದ ಪುಸ್ತಕಗಳು ಸುಟ್ಟು ಭಸ್ಮವಾಗಿವೆ. ಕಾಮುಕ ಸ್ವಾಮಿಯ ವಿರುದ್ಧ ಸಿಡಿದೆದ್ದಿರುವ ಸಾರ್ವಜನಿಕರು ಮಠಕ್ಕೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಆಶ್ರಮದ ಹೊರಗಿರೆ ನೆರೆದಿರುವ ಜನ ನಿತ್ಯಾನಂದನ ಚಿತ್ರವಿದ್ದ ಬ್ಯಾನರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರನ್ನು ಹಿಡಿದಿಡುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಇತ್ತೀಚಿನ ಬೆಳವಣಿಗೆಯಂತೆ ಬಿಡದಿಯ ಅಶ್ರಮದಲ್ಲಿ ಅಕ್ರಮವಾಗಿ ಪ್ರಾಣಿಗಳ ಚರ್ಮ ದಾಸ್ತಾನು ಇಟ್ಟಿರುವ ಶಂಕೆಯಿಂದ ಡಿಸಿಎಫ್ ಗೀತಾಂಜಲಿ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ.

ರಾಸಲೀಲೆವಿಡಿಯೋ ಕುರಿತು ಸ್ವಾಮಿ ನಿತ್ಯಾನಂದ ಅವರ ಅಧಿಕೃತ ವೆಬ್ ಸೈಟ್ ನಲ್ಲಿ ಅಧಿಕೃತ ಹೇಳಿಕೆ ಹೊರಬಿದ್ದಿದ್ದು ಇದು ಗ್ರಾಫಿಕ್ಸ್ ಹಾಗೂ ಕಲವರ ಕುತಂತ್ರದಿಂದಾಗಿರುವ ಗಾಳಿ ಸಮಚಾರಗಳ ಮಿಶ್ರಣ.ದಯಮಾಡಿ ಭಕ್ತಾಧಿಗಳು ಇದನ್ನು ನಂಬಬಾರದು ಎಂದು ಕೋರಿದ್ದಾರೆ.
. ಜನಪ್ರಿಯ ಸಾಮಾಜಿಕ ತಾಣ 'ಯು ಟ್ಯೂಬ್' ನಲ್ಲೂ ರಾಸಲೀಲೆಯ ವಿಡಿಯೋವನ್ನು ಸೇರಿಸಲಾಗಿದೆ.ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಸನ್ ನೆಟ್ ವರ್ಕ್ ಪ್ರಸಾರ ಮಾಡಿದ ವಿಡಿಯೋ ವೀಕ್ಷಿಸಬಹುದು.
http://www.youtube.com/watch?v=MBq7hpsUpuw
ಆಧ್ಯಾತ್ಮಿಕ ಪ್ರಪಂಚದಲ್ಲಿ ಗುರು ಪರಂಪರೆಗೆ ಮಹತ್ವದ ಸ್ಥಾನ.ಸ್ವಾಮೀಜಿಗಳ, ಗುರುಗಳ ಬಗ್ಗೆ ನಮ್ಮ ನಂಬಿಕೆ ಅಚಲ.ಇಂತಹ ಪ್ರಕರಣದಿಂದ ಗುರುಪೀಠಗಳ ಬಗ್ಗೆ ಅನುಮಾನಗಳು ಹುಟ್ಟುತ್ತವಾದರೂ ಎಲ್ಲರನ್ನು ಇದೇ ಮಾನದಂಡದಿಂದ ನೋಡಲು ಸಾದ್ಯವಿಲ್ಲ.ಆದರೂ ನಿತ್ಯಾನಂದ ಸ್ವಾಮಿಯಂತಹ ಪ್ರಕರಣ ಅಲ್ಲಲ್ಲಿ ನಡೆಯುತ್ತಲ್ಲೆ ಇರುತ್ತದೆ.ಕೆಳಗಿನ ಎರಡು ಪ್ರಕರಣ ದೈವಶ್ರದ್ಧೆ ಮತ್ತು ದೇವಾಲಯ ಶ್ರದ್ಧೆ ಇರುವವರನ್ನು ಬೆಚ್ಚಿ ಬೀಳಿಸುವ ಘಟನೆಗಳಾಗಿದೆ.

ತಮಿಳುನಾಡು ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳ ಕಾಂಚಿಪುರಂನ ಒಂದು ದೇವಾಲಯದಲ್ಲಿ ಅರ್ಚಕನೊಬ್ಬ ದೇವರ ಪೂಜೆ ಮಾಡುವುದನ್ನು ಬಿಟ್ಟು ಮಹಿಳಾ ಭಕ್ತಾದಿಗಳ ಜತೆ ರಾಸಲೀಲೆಗಳಲ್ಲಿ ಮಗ್ನನಾಗಿರುತ್ತಿದ್ದುದು ದೆಹಲಿಯಲ್ಲಿ ಸ್ವಯಂ ಘೋಷಿತ ಸ್ವಾಮೀಜಿ ಶಿವಮಾರುತ್ ದ್ವಿವೇದಿನಡೆದಬೆಳಕಿಗೆ ಬಂದಿದ್ದು ಭಾರೀ ಹಗರಣಕ್ಕೆ ಎಡೆಮಾಡಿಕೊಟ್ಟಿತು.
ಕಾಂಚಿಪುರಂನ ಇತಿಹಾಸ ಪ್ರಸಿದ್ದ ಪೆರುಮಾಳ್ ದೇವಾಲಯದಲ್ಲಿ 36 ವರ್ಷದ ದೇವನಾಥನ್ ಎನ್ನುವ ಅರ್ಚಕ ದೇವಾಲಯದ ಗರ್ಭಗುಡಿಯಲ್ಲೇ ರಾಸಲೀಲೆಯಲ್ಲಿ ತೊಡಗಿ ಅಮಾಯಕ ಮಹಿಳಾ ಭಕ್ತರನ್ನು ಶೋಷಿಸಿದ್ದಾನೆ.ಈತನ ರಾಸಲೀಲಾ ಪ್ರಕರಣ ಸಾರ್ವಜನಿಕವಾದದ್ದು ಹೇಗೆಂದರೆ, ತಾನು ಒಂದಲ್ಲ ನಾಲ್ಕು ಹೆಂಗಸರುಗಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನ್ನು ತಾನೇ ಮೊಬೈಲ್ ಫೋನಿನಲ್ಲಿ ರೆಕಾರ್ಡ್ ಮಾಡಿಟ್ಟಿದ್ದ. ಮೊಬೈಲ್ ಒಂದು ತಿಂಗಳ ಹಿಂದೆ ಕೆಟ್ಟುಹೋದಾಗ ರಿಪೇರಿ ಮಾಡಿಸಲು ಅಂಗಡಿಯಾತನಿಗೆ ಕೊಟ್ಟಾಗ ಚಿತ್ರಗಳು ಕತೆ ಹೇಳಿದವು.

ಇತ್ತೀಚೆಗೆ ದೆಹಲಿಯಲ್ಲಿ ಇಂಥದೇ ಇನ್ನೊಂದು ಘಟನೆ ನಡೆದಿತ್ತು. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಸ್ವಯಂ ಘೋಷಿತ ಸ್ವಾಮೀಜಿ ಶಿವಮಾರುತ್ ದ್ವಿವೇದಿ ಅಲಿಯಾಸ್ ಇಚ್ಚಾಧರಿ ಸಂತ ಸ್ವಾಮಿ ಭೀಮಾನಂದಜೀ ಮಹಾರಾಜ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದರು.ದಕ್ಷಿಣ ದೆಹಲಿಯಲ್ಲಿರುವ ಕಾನಪುರ್ ಪ್ರದೇಶದಲ್ಲಿ ಭವ್ಯವಾದ ಬಂಗಲೆಯನ್ನು ಕಟ್ಟಿಕೊಂಡಿರುವ ಶಿವಮಾರುತ್, ಅಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ. ವೇಶ್ಯಾವಾಟಿಕೆಯಿಂದ ಕೋಟ್ಯಂತರ ಆದಾಯ ಗಳಿಸಿದ್ದಾನೆ. ದಾಳಿಯ ವೇಳೆ ಸ್ವಾಮೀಜಿ, ಆತನ ಸಹಚರ, ಆರು ಮಂದಿ ಹೆಣ್ಣುಮಕ್ಕಳು, ಇಬ್ಬರು ಗಗನಸಖಿಯರನ್ನು ಬಂಧಿಸಲಾಗಿತ್ತು. ಬಂಧಿತ ವ್ಯಕ್ತಿ ಸ್ವಾಮೀಜಿ ವೇಷಧರಿಸಿ ಅನೇಕರಿಗೆ ಮೋಸ ಮಾಡಿದ್ದಾನೆ. ಕೆಲವರನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾನೆ. ಈತನ ವಿರುದ್ಧ ಮೋಕಾ ಕಾಯ್ದೆ ಸೂಕ್ತ ಎಂದು ದೆಹಲಿ ಪೊಲೀಸರು ತೀರ್ಮಾನಿಸಿದ್ದಾರೆ.
ಕಾವಿಯೊಳಗಿನ ಕಾಮುಕರು : ಕಾವಿ ಧರಿಸಿದವರೆಲ್ಲರೂ ಸ್ವಾಮೀಜಿಗಳಲ್ಲ. ಕಾವಿಯೊಳಗೂ ಕಾಮುಕರಿದ್ದಾರೆ. ಸಮಾಜ ಇನ್ನು ಮುಂದಾದರೂ ಎಚ್ಚೆತ್ತುಗೊಳ್ಳಬೇಕು ಎಂದು ಪತ್ರಕರ್ತೆ ಪ್ರತಿಭಾ ನಂದಕುಮಾರ್ ಹೇಳಿದ್ದಾರೆ. ಈ ಸ್ವಾಮೀಜಿಯ ಬಗ್ಗೆ ಅನೇಕ ಅನುಮಾನಗಳನ್ನು ನಾನು ಪತ್ರಿಕೆಯಲ್ಲಿ ಬರೆದಿರುವೆ. ಆದರೆ, ಸರಕಾರವಾಗಲಿ, ಜನಸಾಮಾನ್ಯರಾಗಲಿ ಎಚ್ಚತ್ತುಕೊಳ್ಳಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Swami Nityananda And Actress In Sex Scandal
Now, religious men are standing in the queue of controversy after politicians. An Indian religious man Swami Nityananda has been caught in a sex controversy. A private Indian channel—Sun TV—showed a video tape live featuring Swami Nityananda and an actress. This sex scandal may shake the faith of people who treat them as Guru.
Last day, Sun News released a video tape featuring Swamiji and an actress. They were lying on a bed and doing personal things with each other.
Swami Nithyananda or so called Paramahamsa Nithyanand , who is known as a Spiritual Guru from Tamil Nadu has shocked India today. Nithyananda was seen in this shocking video in a bed with an actress from Tamil movie industry.
There are mixed and confused reports about the identity of the lady. Some say it is Ragasudha while other claims she is Ranjita but no one is in doubt about the identity of the person. Swami Nityananda can be seen in the video, clearly.
Swami Nityananda owns an Ashram in Bidadi and it is being said that a furious mob attacked at Ashram after they watched him in unimaginable condition with a young girl. Although, there is a tight police security outside and inside Ashram yet it is not safe from furious people and they can attack again at any time.
People are getting furious on these kinds of so called religious gurus who make people fool on God’s name. People gives them respect but they do immoral deeds behind the name of GOD. They put a mask of kindness and piousness on their faces when they come in public but their real faces emerge in the dark when they sleep with actresses.
Check out the youtube video of Nithaynanda's sex scandal with Tamil actress which was broadcasted in SUN TV.
http://www.youtube.com/watch?v=MBq7hpsUpuw




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.