ಹುಳಿಯಾರು ಸಮೀಪದ ಡಿಂಕನಹಳ್ಳಿ ಬಳಿ ಬೈಕ್ ಸವಾರನೊಬ್ಬ ಸೇತುವೆಗೆ ಗುದ್ದಿದ ಪರಿಣಾಮ ಸಾವನಪ್ಪಿರುವ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಬೈಕ್ ಸವಾರ ಹನುಮಂತಪುರದ ಕುಮಾರ್ (೨೫) ಎಂದು ತಿಳಿದು ಬಂದಿದ್ದು, ಅಪಘಾತ ಸ್ಥಳದಿಂದ ಆಸ್ಪತ್ರೆಗೆ ಕರೆತರುವಾಗ ಸಾವನಪ್ಪಿದ್ದಾನೆ. ಹಿಂಬದಿಯಲ್ಲಿದ್ದ ಇತನ ಸ್ನೇಹಿತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಅಲ್ಲದೆ ಇದೇ ದಿನ ಸಂಜೆ ಹೋಬಳಿಯ ಕಂಪನಹಳ್ಳಿ ಹತ್ತಿರ ಟಿವಿಎಸ್ ಮೊಪೆಡ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಗಾಣಧಾಳು ಅಂಚೆ ಕಛೇರಿ ನೌಕರ ಮೂರ್ತಿ ಎಂಬುವರ ಟಿವಿಎಸ್ ಗೆ ಮೊಟ್ಟಿಹಳ್ಳಿ ವಡ್ಡರಹಟ್ಟಿಯ ರವಿ ಎಂಬಾತನ ಹಿಂಬದಿಯಿಂದ ಬಂದು ಗುದ್ದಿದ್ದಾನೆ.ಅಪಘಾತದಲ್ಲಿ ರವಿಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಗೆ ಸೇರಿಸಲಾಗಿದೆ. ಘಟನಾ ಸ್ಥಳಕ್ಕೆ ಪ್ರಬಾರಿ ಸಿಪಿಐ ರಾಮಕೃಷ್ಣಯ್ಯ,ಪಿಎಸೈ ಪಾರ್ವತಮ್ಮ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ