ನಂದಿಹಳ್ಳಿಯಲ್ಲಿ ಶ್ರೀ ನಂದಿ ಬಸವೇಶ್ವರಸ್ವಾಮಿಯ ಸಂಭ್ರಮದ ರಥೋತ್ಸವ
ಹುಳಿಯಾರು ಹೋಬಳಿ ನಂದಿಹಳ್ಳಿ ಗ್ರಾಮದಲ್ಲಿ ಭಕ್ತ ಸಾಗರದ ಸಂಭ್ರಮದ ನಡುವೆ ಶ್ರೀ ನಂದಿ ಬಸವೇಶ್ವರ ಸ್ವಾಮಿಯವರ ಮುತ್ತಿನ ವಾಹನ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ಗಂಗಾಪೂಜೆ, ಹಣ್ಣುಕಾಯಿ ಸೇವೆ, ಮಹಾಮಂಗಳಾರತಿ, ಪನಿವಾರ ಸೇವೆ ಮುಂತಾದ ಧಾರ್ಮಿಕ ಕೈಂಕರ್ಯ ನಡೆಯುವುದರ ಮೂಲಕ ಕಳೆದ ಐದು ದಿನಗಳಿಂದ ವೈಭವದಿಂದ ನಡೆಯುತ್ತಿದ್ದ ಶ್ರೀ ನಂದಿ ಬಸವೇಶ್ವರಸ್ವಾಮಿ ಜಾತ್ರೆಗೆ ಸೋಮವಾರ ವಿಧ್ಯುಕ್ತವಾಗಿ ತೆರೆ ಎಳೆಯಲಾಯಿತು.
ಧ್ವಜಾರೋಹಣದೊಂದಿಗೆ ಪ್ರಾರಂಭವಾದ ಐದು ದಿನಗಳ ಕಾಲದ ಜಾತ್ರಾ ಮಹೋತ್ಸವದಲ್ಲಿ ಶ್ರೀಆಂಜನೇಯಸ್ವಾಮಿಯವರಿಗೆ ಕುಂಕುಮಾರ್ಚನೆ, ಅಭಿಷೇಕ, ಮಂಗಳಾರತಿ, ಬಿಲ್ಲುಗೂಡು ಸೇವೆ, ಮಹಾಮಂಗಳಾರತಿ, ಪಾನಕ ಫನಿವಾರ ವಿನಿಯೋಗ, ಶ್ರೀ ನಂದಿ ಬಸವೇಶ್ವರಸ್ವಾಮಿಯವರಿಗೆ ರುದ್ರಾಭಿಷೇಕ, ದೇವತೆಗಳ ಕೂಡು ಭೇಟಿ, ನೂರೊಂದು ಎಡೆ ಸೇವೆ, ಗುರುಪರುವಿನೊಂದಿಗೆ ಅನ್ನ ಸಂತರ್ಪಣೆ, ದೋಣಿಸೇವೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಶ್ರೀ ಶನೇಶ್ವರಸ್ವಾಮಿ, ನಿರುಗಲ್ ಶ್ರೀ ದುರ್ಗಮ್ಮ, ರಾಯರಹಟ್ಟಿ ಶ್ರೀ ಕ್ಯಾತಲಿಂಗೇಶ್ವರಸ್ವಾಮಿ, ಶ್ರೀ ಆಂಜನೇಯಸ್ವಾಮಿ, ಶ್ರೀ ಚೌಡಮ್ಮ ದೇವರುಗಳು ಆಗಮಿಸಿದ್ದು ಬೆಂಗಳೂರಿನ ವೀರಭದ್ರೇಶ್ವರ ಕುಣಿತ, ಸಿಂಗಾಪುರದ ಡೊಳ್ಳುಕುಣಿತ, ತಿಪಟೂರಿನ ನಾಸಿಕ್ ಡೋಲ್, ಸಿಡಿಮದ್ದು, ನಗಾರಿ ಹಾಗೂ ಮಂಗಳವಾದ್ಯಗಳು ವಿಷೇಶ ಮೆರಗು ತಂದಿತ್ತು.
ಬೆಸ್ಕಾಂನ ಎನ್.ಬಿ.ಗವಿರಂಗಯ್ಯ, ಗ್ರಾಮದ ಯಜಮಾನರಾದ ಗವಿಯಪ್ಪ, ತಾ.ಪಂ.ಉಪಾಧ್ಯಕ್ಷೆ ಶಾಂತಮ್ಮ, ಮಲ್ಲೇಶಯ್ಯ, ಕೃಷಿ ಇಲಾಖೆ ಎನ್,ಬಿ.ಶಿವಣ್ಣ, ಗುತ್ತಿಗೆದಾರ ಎನ್.ಜಿ.ಶಿವಣ್ಣ, ಚನ್ನಗಿರಿ ಬಸವಮಲ್ಲಯ್ಯ, ಎಸ್.ಎಸ್.ಮರುಳಾರಾಧ್ಯರು, ಹಾಲೇನಹಳ್ಳಿ ಬಸವರಾಜು, ಮುದಿಯಪ್ಪ ಬಸವರಾಜು, ಶ್ರೀಮತಿ ವಾಣಿ, ಈಶ್ವರಪ್ಪ, ಮೂಲೆಮನೆ ಈಶ್ವರಯ್ಯ, ಚಿಕ್ಕರಿಯಪ್ಪ ಯಲ್ಲಪ್ಪ, ಅಮ್ಮನಹಟ್ಟಿ ಚಿಕ್ಕಣ್ಣ, ಶಾಂತರಾಜು ಮತ್ತಿತರ ಮುಖಂಡರುಗಳು ಭಾಗವಹಿಸಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ