ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪುರದ ಚನ್ನಬಸವಣ್ಣನ ಕಡೆಕಾರ್ತೀಕ ಮಹೋತ್ಸವದಲ್ಲಿ ರಾಗಿಮುದ್ದೆ ಊಟದ ವಿಶೇಷ

ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಪುರಾಣ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ಕೃತಿಕಾ ಮಹೋತ್ಸವವು ಸ್ವಾಮಿಯ ಮೂಲಸ್ಥಾನವಾದ ಪುರದಮಠದಲ್ಲಿ ಸೋಮವಾರ ಗ್ರಾಮದೇವತೆ ಶ್ರೀಕಾಳಿಕಾಂಭ ದೇವಿ ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ,ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ವೈಭವಯುತವಾಗಿ ನಡೆಯಿತು. 16ನೇ ಶತಮಾನದ ಸಂತ ಗೋಸಲ ಚನ್ನಬಸವಣ್ಣನವರ ತಪೋಕ್ಷೇತ್ರವೆಂದೇ ಖ್ಯಾತವಾಗಿರುವ ಪುರದ ಮಠದಲ್ಲಿ ಪ್ರತಿವರ್ಷದ ಕಾರ್ತಿಕ ಮಾಸದ ಪೂರ್ಣಿಮದಂದು ಈ ಕಾರ್ತಿಕ ಮಹೋತ್ಸವ ನಡೆಯುತ್ತದೆ. ಅದರಂತೆ ಸೋಮವಾರ ಬೆಳಿಗ್ಗೆ ಕೆಂಕೆರೆ ಗ್ರಾಮದಲ್ಲಿರುವ ಸ್ವಾಮಿಗೆ ವಿಶೇಷ ಪೂಜೆ ನಡೆಸಿ,ನಂತರ ಗ್ರಾಮದೇವತೆ ಕಾಳಮ್ಮ ಹಾಗೂ ಸ್ವಾಮಿಯವರನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದಲ್ಲದೆ, ಬಸವನ ಉತ್ಸವದೊಂದಿಗೆ ಮೂಲಸ್ಥಾನ ಪುರದಮಠಕ್ಕೆ ಕರೆದ್ಯೊಯಲಾಯಿತು. ಮೂಲಸ್ಥಾನದಲ್ಲಿರುವ ಸ್ವಾಮಿಯ ಮೂಲವಿಗ್ರಹಕ್ಕೆ ನಟರಾಜ್ ಪೌರೋಹಿತ್ಯದಲ್ಲಿ ಅಭಿಷೇಕ, ಮಾಡಿ ನಂತರ ಬಗೆಬಗೆ ಹೂಗಳಿಂದ ಸಿಂಗರಿಸಿ,ಮಧ್ಯಾಹ್ನ 1 ಗಂಟೆಗೆ ಪುರದಮಠದಲ್ಲಿ ಬಸವನ ಉತ್ಸವ ನಡೆಸಿ, ತಯಾರಿಸಿದ್ದ ಪ್ರಸಾದವನ್ನು ಸ್ವಾಮಿಯ ಗದ್ದಿಗೆ ಇರುವ ಪುರಾತನ ಗುಹೆಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ನೆರವೇರಿಸಿ ಬಂದ ನಂತರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಯಿತು. ರಾಗಿಮುದ್ದೆಸಾರಿನ ಊಟ : ಇಲ್ಲಿನ ವಿಶೇಷವೆಂದರೆ ಮಹೊತ್ಸವಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ರಾಗಿ

ಆಶಾಸತೀಶ್ ಅವರ ಹುಟ್ಟುಹಬ್ಬದ ಅಂಗವಾಗಿ ಉಚಿತ ಕಣ್ಣಿನ ಪೂರೆ ಶಸ್ತ್ರಚಿಕಿತ್ಸಾ ಶಿಬಿರ

ಹುಳಿಯಾರಿನ ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಬೆಂಗಳೂರಿನ ಕೆ.ವಿ.ಎಸ್. ಫ್ಯಾನ್ಸ್ ಛಾರಿಟಬಲ್ ಟ್ರಸ್ಟ್ ನವರು ಆಶಾಸತೀಶ್ ಅವರ ಹುಟ್ಟು ಹಬ್ಬದ  ಅಂಗವಾಗಿ ಉಚಿತ ಕಣ್ಣಿನ ಪೂರೆ ಶಸ್ತ್ರಚಿಕಿತ್ಸಾ ಶಿಬಿರ ನಡೆಸಿದರು.ರೋಟರಿ ಸಂಸ್ಥೆ ಅಧ್ಯಕ್ಷ ಗಂಗಾಧರರಾವ್,ರವೀಶ್ ವೈದ್ಯರುಗಳಾದ ಬ್ಯಾನರ್ಜಿ,ಸದಾಶಿವಯ್ಯ ಇತರರಿದ್ದಾರೆ.

ಹುಳಿಯಾರಿನಲ್ಲಿ ಅದ್ದೂರಿ ಹನುಮಜಯಂತಿ

      ಪಟ್ಟಣದ ಮಾರುತಿ ನಗರದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ದೇವಾಲಯ ಜಿರ್ಣೋದ್ದಾರ ಸಮಿತಿ ಹಾಗೂ ಭಕ್ತಾಧಿಗಳಿಂದ ಸ್ವಾಮಿಯ ಐದನೇ ವರ್ಷದ ಅದ್ದೂರಿ ಹನುಮಜಯಂತಿ ಮಹೋತ್ಸವ ಹಾಗೂ ಪ್ರಥಮ ವರ್ಷದ ಆಂಜನೇಯಸ್ವಾಮಿ ಮಹಾರಥೋತ್ಸವ ಶನಿವಾರದಂದುವಿಜೃಂಭಣೆಯಿಂದ ನಡೆಯಿತು.        ಇದರಂಗವಾಗಿ ಮುಂಜಾನೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ರಾಮಚಮ್ದ್ರ ಭಟ್ಟರ ನೇತೃತ್ವದಲ್ಲಿ ಪ್ರಾರಂಭಗೊಂಡು ಗಣಪತಿ ಪೂಜೆ,ನವಗ್ರಹ ಪೂಜೆ,ಆಂಜನೇಯಸ್ವಾಮಿಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ, ಆಂಜನೇಯ ಮಹಾಮಂತ್ರ ಜಪ ನಡೆದು ಪೂರ್ಣಾಹುತಿ, ಮಹಾಮಂಗಳಾರತಿ ನಂತರ ಸರ್ವಾಲಂಕೃತಗೊಡಿದ್ದ ಆಂಜನೇಯಸ್ವಾಮಿಯವರನ್ನು ಗ್ರಾಮದೇವತೆಗಳಾದ ಹುಳಿಯಾರಮ್ಮ ಹಾಗೂ ದುರ್ಗಮ್ಮನವರ ಸಾನಿಧ್ಯದಲ್ಲಿ ನೂತನ ರಥಕ್ಕೇರಿಸಲಾಯಿತು.ಸಡಗರ ಮತ್ತು ಸಂಭ್ರಮಗಳಿಂದ ಪಾಲ್ಗೊಂಡಿದ್ದ ಅಪಾರ ಭಕ್ತರು ಜಯಘೋಷದೊಂದಿಗೆ ರಥಕ್ಕೆ ಪೂಜೆ ಸಲ್ಲಿಸಿ, ಹಣ್ಣು ದವನ ಎಸೆದು ಪುನೀತ ಭಾವ ಹೊಂದಿದರು. ಅಲಂಕೃತ ರಥವನ್ನು ದೇವಾಲಯದ ಮುಂಭಾಗ ದಿಂದ  ರಾಮಗೋಪಾಲ್ ಸರ್ಕಲ್ ವರೆಗೆ ಎಳೆದು ತಂದರು. ಹನುಮನ ಮೂರ್ತಿಗೆ ಮಾಡಲಾಗಿದ್ದ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡರು. ದೇವಾಲಯದ ಆವರಣದಲ್ಲಿ ನಡೆದ ಅನ್ನಸಂತರ್ಪಣೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು           ಸಂಜೆ ದೇವಾಲಯದ ಆವರಣದಿಂದ ರಾಜಬೀದಿಯಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆ ನಡೆಯಿತು. ದಾವಣಗೆರೆಯ ಬಸವಕಲಾ ತಂಡದವರಿಂದ ನಂದಿಧ್ವಜಕ

ಹುಳಿಯಾರು ವಿವಿಧಡೆ ಹನುಮಜಯಂತಿ

ಹುಳಿಯಾರು: ಪಟ್ಟಣ ಸೇರಿದಂತೆ ವಿವಿಧಡೆಯಲ್ಲಿ ನಡೆದ ಹನುಮ ಜಯಂತಿ ಅಂಗವಾಗಿ ಆಂಜನೇಯ ಮಂದಿರಗಳಲ್ಲಿ ಕಾಲಿಡಲು ಜಾಗ ಇಲ್ಲದಷ್ಟು ಭಕ್ತರಿದ್ದರು.            ಪಟ್ಟಣದ ವಾಸವಿ ದೇವಾಲಯದಲ್ಲಿ ಸೀತಾರಾಮಾಂಜನೇಯ ಮೂರ್ತಿಗಳು ಅಲಂಕಾರದಿಂದ ಕಂಗೊಳಿಸಿದ್ದವು. ಹೋಮ, ಮಹಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು.          ಶಂಕರಪುರದಲ್ಲಿ ಬಸ್ಟಾಂಡ್ ಹೋಟಲ್ ನ ಗೋಪಾಲ್ ಅವರ ನಿವಾಸದಲ್ಲಿ ಪವಮಾನ ಹೋಮ,ವಿಪ್ರಮಹಿಳಾ ಸಂಘದಿಂದ ಭಜನೆ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು.       ತಿರುಮಲಾಪುರದಲ್ಲಿ ಅರ್ಚಕ ಮಂಜುನಾಥ್ ನೇತೃತ್ವದಲ್ಲಿ ಸ್ವಾಮಿಯವರಿಗೆ ಮಹನ್ಯಾಸಪೂರಕ ರುದ್ರಾಭಿಷೇಕ,ಆಂಜನೇಯಸ್ವಾಮಿಗೆ ಪಂಚಾಮೃತ ಅಭಿಷೇಕ ನಡೆಯಿತು.ತೇರಿನೆಳೆದು ಸಂಭ್ರಮಿಸಿದ ಭಕ್ತಾಧಿಗಳಿಗೆ ಪಾನಕ ಪನಿವಾರ ವಿತರಿಸಲಾಯಿತು.         ಹೊಸಹಳ್ಳಿಯ ಶ್ರೀ ಅಂಜನೇಯ ಸ್ವಾಮಿ. ಇದೇರೀತಿ ಸಮೀಪದ ಹೊಸಹಳ್ಳಿ ಹಾಗೂ ಸೀಗೆಬಾಗಿಯ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲೂ `ಮುಖ್ಯಪ್ರಾಣ'ನಿಗೆ ವಿಶೇಷ ಪೂಜೆ, ಅಲಂಕಾರ ನಡೆದಿದ್ದು ಭಾರಿ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ಇಂದು(ತಾ.14) ಪೂರ್ವಭಾವಿ ಸಭೆ

 ಇಲ್ಲಿನ ಸರ್ಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಹಾಗೂ ಖಾಯಂ ವೈದ್ಯರನ್ನು ನೇಮಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಆಹೋರಾತ್ರಿ ಪ್ರತಿಭಟನೆ ನಡೆಸುವ ಸಲುವಾಗಿ ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನು ಇಂದು (ತಾ.14) ಶನಿವಾರ ಮಧ್ಯಾಹ್ನ 3 ಗಂಟೆಗೆ ಕರೆಯಲಾಗಿದೆ. ಈ ಸಭೆಗೆ ಹೋಬಳಿಯ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು, ಗ್ರಾ.ಪಂ.ಅಧ್ಯಕ್ಷರು, ಸದಸ್ಯರು,ಸ್ತ್ರೀಶಕ್ತಿ ಸಂಘಗಳು,ಸ್ವಸಹಾಯ ಸಂಘಗಳು,ಹಿರಿಯ ಮುಖಂಡರು,ನಾಗರೀಕರು,ಜನಪ್ರತಿನಿಧಿಗಳು ಹಾಗೂ ಎಲ್ಲಾ ಸಾರ್ವಜನಿಕರು ಪಾಲ್ಗೊಂಡು ತಮ್ಮ ಸಲಹೆಗಳನ್ನು ತಿಳಿಸುವುದರೊಂದಿಗೆ ಸಭೆಯನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ದಲಿತ ಸಹಾಯವಾಣಿಯ ತಾಲ್ಲೂಕು ಅಧ್ಯಕ್ಷ ಆರ್.ಹನುಮಂತಯ್ಯ ಪ್ರಕಟಣೆಯಲ್ಲಿ ಕೋರಿದ್ದಾರೆ.

ಅಭಿಮಾನಿಗಳಿಂದ ಕೆ.ಎಸ್. ಕೆ ಹುಟ್ಟುಹಬ್ಬ ಆಚರಣೆ

                              ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬವನ್ನು ಹೋಬಳಿಯ ಖಾಸಗಿ ಬಸ್ ಮಾಲೀಕರ ಹಾಗೂ ಏಜೆಂಟರ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಲ್ಲಿನ ಪರಿವೀಕ್ಷಣಾ ಮಂದಿರದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಏಜೆಂಟರ್ ಸೇವಾ ಚಾರಿಟಬಲ್ ಟ್ರಸ್ಟ್ ನ ಲೋಕೇಶ್, ಹು.ಕೃ.ವಿಶ್ವನಾಥ್, ಇಂತಿಯಾಜ್, ಗಂಗಣ್ಣ,ರಾಜಣ್ಣ,ರಾಘವೇಂದ್ರ.ಎಸ್.ಎಲ್.ಆರ್.ಪ್ರದೀಪ್,ಕರವೇ ಅಧ್ಯಕ್ಷ ಶ್ರೀನಿವಾಸ್,ಗ್ರಾ.ಪಂ.ಸದಸ್ಯ ಹೇಮಂತ್ ಇನ್ನಿತರರು ಪಾಲ್ಗೊಂಡಿದ್ದು,ಸಂಘದ ಪರವಾಗಿ ಏಜೆಂಟ್ ಲೋಕೇಶಣ್ಣ ಸ್ವಾಗತಿಸಿ ಶುಭಕೊರಿದರು. ಸಂಘದವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಿರಣ್ ಕುಮಾರ್ ಬಸ್ಸಿನ ಪ್ರಯಾಣಿಕರೊಂದಿಗೆ ಸ್ನೇಹಯುತವಾಗಿ ನಡೆದುಕೊಳ್ಳುವಂತೆ ಏಜೆಂಟರ್ ಗಳಿಗೆ ಕಿವಿಮಾತು ಹೇಳಿದರು. ಬಸ್ ನಿಲ್ದಾಣದ ಸಮಸ್ಯೆಯ ಬಗ್ಗೆ ತಮಗೆ ತಿಳಿದಿದ್ದು, ಶೀಘ್ರದಲ್ಲಿ ಈ ಸಮಸ್ಯೆಯ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು. ಹುಳಿಯಾರಿನ ಖಾಸಗಿ ಬಸ್ ಮಾಲೀಕರ ಹಾಗೂ ಏಜೆಂಟರ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಪರಿವೀಕ್ಷಣಾ ಮಂದಿರದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರ ಹುಟ್ಟುಹಬ್ಬ ಆಚರಿಸಿದರು.ಸಂಘದ ಲೋಕೇಶಣ್ಣ,ರಾಘವೇಂದ್ರ,ಎಸ್.ಎಲ್.ಆರ್.ಪ್ರದೀಪ್ ಸೇರಿದಂತೆ ಇತರರಿದ್ದಾರೆ.                  ವಿದ್ಯಾವಾರಿಧಿ ಶಾಲೆಯಲ

ಹುಳಿಯಾರಲ್ಲಿ ಸಂಭ್ರಮದ ಗೌರಿ ಹಬ್ಬದ ಸಡಗರ

ತವರಿನೊಂದಿಗಿನ ಅವಿನಾಭಾವ ಸಂಬಂಧದ ಸಂಕೇತವಾಗಿ ಆಚರಿಸುವ , ಹೆಣ್ಣುಮಕ್ಕಳಿಗೆ ಪ್ರಿಯವಾದ ಗೌರಿ ಹಬ್ಬವನ್ನು ಮದುವೆಯಾಗಿರಲಿ, ಆಗಿರದೆ ಇರಲಿ ಎಲ್ಲಾ ಹೆಣ್ಣು ಮಕ್ಕಳು ಸೇರಿ ಹೆತ್ತವರು ಅಥವಾ ಸೋದರ ಸಂಬಂಧಿಗಳಿಂದ ಉಡುಗೊರೆಯನ್ನು ಪಡೆದು ನೂರ್ಕಾಲ ಬಾಳು ಎಂಬ ಆಶೀರ್ವಾದ ಪಡೆಯುವುದರೊಂದಿಗೆ ಗೌರಿಹಬ್ಬವನ್ನು ಆಚರಿಸುತ್ತಾರೆ. ಅಂತೆಯೇ ಭಾನುವಾರದಂದು ಪಟ್ಟಣದ ಮನೆಮನೆಗಳಲ್ಲಿ ಗೌರಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ವಿವಿಧ ಹೂಗಳಿಂದ ಅಲಂಕರಿಸಿ, ಸಿಹಿ ಅಡುಗೆ ಮಾಡಿ, ಮನೆಗೆ ಬಂದವರಿಗೆ ಬಾಗೀನ ನೀಡುವ ಮೂಲಕ ಹಬ್ಬವನ್ನು ಸಡಗರ ಸಂಭ್ರಮ ಹಾಗೂ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು. ಹುಳಿಯಾರಿನಲ್ಲಿ ಭಾನುವಾರದಂದು ಗೌರಿ ಹಬ್ಬದ ದಿನ ಮನೆಯೊಂದರಲ್ಲಿ ಪ್ರತಿಷ್ಠಾಪಿಸಿದ್ದ ಪುಟ್ಟ ಗೌರಿ ವಿಗ್ರಹ ನೋಡುಗರ ಗಮನ ಸೆಳೆಯಿತು. ಗೌರಿ ಹಬ್ಬವನ್ನು ಹಿಂದಿನಿಂದಲೂ ಭಕ್ತಿಯಿಂದ ಆಚರಿಸಿಕೊಂಡು ಬಂದಿರುವ ಮಹಿಳೆಯರು ಗೌರಿ ಪೂಜೆ ಸಲ್ಲಿಸಿ ನಂತರ ಮುತ್ತೈದಯರಿಗೆ ಬಾಗಿನ ಅರ್ಪಿಸುವಲ್ಲಿ ನಿರತರಾಗಿದ್ದರು. ತವರುಮನೆಗೆ ಬಂದಿದ್ದ ಹೆಣ್ಣುಮಕ್ಕಳು ಮುಂಜಾನೆಯಿಂದಲೇ ಮನೆಯ ಆವರಣವನ್ನು ಸಾರಿಸಿ, ಸಿಂಗರಿಸಿ ಗೌರಿ ವಿಗ್ರಹವನ್ನು ಫಲ-ಪುಷ್ಪಗಳಿಂದ ಅಲಂಕರಿಸಿದ್ದಲ್ಲದೆ, ವಿವಿದ ಪೂಜಾ ಕಾರ್ಯಗಳನ್ನು ಮಾಡಿ ಹಿರಿಯರಿಂದ ಆಶೀರ್ವಾದ ಪಡೆಯುವ ಮೂಲಕ ಹಬ್ಬದ ಶುಭಾಷಯವನ್ನು ಹಂಚಿಕೊಳ್ಳುತ್ತಿದ್ದರು. ಪಟ್ಟಣದ ದೇವಾಲಯಗಳಲ್ಲಿ ದೇವರುಗಳಿಗೆ ವಿಶೇಷ ಪೂಜೆ,ಅಲ

ಗೌರಿ-ಗಣೇಶ ಹಬ್ಬದ ಸಂತೆ ಸಡಗರ

ಹುಳಿಯಾರಿನಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಗುರುವಾರ ನಡೆದ ಹಬ್ಬದ ಸಂತೆಯಲ್ಲಿ ಜನ ಗೌರಿ ಬಾಗಿನದ ಮರಗಳನ್ನು ಕೊಳ್ಳುತ್ತಿರುವ ದೃಶ್ಯ.

ಶಿಕ್ಷಕರ ದಿನಾಚರಣೆ

ಹುಳಿಯಾರು-ಕೆಂಕೆರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಾಂಶುಪಾಲ ನಟರಾಜ್ ಮಾತನಾಡಿದರು.ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದಾರೆ.

ಉತ್ತಮ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ : ಮೂಗೇಶಪ್ಪ

           ಪ್ರಸ್ತುತ ಸಮಾಜಲ್ಲಿ ಭ್ರಷ್ಟಾಚಾರ,ಲಂಚಗುಳಿತನ ಸೇರಿದಂತೆ ಅನೇಕ ಸಮಸ್ಯೆಗಳು ದೇಶದ ಅಭಿವೃದ್ದಿಗೆ ಮಾರಕವಾಗಿವೆ.ಇಂತಹ ಸಮಾಜಕಂಠಕ ಪಿಡುಗುಗಳು ನಿರ್ಮೂಲನೆಯಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಅದಕ್ಕಾಗಿ ಇಂದಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜಕಟ್ಟುವ ಕಾರ್ಯದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದು ಬಹುಮುಖ್ಯವೆಂದು ಪ್ರಾಂಶುಪಾಲ ಆರ್.ಮೂಗೇಶಪ್ಪ ಕಿವಿಮಾತು ಹೇಳಿದರು.             ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಸಂಘದವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಾಂಶುಪಾಲ ಆರ್.ಮೂಗೇಶಪ್ಪ ಮಾತನಾಡಿದರು.           ವಿದ್ಯಾರ್ಥಿ ಜೀವನ ಎಂಬುದು ಸೂಕ್ಷ್ಮವಾದದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಭೋದನೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಸತ್ಪ್ರಜೆಗಳಗುವಂತೆ ರೂಪಿಸುವ ರೂವಾರಿಗಳಾಗಿದ್ದು, ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಗುರಿ ತಲುಪಬೇಕು ಎಂದರು.ರಾಧಾಕೃಷ್ಣನ್ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿದಲ್ಲದೆ ರಾಷ್ಟ್ರದ ರಾಷ್ಟ್ರಪತಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದು, ಅಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಇಂದಿನ ಶಿಕ್ಷಕರು ಪಾಲಿಸುವ ಮೂಲಕ ದೇಶದ ಅಭಿವೃದ್

ಗ್ರಾಮದ ಸ್ವಚ್ಚತೆ ಮರೆತ ಗ್ರಾ.ಪಂ. ವಿರುದ್ದ ಪ್ರತಿಭಟನೆ

ಗ್ರಾಮದ ಅಭಿವೃದ್ದಿ,ಸ್ವಚ್ಚತೆಯ ಬಗ್ಗೆ ಕಾಳಜಿವಹಿಸಬೇಕಾದ ಗ್ರಾಮ ಪಂಚಾಯ್ತಿಯವರು ಗ್ರಾಮಕ್ಕೆ ಬರುವ ಸೌಲಭ್ಯಗಳಿಗೆ ತೊಡೆರುಕಾಲು ಹಾಕುವುದಲ್ಲದೆ, ಗ್ರಾಮದ ಸ್ವಚ್ಚತೆ ಬಗ್ಗೆ ನಿರ್ಲಕ್ಷ್ಯವಹಿಸಿ ತಮಗೂ ಈ ಗ್ರಾಮಕ್ಕೂ ಸಂಬಂಧವಿಲ್ಲ ಎಂಬಂತೆ ಪಂಚಾಯ್ತಿಯ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದ ಹೋಬಳಿಯ ದೊಡ್ಡಬಿದರೆ ಸಾರ್ವಜನಿಕರು ಗುರುವಾರ ಪ್ರತಿಭಟಿಸಿ ಗ್ರಾ.ಪಂ. ಕಾರ್ಯಾಲಕ್ಕೆ ಮುತ್ತಿಗೆ ಹಾಕಿ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು. ಗ್ರಾ.ಪಂ ಮುಂದೆ ಪ್ರತಿಭಟಿಸುತ್ತಿದ್ದ ಗ್ರಾಮಸ್ಥರ ಮನವೊಲಿಕೆಗೆ ಮುಂದಾದ ಪಿಎಸೈ ರಾಜು. ದೊಡ್ಡಬಿದರೆ ಗ್ರಾಮದಲ್ಲಿ ನೆಪಮಾತ್ರಕ್ಕೆ ಗ್ರಾ.ಪಂ.ಯಿದೆಯೇ ಹೊರತು ಯಾವುದೇ ಅಭಿವೃದ್ದಿ ಕಾರ್ಯಗಳಿಗಾಗಲಿ, ಸರ್ಕಾರ ದಿಂದ ಬರುವ ಸವಲತ್ತುಗಳಿಗಾಗಲಿ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ,ಊರಿನ ಪ್ರತಿಬೀದಿಯ ಚರಂಡಿಗಳ ತುಂಬೆಲ್ಲ ಹೂಳು ತುಂಬಿಕೊಂಡು ಕ್ರಿಮಿಕೀಟಗಳ ಸಂಖ್ಯೆಗೆ ಹೆಚ್ಚಾಗಿವೆ,ಅಲ್ಲದೆ ಬೀದಿ ಬದಿಯ ಕಂಬಗಳಲ್ಲಿ ಬೀದಿದೀಪಗಳಿಲ್ಲದೆ ರಾತ್ರಿ ಸಮಯದಲ್ಲಿ  ಸಂಚರಿಸುವುದು ಕಷ್ಟಕರವಾಗಿದೆ.ಈ ಬಗ್ಗೆ ಪಂಚಾಯ್ತಿಯ ಪಿಡಿಓಗೆ ತಿಳಿಸಿದರೆ ಸರಿ ಸರಿ ಮಾಡಿಸುವುದಾಗಿ ಹೇಳಿ ಕೈತೊಳೆದುಕೊಳ್ಳುತ್ತಾರೆ,ತಮ್ಮಿಂದ ಆಯ್ಕೆಯಾದ ಸದಸ್ಯರು ಇತ್ತ ತಿರುಗಿನೋಡುವುದಿಲ್ಲ, ತಮ್ಮ ಗ್ರಾಮಕ್ಕೆ ಬರುವ ಅನೇಕ ಸೌಲಭ್ಯಗಳನ್ನು ಅನುಷ್ಠಾನಗೊಳಿಸದೇ ಇಲ್ಲ ಸಲ್ಲದ ಸಬೂಬು ಹೇ

ಗೌಡಗೆರೆಯಲ್ಲಿಅನ್ನ ಭಾಗ್ಯ ಯೋಜನೆಯಿಂದ ವಂಚನೆ:ದೂರು-(ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿದ್ದು)

ಬರಗೂರು ಹಾಲು ಉತ್ಪಾದಕರ ಸಂಘದ ಸುದ್ದಿ:(ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿದ್ದು)

ರೋಟರಿ ಮೂಲಕ ಸಮಾಜಸೇವೆಗೆ ತೊಡಗಿ: ಹೆಚ್.ಕೆ.ವಿ.ರೆಡ್ಡಿ

ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವುದರಿಂದ ಮನಸ್ಸಿಗೆ ಸಮಾಧಾನ ಸಂತಸ ಸಿಗಲಿದ್ದು, ಪ್ರತಿಯುಬ್ಬರೂ ಸ್ವಲ್ಪಕಾಲವಾದರೂ ಸಮಾಜ ಸೇವೆಗೆ ಮೀಸಲಿಡಿ ಎಂದು ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗವರ್ನರ್ ಹೆಚ್.ಕೆ.ವಿ.ರೆಡ್ಡಿ ಕಿವಿ ಮಾತು ಹೇಳಿದರು. ಹುಳಿಯಾರಿನ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಮಾಜಿ ಜಿಲ್ಲಾ ಗವರ್ನರ್ ಹೆಚ್.ಕೆ.ವಿ.ರೆಡ್ಡಿ ಉದ್ಘಾಟಿಸಿದರು.ಎನ್.ಎಸ್.ನಾಗರಾಜು,ಗಂಗಾಧರ್ ರಾವ್,ರವೀಶ್,ಮಂಜುನಾಥ ಗುಪ್ತ,ಹನುಮಂತಯ್ಯ ಇದ್ದಾರೆ.               ಹುಳಿಯಾರಿನ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ಕೇವಲ ನಾಲ್ಕು ಮಂದಿಯಿಂದ   ಸ್ಥಾಪಿತವಾದ ರೋಟರಿ ಸಂಸ್ಥೆ ಇಂದು ಪ್ರಪಂಚದಾದ್ಯಂತ ಮೂವತ್ನಾಲ್ಕು ಸಾವಿರ ಶಾಖೆಗಳನ್ನು ಹೊಂದಿ ಹನ್ನೆರೆಡುವರೆ ಲಕ್ಷ ಸದಸ್ಯರನ್ನು ಒಳಗೊಂಡು ಸಮಾಜ ಸೇವೆಯಲ್ಲಿ ನಿರತವಾಗಿದೆ.ಇನ್ನೂರಆರು ರಾಷ್ಟ್ರಗಳಲ್ಲಿ ವ್ಯಾಪಿಸಿರುವ ಈ ಅಂತರರಾಷ್ಟ್ರೀಯ ಸಂಸ್ಥೆಗೆ ಸದಸ್ಯರಾಗುವ ಮೂಲಕ ಸೇವಾ ಕಾರ್ಯದಲ್ಲಿ ನಿರತರಾಗಿ ಎಂದು ಕರೆ ನೀಡಿದರು.                   ರೋಟರಿ ಉಪರಾಜ್ಯಪಾಲ ನಾಗರಾಜ್ ಮಾತನಾಡಿ, ಈಡಿ ಪ್ರಪಂಚದಲ್ಲಿ ಲಿಂಗ ,ಜಾತಿ ,ವಯಸ್ಸಿನ ತಾರತಮ್ಯವಿಲ್ಲದೆ ಯಾವುದೇ ಅಡ್ಡ ಗೋಡೆಗಳಿಲ್ಲದೆ ಎಲ್ಲರೂ ತೊಡಗಿಕೊಂಡು ಸೇವೆಸಲ್ಲಿಸಲು ಅವಕಾಶ ಒದಗಿಸಿರುವ ಏಕೈಕ ಸಂಸ್ಥೆ ರೋಟರಿ. ಇನ್ನಿತರ ಸಂಘಸಂಸ್ಥೆಗಳಲ್ಲಿ ಅಧ್ಯಕ

ಗ್ರಾ.ಪಂ. ಸದಸ್ಯರಿಂದ ಡಾಕ್ಟರ್ ವಾಟರ್ ಕುಡಿಯುವ ನೀರಿನ ಘಟಕ್ಕೆ ಬೀಗ:ಸಾರ್ವಜನಿಕರಿಂದ ವಿರೋಧ

ಕ್ಷುಲಕ ಕಾರಣ ನೀಡಿ ಸ್ಥಳೀಯ ಗ್ರಾ.ಪಂ. ಸದಸ್ಯರು ನೀರು ಪೋರೈಕೆ ಘಟಕಕ್ಕೆ ಬೀಗ ಹಾಕಿದ್ದನ್ನು ಪ್ರತಿಭಟಿಸಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯವರು ರಸ್ತೆ ತಡೆ ನಡೆಸಿದ್ದಲ್ಲದೆ ಸ್ಥಳಕ್ಕೆ ತಹಶೀಲ್ದಾರರನ್ನು ಕರೆಯಿಸಿ ಘಟಕವನ್ನು ಪುನರಾರಂಭ ಮಾಡಿಸಿದ ಘಟನೆ ಸೋಮವಾರ ಜರುಗಿದೆ. ಹಿನ್ನಲೆ: ಹುಳಿಯಾರು ಗ್ರಾ.ಪಂ.ಯ ಸಹಭಾಗಿತ್ವದಲ್ಲಿ ಪೋಲೀಸ್ ಠಾಣೆಯ ಹತ್ತಿರ ಡಾಕ್ಟರ್ ವಾಟರ್ ಘಟಕವನ್ನು ಸ್ಥಾಪಿಸಿದ್ದು, 20ಲೀ ನ ಒಂದು ಕ್ಯಾನ್ ಗೆ ಏಳು ರೂ ನಂತೆ ಅಲ್ಲಿಗೆ ಬಂದು ಕೊಂಡೈಯ್ಯುವ ಆಧಾರದ ಮೇಲೆ ನೀರನ್ನು ಸರಬರಾಜು ಮಾಡಲಾಗುತ್ತಿತ್ತು.ಶುದ್ದ ನೀರು ಪ್ರತಿಯೊಂದು ಮನೆಗೂ ತಲುಪಿಸುವ ನಿಟ್ಟಿನಲ್ಲಿ ಕಳೆದ ಕೆಲ ತಿಂಗಳ ಹಿಂದೆ ನೀರಿನ ಕ್ಯಾನ್ ನ ವಿತರಣೆಯನ್ನು ಖಾಸಗಿ ವ್ಯಕ್ತಿಯವರಿಗೆ ನೀಡಿದ್ದು, ಅವರು ಪ್ರತಿ ಕ್ಯಾನ್ ಗೆ ರೂ.15ರಂತೆ ಮನೆ ಬಾಗಿಲಿಗೆ ವಿತರಣೆ ಮಾಡುತ್ತಿದ್ದರು.ಖಾಸಗಿ ವ್ಯಕ್ತಿಗೆ ವಿತರಣೆ ನೀಡಿದ್ದನ್ನು ವಿರೋಧಿಸಿ ಕೆಲ ಸದಸ್ಯರುಗಳು ಡಾಕ್ಟರ್ ವಾಟರ್ ಘಟಕಕ್ಕೆ ಬೀಗ ಹಾಕಿದ್ದಲ್ಲದೆ,ಬೋರಿನಿಂದ ಸರಬರಾಜಾಗುತ್ತಿದ್ದ ನೀರಿನ ಪೈಪನ್ನು ಸಹ ಕಿತ್ತುಹಾಕಿದ್ದರು. ಇದರಿಂದಾಗಿ ನಾಲ್ಕೈದು ದಿನಗಳಿಂದ ಈ ಘಟಕ ಸ್ಥಗಿತ ಗೊಂಡು ಜನ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿತ್ತು. ಪ್ರತಿಭಟನೆ ಏಕೆ: ಸದಸ್ಯರ ಕ್ರಮದ ಬಗ್ಗೆ ಅಸಮದಾನ ವ್ಯಕ್ತ ಪಡಿಸಿದ ಸಾರ್ವಜನಿಕರು ಘಟಕದ ಬಳಿಯೇ ಏಳು ರೂಗೆ ಕೊಡುತ್ತಿದ್ದ ನೀರನ್

ಉನ್ನತ ವ್ಯಾಸಂಗಕ್ಕೆ ಉತ್ತಮ ಅಂಕಗಳಿಸಬೇಕು

                  ಇಂದಿನ ಆಧುನಿಕ ಪ್ರಪಂಚದಲ್ಲಿ ಪ್ರತಿಯೊಂದು ಕ್ಷೇತ್ರವೂ ಪೈಪೂಟಿಯುತವಾಗಿದ್ದು, ಮಕ್ಕಳು ಯಶಸ್ಸು ಗಳಿಸಬೇಕಾದರೆ ಕೇವಲ ತರಗತಿಯಿಂದ ತರಗತಿಗೆ ಕನಿಷ್ಠ ಅಂಕ ಗಳಿಸಿ ತೇರ್ಗಡೆಯಾದರೆ ಸಾದ್ಯವಿಲ್ಲ, ಹೆಚ್ಚಿನ ಅಂಕಗಳಿಸಿದಾಗ ಮಾತ್ರ ಉನ್ನತ ವ್ಯಾಸಂಗಕ್ಕೆ ಹೆಚ್ಚೆಚ್ಚು ಅವಕಾಶಗಳು ತಾವಾಗಿಯೇ ಒದಗಿ ಬರುತ್ತವೆ ಎಂದು ಮುಖಂಡ ಮಹಮ್ಮದ್ ಸಜ್ಜಾದ್ ತಿಳಿಸಿದರು. ರಂಜಾನ್ ಹಬ್ಬದ ಅಂಗವಾಗಿ ಹುಳಿಯಾರಿನ ಸರ್ಕಾರಿ ಉರ್ದು ಪ್ರೌಢಶಾಲಾ ಮಕ್ಕಳಿಗೆ ರಾಜ್ ಮಿನರಲ್ಸ್ ವತಿಯಿಂದ ಉಚಿತವಾಗಿ ನೋಟ್ ಬುಕ್,ಬ್ಯಾಗ್,ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.ರಾಜ್ ಮಿನರಲ್ಸ್ ನ ಷಪಿ ಅಹಮದ್ ,ಮುಖ್ಯಶಿಕ್ಷಕ ಚೆನ್ನಿಗರಾಮಯ್ಯ,ಮಹಮ್ಮದ್ ಸಜ್ಜಾದ್,ಇಮ್ರಾಜ್ ಇದ್ದಾರೆ.                    ರಂಜಾನ್ ಹಬ್ಬದ ಅಂಗವಾಗಿ ರಾಜ್ ಮಿನರಲ್ಸ್ ವತಿಯಿಂದ ಹುಳಿಯಾರಿನ ಸರ್ಕಾರಿ ಉರ್ದು ಪ್ರೌಢಶಾಲಾ ಮಕ್ಕಳಿಗೆ ಬುಧವಾರ ಉಚಿತವಾಗಿ ನೋಟ್ ಬುಕ್,ಬ್ಯಾಗ್,ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.                     ಹುಳಿಯಾರಿನ ಉರ್ದುಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ, ಮುಸ್ಲಿಂ ಸಮುದಾಯದ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ನೊಂದಾಯಿಸುವ ಮೂಲಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚುವಂತೆ ಮಾಡಬೇಕಿದೆ ಎಂದರು.ಅಲ್ಲದೆ ಈ ಶಾಲೆಯಲ್ಲಿ ಸರ್ಕಾರದಿಂದ ದೊರ

ಹೊಯ್ಸಳ ಇಂಡೇನ್ ಗ್ರಾಮೀಣ್ ವಿತರಕ್ ಏಜೆನ್ಸಿವತಿಯಿಂದ ಹೊಸ ಗ್ಯಾಸ್ ಸಂಪರ್ಕಕ್ಕೆ ಚಾಲನೆ

ಹುಳಿಯಾರಿನಲ್ಲಿ ನೂತನವಾಗಿ ಆರಂಭವಾದ ಹೊಯ್ಸಳ ಇಂಡೇನ್ ಗ್ರಾಮೀಣ್ ವಿತರಕ್ ಏಜೆನ್ಸಿವತಿಯಿಂದ ಹೊಸ ಗ್ಯಾಸ್ ಸಂಪರ್ಕವನ್ನು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಗ್ರಾಹಕರಿಗೆ ವಿತರಿಸುವ ಮೂಲಕ ಚಾಲನೆ ನೀಡಿದರು.ತಾಪಂ ಸದಸ್ಯ ಕೆಂಕೆರೆ ನವೀನ್,ಗ್ಯಾಸ್ ಏಜೆನ್ಸಿಯ ವದಿಗಪ್ಪ,ಕುಮಾರ್,ಬ್ಯಾಂಕ್ ಮರುಳಪ್ಪ ಇದ್ದಾರೆ.

ಹುಳಿಯಾರು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಾಸವಿ ಶಾಲೆಗೆ ಸಮಗ್ರ ಪ್ರಶಸ್ತಿ

                   ಇಲ್ಲಿನ ವಾಸವಿ ಶಾಲಾ ಮೈದಾನದಲ್ಲಿ  ಮೂರು ದಿನಗಳು ನಡೆದ ಪ್ರಾಥಮಿಕ ಶಾಲೆಗಳ ಎ ವಿಭಾಗದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹೋಬಳಿಯ ನಾನಾ ಶಾಲೆಗಳ ಸ್ಪರ್ಧಾಳುಗಳು ಸ್ಪರ್ಧಿಸಿದ್ದು, ಅನೇಕ ಮಕ್ಕಳು ಉತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದಿವೆ. ಹುಳಿಯಾರಿನ ವಾಸವಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳು ಗುಂಪು ಆಟದಲ್ಲಿ 8  ಸ್ಥಾನ ಹಾಗೂ ಅಥ್ಲೆಟಿಕ್ಸ್ ನಲ್ಲಿ 9 ಸ್ಥಾನ ಪಡೆಯುವ ಮೂಲಕ  ಬಹುಮಾನಗಳನ್ನು ಪಡೆದುಕೊಂಡಿದ್ದಲ್ಲದೆ, ಕ್ರೀಡಾಕೂಟದ ಸಮಗ್ರ ಕೀಡಾಪ್ರಶಸ್ತಿಯನ್ನು ಈ ಶಾಲೆ ಪಡೆದುಕೊಂಡಿದೆ. ಕ್ರೀಡಾಕೂಟದಲ್ಲಿ ಬಹುಮಾನ ಪಡೆದವರು:- ಬಾಲಕರ ವಿಭಾಗ:- 100 ಮೀ ಓಟ: ಪ್ರಥಮಸ್ಥಾನ ಚಿರಂಜೀವಿ.ಎಲ್.ಆರ್ (ವಾಸವಿಶಾಲೆ). ದ್ವಿತೀಯಸ್ಥಾನ  ಕೆ.ವಿ.ಸುಹಾಸ್ (ವಾಸವಿಶಾಲೆ), 200 ಮೀ ಓಟ: ಪ್ರಥಮಸ್ಥಾನ ಎಸ್.ಮಂಜುನಾಥ್ (ವಾಸವಿಶಾಲೆ), ದ್ವಿತೀಯಸ್ಥಾನ ಕೆ.ಎನ್.ವೆಂಕಟೇಶ್ (ಕನಕದಾಸ ಶಾಲೆ), 400 ಮೀ. ಓಟ: ಪ್ರಥಮಸ್ಥಾನ ಎಸ್.ಡಿ.ಭರತ್(ವಾಸವಿಶಾಲೆ), ದ್ವಿತೀಯಸ್ಥಾನ ಎಸ್.ಕೆ.ಸಂಜಯ್ (ವಾಸವಿಶಾಲೆ), 600 ಮೀ ಓಟ: ಪ್ರಥಮಸ್ಥಾನ ಕೆ.ವಿ.ಸುಹಾಸ್(ವಾಸವಿಶಾಲೆ), ದ್ವಿತೀಯಸ್ಥಾನ ಪ್ರಸನ್ನಕುಮಾರ್(ಯಳನಡು ಎಂಪಿಎಸ್),ಗುಂಡು ಎಸೆತ: ಪ್ರಥಮಸ್ಥಾನ  ಸೈಯದ್ ಮುಖ್ತ್ಯಾರ್(ಹುಳಿಯಾರು ಎಂಪಿಎಸ್),ದ್ವಿತೀಯಸ್ಥಾನ  ನವಾಜ್(ವಾಸವಿಶಾಲೆ),ಚಕ್ರಎಸೆತ: ಪ್ರಥಮಸ್ಥಾನ ಸೈಯದ್ ಮುಖ್ತ್ಯಾರ್ (ಹುಳಿಯಾರು ಎಂಪಿಎಸ್), ದ್ವಿತೀಯಸ್ಥಾನ  ದಾದಾಪೀರ್(ಹುಳಿಯ

ಸ್ಟೇಟ್ ಬ್ಯಾಂಕ್ ವತಿಯಿಂದ ಉಚಿತವಾಗಿ ಸೀಲೀಂಗ್ ಫ್ಯಾನ್ ವಿತರಣೆ

       ಹುಳಿಯಾರಿನ ಸರ್ಕಾರಿ ಉರ್ದು ಪ್ರೌಢಶಾಲೆಗೆ ಪಟ್ಟಣದ ಸ್ಟೇಟ್ ಬ್ಯಾಂಕ್ ವತಿಯಿಂದ ಮ್ಯಾನೇಜರ್ ಮಹಂತೇಶ್ ಉಚಿತವಾಗಿ ಸೀಲೀಂಗ್ ಫ್ಯಾನ್ ವಿತರಿಸಿದರು.ಮುಖ್ಯಶಿಕ್ಷಕ ಚೆನ್ನಿಗರಾಯಪ್ಪ,ಫೀಲ್ಡ್ ಅಫೀಸರ್ ರುದ್ರಮೂರ್ತಿ, ಮುಖಂಡರಾದ ಜಬೀಉಲ್ಲಾ ಸಾಬ್,ಇಮ್ರಾಜ್ ಇದ್ದಾರೆ.

ದೊಡ್ಡಬಿದರೆಯಲ್ಲಿ ಗ್ರಾಮಸ್ಥರಿಂದಲೇ ಮದ್ಯಮಾರಾಟ ನಿಷಿದ್ಧ : ಮದ್ಯ ಮಾರಿದರೆ 25 ಸಾವಿರ ದಂಡ

       ಹೋಬಳಿ ದೊಡ್ಡಬಿದರೆ ಗ್ರಾಮದ ಹಿರಿಯರು,ಊರ ಯಜಮಾನರುಗಳು ಗುರುವಾರದಂದು ಗ್ರಾಮದೇವತೆ ಶ್ರೀಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸಭೆ ಸೇರಿ ತಮ್ಮ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟವನ್ನು ತಡೆಗಟ್ಟುವ ಬಗ್ಗೆ ಚಿಂತಿಸಿ, ಗ್ರಾಮದಲ್ಲಿ ಯಾವುದೇ ರೀತಿಯ ಮದ್ಯ ಮಾರುವಂತಿಲ್ಲ ಹಾಗೂ ಗ್ರಾಮದಲ್ಲಿ ಮದ್ಯ ಮಾರಾಟ ನಿಷಿದ್ದ ಎಂಬ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.ಇದಕ್ಕೆ ಗ್ರಾಮಸ್ಥರೆಲ್ಲ ಸಹಮತವ್ಯಕ್ತಪಡಿಸಿ ಬೆಂಬಲ ಸೂಚಿಸಿದ್ದಾರೆ. ಗ್ರಾಮಸ್ಥರ ಈ ನಿರ್ಣಯ್ಯವನ್ನು ಮೀರಿ ಯಾರಾದರು ಊರಲ್ಲಿ ಮದ್ಯಮಾರಿದರೆ ಅವರಿಗೆ 25ಸಾವಿರ ದಂಡ ಹಾಗೂ ಮದ್ಯ ಮಾರುವವರನ್ನು ಪತ್ತೆ ಹಚ್ಚಿ ಕೊಟ್ಟವರಿಗೆ 4 ಸಾವಿರ ಬಹುಮಾನವನ್ನು ನೀಡುವ ತೀರ್ಮಾನವನ್ನು ಕೈಗೊಂಡಿದ್ದಾರೆ.                                          ಹಳ್ಳಿಗಳಲ್ಲಿ ಆಕ್ರಮ ಮದ್ಯದ ಅಂಗಡಿಗಳು ನಾಯಿಕೊಡೆಯಂತೆ ತಲೆಯೆತ್ತಿದ್ದು, ಗ್ರಾಮದ ಪೆಟ್ಟಿಗೆ ಅಂಗಡಿಗಳಲ್ಲಿ ಹಾಗೂ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದಾರೆ. ಹಳ್ಳಿ ಜನರು ತಾವು ದುಡಿದ ಬಹುಪಾಲು ಹಣವನ್ನು ಕುಡಿತಕ್ಕಾಗಿ ವೆಚ್ಚ ಮಾಡುತ್ತಾ ತಮ್ಮ ಸಂಸಾರದ ಕಡೆ ಅಲಕ್ಷ ತೊರುತ್ತಿದ್ದಾರೆ. ಅಲ್ಲದೆ ಅನೇಕ ಯುವಕರು ಮನೆಯವರಿಗೆ ತಿಳಿಯದಂತೆ ಕದ್ದುಮುಚ್ಚಿ ಕುಡಿತಕ್ಕೆ ಬಲಿಯಾಗುತ್ತಿದ್ದಾರೆ,ಊರಲ್ಲಿ ಜಗಳ ಹೆಚ್ಚಿದ್ದು ಊರಲ್ಲಿ ಶಾಂತಿಯ ವಾತಾವರಣ ಇಲ್ಲದಂತಾಗಿದೆ.ಗ್ರಾಮದಲ್ಲಿ ಮದ್

ಕ್ರೀಡಾಕೂಟದಲ್ಲಿ ದ್ವೇಷ,ಅಸೂಯೆ ಬೇಡ : ಎಲ್.ಆರ್.ಸಿ

          ಶಾಲಾ ಶೈಕ್ಷಣಿಕ ಚಟುವಟಿಕೆಯ ಭಾಗವಾಗಿರುವ ಕ್ರಿಡಾಕೂಟದಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡು,ಪ್ರತಿಯೊಂದು ಆಟದಲ್ಲಿ ಉತ್ಸಾಹದಿಂದ ಆಡುತ್ತಾ ಸೋಲು,ಗೆಲುವನ್ನು ಸರಿಸಮನಾಗಿ ತೆಗೆದುಕೊಳ್ಳಬೇಕೆ ಹೊರತು ಸಣ್ಣಪುಟ್ಟ ಕಾರಣಗಳಿಂದಾಗಿ ಕ್ರಿಡಾಪಟುಗಳಾಗಲಿ,ತರಬೇತುದಾರರಾಗಲಿ ದ್ವೇಷ,ಅಸೂಯೆಯ ಭಾವನೆಯನ್ನು ಬೆಳೆಸಿಕೊಳ್ಳಬಾರದೆಂದು ವಾಸವಿ ವಿದ್ಯಾಸಂಸ್ಥೆಯ ಸಹಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್ ಕಿವಿಮಾತು ಹೇಳಿದರು. ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ಮಂಗಳವಾರ ಪ್ರಾರಂಭವಾದ ಪ್ರಾಥಮಿಕ ಶಾಲೆಗಳ ಎ ವಿಭಾಗದ ಹೋಬಳಿ ಮಟ್ಟದ ಕ್ರಿಡಾಕೂಟದಲ್ಲಿ ಕ್ರಿಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ,ಅವರು ಮಾತನಾಡಿದರು , ಹುಳಿಯಾರಿನ ವಾಸವಿಶಾಲಾ ಮೈದಾನದಲ್ಲಿ ಪ್ರಾರಂಭಗೊಂಡ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಿಗೆ ಸಂಸ್ಥೆಯ ಸಹಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್ ಪ್ರತಿಜ್ಞಾವಿಧಿ ಬೋಧಿಸಿದರು.                ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಒಂದು ವೇದಿಕೆಯಾಗಿ ಕ್ರೀಡಾಕೂಟ ಬಿಂಬಿತವಾಗಬೇಕು ಹಾಗೂ ಶಿಕ್ಷಕರು ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಉತ್ಸಾಹದ ಮನೋಭಾವ ಮೂಡಿಸಿ ಪ್ರತಿಯೊಂದು ಮಗು ತನಗಿಷ್ಟವಾದ ಒಂದು ಆಟದಲ್ಲಾದರೂ ಸ್ಪರ್ಧಿಸುವಂತೆ ಮಾಡಬೇಕು ಎಂದರು.ಕ್ರೀಡಾಕೂಟದಲ್ಲಿ ಭಾಗವಹಿಸಿರುವ ವಿವಿಧ ಶಾಲೆಯ ಮಕ್ಕಳು ತಾವೆಲ್ಲಾ ಒಂದೇ ಶಾಲಾ ಮಕ್ಕಳು ಎಂದು ಭಾವಿಸಿ ಆಟಗಳನ್ನು ಆಡುತ್ತಾ ತಮ್ಮ ಸ

ಜಾನುವಾರು ಮೇವಿಗಾಗಿ ರೈತರಿಗೆ ಉಚಿತ ಬಿತ್ತನೆ ಬೀಜದ ಜೋಳ ವಿತರಣೆ

ಸರ್ಕಾರದ ಬರಪರಿಹಾರ ಯೋಜನೆಯಡಿ ಪಟ್ಟಣದ ಪಶು ಆರೋಗ್ಯಕೇಂದ್ರದಲ್ಲಿ ಹುಳಿಯಾರು ಹಾಗೂ ಸುತ್ತಮುತ್ತಲ ಹಳ್ಳಿಗಳ ರೈತರಿಗೆ ಜಾನುವಾರುಗಳ ಮೇವಿಗಾಗಿ ಬಿತ್ತನೆ ಬೀಜದ ಜೋಳನ್ನು ಉಚಿತ ವಿತರಣೆ ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ ಶನಿವಾರ ಚಾಲನೆ ನೀಡಿದರು. ಬರಪರಿಹಾರ ಯೋಜನೆಯಡಿ ಜಾನುವಾರುಗಳ ಮೇವಿಗಾಗಿ ಬಿತ್ತನೆ ಬೀಜದ ಜೋಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಯಿತು.ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ,ತಾ.ಪಂ.ಸದಸ್ಯರಾದ ಕೆಂಕೆರೆ ನವೀನ್,ಜಯಣ್ಣ ಪಶು ವೈಧ್ಯಾಧಿಕಾರಿ ಡಾ||ಮಂಜುನಾಥ್ ಇದ್ದಾರೆ.  ಈ ಸಂಧರ್ಭದಲ್ಲಿ ಪಶು ವೈಧ್ಯಾಧಿಕಾರಿ ಡಾ||ಮಂಜುನಾಥ್ ಮಾತನಾಡಿ,ಸರ್ಕಾರದವತಿಯಿಂದ ರೈತರಿಗಾಗಿ ಸಾಕಷ್ಟು ಸೌಲಭ್ಯಗಳಿವೆ ಅಂತೆಯೇ ತಮ್ಮ ಪಶು ಇಲಾಖೆವತಿಯಿಂದ ಉಚಿತ ಬಿತ್ತನೆ ಬೀಜ,ರಾಸುಗಳಿಗೆ ಉಚಿತ ಲಸಿಕೆ ಹಾಕುವ ಕಾರ್ಯಕ್ರಮ,ಗೊಬ್ಬರ ವಿತರಣೆಯನ್ನು ಮಾಡಲಾಗುತ್ತಿದೆ. ಕಳೆದ ಎರಡು-ಮೂರು ವರ್ಷಗಳಿಂದ ಈ ಭಾಗದಲ್ಲಿ ಬರಗಾಲ ವ್ಯಾಪಿಸಿದ್ದು ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ,ಮೇವಿಲ್ಲದೆ ರೈತರು ದನಕರುಗಳನ್ನು ಖಾಸಾಯಿ ಖಾನೆಗೆ ದೂಡುತ್ತಿದ್ದಾರೆ.ಇದನ್ನು ಅರಿತ ಸರ್ಕಾರ ಜಾನುವಾರುಗಳಿಗೆ ಅಗತ್ಯವಾಗಿ ಬೇಕಾಗಿರುವ ಮೇವನ್ನು ಬೇಳೆದುಕೊಳ್ಳಲು ರೈತರಿಗೆ ಉಚಿತವಾಗಿ ಮೇವಿಗೆ ಯೋಗ್ಯವಾದ ಜೋಳವನ್ನು ನೀಡುತ್ತಿದೆ.ಈ ಜೋಳವನ್ನು ಭಿತ್ತಿ ಕಟಾವು ಮಾಡಿದ ನಂತರ ಸ್ವಲ್ಪ ನೀರು ಹಾಯಿಸಿದರೆ ಪುನ: ಚಿಗುರುತ್ತದೆ ಎಂದರು. ರಾಸುಗಳಿಗೆ ಬರುವ ಕಲುಬಾಯಿ ರೋಗಕ್ಕೆ ಲಸ

ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸಿ: ಕೃಷ್ಣಪ್ಪ

ನಗರ ಪ್ರದೇಶಗಳ ಶಾಲೆಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ಅಭ್ಯಾಸಿಸುತ್ತಿರುವ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು, ಓದು,ಕ್ರೀಡೆ,ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಕೊಂಡಿರುತ್ತಾರೆ.ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರ್ತಿಸಿ,ಪ್ರೋತ್ಸಾಹಿಸಿ,ಬೆಳೆಸುವ ಕಾರ್ಯವನ್ನು ಹಿರಿಯರಾದ ನಾವು ಮಾಡಬೇಕಿದೆ ಎಂದು ಕನಕದಾಸ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಪ್ಪ ಅಭಿಪ್ರಾಯಪಟ್ಟರು. ಹುಳಿಯಾರಿನ ಶ್ರೀಕನಕದಾಸ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದವತಿಯಿಂದ ಆಯೋಜಿಸಿದ್ದ ಪ್ರತಿಭಾಪುರಸ್ಕಾರ ಹಾಗೂ 2013-14ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷೆತವಹಿಸಿ ಮಾತನಾಡಿದರು. ಕನಕದಾಸ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದವತಿಯಿಂದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾಪುರಸ್ಕಾರವನ್ನು ಹಾಗೂ ಸಂಘದ ಕಾರ್ಯದರ್ಶಿ ಶಂಕರ್ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿದರು. ವಿದ್ಯಾರ್ಥಿಗಳು ತಾವು ಓದಿದ ಶಾಲೆಯನ್ನು ಎಂದಿಗೂ ಮರೆಯದೇ, ಓದು ಮುಗಿದು ಯಾವುದೋ ಕೆಲಸಕ್ಕೆ ಸೇರಿ ಸಂಬಳ ಪಡೆಯುವ ಹಂತ ತಲುಪಿದಾಗ ತಾನು ಈ ಸ್ಥಾನ ಪಡೆಯಲು ಕಾರಣವಾದ ಶಾಲೆಯ ಬಗ್ಗೆ ಯೋಚಿಸಿ, ತಮ್ಮ ದುಡಿಮೆಯಲ್ಲಿನ ಸ್ವಲ್ಪಭಾಗವನ್ನು ಆ ಶಾಲೆಗೆ ಸಹಾಯ ಮಾಡುವ ವಿಶಾಲ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದರು.ಪ್ರತಿಭೆ ಎ

ಶಾಲೆಗೆ ಗೈರುಹಾಜರಾದ ಹಿಂದಿ ಶಿಕ್ಷಕನ ವಿರುದ್ದ ಪ್ರತಿಭಟನೆ

        ಕಳೆದ ಒಂದೂವರೆ ವರ್ಷದಿಂದ ಶಾಲೆಗೆ ಸರಿಯಾಗಿ ಬಾರದೆ ಗೈರುಹಾಜರಾಗುತ್ತಿದ್ದ ಹುಳಿಯಾರು ಹೋಬಳಿ ಹೊಯ್ಸಲಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿ ಶಿಕ್ಷಕ ಆರ್. ಪರಶಿವಮೂರ್ತಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹೊಯ್ಸಲಕಟ್ಟೆ ಕರ್ನಾಟಕ ರಕ್ಷಣಾ ವೇದಿಕೆಯವರು ಹಾಗೂ ಗ್ರಾಮಸ್ಥರು ಶಾಲೆ ಮುಖ್ಯ ದ್ವಾರಕ್ಕೆ ಬೀಗ ಜಡಿದು ಶುಕ್ರವಾರ ಪ್ರತಿಭಟಿಸಿದ್ದಾರೆ.   ಹೊಯ್ಸಲಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿ ಶಿಕ್ಷಕ ಆರ್. ಪರಶಿವಮೂರ್ತಿ ಶಾಲೆಗೆ ಗೈರುಹಾಜರಾಗಿದ್ದಾರೆಂದು ಆರೋಪಿಸಿ,ಕರ್ನಾಟಕ ರಕ್ಷಣಾ ವೇದಿಕೆಯವರು ಹಾಗೂ ಗ್ರಾಮಸ್ಥರು ಶಾಲೆ ಮುಖ್ಯ ದ್ವಾರಕ್ಕೆ ಬೀಗ ಜಡಿದು ಶುಕ್ರವಾರ ಪ್ರತಿಭಟಿಸಿದ್ದಾರೆ.         ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸರ್ಕಾರಿ ನೌಕರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಆರ್. ಪರಶಿವಮೂರ್ತಿ ಶಾಲೆಗೆ ಸರಿಯಾಗಿ ಬಾರದೇ ತಿಂಗಳಿಗೊಮ್ಮೆ ಬಂದು ಹಾಜರಾತಿ ಹಾಕಿ ಸಂಬಳ ಪಡೆಯುತ್ತಿದ್ದಾರೆ,ಅಲ್ಲದೆ ತನ್ನ ಪ್ರಭಾವದಿಂದ ಮುಖ್ಯಶಿಕ್ಷಕರನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ತನಗೆ ಬೇಕಾದ ಶಾಲೆಗೆ ಬಂದು ಹೋಗುತ್ತಿದ್ದಾರೆ ಎಂದು ಗ್ರಾಮಸ್ಥರಾದ ಬಾದೇಗೌಡ ದೂರಿದ್ದಾರೆ. ಅತಿಯಾದ ರಾಜಕೀಯ ಆಸಕ್ತಿ ಹೊಂದಿರುವ ಈತ ಈ ಬಾರಿಯ ರಾಜ್ಯ ಸರ್ಕಾರಿ ನೌಕರರ ಸಂಗದ ಚುನಾವಣೆಯಲ್ಲಿ ಸ್ವರ್ಧಿಸಿದ್ದಾರೆ,ಅಲ್ಲದೆ

ಚಿ.ನಾ.ಹಳ್ಳಿ : ತಾ.27ರ ಗುರುವಾರದಿಂದ ಹೆಚ್ಚುವರಿ ನಫೆಡ್ ಪ್ರಾರಂಭ

                   ಚಿಕ್ಕನಾಯಕನಹಳ್ಳಿ ಉಪಕೃಷಿಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ತಾ.27ರ ಗುರುವಾರದಿಂದ ಹೆಚ್ಚುವರಿ ನಫೆಡ್ ಕೊಬ್ಬರಿ ಖರೀದಿಕೇಂದ್ರ ಪ್ರಾರಂಭಗೊಳ್ಳಲಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ಕೊಬ್ಬರಿಯನ್ನು ಖರೀದಿಸಲು ಸರ್ಕಾರ ಮುಂದಾಗಿದ್ದು,ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಬೆಂಬಲಬೆಲೆ 5500ರೂ ಮತ್ತು ಸಹಾಯಧನ 1000ರೂ ನಂತೆ ಖರೀದಿ ನಡೆಯಲಿದೆ. ಈಗಾಗಲೇ ಸೆಪ್ಟಂಬರ್ ತಿಂಗಳವರೆಗೆ ಕೊಬ್ಬರಿ ಬಿಡಲು ರೈತರಿಗೆ ದಾಸ್ತಾನು ತರುವ ದಿನಾಂಕಕ್ಕೆ ಟೋಕನನ್ನು ನಫೆಡ್ ಅಧಿಕಾರಿಗಳು ನೀಡಿದ್ದು, ತಾಲ್ಲೂಕಿನ ಎಲ್ಲಾ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೊಬ್ಬರಿಯನ್ನು ಖರೀದಿಕೇಂದ್ರದಲ್ಲಿ ಮಾರಾಟ ಮಾಡಿಕೊಳ್ಳುವಂತೆ ಎಪಿಎಂಸಿ ಅಧ್ಯಕ್ಷ ಶಿವರಾಜ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಹಮತ್ ಉಲ್ಲಾ ಸಂತಸ: ಖರ್ಗೆಗೆ ಕ್ಯಾಬಿನೆಟ್ ದರ್ಜೆ ರೈಲ್ವೆ ಖಾತೆ

                   ಕೇಂದ್ರ ಸರ್ಕಾರದ ಮಹೋನ್ನತ ಹುದ್ದೆಗಳಲ್ಲಿ ಒಂದಾದ ಕ್ಯಾಬಿನೆಟ್ ದರ್ಜೆಯ ರೈಲ್ವೆ ಖಾತೆಯನ್ನು ಕರ್ನಾಟಕದ ದಲಿತ ಸಮುದಾಯದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ನೀಡಿರುವುದು ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ಪಡುವಂತಹ ಸಂಗತಿಯಾಗಿದೆ ಎಂದು ಮಾಜಿ ರೈಲ್ವೆ ಬೋರ್ಡ್ ಸದಸ್ಯ ಹುಳಿಯಾರಿನ ರಹಮತ್ ಉಲ್ಲಾ ಸಾಬ್ ಸಂತಸ ವ್ಯಕ್ತಪಡಿಸಿದ್ದಾರೆ. ಮಾಜಿ ರೈಲ್ವೆ ಬೋರ್ಡ್ ಸದಸ್ಯ ಹುಳಿಯಾರಿನ ರಹಮತ್ ಉಲ್ಲಾ ಸಾಬ್.                    ಕಾರ್ಮಿಕ ಖಾತೆ ಸಚಿವರಾಗಿದ್ದ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಡ್ತಿ ನೀಡುವ ಮೂಲಕ ಅವರನ್ನು ಕೇಂದ್ರ ರೈಲ್ವೆ ಸಚಿವರನ್ನಾಗಿ ಮಾಡಿರುವ ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಹೃದಯಪೂರ್ವಕ ಅಭಿನಂಧನೆ ಸಲ್ಲಿಸಿದ್ದಾರೆ. ಈ ಹಿಂದೆ ಪಿ.ವಿ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ (1991-1995) ಕರ್ನಾಟಕದ ಜಾಫರ್ ಷರೀಫ್ ಅವರು ರೈಲ್ವೆ ಸಚಿವರಾಗಿದ್ದರು. ಇತ್ತೀಚಿಗೆ ಕೆಎಚ್ ಮುನಿಯಪ್ಪ ಅವರು ರೈಲ್ವೆ ಖಾತೆ ರಾಜ್ಯ ಸ‌ಚಿವರಾಗಿದ್ದರು ಈಗ ಮತ್ತೊಮ್ಮೆ ಕರ್ನಾಟಕದವರು ಈ ಕ್ಯಾಬಿನೆಟ್ ಹುದ್ದೆಯನ್ನು ಅಲಂಕರಿಸಿದ್ದಾರೆ. ಕನ್ನಡಿಗರಿಗಾಗಿ ಹೊಸ ಯೋಜನೆಗಳನ್ನು,ಉದ್ಯೋಗಗಳನ್ನು ಕಲ್ಪಿಸಿಕೊಡುವ ಮೂಲಕ ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವಂತೆ ಹಾರೈಸಿದ್ದಾರೆ.

ಉತ್ತಮ ತರಬೇತಿಯಿಂದ ಉತ್ತಮ ಸಾಧನೆ ಸಾಧ್ಯ; ರವೀಶ್

                      ಜಗತ್ತಿನಾದ್ಯಂತ ಇಂದು ಹೆಚ್ಚಿನ ತಾಂತ್ರಿಕತೆಯಿಂದಾಗಿ ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತಿವೆ ಹಾಗೂ ಅಧಿಕ ಕೈಗಾರಿಕೆಗಳು ಸ್ಥಾಪನೆಯಾಗುತ್ತಿದ್ದು,ಉತ್ತಮ ತರಬೇತಿ ಪಡೆದವರನ್ನು ಗುರ್ತಿಸಿ ಕೆಲಸಕ್ಕೆ ತೆಗೆದುಕೊಳ್ಳುವ ಕಾರ್ಯ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ತಾಂತ್ರಿಕಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ಉತ್ತಮ ತರಬೇತಿ ಅನಿವಾರ್ಯವಾಗಿದೆ ಎಂದು ಹುಳಿಯಾರು ರೋಟರಿ ಅಧ್ಯಕ್ಷ ಈ.ರವೀಶ್ ತಿಳಿಸಿದರು.                 ಹುಳಿಯಾರಿನ ಯೋಗಿನಾರಾಯಣ ಕೈಗಾರಿಕಾ ತರಬೇತಿ ಕಾಲೇಜಿನ 7ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ರೋಟರಿ ಸಂಸ್ಥೆವತಿಯಿಂದ ಕಾಲೇಜಿಗೆ ಉಚಿತವಾಗಿ ಕಂಪ್ಯೂಟರನ್ನು ವಿತರಿಸಿ, ಅವರು ಮಾತನಾಡಿದರು. ಹುಳಿಯಾರಿನ ಯೋಗಿನಾರಾಯಣ ಐಟಿಐ ಕಾಲೇಜಿಗೆ ರೋಟರಿ ಸಂಸ್ಥೆವತಿಯಿಂದ ರೋಟರಿ ಅಧ್ಯಕ್ಷ ಈ.ರವೀಶ್ ಉಚಿತವಾಗಿ ಕಂಪ್ಯೂಟರ್ ವಿತರಿಸಿದರು.                ಪ್ರಸ್ತುತ ಪ್ರತಿಯೊಂದು ಕ್ಷೇತ್ರದಲ್ಲಿ ಪೈಪೋಟಿಯಿದ್ದು, ಉತ್ತಮ ವಿದ್ಯಾಭ್ಯಾಸವಿದ್ದರೂ ಕೆಲಸಕ್ಕಾಗಿ ಅಲೆಯುವ ಪರಿಸ್ಥಿತಿಯನ್ನು ಎದುರಾಗಿದೆ.ಆದರೆ ತಾಂತ್ರಿಕ ಶಿಕ್ಷಣ ಪಡೆದವರು ತಾವು ಮಾಡುವ ಕಾರ್ಯದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಾಗ ಕೆಲಸಗಳೇ ತಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದರು. ಯೋಗಿನಾರಾಯಣ ಐ.ಟಿ.ಐ ಕಾಲೇಜಿನಲ್ಲಿ ಉತ್ತಮ ಶಿಕ್ಷಕರಿದ್ದು ಅ

ನಫೆಡ್ ಕೇಂದ್ರಕ್ಕೆ ಚಾಲನೆ

ಹುಳಿಯಾರಿನ ಎಪಿಎಂಸಿಯಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ನಫೆಡ್ ಕೇಂದ್ರಕ್ಕೆ ಗುರುವಾರ ಚಾಲನೆ ನೀಡಿದರು.  ಸಂಸದ ಜಿ.ಎಸ್.ಬಸವರಾಜು, ಎಪಿಎಂಸಿ ಅಧ್ಯಕ್ಷ ಶಿವರಾಜು, ಉಪಾಧ್ಯಕ್ಷ ಸಿದ್ರಾಮಯ್ಯ,  ನಂದಿಹಳ್ಳಿ ಶಿವಣ್ಣ ಇದ್ದಾರೆ.

ತವರು ಕ್ಷೇತ್ರವನ್ನು ಎಂದಿಗೂ ಕಡೆಗಣಿಸಲ್ಲ :ಸಚಿವ ಟಿ.ಬಿ.ಜೆ

                   ತನಗೆ ಮೊದಲ ಬಾರಿ ಗೆಲವು ತಂದು ಕೊಟ್ಟ ಕಳ್ಳಂಬೆಳ್ಳ ಕ್ಷೇತ್ರ ಹಾಗೂ ಕ್ಷೇತ್ರದ ಹೋಬಳಿಗಳಲ್ಲಿ ಪ್ರಮುಖವಾದ ಹುಳಿಯಾರು ಹೋಬಳಿ ತನ್ನ ತವರಿದ್ದಂತೆ,ಇಲ್ಲಿಯ ಜನ ತನ್ನನ್ನು ಮೊದಲ ಬಾರಿ ಶಾಸಕ ಹಾಗೂ ಕೃಷಿಸಚಿವರನ್ನಾಗಿ ಆಯ್ಕೆ ಮಾಡಿದ್ದರು, ಅದರಂತೆ ಈ ಬಾರಿ ಕಾನೂನು ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಆಯ್ಕೆ ಮಾಡುವಲ್ಲಿ  ತನ್ನನ್ನು ಬೆಂಬಲಿಸಿರುವ ತನ್ನ ತವರು ಕ್ಷೇತ್ರದಂತಿರುವ ಹುಳಿಯಾರನ್ನು ಎಂದಿಗೂ ಮರೆಯುವುದಿಲ್ಲ ಹಾಗೂ ಕ್ಷೇತ್ರದ  ಅಭಿವೃದ್ದಿಗಾಗಿ ಶ್ರಮಿಸುವೆ ಎಂದು ರಾಜ್ಯ ಕಾನೂನು ಸಚಿವರಾದ ಟಿ.ಬಿ.ಜಯಚಂದ್ರ ತಿಳಿಸಿದರು.                            ತಿಪಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಫೆಡ್ ಕೇಂದ್ರದ ಉದ್ಘಾಟನೆ ನೆರವೇರಿಸಿ ಶಿರಾಕ್ಕೆ ವಾಪಸ್ ತೆರಳುವ ಮಾರ್ಗ ಮಧ್ಯೆ ಹುಳಿಯಾರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿ ಹೋಬಳಿಯ ಸಮಸ್ಯೆಗಳನ್ನು ಆಲಿಸಿದರು. ಹುಳಿಯಾರಿಗೆ ಬುಧವಾರ ಸಂಜೆ ಭೇಟಿ ನೀಡಿದ ಸಚಿವ ಟಿ.ಬಿ.ಜಯಚಂದ್ರ ಜನರ ಸಮಸ್ಯೆಗಳನ್ನು ಆಲಿಸಿದರು.                   ನಾನು ರೈತರ ಸಂಕಷ್ಟವನ್ನು ಅರಿತಿದ್ದು, ಕೃಷಿ ಸಚಿವರಾಗಿದ್ದಾಗ ರೈತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದೆವು. ಅಲ್ಲದೆ ಈ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಕಾರ್ಯವಾಗಿ ತೆಂಗುಬೆಳೆಗಾರರಿಗೆ ಅನುಕೂಲವಾಗುವಂತೆ ಪ್ರ

ಹುಳಿಯಾರಿನಲ್ಲಿ 20 ರಿಂದ ನಫೆಡ್ ಪ್ರಾರಂಭ

            ಇಲ್ಲಿನ ಕೃಷಿಉತ್ಪನ್ನ ಮಾರುಕಟ್ಟೆಯಲ್ಲಿ ತಾ.20ರ ಗುರುವಾರದಿಂದ ನಫೆಡ್ ಕೊಬ್ಬರಿ ಖರೀದಿಕೇಂದ್ರ ಪ್ರಾರಂಭಗೊಳ್ಳಲಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ಕೊಬ್ಬರಿಯನ್ನು ಖರೀದಿಸಲು ಸರ್ಕಾರ ಮುಂದಾಗಿದ್ದು,ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಬೆಂಬಲಬೆಲೆ 5500ರೂ ಮತ್ತು ಸಹಾಯಧನ 1000ರೂ ನಂತೆ ಖರೀದಿ ನಡೆಯಲಿದೆ.             ನಫೆಡ್ ಕೇಂದ್ರಕ್ಕೆ ಕೊಬ್ಬರಿ ಮಾರುವವರು ಪಹಣಿ ಮತ್ತು ತೋಟಗಾರಿಕೆ ಇಲಾಖೆಯಿಮ್ದ ಪಡೆದ ದಾಸ್ತಾನು ಇಳುವರಿ ದೃಢೀಕರಣ ಪತ್ರ ಹಾಜರು ಪಡಿಸಿ,ದಾಸ್ತಾನು ತರುವ ದಿನಾಂಕಕ್ಕೆ ಟೋಕನನ್ನು ನಫೆಡ್ ಅಧಿಕಾರಿಗಳಿಂದ ಪಡೆಯುಬೇಕಿದೆ. ತಾಲ್ಲೂಕಿನ ಎಲ್ಲಾ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೊಬ್ಬರಿಯನ್ನು ಖರೀದಿಕೇಂದ್ರದಲ್ಲಿ ಮಾರಾಟ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

ಅನುವುಗಾರರಿಗೆ ತರಬೇತಿ ಕಾರ್ಯಕ್ರಮ

ಹುಳಿಯಾರಿನಲ್ಲಿ ಕೃಷಿಇಲಾಖೆವತಿಯಿಂದ ಹಮ್ಮಿಕೊಂಡಿದ್ದದ ಭೂ ಚೇತನ ಯೋಜನೆಯಡಿ ಅನುವುಗಾರರಿಗೆ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ ನೆರವೇರಿಸಿದರು.ಕೊನೇಹಳ್ಳಿ ಕೃಷಿ ವಿಜ್ಞಾನಿ ಮಮತ,ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಹೆಚ್.ಎಸ್.ಕೃಷ್ಣಪ್ಪ,ಕೃಷಿ ಅಧಿಕಾರಿಗಳಾದ ನೂರುಲ್ಲಾ,ಸೋಮಶೇಖರ್ ಇದ್ದಾರೆ.

ಪ್ರತಿಭಾ ಪುರಸ್ಕಾರ

               ಚಿ.ನಾ.ಹಳ್ಳಿ ತಾಲ್ಲೂಕು ವೀರಶೈವ ನೌಕರರ ಸಂಘದವತಿಯಿಂದ ಜುಲೈ 7ರಂದು ಹುಳಿಯಾರಿನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ.             ಈ ಸಂಧರ್ಭದಲ್ಲಿ ಚಿ.ನಾ.ಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ವ್ಯಾಸಾಂಗ ಮಾಡಿ 2011-12 ಹಾಗೂ 2012-13ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತ ಅಧಿಕ ಅಂಕಗಳಿಸಿದ ವೀರಶೈವ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಿದ್ದು,ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಜೆರಾಕ್ಸ್ ಪ್ರತಿ ಹಾಗೂ ಸ್ವವಿಳಾಸವನ್ನು ಸಂಘದ ಕಾರ್ಯದರ್ಶಿಯವರಿಗೆ ತಲುಪಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷ ಎಸ್.ದಿನೇಶ್(9141770710),ಕಾರ್ಯದರ್ಶಿ ಮರುಳಸಿದ್ದಯ್ಯ(9902347085) ಅವರನ್ನು ಸಂಪರ್ಕಿಸಬಹುದಾಗಿದೆ.

ಕೊಬ್ಬರಿ ಖರೀದಿಕೇಂದ್ರ ತೆರೆಯುವಲ್ಲಿ ವಿಳಂಬ: ಗೊಂದಲದಲ್ಲಿ ತೆಂಗು ಬೆಳೆಗಾಗರು

         ಸಂಕಷ್ಟದಲ್ಲಿದ್ದ ತೆಂಗುಬೆಳೆಗಾರರಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಸದನದಲ್ಲಿ ಚರ್ಚೆ ನಡೆದು ಜೂನ್ ಹನ್ನೆರಡರಿಂದಲೇ ಕೊಬ್ಬರಿ ಉತ್ಪಾದನಾ ಪ್ರದೇಶಗಳಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ (ನಾಫೆಡ್) ತೆರೆದು ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಯನ್ನು ಸಹಾಯಧನ ಸೇರಿದಂತೆ 6500ರೂಗೆ ಖರೀದಿಸುವಂತೆ ರಾಜ್ಯ ಸರ್ಕಾರ ಆದೇಶಹೊರಡಿಸಿದ್ದರೂ ಸಹ ಎಲ್ಲಿಯೂ ಖರೀದಿ ಕೇಂದ್ರಗಳು ನಿಗಧಿತವಾಗಿ ಪ್ರಾರಂಭವಾಗದೇ ತೆಂಗುಬೆಳೆಗಾರು ಗೊಂದಲಕ್ಕಿಡಾಗಿದ್ದಾರೆ.         ಅಂತೆಯೇ ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇದುವರೆಗೂ ನಾಫೆಡ್ ಕೊಬ್ಬರಿ ಖರೀದಿಕೇಂದ್ರ ಪ್ರಾರಂಭವಾಗದೆ ಈ ಭಾಗದ ತೆಂಗು ಬೆಳೆಗಾರರು ಮಾರುಕಟ್ಟೆಗೆ ನಿತ್ಯವೂ ಅಲೆಯುವಂತಾಗಿದೆ.       ತೆಂಗು ಹಾಗೂ ಕೊಬ್ಬರಿ ಬೆಲೆಯಲ್ಲಿ ಬಾರಿ ಇಳಿಕೆಯಿಂದಾಗಿ ಮಾರುಕಟ್ಟೆಯಲ್ಲಿನ ನಿಂಬೆಹಣ್ಣಿನ ಬೆಲೆಗಿಂತ ಕಡಿಮೆಯಿದೆ ಎಂದು ವಿಧಾನಸಭೆಯಲ್ಲಿ ಕೂಡ ಚರ್ಚೆನಡೆಯುವಂತಾದ ಹಿನ್ನಲೆಯಲ್ಲಿ ತೆಂಗುಬೆಳೆಗಾರ ಸಂಕಷ್ಟ ಅರಿತ ಸರ್ಕಾರ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಸಾವಿರ ರೂ ಸಹಾಯಧನ ನೀಡಿ ಖರೀದಿಗೆ ಒಪ್ಪಿಗೆ ನೀಡಿತ್ತು. ತೆಂಗಿನ ಇಳುವರಿಯಲ್ಲಿ ಕುಂಟಿತ ಹಾಗೂ ಕೊಬ್ಬರಿಗೆ ಸೂಕ್ತ ಬೆಲೆ ದೊರೆಯದೆ ಕಂಗಾಲಾಗಿದ್ದ ತೆಂಗುಬೆಳೆಗಾರಿಗೆ ಇಂತಹ ಸಮಯದಲ್ಲಿ ರಾಜ್ಯ ಸರ್ಕಾರದ ಈ ಆದೇಶ ಸಂತಸ ತಂದಿತ್ತು. ಸರ್ಕಾ

ಜೂ.14: ವಿಶ್ವ ರಕ್ತದಾನಿಗಳ ದಿನ:ದಶಮಾನೋತ್ಸವ ಸಂಭ್ರಮ

ಪ್ರಾಣಾಪಾಯದ ಸ್ಥಿತಿಯಲ್ಲಿರುವವರನ್ನು ಬದುಕಿಸಲು ನೀವು ವೈದ್ಯರೇ ಆಗಿರಬೇಕಿಲ್ಲ. ನೀವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್‌ ರಕ್ತವು, ಮೂರು ವ್ಯಕ್ತಿಗಳ ಜೀವವನ್ನು ಉಳಿಸಬಲ್ಲದು. ಆದುದರಿಂದ ಎಲ್ಲಾ ದಾನಗಳಿಗಿಂತ ಮಿಗಿಲಾದ ಹಾಗೂ ಸಾವಿನ ದವಡೆಗಳಲ್ಲಿ ಸಿಲುಕಿರುವವರನ್ನು ಬದುಕಿಸಬಲ್ಲ ಮತ್ತು ಅತ್ಯಂತ ಶ್ರೇಷ್ಠವಾದ ದಾನವಾದ ರಕ್ತದಾನವನ್ನು ಇಂದೇ ಮಾಡಿರಿ.   ಕಾರ್ಲ್ ಲ್ಯಾಂಡ್‌ ಸ್ತ್ರೈನೆರ್ ನಾಮಾಂಕಿತ ವೈದ್ಯ ಹಾಗೂ ಬಯಾಲಜಿಸ್ಟ್‌ ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆಧುನಿಕ ರಕ್ತಪೂರಣದ ಅನ್ವೇಷಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ವೈದ್ಯರು, 1901ರಲ್ಲಿ ರಕ್ತದ ಎ ಬಿ ಒ ಗುಂಪುಗಳನ್ನು ಪತ್ತೆಹಚ್ಚಿದ ಹಾಗೂ ಆಧುನಿಕ ಪದ್ಧತಿಯ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ಸಂಶೋಧಕರೂ ಹೌದು. 1937ರಲ್ಲಿ ಅಲೆಕ್ಸಾಂಡರ್‌ ವೈನರ್‌ ಎನ್ನುವ ಸಂಶೋಧಕರೊಂದಿಗೆ "ರೀಸಸ್‌ ಫ್ಯಾಕ್ಟರ್‌' ಎನ್ನುವ ಅಂಶವನ್ನು ಗುರುತಿಸುವ ಮೂಲಕ, ರೋಗಿಯ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸದಂತೆ ರಕ್ತಪೂರಣವನ್ನು ಮಾಡಲು ಕಾರಣಕರ್ತರೆನಿಸಿದ್ದರು.ಈ ವೈದ್ಯರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ, ಇವರ ಜನ್ಮದಿನವನ್ನು ರಕ್ತದಾನಿಗಳ ದಿನವನ್ನಾಗಿ ಆಚರಿಸುವ. ಮೂಲಕ ಗೌರವಿಸಲಾಗಿದೆ. ವಿಶ್ವ ರಕ್ತದಾನಿಗಳ ದಿನವನ್ನು ಜೂನ್‌ 14, 2004ರಂದು ಮೊತ್ತ ಮೊದಲ ಬಾರಿಗೆ ಆಚರಿಸಲಾಗಿತ್ತು. ಇಂದಿಗೆ ಹತ್ತು ವರ