ತಾ.ಪಂ.ಸದಸ್ಯರಿಗೆ ನೀಡುವ 5ಲಕ್ಷ ಅನುದಾನದಲ್ಲಿ ಯಾವ ಕಾರ್ಯ ಮಾಡಬೇಕು ಎಂಬ ಯಕ್ಷಪಶ್ನೆಗಳು ಮೂಡುತ್ತಿವೆ.ಕಾರಣ ಸರ್ಕಾರದಿಂದ ಬರುವ ಈ ಅನುದಾನದಲ್ಲಿ ನಮ್ಮ ವ್ಯಾಪ್ತಿಗೆ ಬರುವ 8ರಿಂದ 10 ಹಳ್ಳಿಗಳ ಅಭಿವೃದ್ದಿ ಹೇಗೆ ಸಾಧ್ಯ.ಅಲ್ಲದೆ ಕುಡಿಯುವ ನೀರಿನ ವ್ಯವಸ್ಥೆ,ಶಾಲಾ ಕಟ್ಟಡ ನಿರ್ಮಾಣ,ಶೌಚಾಲಯ,ದಾರಿದೀಪದ ವ್ಯವಸ್ಥೆ,ಸ್ಮಶಾನ ಅಭಿವೃದ್ದಿ,ಸಾರ್ವಜನಿಕ ಗ್ರಂಥಾಲಯದ ನಿರ್ವಹಣೆ ಹಾಗೂ ಇನ್ನಿತರ ಗ್ರಾಮೀಣಾಭಿವೃದ್ದಿ ಕಾರ್ಯಗಳು ತಾ.ಪಂ.ಸದಸ್ಯರ ಮೇಲಿದೆ.ಅಲ್ಲದೆ ಕನಿಷ್ಠ ಅನುದಾನದಿಂದ ಬಡವರ ಕಷ್ಟಕ್ಕೂ ಸ್ಪಂದಿಸಲು ಸಾಧ್ಯವಾಗದೇ ಹಾಗೂ ಅಭಿವೃದ್ದಿ ಕಾರ್ಯಗಳನ್ನು ಪೂರೈಸಲು ಸಾಧ್ಯವಾಗದ ಶೋಚನೀಯ ಸ್ಥಿತಿಯಲ್ಲಿದ್ದೇವೆ. ಇದನ್ನು ಮನಗಂಡ ಮಾನ್ಯಮುಖ್ಯಮಂತ್ರಿಗಳು ಸೂಕ್ತ ಗಮನ ಹರಿಸಿ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ತಾ.ಪಂ.ಸದಸ್ಯರು ಸಮಾಜಮುಖಿ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡಿದರೆ ಪ್ರದೇಶಾಗಳ ಅಭಿವೃದ್ದಿ ಸಾಧ್ಯವಾಗುತ್ತದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ಹೆಚ್ಚಿನ ಸಮಸ್ಯೆಗಳಿಂದ ಕೂಡಿದೆ. ಸರಿಯಾಗಿ ಮಳೆಯಾಗದೆ ಕೆರೆಕಟ್ಟೆಗಳು ಹಿಂಗಿ ಹೋಗಿದ್ದು, ಜಾನುವಾರುಗಳು,ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.ಅಲ್ಲದೆ ಭೂಮಿಯ ಅಂರ್ತಜಲವು ಕ್ಷಿಣಿಸುತ್ತಿದ್ದು ಕೊಳವೆಬಾವಿಗಳು ಬತ್ತಿಹೋಗಿವೆ. ಇದರಿಂದ ಸ್ಥಳಿಯ ಗ್ರಾ.ಪಂ. ಗಳು ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದಿದ್ದರಿಂದ ಜನರು ತಾ.ಪಂ.ಸದಸ್ಯರ ಬೆನ್ನು ಬಿದ್ದಿದ್ದಾರೆ.ಆದರೆ ಸರ್ಕಾರದ ಅನುದಾನ ಸಣ್ಣ ಪುಟ್ಟ ಸಮಸ್ಯೆಗಳ ನಿವಾರಣೆಗೆ ಸಾಕಾಗುತ್ತಿಲ್ಲವೆಂಬ ಗೊಂದಲಉಂಟಾಗಿ ತಾ.ಪಂ.ಸದಸ್ಯರು ತಮ್ಮ ಅಸಹಾಯಕತೆಯನ್ನು ಅಭಿವ್ಯಕ್ತಿಸುವಂತಾಗಿದೆ.
ಇಂತಹ ಹತ್ತು ಹಲವು ಸಮಸ್ಯೆಗಳಿಂದ ಕೂಡಿರುವ ತಾ.ಪಂ.ಗಳಿಗೆ ರಾಜ್ಯ ಸರ್ಕಾರ ಈ ಬಾರಿ ಬಜೆಟ್ ನಲ್ಲಿ ಹೆಚ್ಚಿನ ಅನುದಾನವನ್ನು ನೀಡಿ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ದಿಗೆ,ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಅನುಷ್ಠಾನ ಕಾರ್ಯವಾಗಲಿ ಎಂದು ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ