ಎಚ್.ಮೇಲನಹಳ್ಳಿಯಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡ ಎನ್ಎಸ್ಎಸ್ ಶಿಬಿರ
-----------------------------------------------
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹೋಬಳಿಯ ಎಚ್.ಮೇಲನಹಳ್ಳಿಯಲ್ಲಿ ಒಂದು ವಾರದ ಕಾಲ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಗ್ರಾಮ ನೈರ್ಮಲ್ಯ, ಇಂಗುಗುಂಡಿ, ಸಾಕ್ಷರತೆ ಬಗ್ಗೆ ಜಾಗೃತಿ, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಗ್ರಾಮದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಕೆಲಸಗಳನ್ನು ಮಾಡುವ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಈ ಶಿಬಿರದಲ್ಲಿ ಶಿಬಿರಾರ್ಥಿಗಳು ಗ್ರಾಮದಲ್ಲಿ ನೂತನವಾಗಿ 8 ಹಿಂಗುಗುಂಡಿಗಳನ್ನು ನಿರ್ಮಾಣ ಮಾಡಿದರು. ವರ್ಷಾನುಕಾಲ ಕಸಕಡ್ಡಿ, ಹೂಳು, ಕೊಳಚೆ ನೀರಿನಿಂದ ತುಂಬಿ ದುರ್ನಾತ ಬೀರುತ್ತಿದ್ದ ಚರಂಡಿಗಳನ್ನು ಸ್ವಚ್ಚಗೊಳಿಸಿದರು. ಅಂಬೇಡ್ಕರ್ ಭವನ ಹಾಗೂ ದೇವಸ್ಥಾನಗಳ ಸುತ್ತ ಬೆಳೆದಿದ್ದ ಮುಳ್ಳಿನ ಗಿಡಗಳನ್ನು ಕಿತ್ತು ಶುಭ್ರಗೊಳಿಸಿದರು. ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿನ ಗಿಡಗಳನ್ನು ಕಸಿಮಾಡಿದರು.
ಅಲ್ಲದೆ, ಡಾ.ನಿರ್ಮಲಹೇಮಂತ್ ಅವರನ್ನು ಬರಮಾಡಿಕೊಂಡು ಸುಮಾರು 70ತಕ್ಕೂ ಹೆಚ್ಚು ಮಂದಿಗೆ ಉಚಿತ ದಂತ ಚಿಕಿತ್ಸೆ ಮಾಡಿಸಿರು. ಪಶುವೈದ್ಯ ಡಾ.ಮಂಜುನಾಥ್ ಅವರಿಂದ 400 ರಕ್ಕೂ ಹೆಚ್ಚು ಪ್ರಾಣಿಗಳ ಆರೋಗ್ಯ ತಪಾಸಣೆ ಮತ್ತು ಅಗತ್ಯ ಔಷಧಿ ಕೊಡಿಸಿದರು. ಸಕರ್ಾರಿ ವೈದ್ಯಾಧಿಕಾರಿ ಡಾ.ಸಿಎಸ್.ರಂಗನಾಥ್ ಅವರಿಂದ 96 ರೋಗಿಗಳಿಗೆ ಚಿಕಿತ್ಸೆ ನೀಡಿಸಿದರು. ಹುಳಿಯಾರ್ ಸ್ಫೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಶಿಬಿರಾರ್ಥಿಗಳಿಗೆ ಕ್ರೀಡಾಕೂಟ ನಡೆಸಿ ಬಹುಮಾನ ವಿತರಿಸಿದರು.
ನಂದೀಶ್ ಬಟ್ಲೇರಿ ಅವರಿಂದ ಹಾಸ್ಯ ಸಿಂಚನ, ದುರ್ಗಯ್ಯ ತಂಡದಿಂದ ಕೋಲಾಟ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳು, ಶಿಬಿರಾರ್ಥಿಗಳು ಹಾಗೂ ಗ್ರಾಮಸ್ಥರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿಷಯ ತಜ್ಞರಿಂದ ಶಿಕ್ಷಣ ಮತ್ತು ಕಾನೂನು ಅರಿವು, ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ, ಆಧುನಿಕ ಕೃಷಿ ಶಿಕ್ಷಣ ಸೇರಿದಂತೆ ಉಪನ್ಯಾಸ ಮಾಲಿಕೆಗಳು ನಡೆದವು. ಕೊನೆಯಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಎನ್ಎಸ್ಎಸ್ ಗೀತೆ ಹಾಡುವ ಮೂಲಕ ರಸ್ತೆಯ ಕಸ ಕಡ್ಡಿಗಳನ್ನು ತೆಗೆದು ಹಾಕುವ ಮೂಲಕ ಶಿಬಿರಕ್ಕೆ ತೆರೆ ಎಳೆಯಲಾಯಿತು.
ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಎನ್.ನಾಗರಾಜು ಅವರ ಮಾರ್ಗದರ್ಶನದಲ್ಲಿ ಶಿಬಿರಾಧಿಕಾರಿಗಳಾದ ಶಂಕರಲಿಂಗಯ್ಯ, ಗೋವಿಂದರಾಜು ನೇತೃತ್ವದಲ್ಲಿ ಸಹಶಿಬಿರಾಧಿಕಾರಿಗಳಾದ ಸೀತರಾಮಯ್ಯ ಮತ್ತು ಕೃಷ್ಣಮೂರ್ತಿ ಅವರ ಸಹಕಾರದೊಂದಿಗೆ 90 ಶಿಬಿರಾರ್ಥಿಗಳು ಈ ಶಿಬಿರದಲ್ಲಿ ಕೆಲಸ ನಿರ್ವಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ