ವಿಷಯಕ್ಕೆ ಹೋಗಿ

ಕಾರೇಹಳ್ಳಿಯ ಶ್ರೀ ರಂಗನಾಥಸ್ವಾಮಿ ಜಾತ್ರೆ











ಕಾರೇಹಳ್ಳಿಯ ಶ್ರೀ ರಂಗನಾಥಸ್ವಾಮಿ ಜಾತ್ರೆ--------------------------------- ಹುಳಿಯರು ಹೋಬಳಿ ಕಾರೇಹಳ್ಳಿ ಅಂದ್ರೆ ದನಗಳ ಜಾತ್ರೆಗೆ ಭಾರಿ ಪ್ರಸಿದ್ದಿ.ಕಾರೇಹಳ್ಳಿಗೂ ದನಗಳಿಗೂ ಅವಿನಾಭಾವ ಸಂಬಂಧ. ಪ್ರತಿ ಭಾನುವಾರ ಇಲ್ಲಿ ದನಗಳ ಸಂತೆ ನಡೆಯುವುದರಿಂದ ಹಾಗು ಪ್ರತಿ ವರ್ಷ ನಡೆಯುವ ಶ್ರೀ ರಂಗನಾಥಸ್ವಾಮಿ ರಥೋತ್ಸವದ ಸಮಯದಲ್ಲಿ ದನಗಳ ಜಾತ್ರೆಯು ನಡೆಯುತ್ತ ಬಂದಿರುವುದರಿಂದಲ್ಲೂ ಕಾರೇಹಳ್ಳಿ ಅಂದರೆ ದನಗಳಜಾತ್ರೆ ಅಂತಲೇ ಹೆಸರುವಾಸಿ. ಹುಳಿಯಾರು ಶಿರಾ ರಸ್ತೆಯಲ್ಲಿ ಹುಳಿಯಾರಿನಿಂದ 8 ಕಿಮೀ ದೂರವಿರುವ ಕಾರೇಹಳ್ಳಿ ಧಾರ್ಮಿಕ ಕ್ಷೇತ್ರವಾಗಿ ಕೂಡ ಪ್ರಸಿದ್ದಿ ಹೊಂದಿದೆ.ಬೋರನಕಣಿವೆ ಜಲಾಶಯದ ಹಿನ್ನೀರಿನ ಪ್ರಶಾಂತ ಅಂಗಳದಲ್ಲಿ ದೇವಾಲಯವಿದ್ದು ಇಲ್ಲಿ ಒಡಮೂಡಿರುವ ರಂಗನಾಥಸ್ವಾಮಿ ಈ ಭಾಗದ ಬಹುಜನರ ಆರಾಧ್ಯ ದೈವ.ಈತ ಭಕ್ತರ ಕರೆಗೆ ಓಗೂಡುವುನೆಂತಲ್ಲೂ ಇಷ್ಟಾರ್ಥಗಳ ಸಿದ್ದಿಸುವುನೆಂತಲೂ ಲೋಕ ಪ್ರಸಿದ್ದಿ ಹೊಂದಿದ್ದು ಪ್ರತಿ ವರ್ಷ ಫಾಲ್ಗುಣ ಮಾಸದ ಶುದ್ದ ದಶಮಿಯಿಂದ ಜಾತ್ರ ಮಹೋತ್ಸವ ಹಾಗೂ ಅನ್ನ ಸಂತರ್ಪಣೆ ಅನುಚಾನವಾಗಿ ನಡೆಯುತ್ತ ಬಂದಿದೆ. 11 ದಿನಗಳ ಕಾಲ ನಡೆಯಲಿರುವ ಜಾತ್ರಾ ಮಹೋತ್ಸವ ಕಳೆದ 79 ವರ್ಷಗಳಿಂದಲೂ ಸತತವಾಗಿ ನಡೆಯುತ್ತಾ ಬಂದಿದ್ದು ಶ್ರೀ ರಂಗನಾಥಸ್ವಾಮಿ ರಥೋತ್ಸವದಷ್ಟೆ ದನಗಳ ಜಾತ್ರೆಯು ಐತಿಹ್ಯ ಹೊಂದಿದ್ದು ಜಿಲ್ಲೆಯಲ್ಲಿ ಉತ್ತಮ ರಾಸು ದೊರೆಯುವ ಸ್ಥಳವಾಗಿ ಪ್ರಸಿದ್ದಿ ಹೊಂದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಶ್ರೀ ರಂಗನಾಥಸ್ವಾಮಿ ರಥೋತ್ಸವ ಮತ್ತು ದನಗಳ ಜಾತ್ರೆಯು ಫೆ.23 ರ ಮಂಗಳವಾರದಿಂದ ಮಾ.5 ರ ಶುಕ್ರವಾರ ವರೆವಿಗೆ ವಿಜೃಂಭಣೆಯಿಂದ ಜರುಗಲಿದ್ದು ಎಲ್ಲೆಲ್ಲೂ ಜಾತ್ರಾ ಸಂಭ್ರಮ ಮನೆ ಮಾಡಿದೆ. . ಈ ಭಾಗದ ಜನರು ತಮ್ಮ ದನಗಳನ್ನು ಮಾರಾಟ ಮಾಡಲು ಅಥವಾ ಕೊಳ್ಳುವುದಿದ್ದರೂ ಇಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆ ಅಥವಾ ವರ್ಷಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿಯೇ. ಜಾತ್ರೆಯ ವಿಶಾಲ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ರಾಸುಗಳನ್ನು ಕೊಳ್ಳಲು ಈ ಭಾಗವಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದ ರೈತರು ಆಗಮಿಸುವ ಹಿಂದಿನಿಂದಲೂ ವಾಡಿಕೆಯಾಗಿದೆ.ಹಾಸನ,ಮೈಸೂರು,ಮಂಡ್ಯ,ಶಿವಮೊಗ್ಗ,ದಾವಣಗೆರೆ,ಚಿತ್ರದುರ್ಗ ಹೀಗೆ ನಾನಾ ಜಿಲ್ಲೆಯ ರೈತರು ಆಗಮಿಸಿ ತಮ್ಮ ಅನೂಕೂಲಕ್ಕೆ ತಕ್ಕಂತ ರಾಸುಗಳನ್ನು ಕೊಳ್ಳುತ್ತಾರೆ.ದನಗಳ ಬೆಲೆ ಕೂಡ ಕಡಿಮೆಯೇನಿರುವುದಿಲ್ಲ. 5 ಸಾವಿರದಿಂದ 1ಲಕ್ಷದವರೆಗಿನ ಬೆಲೆಯ ದನಗಳು ಇಲ್ಲಿ ಮಾರಾಟವಾಗುತ್ತದೆ.ರೈತಾಪಿ ವರ್ಗದವರಿಗೆ ಉತ್ತಮ ತಳಿಗಳ ಆಯ್ಕೆಗೆ ಸೂಕ್ತಸ್ಥಳವಾಗಿದೆ ಜಾತ್ರಾ ಸಮಿತಿಯಿಂದ ಜನ ಹಾಗೂ ಜಾನುವಾರುಗಳಿಗೆ ವಿದ್ಯುತ್ ಹಾಗು ಉತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿತ್ತದೆ.ಬೇಸಿಗೆಯಾದರೂ ಬೋರನಕಣಿವ ಹಿನ್ನೀರಿನ ಜಲಾಶಯದ ಅಂಗಳದಲ್ಲಿರುವುದರಿಂದ ಹಾಗೂ ವನ ಪ್ರದೇಶದಿಂದ ಆವೃತವಾಗಿರುವುದರಿಂದ ನೀರು ನೆರಳಿಗೆ ಆತಂಕವಿಲ್ಲ.ಮುಂಗಾರು ಪ್ರಾರಂಭಕ್ಕೆ ಮುನ್ನ ನಡೆಯುವ ತಾಲ್ಲೂಕಿನ ಏಕೈಕ ದನದ ಜಾತ್ರೆಯಾಗಿರುವುದರಿಂದ ವಹಿವಾಟು ಹೆಚ್ಚಾಗಿ ನಡೆಯುತ್ತದೆ.
2010ರ ಫೆ23 ರಿಂದ ಮಾರ್ಚ್ 5 ರವರೆಗೆ ನಡೆಯಲಿರುವ ಕಾರ್ಯಕ್ರಮ ಇಂತಿದೆ. ಫೆ.23 ರಂದು ಕಂಕಣ, ಅಂಕುರಾರ್ಪಣೆ, ಧ್ವಜಾರೋಹಣ, ಉಯ್ಯಾಲೋತ್ಸವ, ಫೆ.24 ರಂದು ಗಜಾರೋಹಣ, ಫೆ.25 ರಂದು ಗರುಡ ವಾಹನೋತ್ಸವ, ಫೆ.26 ಬ್ರಹ್ಮ ರಥೋತ್ಸವ, ಫೆ.27 ರಂದು ಅಡ್ಡಪಲ್ಲಕ್ಕಿ ಉತ್ಸವ, ಫೆ.28 ರಂದು ಮಂಗಳ ಸ್ನಾನ, ಶಯನೋತ್ಸವ, ಮಾ.1 ರಂದು ಸರ್ಪವಾಹನೋತ್ಸವ, ಮಾ.2 ರಂದು ಚಂದ್ರಮಂಡಲೋತ್ಸವ, ಮಾ.3 ರಂದು ಪುಷ್ಪವಾಹನೋತ್ಸವ, ಮಾ.4 ರಂದು ಸೂರ್ಯಮಂಡಲೋತ್ಸವ, ಮಾ.5 ರಂದು ಪಂಚಾಮೃತಾಭಿಷೇಕ, ಮಹಾಮಂಗಳಾರತಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.ಜಾತ್ರೆಯ ಅಂಗವಾಗಿ ಪ್ರತಿದಿನ ಅನ್ನಸಂತರ್ಪಣೆಯಿರುತ್ತದೆ.
ಕಾರೇಹಳ್ಳಿ ಶ್ರೀರಂಗನಾಥಸ್ವಾಮಿ ವೈಭವದ ರಥೋತ್ಸವ
------------------------------------------------------------------
ಪುರಾಣ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿಯ ಮೂಲಸ್ಥಾನದಲ್ಲಿ ದನಗಳ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಫೆ.೨೬ರ ಶುಕ್ರವಾರದಂದು ಸಂಭ್ರಮ ಹಾಗೂ ವೈಭವದಿಂದ ಜರುಗಿತು. ಕಳೆದ ಎರಡು ದಿನದಿಂದ ಜಾತ್ರೆ ಅಂಗವಾಗಿ ಕಂಕಣ, ಅಂಕುರಾರ್ಪಣೆ, ಧ್ವಜಾರೋಹಣ, ಉಯ್ಯಾಲೋತ್ಸವ, ಗಜಾರೋಹಣ, ಗರುಡ ವಾಹನೋತ್ಸವ, ಸಂತರ್ಪಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದಿದ್ದು ಇಂದು ಮುಂಜಾನೆಯಿಂದಲೆ ರಥೋತ್ಸವದ ಪೂಜಾ ಕೈಂಕರ್ಯ ನಡೆಯಿತು.ವಿಪ್ರರುಗಳು ಮೂಲ ದೇವಸ್ಥಾನದಿಂದ ಮಂಗಳವಾಧ್ಯ ಹಾಗೂ ಪೂರ್ಣಕುಂಭದೊಂದಿಗೆ ಶ್ರೀ ಸ್ವಾಮಿಯವರನ್ನು ಸಹಸ್ರಾರು ಭಕ್ತರು ಉದ್ಘೋಷದೊಂದಿಗೆ ಕರೆತಂದು ರಂಗು ರಂಗಿನ ಬಾವುಟ, ತಳಿರು ತೋರಣ, ಬಣ್ಣ ಬಣ್ಣದ ಹೂವಿನ ಹಾರದಲ್ಲಿ ಸಿಂಗಾರಗೊಂಡ ಸರ್ವಾಲಂಕೃಥ ರಥದಲ್ಲಿ ಶ್ರೀ ಸ್ವಾಮಿಯವರನ್ನು ಪ್ರತಿಷ್ಠಾಪಿಸಿ ಮಂಗಳವಾದ್ಯದೊಂದಿಗೆ ರಥೋತ್ಸವ ನೆರವೇರಿಸಿದರು ಸುಡುವ ಬಿಸಿಲನ್ನೂ ಲೆಕ್ಕಿಸದೆ ಬೆಳಿಗ್ಗೆಯಿಂದಲೇ ಕಿಕ್ಕಿರಿದು ನೆರೆದಿದ್ದ ಭಕ್ತರು ಜಯಘೋಷದೊಂದಿಗೆ ತೇರನ್ನೆಳೆದು ಸಂಭ್ರಮಿಸಿದರು. ಎಲ್ಲೆಲ್ಲೂ ಜಾತ್ರೆಯ ಸಡಗರ ತುಂಬಿ ತುಳುಕುತಿತ್ತು. ಸುಮಾರು ಐವತ್ತು ಅಡಿಗೂ ಎತ್ತರದಲ್ಲಿದ್ದ ಬ್ರಹ್ಮ ರಥವನ್ನು ಭಕ್ತಿಭಾವದಿಂದ ವಸಂತಬ್ರಾಹ್ಮಣರ ಸಹಿತ ಅಪಾರ ಭಕ್ತಾಧಿಗಳು ಎಳೆದರೆ ಮತ್ತೊಂದು ಕಡೆ ಕೆಲ ಭಕ್ತ ರಥದ ಅನತಿ ದೂರದಲ್ಲಿ ನಿಂತು ಬಾಳೆಹಣ್ಣುಗಳನ್ನು ರಥಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ರಥೋತ್ಸವ ಜರುಗಿದ ತತ್ ಕ್ಷಣವೇ ಮಹಿಳೆಯರು ಸೇರಿದಂತೆ ಅನೇಕ ಭಕ್ತಾಧಿಗಳು ಶ್ರೀ ಸ್ವಾಮಿಯವರಿಗೆ ಹಣ್ಣುಕಾಯಿ ಮಾಡಿಸಿದರು.ದಸೂಡಿಯ ದಿ.ಕೊಟ್ಟಿಗೆ ರಂಗೇಗೌಡರ ಸಹೋದರರು ಮತ್ತು ಮಕ್ಕಳಿಂದ ಬ್ರಾಹ್ಮಣರಿಗೆ ಅನ್ನಸಂತರ್ಪಣೆ ನಡೆಯಿತು.ಜಿ.ಎಂ.ಸೀನಪ್ಪ ಶಟ್ಟರು ಮತ್ತು ಜಿ.ಎಸ್.ಸತ್ಯನಾರಾಯಣ ಶೆಟ್ಟರು ಇವರುಗಳಿಂದ ಆರ್ಯವೈಶ್ಯ ಮಂಡಳಿ ಹಾಗೂ ದೇವಾಲಯ ಸಮಿತಿಯಿಂದ ಮಹಾಜನತೆಗೆ ಅನ್ನ ದಾಸೋಹ ನಡೆಯಿತು. ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ತಹಸೀಲ್ದಾರ್ ಟಿ.ಸಿ.ಕಾಂತರಾಜು,ಜಿಪಂ ಸದಸ್ಯ ಈರಯ್ಯ,ದೇವಸ್ಥಾನ ಕಮಿಟಿ ಸಂಚಾಲಕ ಎಂ.ಕೆ.ಕಲ್ಲೇಗೌಡರು ಸೇರಿದಂತೆ ಪೂಜೆ ಸಲ್ಲಿಸಿದರು. ಧರ್ಮದರ್ಶಿಗಳಾದ ಆರ್.ರಂಗಸ್ವಾಮಿ, ಜಿ.ಎಂ.ನೀಲಕಂಠಯ್ಯ, ಜಿ.ಸಿ.ದೊಡ್ಡಯ್ಯ, ಗ.ಕರಿಯಪ್ಪ, ಬಿ.ಆರ್.ರಂಗನಾಥ್, ಜಿ.ಎಸ್.ಸತ್ಯನಾರಾಯಣ ಶ್ರೇಷ್ಠಿ, ರಾಂಜೀನಾಯ್ಕ, ಎಂ.ಆರ್.ವಿನೋದಮ್ಮ, ಅರ್ಚಕ ಎಂ.ಆರ್.ಪುಟ್ಟಯ್ಯ ಸೇರಿದಂತೆ ಭಕ್ತರ ಮಹಾಪೂರವೇ ಪಾಲ್ಗೊಂಡಿತ್ತು.ಬ್ರಹ್ಮರಥೋತ್ಸವಕ್ಕೂ ಮುನ್ನಾದಿನದಿಂದ ರಾಸುಗಳು ಸೇರುವುದು ಲಾಗಾಯ್ತಿನಿಂದಲ್ಲೂ ನಡೆಯುತ್ತ ಬಂದಿದ್ದು ಇಲ್ಲಿನ ದನಗಳ ಜಾತ್ರೆ ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿದ್ದು ವಿವಿಧ ಜಿಲ್ಲೆಗಳಿಂದ ರಾಸುಗಳನ್ನು ಕೊಳ್ಳಲು ಹಾಗು ಮಾರಾಟ ಮಾಡಲು ರೈತರು ಆಗಮಿಸುವ ವಾಡಿಕೆಯಿದೆ.ನಿರೀಕ್ಷೆಗೂ ಮೀರಿದ ದನಗಳು ಬಂದಿದ್ದು ರಾಸುಗಳ ಬೆಲೆ ಗಗನಕ್ಕೇರಿದೆ. ಬ್ರಹ್ಮರಥೋತ್ಸವದ ದಿನದ ನಂತರ ಸುತ್ತಮುತ್ತಲ ಭಾಗದಿಂದ ಇನ್ನಷ್ಟು ದನಗಳು ಮಾರಾಟ ಮಾಡಲು ಬರುವುದಿದ್ದು .ಮಾರ್ಚ್ ೫ ರವರೆಗೆ ಜಾತ್ರೆ ನಡೆಯಲಿದೆ.






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...

​ಬೋರನಕಣಿವೆ ಸಾಯಿಧಾಮದಲ್ಲಿ ಕಣಿವೆ ಶಂಕರನ ಪ್ರಾಣ ಪ್ರತಿಷ್ಠಾಪನೆ: ಉಪಲೋಕಾಯುಕ್ತ ಬಿ. ವೀರಪ್ಪ ಭಾಗಿ

​ಬೋರನಕಣಿವೆ ಸಾಯಿಧಾಮದಲ್ಲಿ ಕಣಿವೆ ಶಂಕರನ ಪ್ರಾಣ ಪ್ರತಿಷ್ಠಾಪನೆ: ಉಪಲೋಕಾಯುಕ್ತ ಬಿ. ವೀರಪ್ಪ ಭಾಗಿ ​ ಹುಳಿಯಾರು : ಸಮೀಪದ ಬೋರನಕಣಿವೆಯ ಸಾಯಿಧಾಮದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೇಷನ್ ಹಾಗೂ ಸೇವಾ ಚೇತನ ವತಿಯಿಂದ ಭಾನುವಾರ ' ನರ್ಮದೋದ್ಭವ ಕಣಿವೆ ಶಂಕರನ' ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಅತ್ಯಂತ ಸಡಗರದಿಂದ ನೆರವೇರಿತು. ಈ ಪವಿತ್ರ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಪಾಲ್ಗೊಂಡು ಶತ ನದಿಗಳ ಆವರಣ ಪೂಜೆಯನ್ನು ನೆರವೇರಿಸಿದರು.  ಬಳಿಕ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ದೇವಸ್ಥಾನಗಳ ಸ್ಥಾಪನೆಯಿಂದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುತ್ತದೆ. ಶಿವನು ನಾಡಿನ ಜನತೆಗೆ ಉತ್ತಮ ಆರೋಗ್ಯ, ಸುಬುದ್ಧಿ ಹಾಗೂ ಐಶ್ವರ್ಯವನ್ನು ಕರುಣಿಸಲಿ" ಎಂದು ಹಾರೈಸಿದರು. ​ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಕಣಿವೆ ಶಂಕರನ ದರ್ಶನ ಪಡೆದರು.  ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮಗಳ  ಭಕ್ತರು ಪಾಲ್ಗೊಂಡು ಪುನೀತರಾದರು.