ಹುಳಿಯಾರಿನ ನೂತನ ವಾಸವಿ ಕ್ಲಬ್ ನ ಉದ್ಘಾಟನೆಯನ್ನು ಇಂಟರ್ ನ್ಯಾಷನಲ್ ಡಿಸ್ಟ್ರಿಕ್ 301 ಎ ನ ಗವರ್ನರ್ ಎಂ.ಎಲ್.ಉದಯ್ ಕುಮಾರ್ ಜ್ಯೋತಿ ಬೆಳಗಿಸುವ ಮೂಲಕ ನೆರವೇರಿಸಿದರು. ನೂತನ ಕ್ಲಬ್ ನ ಅಧ್ಯಕ್ಷ ಎಂ.ಆರ್.ವೇಣುಗೋಪಾಲ ಗುಪ್ತ,ಉಪಾಧ್ಯಕ್ಷ ಟಿ.ಜಿ.ಮಂಜುನಾಥ ಗುಪ್ತ,ಕಾರ್ಯದರ್ಶಿ ಎಂ.ಎಸ್.ಭದ್ರೇಶ್,ಖಜಾಂಜಿ ಟಿ.ಕೆ ಅಜಯ್ ಇದ್ದಾರೆ.
ಇಂಟರ್ ನ್ಯಾಷನಲ್ ಡಿಸ್ಟ್ರಿಕ್ 301 ಎ ಅವರ ಸಹಬಾಗಿತ್ವದ ನೂತನ ಶಾಖೆಯಾಗಿ ಹುಳಿಯಾರಿನಲ್ಲಿ ಅಫಿಲೇಟೆಡ್ ಟು ವಾಸವಿ ಕ್ಲಬ್ ಗೆ ಶನಿವಾರ ವಿದ್ಯುಕ್ತವಾಗಿ 301ಎ ನ ಗವರ್ನರ್ ಎಂ.ಎಲ್.ಉದಯ್ ಕುಮಾರ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನಗರದ ರೋಟರಿ ಕ್ಲಬ್ ನಲ್ಲಿ ನಡೆದ ಸುಂದರ ಸಮಾರಂಭದಲ್ಲಿ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಟಿ.ಆರ್.ರಂಗನಾಥ ಶೆಟ್ಟಿ,ಕಾರ್ಯದರ್ಶಿ ಟಿ.ಎಸ್.ರಾಮನಾಥ್,ಎಸ್.ಎಲ್.ಆರ್ ಗ್ರೋಪ್ ನ ಹೆಚ್.ವಿ.ಗೋವಿಂದರಾಜ್ ಉಪಸ್ಥಿತರಿದ್ದರು.ನೂತನ ಕ್ಲಬ್ ನ ಅಧ್ಯಕ್ಷರಾಗಿ ಎಂ.ಆರ್.ವೇಣುಗೋಪಾಲ ಗುಪ್ತ,ಉಪಾಧ್ಯಕ್ಷರಾಗಿ ಟಿ.ಜಿ.ಮಂಜುನಾಥ ಗುಪ್ತ,ಕಾರ್ಯದರ್ಶಿಯಾಗಿ ಎಂ.ಎಸ್.ಭದ್ರೇಶ್, ಖಜಾಂಜಿಯಾಗಿ ಟಿ.ಕೆ ಅಜಯ್ ಅವರುಗಳನ್ನು ಆಯ್ಕೆ ಮಾಡಲಾಯಿತು.ಅಲ್ಲದೆ ಕ್ಲಬ್ ಗೆ ಸದಸ್ಯ್ರ ಆಯ್ಕೆ ಸಹ ಮಾಡಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ