ನಾವು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಬುದಕ್ಕಿಂತ ನಾವು ಎಷ್ಟು ಸಾಧನೆ ಮಾಡಿದ್ದೇವೆ ಎಂಬುದೇ ಮುಖ್ಯವಾಗಿದ್ದು ಮಹಿಳೆಯರು ಸಾಧನೆಯ ಮೂಲಕ ಗುರುತಿಸಿಕೊಳ್ಳುವಂತಾಗಬೇಕು ಎಂದು ಹುಳಿಯಾರು ಪಿಎಸ್ಐ ಶ್ರೀಮತಿ ಪಾರ್ವತಿ ಎನ್ ಯಾದವ್ ಕಿವಿಮಾತು ಹೇಳಿದರು.A
ಹುಳಿಯಾರಿನ ಬಸವೇಶ್ವರ ಪ್ರೌಢಶಾಲೆಯಲ್ಲಿ ಬಸವೇಶ್ವರ ನಗರ, ಇಂದಿರಾನಗರ ಮತ್ತು ಆಝಾದ್ ನಗರಗಳ ಸ್ತ್ರೀಶಕ್ತಿ ಸಂಘಗಳು, ಸೃಜನಾ ಮಹಿಳಾ ಸಂಘಟನೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಇತ್ತೀಚೆಗೆ ಮಹಿಳೆಯರು ದುಡಿಯುವ ನೆಪದಿಂದಲ್ಲಾದರೂ ಮನೆಯಿಂದ ಹೊರಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಅದರಲ್ಲೂ ಈ ಕಾರ್ಯಕ್ರಮಕ್ಕೆ ಮುಸ್ಲೀಂ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಸೇರಿರುವುದು ಅಭಿನಂದನೀಯ ಎಂದರು.
ಸೃಜನಾ ಸಂಘಟನೆಯ ಕಾರ್ಯದರ್ಶಿ ಎನ್.ಇಂದಿರಮ್ಮ ಅವರು ವಿಶ್ವ ಮಹಿಳಾ ದಿನದ ಮಹತ್ವ ಕುರಿತು ಮಾತನಾಡುತ್ತ ಸಮಾಜದಲ್ಲಿ ಮಹಿಳೆತರ ಪ್ರಾಮುಖ್ಯತೆ ಬಹಳವಿದ್ದು ಮಹಿಳೆ ಮನೆಯಲ್ಲಿ ಇಲ್ಲದಿದ್ದರೆ ಎಲ್ಲವೂ ಅಸ್ತವ್ಯಸ್ಥವಾಗುತ್ತದೆ.ಒಂದು ವರ್ಷಕ್ಕೆ ಒಂದು ದಿನ ಮಾತ್ರವೇ ಮಹಿಳಾ ದಿನವಲ್ಲ. ಪ್ರತಿ ದಿನವೂ ಮಹಿಳಾ ದಿನವೇ ಆಗಿರುತ್ತದೆ.ಒಟ್ಟಾರೆ ಮುಂದಿನ ದಿನದಲ್ಲಿ ಸ್ತ್ರೀಶಕ್ತಿ ಸಂಘಟನೆಗಳು ಮತ್ತು ಇತರ ಮಹಿಳಾ ಸಂಘಟನೆಗಳು ಒಗ್ಗೂಡುವ ಅಗತ್ಯವಿದೆ ಎಂದು ಹೇಳಿದರು.
ತುಮಕೂರು ವಿಜ್ಞಾನ ಕೇಂದ್ರದ ಕಾರ್ಯದರ್ಶಿ ರಾಮಕೃಷ್ಣಪ್ಪ ಅವರು ಮಾತನಾಡಿ ಸ್ವಸಹಾಯ ಸಂಘಗಳ ವಾರದ ಸಭೆಯ ಮಹತ್ವವನ್ನು ಹೇಳಿ, ಅರ್ಥಿಕ ಅಶಿಸ್ತನ್ನು ಸರಿಪಡಿಸಿಕೊಳ್ಳುವ ದಾರಿಗಳನ್ನು ಕಂಡು ಕೋಳ್ಳಬೇಕಾದ ಅಗತ್ಯದ ಬಗ್ಗೆ ವಿವರಿಸಿದರು.
ತಾಲೂಕು ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಪೂರ್ಣಮ್ಮ ಅವರು ಮಾತನಾಡಿ ಸಂಘದ ಪ್ರತಿಯೊಬ್ಬರೂ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರಲ್ಲದೆ, ಕುಟುಂಬದ ಗಂಡು-ಹೆಣ್ಣು ಒಟ್ಟಿಗೆ ಹೋದಾಗ ಯಶಸ್ಸು ತಾನಾಗಿಯೇ ಸಿಗುತ್ತದೆ. ಮುಂದೆ ಇಲ್ಲಿನ ಎಲ್ಲಾ ಸಂಘಗಳು ಒಂದೇ ವೇದಿಕೆ ಸೇರಲು ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ತಾ.ಪಂ.ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ರಮಾದೇವಿ, ವಿಜ್ಞಾನ ಶಿಕ್ಷಕಿ ವಿದ್ಯಾ ಕುಂಚನೂರು, ಬೀಡಿ ಕಾರ್ಮಿಕರ ಸಂಘಟನೆಯ ಶ್ರೀಮತಿ ಹಸೀನಾ, ಶ್ರೀಮತಿ ಪರ್ವೀನ್ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ