ಹುಳಿಯಾರು ಬ್ರಹ್ಮಕುಮಾರೀಸ್ ನಿಂದ ಶಿವರಾತ್ರಿ ಕಾರ್ಯಕ್ರಮ---------------------------------------------------------ಹುಳಿಯಾರಿನಲ್ಲಿ ಶಿವರಾತ್ರಿ ಬಹಳ ಸಂಭ್ರಮದ ಹಬ್ಬ.ಈಶ್ವರನ ದೇವಾಲಯದಲ್ಲಿ ಇಡೀ ದಿನ ವಿಶೇಷ ಪೂಜಾ ಕಾರ್ಯಕ್ರಮ .ಹಾಗೆಯೆ ನಮ್ಮೂರಿನ ಪ್ರಜಾಪಿತಾ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕೂಡ ಶಿವರಾತ್ರಿ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು. ಕಳೆದ 3 ವರ್ಷಗಳಿಂದ ಶಿವರಾತ್ರಿ ದಿನ ಈಶ್ವರನ ದೇವಾಲಯದಲ್ಲಿ ಮಹಾಶಿವರಾತ್ರಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಆಧ್ಯಾತ್ಮಿಕ ವಿಚಾರಧಾರೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.ಅಲ್ಲದೆ ಮಾರನೆಯ ದಿನ ಊರಿನ ರಾಜಬೀದಿಗಳಲ್ಲಿ ಹತ್ತಾರು ಶಿವಲಿಂಗಗಳ ರಥಯಾತ್ರೆ ನಡೆಸಿಕೊಂಡು ಬರುತ್ತಿದ್ದು ಅದರಂತೆ ಈ ಬಾರಿಯೂ ಸಹ ಬ್ರಹ್ಮಕುಮಾರಿ ಗೀತಕ್ಕನವರು ಇದನ್ನು ಮುಂದುವರಿಸಿ ಮತ್ತಷ್ಟು ಉತ್ಸಾಹದಿಂದ ನಡೆಸಿದರು. ಶಾಸಕ ಸಿ.ಬಿ.ಸುರೇಶ್ ಬಾಬು ಅವರು ಭಾಗವಹಿಸಿದ್ದುದು ವಿಶೇಷವಾಗಿತ್ತು. ಶಿವಲಿಂಗಗಳನ್ನು ಊರಿನ ಎಲ್ಲಾ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಮೆರವಣಿಗೆಯಲ್ಲಿ ಕೆಂಕೆರೆ, ಎಣ್ಣೇಗೆರೆ, ಹುಳಿಯಾರು, ಬೊಮ್ಮೇನಹಳ್ಳಿ, ಸಿಂಗಾಪುರ ಮುಂತಾದ ಭಾಗಗಳಿಂದ ಅಣ್ಣಂದಿರು ಹಾಗೂ ಅಕ್ಕಂದಿರು ಸೇರಿಕೊಂಡಿದ್ದರು. ರಂಗನಾಥ ಶೆಟ್ಟರು, ಬ್ಯಾಂಕ್ ಮರುಳಯ್ಯ, ದಾಸಪ್ಪ, ಉಪ್ಪನಕಟ್ಟೆ ಶಿವಕುಮಾರ್, ಕೃಷ್ಣಮೂರ್ತಾಚಾರ್ ಇವರುಗಳು ಮೆರವಣಿಗೆಯ ಮುಂಚೂಣಿಯಲಿದ್ದರು. ಹೋಬಳಿಯ ಸಿಂಗಾಪುರ ಗ್ರಾಮದ ಡೊಳ್ಳುಕುಣಿತ ಹಾಗೂ ಕಂಸಾಳೆ, ಪೂರ್ಣಕುಂಭ ಕಳಸ, ಮಂಗಳವಾದ್ಯದ ಜೊತೆಗೆ ಗೀತಕ್ಕನವರು ಶಿವನ ಮಹಿಮೆಯ ಬಗ್ಗೆ ಪ್ರಚಾರ ಮಾಡಿ ಸಾರ್ವಜನಿಕರಲ್ಲಿ ಶಿವನ ಮೇಲೆ ಒಲುಮೆ ಉಂಟುಮಾಡಿದರು. ನಂತರ ಇಲ್ಲಿನ ವಿಜಯನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಬ್ರಹ್ಮಕುಮಾರಿ ನೂತನ ಕಟ್ಟಡದಲ್ಲಿ ಧಾರ್ಮಿಕ ಸಮಾರಂಭ ಹಮ್ಮಿಕೊಳ್ಳಲಾಯಿತು. ಹೊಸದುರ್ಗ, ಚಿ.ನಾ.ಹಳ್ಳಿ, ತುರುವೇಕೆರೆ, ಹಿರಿಯೂರು ಮುಂತಾದ ಪಟ್ಟಣಗಳ ಪ್ರಜಪಿತಾ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಅಕ್ಕಂದಿರು ಜ್ಯೋತಿಸ್ವರೂಪನಾದ ಪರಮಾತ್ಮನ ಬಗ್ಗೆ ಹಾಗೂ ಮಹಾಶಿವರಾತ್ರಿಯ ಮಹಾ ಬೆಳಗು ಬಗ್ಗೆ ಆಧಾತ್ಮಿಕ ಉಪನ್ಯಾಸ ನೀಡಿದರು.ಉಪವಾಸ ಯಾಕೆ ಮಾಡಬೇಕು, ಜಾಗರಣೆಯ ಅಂದರೆ ಏನು ಎಂಬ ಮಹತ್ವ ಸಾರಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ