ವಿಷಯಕ್ಕೆ ಹೋಗಿ

ಶಿವರಾತ್ರಿ ಶಿವನ ದಿವ್ಯ ಆವತರಣೆ ಹಾಗೂ ದಿವ್ಯ ಕರ್ಮವನ್ನು ನೆನಪಿಸುವ ಹಬ್ಬ

ಶಿವರಾತ್ರಿ ಶಿವನ ದಿವ್ಯ ಆವತರಣೆ ಹಾಗೂ ದಿವ್ಯ ಕರ್ಮವನ್ನು ನೆನಪಿಸುವ ಹಬ್ಬ
ಲೇಖನ: ಬ್ರಹ್ಮಕುಮಾರಿ ಗೀತಕ್ಕ
ಆಧ್ಯಾತ್ಮ ಶಿಕ್ಷಕರು
ಪ್ರಜಾಪಿತ ಬ್ಯಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ
ಹುಳಿಯಾರು

ಭಾರತ ದೇಶ ಆಧ್ಯಾತ್ಮ ಪ್ರಧಾನ ದೇಶವಾಗಿದೆ. ಇಲ್ಲಿ ಆಚರಿಸುವಷ್ಟು ಹಬ್ಬಗಳನ್ನು ಬಹುಶಃ ಬೇರೆ ಯಾವ ದೇಶಗಳಲ್ಲಿಯೂ ಆಚರಿಸಲಿಕ್ಕಿಲ್ಲ.ಸಮಯ ಪ್ರತಿ ಸಮಯವಾಗಿ ಈ ಹಬ್ಬಗಳು ಆಧ್ಯಾತ್ಮಿಕತೆಯ ರಹಸ್ಯವನ್ನು ಜಾಗೃತ ಮಾಡುತ್ತವೆ. ಇದರಲ್ಲಿ ಶಿವರಾತ್ರಿಯೂ ಸಹ ಒಂದು ವಿಶಿಷ್ಟ ಹಾಗೂ ಮುಖ್ಯವಾದ ಹಬ್ಬವಾಗಿದೆ.

ಮಹಾಶಿವರಾತ್ರಿ ಹೆಸರಿನಂತೆಯೇ ಮಹಾನ್ ಕೂಡಾವಾಗಿದೆ.ಏಕೆಂದರೆ ಈ ಮಹಾನತೆಯಿಂದ ಕೂಡಿದ ಹಬ್ಬ ಸಮಸ್ತ ಸಂಸಾರದ ಸರ್ವಆತ್ಮಗಳಿಗೆ ಪರಮಪಿತ ಪರಮಾತ್ಮ ಶಿವನ ಸ್ಮೃತಿಯನ್ನು ತರಿಸುತ್ತವೆ. ಭಾರತದಲ್ಲಿ ಶಿವಲಿಂಗ ಇರುವಂತಹ ಮಂದಿರಗಳು ಲಕ್ಷಾಂತರ. ಬಹುಶಃ ಎಲ್ಲಿ ಹೋದರೂ ಎಲ್ಲಾ ಮಂದಿರದಲ್ಲಿಯೂ ಅವಶ್ಯ ಶಿವಲಿಂಗವನ್ನು ನೋಡುತ್ತೇವೆ. ಶಿವನ ಗಾಯನ ವಿಲ್ಲದ ಗ್ರಂಥವೇ ಇಲ್ಲಾ, ಆದರೂ ಸಹ ವಿಚಿತ್ರವೇನೆಂದರೆ ಶಿವನ ಪರಿಚಯಕ್ಕೆ ಮನುಷ್ಯಾತ್ಮರು ಅಪರಿಚಿತರಾಗಿದ್ದಾರೆ.

ಭಾರತದ ಮೂಲೆ ಮೂಲೆಗಳಲ್ಲಿ ಶಿವನ ಭಿನ್ನ ಭಿನ್ನ ಹೆಸರುಗಳಲ್ಲಿ ನಿರಾತಾರ ಜ್ಯೋರ್ತಲಿಂಗಾ ಶಿವಪರಮಾತ್ಮನ ಆರಾಧನೆ ನಡೆಯುತ್ತದೆ. ಉದಾಹರಣೆಗೆ ಅಮರನಾಥ, ವಿಶ್ವನಾಥ, ಸೋಮನಾಥ, ಬಬಲನಾಥ, ಪಶುಪತಿನಾಥ ಇತ್ಯಾದಿ ವಾಸ್ತವಿಕವಾಗಿ ಶ್ರೀಕೃಷ್ಣ ಹಾಗೂ ಮರ್ಯಾದ ಪುರುಷೋತ್ತಮ ಶ್ರೀರಾಮನಿಗೂ ಇಷ್ಟವಾದ ದೇವರೆಂದರೆ ಶಿವನೆ ಆಗಿದ್ದಾನೆ.
ಗೋಪೇಶ್ವರದಲ್ಲಿ ಹಾಗೂ ರಾಮೇಶ್ವರದಲ್ಲಿ ವಿಶಾಲವಾದ ಶಿವನಮಂದಿರ ಇಂದಿಗೂ ಮೂಕ ಸಾಕ್ಷಿಯಾಗಿ ನಿಂತಿದೆ. ಇಂತಹ ಶಿವನನ್ನು ಭಾರತದಲ್ಲಿ ಜ್ಯೋರ್ತಲಿಂಗಾ ಶಿವಪರಮಾತ್ಮನೆಂದು ಮೆಕ್ಕಾದಲ್ಲಿ ಸಂಗ್ ಎ. ಅಸ್ವದ್ ಎಂದು, ಮಿಶ್ರದಲ್ಲಿ ಒಸಿರಿಸ್ ಎಂದು, ಬೆಬಲೋನಾದಲ್ಲಿ ಶಿಮಾನ್ ಎಂದು ಹೀಗೆ ಅನೇಕರು ಅನೇಕ ಹೆಸರಿನಲ್ಲಿ ಶಿವನನ್ನು ಪೂಜಿಸುತ್ತಿದ್ದಾರೆ.
@ ಶಿವರಾತ್ರಿ ಎಂದೇ ಏಕೆ ಆಚರಿಸುತ್ತೇವೆ?
ಜಗತ್ತಿನಲ್ಲಿ ಮಾನವನ ಹುಟ್ಟು ಹಬ್ಬವನ್ನು ಆಚರಿಸಬೇಕಾದರೆ ಜನ್ಮದಿನೋತ್ಸವ ಎಂದು ಹೇಳುತ್ತಾರೆ. ಆದರೆ ಶಿವನ ಅವತರಣೆ(ಜನ್ಮ)ಕ್ಕೆ ಮಾತ್ರ ಶಿವರಾತ್ರಿ ಎಂದೇ ಏಕೆ ಕರೆಯುತ್ತೇವೆ, ಶಿವದಿನವೆಂದೂ ಹೇಳುವುದಿಲ್ಲ ಏಕೆ? ಈ ರಾತ್ರಿ ಸ್ಥೂಲ ಅಂಧಕಾರದ ವಾಚಕವಲ್ಲ. ಇದು ಆಧ್ಯಾತ್ಮಿಕ ದೃಷ್ಟಿ ಕೋನದಿಂದ ಕಲ್ಪದ ಅಂತ್ಯದ ಸಮಯ ವ್ಯಾಪ್ತಗೊಂಡ ಘೋರ ಅಜ್ಞಾನ ಹಾಗೂ ತಮೋಪ್ರಧಾನತೆಯ ಪ್ರತೀಕವಾಗಿದೆ. ಯಾವಾಗ ದೃಷ್ಠಿಯಲ್ಲಿ ಅಜ್ಞಾನ, ಅಂಧಕಾರ ಮೊಳಗುತ್ತದೆಯೋ ಆಗ ಕಾಮ, ಕ್ರೋಧ ಮುಂತಾದ ವಿಕಾರಗಳಿಗೆ ವಶೀಭೂತನಾಗಿ ಮಾನವ ದುಃಖಿ ಹಾಗೂ ಅಶಾಂತನಾಗುತ್ತಾನೆ. ಧರ್ಮ ಅಧರ್ಮ ರೂಪ ತಾಳುತ್ತಾದೆ. ಆಗ ಭ್ರಷ್ಟಚಾರ ನಾಲ್ಕು ಕಡೆಯೂ ವ್ಯಾಪಿಸುತ್ತದೆ. ಇಂತಹ ಸಮಯದಲ್ಲಿ ಜ್ಞಾನ ಸೂರ್ಯ ಪರಮಾತ್ಮ ಶಿವ ಅಜ್ಞಾನರೂಪಿ ಅಂಧಕಾರವನ್ನು ವಿನಾಶಮಾಡಲು ಪ್ರಕಟವಾಗುತ್ತಾನೆ. ಇದರ ಪ್ರತೀಕವೇ ಶಿವರಾತ್ರಿ ಹಬ್ಬವಾಗಿದೆ.

@ ಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯ
ಪರಮಪಿತ ಶಿವಪರಮಾತ್ಮ ಒಂದು ರೂಪದಲ್ಲಿದ್ದಾರೆ. ಆದ್ದರಿಂದ ಭಕ್ತ ಜನ ಶಿವಲಿಂಗದ ರೂಪಕ್ಕೆ ಆರಾಧನೆ ಮಾಡುತ್ತಾರೆ. ಅರ ಮೇಲೆ ಹಾಲು ಮಿಶ್ರಿತ ಮಜ್ಜಿಗೆ, ಬಿಲ್ವಪತ್ರೆ, ಎಕ್ಕೆಹೂವನ್ನು ಅಪರ್ಿಸುತ್ತಾರೆ. ಇದರ ರಹಸ್ಯ ತಮ್ಮಲ್ಲಿಯ ವಿಕಾರಗಳನ್ನು ಶಿವನಿಗೆ ಅರ್ಪಿಸಿ ನಿರ್ವಿಕಾರಿಗಳಾಗಿ ಪವಿತ್ರತೆಯ ವ್ರತವನ್ನು ಮಾಡುತ್ತಾರೆ. ಬ್ರಹ್ಮಚಾರ್ಯ ವೃತವೇ ಸತ್ಯ ಉಪವಾಸ. ಏಕೆಂದರೆ ಇದರ ಪಾಲನೆಯಿಂದಲೇ ಮನುಷ್ಯ ಆತ್ಮನು ಪರಮಾತ್ಮನ ಸಾಮಿಪ್ಯ ಪಡೆಯಲು ಸಾಧ್ಯ.
ಹೀಗೆ ಒಂದು ದಿನದ ಜಾಗರಣೆಯಿಂದ ಅವಿನಾಶಿ ಪ್ರಾಪ್ತಿಯಾಗುವುದಿಲ್ಲ. ಆದರೆ ಈ ಕಲಿರೂಪ ಕತ್ತಲೆಯಿಂದ ಆತ್ಮನನ್ನು ಜಾಗೃತ ಮಾಡಲು ಜ್ಞಾನರೂಪಿ ತೈಲವನ್ನು ಹಾಕುತ್ತಾ ಸ್ವಯಂನನ್ನು ಸ್ವಯಂನೇ ಜಾಗೃತ ಮಾಡಿಕೊಳ್ಳಬೇಕು. ಇದುವೇ ಸತ್ಯ ಜಾಗರಣೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...