ಹುಳಿಯಾರು ಶಂಕರಪುರ ಬಡಾವಣೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಆಕಸ್ಮಿಕ ಬೆಂಕಿಯಿಂದ ಸುಟ್ಟು ಕರಕಲಾಗಿರುವ ಬೈಕ್ ನ ಉಳಿದ ಅವಶೇಷ. ಹುಳಿಯಾರು ಶಂಕರಪುರ ಬಡಾವಣೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಆಕಸ್ಮಿಕ ಬೆಂಕಿಯಿಂದಾಗಿ ಸುಟ್ಟುಕರಕಲಾಗಿರುವ ೧೧ ಗುಡಿಸಲುಗಳು ಹಾಗೂ ಅದರಲ್ಲಿ ಆಳಿದುಳಿದ ವಸ್ತುಗಳು. ಇಲ್ಲಿನ ಶಂಕರಪುರ ಬಡಾವಣೆಯಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಆಕಸ್ಮಿಕ ಬೆಂಕಿಯಿಂದ ಸುಮಾರು 11 ಗುಡಿಸಲುಗಳು ಸಂಪೂರ್ಣ ಭಸ್ಮವಾಗಿದ್ದು,ಅದರಲ್ಲಿ ವಾಸಿಸುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಮಂದಿ ಬೀದಿಗೆ ಬಿದ್ದಿರುವ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಬುಧವಾರ ಮಧ್ಯರಾತ್ರಿ ಸರಿಸುಮಾರು 12ರ ಸಮಯದಲ್ಲಿ ಆಕಸ್ಮಿಕವಾಗಿ ಒಂದು ಗುಡಿಸಲಿನಲ್ಲಿ ಹತ್ತಿಕೊಂಡ ಬೆಂಕಿ ಕೆಲವೇ ಸಮಯದಲ್ಲಿ ತನ್ನ ಕೆನ್ನಾಲಿಗೆಯಿಂದ ತನ್ನ ಸುತ್ತಲಿನ 1೦ ಗುಡಿಸಲಿಗೆ ವ್ಯಾಪಿಸಿದ್ದರಿಂದ ಗುಡಿಸಲುಗಳು ಸಂಪೂರ್ಣ ಸುಟ್ಟುಕರಕಲಾಗಿವೆ. ಬೆಂಕಿಗಾಹುತಿಯಾಗಿರುವ ಗುಡಿಸಲುಗಳು ರಾಮಣ್ಣ,ರಂಗಸ್ವಾಮಿ, ದುರ್ಗಜ್ಜಿ,ರಂಗಮ್ಮ,ಶಬ್ಬೀನ,ಭಾಗ್ಯಮ್ಮ, ಸತೀಶ್,ರಂಗಣ್ಣ,ನಾಗಣ್ಣ, ದುರ್ಗಣ್ಣ,ಕೃಷ್ಣಪ್ಪ ಎಂಬುವರು ಎಂದು ತಿಳಿದು ಬಂದಿದ್ದು, ಓಲೆ,ಸೀರೆ,3ಸೈಕಲ್,ಹೊಲಿಗೆ ಯಂತ್ರ ಸೇರಿದಂತೆ ದಿನಸಿ ಪದಾರ್ಥಗಳು,ಮಕ್ಕಳ ಓದಿನ ಪುಸ್ತಕಗಳು,ಬಟ್ಟೆ-ಬರೆ,ಒಂದು ಬೈಕ್,ನಾರಿನ ಹಗ್ಗ ಹಾಗೂ ಸಾಕಿದ್ದ ಕೋಳಿಗಳು ಬೆಂಕಿಯ ಸುಳಿಗೆ ಸಿಕ್ಕಿ ಬೂದಿಯಾಗಿದ್ದು ಸುಮಾರು ಲಕ್ಷಾಂತರ ರೂ ನಷ್ಟ ಸಂಭವಿಸಿದೆ...