ಹುಳಿಯಾರಿನ ಭಜನ ಮಂಡಳಿಗಳು ಪ್ರತಿ ತಿಂಗಳ ಮೊದಲ ಭಾನುವಾರದಂದು ನಗರ ಸಂಕೀರ್ತನೆ ಹಾಗೂ ಸುಪ್ರಭಾತ ಸೇವೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.ಹಿಂದುಧರ್ಮ ಜಾಗೃತಿ ಹಾಗೂ ದಾಸ ಸಾಹಿತ್ಯ ಪ್ರಚಾರಕ್ಕಾಗಿ ಇಂತಹದೊಂದು ಕಾರ್ಯಕ್ರಮ ಅವಶ್ಯ ಎನ್ನುತ್ತಾರೆ ಮುಖ್ಯಪ್ರಾಣ ಭಜನ ಮಂಡಳಿಯ ಬಿ.ಗೋಪಾಲ್ ಹಾಗೂ ಹು.ಲ.ವೆಂಕಟೇಶ್.ತಿರುಪತಿ ತಿರುಮಲ ದಾಸಸಾಹಿತ್ಯ ಪ್ರಾಜೆಕ್ಟ್ ನ ಹತ್ತುಹಲವಾರು ಭಜನ ಮಂಡಳಿಗಳು ಅಂದು ಮುಂಜಾನೆ ಊರಿನ ಯಾವುದಾದರೊಂದು ದೇವಾಲಯದಲ್ಲಿ ಸೇರಿಕೊಂಡು ದೇವರಿಗೆ ನಮಿಸಿ ಅಲ್ಲಿಂದ ಭಜನೆ,ದೇವರ ನಾಮ ಹಾಡಿಕೊಂಡು ಪಟ್ಟಣ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಾರೆ.ಗಂಡಸರುಗಳು ಕಾವಿ ಧರಿಸಿ ದಾಸರ ತರಹ ಅಲಂಕಾರ ಮಾಡಿಕೊಂಡರೆ ಹೆಂಗಸರು ಭಜನ ಮಂಡಳಿಯ ಕೇಸರಿ ಸೀರೆ ಧರಿಸುತ್ತಾರೆ.ತಾಳ ತಂಬೂರಿ, ಹಾರ್ಮೊನಿಯಂ,ತಬಲ ನಾದುಅದ ಹಿಮ್ಮೆಳದಲ್ಲಿ ಕೋಲಾಟದ ಮೂಲಕ ಗಮನ ಸೆಳೆಯುತ್ತಾರೆ.ಸುಶ್ರಾವ್ಯವಾಗಿ ಎಲ್ಲರೂ ಎಕ ಕಾಲಕ್ಕೆ ಹಾಡುವುದು ಕೇಳುವುದೇ ಒಂದು ಸೊಗಸು.ಕೇಳಿದವರು ಕೆಲವು ಕ್ಷಣವಾದರೂ ಪರಮಾತ್ಮನ ಸನ್ನಿಧಿಗೆ ತಲುಪುವುದರಿಂದ ಇವರ ಶ್ರಮ ಸಾರ್ಥಕತೆ ಕಾಣುತ್ತದೆ.ಅಂಜಾನಾದ್ರಿ,ವೃಷಭಾದ್ರಿ,ಶೇಷಾದ್ರಿ,ಗರುಡಾದ್ರಿ, ಹೀಗೆ ಎಲ್ಲಾ ಮಂಡಳಿಗಳ ಸ್ತ್ರೀಪುರುಷರುಗಳು ಕೆಲವು ಘಂಟೆಗಳ ಕಾಲ ಪರಮಾತ್ಮನನ್ನು ಸ್ತುತಿಸಿ ವಾಪಸ್ಸು ದೇವಾಲಯಕ್ಕೆ ತೆರಳಿ ಮಹಾಮಂಗಳಾರತಿ ಪ್ರಸಾದ ವಿನಿಯೋಗದ ನಂತರ ಕಾರ್ಯಕ್ರಮ ಅಂತಮಗೊಳ್ಳುತ್ತದೆ.ಕೆಲವೊಮ್ಮೆ ಉಪನ್ಯಾಸ ಕೂಡ ಇರುತ್ತದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ