ಹುಳಿಯಾರು ಪಟ್ಟಣದ ಮನೆಮನೆಗಳಲ್ಲಿ, ದೇವಸ್ಥಾನಗಳಲ್ಲಿ ಕೋಸಂಬರಿ ಬೇಲದ ಹಣ್ಣಿನ ಪಾನಕ ಸಂತರ್ಪಣೆ ಮಾಡುತ್ತ ಶ್ರೀರಾಮಚಂದ್ರ ಜನ್ಮ ದಿನವಾದ ರಾಮನವಮಿ ಹಬ್ಬವನ್ನು ಇಂದು ಅದ್ಧೂರಿಯಾಗಿ ಆಚರಿಸಲಾಯಿತು.
ಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯ ಇಂದಿನ ಬೆಳಗಿನಿಂದಲೇ ಮನೆಗಳಲ್ಲಿ,ಗುಡಿಗೋಪುರಗಳಲ್ಲಿ ಶ್ರೀರಾಮನಿಗೆ ಮತ್ತು ಆಂಜನೇಯನಿಗೆ ವಿಶೇಷ ಅರ್ಚನೆ, ಪೂಜೆ ಕೈಂಕರ್ಯಗಳು ವಿಜೃಂಭಣೆಯಿಂದ ಜರುಗಿದವು. ಪ್ರತಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಬೇಸಿಗೆಯ ಧಗೆಯನ್ನು ತಣ್ಣಗಾಗಿಸಲು ಪಾನಕ, ಕೋಸಂಬರಿ, ಮಜ್ಜಿಗೆ ಸಂತರ್ಪಣೆ ನಡಯಿತು.ಬ್ರಾಹ್ಮಣ ಸಂಘದಿಂದ ರಂಗನಾಥ ದೇವಾಲಯದಲ್ಲಿ ರಾಮ ಅಷ್ಟೋತ್ತರ,ರಾಮ ರಕ್ಷಾ ಸ್ತೋತ್ರ,ರಾಮ ಅಷ್ಟಕ ,ರಾಮ ಸಹಸ್ರನಾಮ ಜಪಿಸಿತಲ್ಲದೆ ವಿಪ್ರ ಮಹಿಳಾ ಸಂಘದಿಂದ ರಾಮಕೀರ್ತನೆಯ ಭಜನೆ ಮಾಡಲಾಯಿತು.
ಗಾಂಧಿಪೇಟೆಯ ಶ್ರೀಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ರಾಮನಿಗೆ ಅಭಿಷೇಕ ಮತ್ತು ಅರವಟಿಗೆ ಉತ್ಸವ ಅತ್ಯಂತ ಸಂಭ್ರಮಾಚರಣೆಯಿಂದ ನಡೆಯಿತು.ಆರ್ಯವೈಶ್ಯ ಮಂಡಳಿಯಿಂದ ಶ್ರೀ ರಾಮನ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಆಂಜನೇಯ ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಹಾಗೂ ಆಗಮಿಸಿದ್ದ ಗ್ರಾಮದೇವತೆಗಳಾದ ಹುಳಿಯಾರಮ್ಮ,ದುರ್ಗಮ್ಮ ಮತ್ತು ಲಿಂಗಪ್ಪನಪಾಳ್ಯದಿಂದ ಆಗಮಿಸಿದ್ದ ಶ್ರೀರಾಮ ಮೂರ್ತಿಗೆ ಪೂಜೆ ಸಲ್ಲಿಸಿ ಬಂದಿದ್ದ ಭಕ್ತಾಧಿಗಳಿಗೆ ಪಾನಕ ಪನಿವಾರ ವಿತರಿಸಲಾಯಿತು. ಭಕ್ತಾಧಿಗಳು ಬೇಸಿಗೆಯ ಧಗೆಯನ್ನು ಲೆಕ್ಕಿಸದೆ ಆಗಮಿಸಿ ಪೂಜೆ ಜಪಗಳ ಕಾರ್ಯಗಳಲ್ಲಿ ಬಾಗವಹಿಸಿದ್ದರು. ಶ್ರೀರಾಮ ಯುವಕ ಸಂಘದ ಯುವಕರು ಪೆಂಡಾಲನ್ನು ಹಾಕಿ ಮಜ್ಜಿಗೆ ಕೋಸಂಬರಿಯನ್ನು ವಿತರಿಸಿದರು.ಜಯಕರ್ನಾಟಕ ಸಂಘದ ವೆಂಕಟೇಶ್ ಪಾನಕ ವಿತರಿಸಿದರು. ಎಲ್ಲರು ಈ ಸಂಭ್ರಮದಲ್ಲಿ ಭಾಗಿಯಾಗಿರುವುದು ಆಚರಣೆಯ ಕಳೆಯನ್ನು ಮತ್ತಷ್ಟು ಹೆಚ್ಚಿಸಿತು.
ರಾಮನವಮಿ ಪ್ರಯುಕ್ತ ವ್ಯಾಪಾರ ಭರದಿಂದ ನಡೆದಿದ್ದು ಹೂವು, ಹಣ್ಣು, ಸೌತೇಕಾಯಿ, ಕರಬೂಜಾ ಹಣ್ಣುಗಳಬಲ ಗಗನಕ್ಕೇರಿತ್ತು.ಒಟ್ಟಾರೆ ಹಬ್ಬದ ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿತ್ತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ