ವರ್ಷದ ತೊಡಕು: ಭರ್ಜರಿ ಮಾಂಸದ ವ್ಯಾಪಾರ
ಯುಗಾದಿ ಹಬ್ಬದ ಮೊದಲ ದಿನ ಎಲ್ಲರೂ ಒಬ್ಬಟ್ಟಿನ ಸಿಹಿತಿಂದು ಹಬ್ಬವನ್ನು ಆಚರಿಸಿದರೆ ಗ್ರಾಮೀಣ ಭಾಗದಲ್ಲಿ ಯುಗಾದಿ ಹಬ್ಬದ ಮಾರನೆಯ ದಿನ ಸಸ್ಯಹಾರಿಗಳು ನುಗ್ಗೆಕಾಯಿ ಸಾರು ಮಾಡಿ ಊಟ ಮಾಡುವುದು ಹಾಗೂ ಮಾಂಸಹಾರಿ ವರ್ಗದ ಜನ ಹಬ್ಬವನ್ನು ಕೇವಲ ಒಬ್ಬಟ್ಟಿನ ಊಟಕ್ಕೆ ಸೀಮಿತಗೊಳಿಸದೆ ಕುರಿ ಕೋಳಿ ಅಡಿಗೆ ಮಾಡಿ ಮಾಂಸಾಹಾರಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ವರ್ಷದ ತೊಡಕು ಆಚರಿಸುವುದು ಸಾಮಾನ್ಯ.ಮಾಂಸಾಹಾರಿ ಪ್ರೇಮಿಗಳು ಯುಗಾದಿಗಿಂತ ಈ ದಿನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತ ಬಂದಿದ್ದು ಇಂದು ಸಂಬಂಧಿಗಳನ್ನು ಹಾಗೂ ಸ್ನೇಹಿತರನ್ನು ಊಟಕ್ಕೆ ಕರೆಯುವುದು ವಾಡಿಕೆ. ಹಬ್ಬದ ಹೊಸ ತೊಡಕು ಪ್ರಯುಕ್ತ ಮುಂಜಾನೆಯಿಂದಲೆ ಪಟ್ಟಣದ ವಿವಿಧ ಮಾಂಸಾಹಾರಿ ಅಂಗಡಿಗಳಲ್ಲಿ ಮಾಂಸದ ವ್ಯಾಪಾರ ಭರ್ಜರಿಯಾಗಿ ನಡೆಯಿತು.ಖಾರದ ಹಬ್ಬಕ್ಕಾಗಿ ಕುರಿ ಕೋಳಿ ಕೊಳ್ಳಲು ಅಕ್ಕ-ಪಕ್ಕದ ಹಳ್ಳಿಗಳ ಜನ ಪಟ್ಟಣಕ್ಕೆ ಬಂದ ಕಾರಣ ಒಂದು ರೀತಿಯ ಜಾತ್ರಾ ವಾತಾವರಣ ಉಂಟಾಗಿತ್ತು.ಮಧ್ಯಾನ್ಹದವರೆಗೂ ಲಾರಿಗಟ್ಟಲೆ ಕೋಳಿ ಭೀಕರಿಯಾಯ್ತು. 40 ರಿಂದ 50 ರು. ಬೆಲೆಯ ಫಾರಂ ಕೋಳಿ ಇಂದು 60 ರಿಂದ 70 ರು. ಗೆ ಮಾರಾಟವಾಯಿತು.ಮಧ್ಯಾಹ್ನದೊಳಗೆ ಕೋಳಿ ಖಾಲಿಯಾಗಿದ್ದು ಕೊನೆ ಕೊನೆಯಲ್ಲಿ 100ರಿಂದ ೧೫೦ ರು.ಗಳಿಗೆ ಕೋಳಿ ಬೆಲೆ ಏರಿ ವ್ಯಾಪಾರಿಗಳಿಗೆ ಲಾಟರಿ ಹೊಡೆದಂತೆ ವ್ಯಾಪಾರ ವಹಿವಾಟು ನಡೆಯಿತು. ಹಳ್ಳಿಗಳಿಂದ ಬಂದ ರೈತರು ಕೈಯಲ್ಲಿ ಮೂರ್ನಾಲ್ಕು ಕೋಳಿ ನೇತು ಹಾಕಿಕೊಂಡು ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ