ಹುಳಿಯಾರಿನ ಶಿವಲಿಂಗಕ್ಕೆ ಸೂರ್ಯ ಕಿರಣ ಸ್ಪರ್ಶ
----------------------------
ಹುಲಿಯಾರಿನ್ ಶಿವಲಿಂಗಕ್ಕೆ ಸೂರ್ಯ ಕಿರಣ ಸ್ಪರ್ಶ. ಪುರಾತನ ಈಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿಯ ಪ್ರಣಾಮದಾಟ. ಮನುಜ ಭಕ್ತಮಹಾಶಯರಿಗೆ ಸೂರ್ಯನ ಭಕ್ತಿ ಸಮರ್ಪಣೆಯ ಮಹಾದರ್ಶನ. ದೇವಸ್ಥಾನ ಶಿಲ್ಪಿಯ ವಾಸ್ತುಶಿಲ್ಪದ ಚಾಕುಚಕ್ಯತೆಯ ಅನಾವರಣ.ಇವಿಷ್ಟು ನಡೆದಿದ್ದು ಇಲ್ಲಿನ ಈಶ್ವರ ದೇವಾಲಯದಲ್ಲಿ.
ಹೌದು! ಹೊಯ್ಸಳರ ಕಾಲದ ಇಲ್ಲಿನ ಈಶ್ವರ ದೇವಾಲಯದಲ್ಲಿ ಫೆ.27 ರ ಶನಿವಾರ ಹಂತ ಹಂತವಾಗಿ ಸೂರ್ಯನ ಕಿರಣಗಳು ಶಿವಲಿಂಗಕ್ಕೆ ನಮನ ಸಲ್ಲಿಸಿದವು. ಸೂರ್ಯ ದಕ್ಷಿಣಾಯದಿಂದ ಉತ್ತರಾಯಣಕ್ಕೆ ಚಲಿಸುವ ಕ್ಷಣದಲ್ಲಿ ಶಿವಲಿಂಗದ ಮೇಲೆ ಬೀಳುವಂತೆ ಮಾಡುವ ಅಂದಿನ ವಾಸ್ತುಶಿಲ್ಪಕಲೆಯಿಂದಾಗಿ ಇಂತಹ ಚಮತ್ಕಾರವನ್ನು ಎಲ್ಲರೂ ವೀಕ್ಷಿಸುವಂತಾಯಿತು. ಅದೂ ಸಾಮಾನ್ಯವಾಗಿ ಭಕ್ತರು ಬಸವನ ಕೊಡಿನಿಂದ ಶಿವನನ್ನು ವೀಕ್ಷಿಸಿ ಭಕ್ತಿ ಸಮರ್ಪಿಸುವ ರೀತಿಯಲ್ಲಿಯೇ ಸೂರ್ಯನ ಕಿರಣಗಳು ಬಸವನ ಕೊಡಿನಿಂದ ಹಾದು ಹೋಗಿ ಶಿವಲಿಂಗದ ಮೇಲೆ ಬೀಳುವ ದೃಶ್ಯ ಮನಮೋಹಕ.
ಪ್ರತಿವರ್ಷ ಫೆಬ್ರವರಿ-ಮಾರ್ಚ್ ಮಾಹೆಯಲ್ಲಿ ಸಂಭವಿಸುವ ಈ ಕೌತುಕವನ್ನು ಈ ಬಾರಿಯೂ ಅಪಾರ ಭಕ್ತರು ನೋಡಿ ಪುಳಕಿತಗೊಂಡರು.ಈ ದೃಶ್ಯವನ್ನು ಸೆರೆ ಹಿಡಿದು ಪತ್ರಿಕೆಗೆ ನೀಡಿದವರು ಸ್ಟೂಡಿಯೋ ಜಯಣ್ಣ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ