ಇತ್ತಿಚೆಗಷ್ಟೆ ಅಪಘಾತಕ್ಕೀಡಾಗಿ ತನ್ನ ಕೈ ಹಾಗೂ ಕಾಲು ಕಳೆದುಕೊಂಡಿದ್ದ ಚಾಲಕನಿಗೆ ಖಾಸಗಿ ಬಸ್ಸಿನ ಏಜೆಂಟರ ಸೇವಾ ಛಾರಿಟಬಲ್ ಟ್ರಸ್ಟ್ ವತಿಯಿಂದ ಪರಿಹಾರ ಧನ ವಿತರಿಸಲಾಯಿತು.
ಕೊಂಡ್ಲಿಕ್ರಾಸ್ ಸಮೀಪ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಮರ್ಚಂಟ್ ಬಸ್ ಚಾಲಕ ವಾಜೀದ್ ಎಂಬುವವರು ಕೈ ಹಾಗೂ ಕಾಲು ಕಳೆದುಕೊಂಡಿದ್ದು ಹುಳಿಯಾರಿನ ಖಾಸಗಿ ಬಸ್ ಏಜೆಂಟರ ಸಂಘದ ಪದಾಧಿಕಾರಿಗಳು ಈತನ ಆರೋಗ್ಯ ಚೇತರಿಕೆಗೆ ಚಿಕಿತ್ಸೆಗೆ ಸಹಕರಿಸಿದರಲ್ಲದೆ ಸದ್ಯದ ಪರಿಸ್ಥಿತಿಯಲ್ಲಿ ಸಂಸಾರ ನಿರ್ವಹಣೆಗಾಗಿ ಮಾನವೀಯತೆ ದೃಷ್ಠಿಯಿಂದ ಈತನ ಪತ್ನಿ ರೇಷ್ಮಾಬಾನು ಅವರಿಗೆ 3 ಸಾವಿರ ರು. ನಗದು ಹಣವನ್ನು ಪರಿಹಾರವಾಗಿ ನೀಡಿ ಇತರರಿಗೆ ಮಾದರಿಯಾಗಿದ್ದಾರೆ.
ಬಸ್ ಎಜೆಂಟರ ಸಂಘದ ಅಧ್ಯಕ್ಷ ಎಂ.ವಿ.ಲೋಕೇಶ್, ಖಜಾಂಜಿ ಎಚ್.ಕೆ.ವಿಶ್ವನಾಥ್, ಕಾರ್ಯದರ್ಶಿ ಮಹಮದ್ ಇಂತಿಯಾಜ್, ಉಪಾಧ್ಯಕ್ಷ ಕುಮಾರ್, ಎಚ್.ಎನ್.ರಾಘವೇಂದ್ರ, ಮೋಹನ್ ಕುಮಾರ್, ರಾಮಚಂದ್ರ, ರೇಣುಕ ಅವರು ಪರಿಹಾರ ವಿತರಣೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ