ಹೋಬಳಿಯ ಸುರ್ವಣಮುಖಿ ಕ್ಯಾಂಪಸ್ ನ ವಿಧ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ 2011-12ನೇ ಸಾಲೀನ ಶಾರದಾ ಪೂಜಾ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.
ಭೂಮಿಯ ಮೇಲೆ ಮಾನವನ ಒಬ್ಬ ಅದ್ಬುತ ಜೀವಿಯಾಗಿದ್ದು,ಅಮೀಬಾದಿಂದ ಮಾನವನ ವಿಕಾಸವಾಗಿದ್ದರೂ ಸಹ ಮಾನವ ಮಹಾತ್ಮನಾಗುವುದೇ ನಿಜವಾದವಿಕಾಸ ಎಂದರು. ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳಿಗಿಂತ ಬುದ್ದಿವಂತ ಮನುಷ್ಯನಾಗಿದ್ದಾನೆ.ಇದಕ್ಕೆ ಕಾರಣ ಶಿಕ್ಷಣವಾಗಿದೆ. ಈತ ತಾನು ಪಡೆದ ಶಿಕ್ಷಣಾದಿಂದ ತನಗೆ ಬೇಕಾದ್ದನು ಪಡೆಯಲು ನಾನಾ ಆವಿಷ್ಕಾರಗಳನ್ನು ಮಾಡುತ್ತಿದ್ದಾನೆ.ವಿದ್ಯೆಯೆಂದು ಯಾರೊಬ್ಬರ ಮನೆ ಸೊತ್ತಲ್ಲ ಅದನ್ನು ಯಾರುಬೇಕಾದರೂ ಪಡೆಯುವಂತಹ ಹಾಗೂ ಎಲ್ಲಾ ಕಾಲದಲ್ಲೂ ಸಿಗುವಂತಹದ್ದು.ನಾವು ಗಳಿಸಿದ ಸಂಪತ್ತನ್ನು ಯಾರುಬೇಕಾದರು ಕಸಿದುಕೊಳ್ಳಬಹುದು ಆದರೆ ವಿದ್ಯೆಯೆಂಬ ಮಹಾನ್ ಸಂಪತ್ತನ್ನು ಯಾರಿಂದಲೂ ಕಿತ್ತುಕೊಳ್ಳಲಾಗುವುದಿಲ್ಲ,ಇದು ಮನುಷ್ಯನ ಅಂತ್ಯದಲ್ಲಿಯೆ ಕೊನೆಯಾಗುವುದು ಎಂದಿದ್ದಾರೆ. ಚಕ್ರವರ್ತಿಗಳಿಂದ ಪೂಜಿಸಲ್ಪಡುವಂತಹದ್ದು ವಿದ್ಯೆ.ಇಂತಹ ವಿದ್ಯೆ ಪ್ಪ್ರ್ತಿಯೊಬ್ಬರಿಗೆ ದಾರಿಪೀಪವಾಗಿ,ಉತ್ತಮ ಮಾರ್ಗದಲ್ಲಿ ಕೊಂಡೈಯುವ ಸಾಧನವಾಗಿದ್ದು, ಉತ್ತಮ ಚಾರಿತ್ರ್ಯದ ನಿರ್ಮಾಣಕ್ಕೆ ಶಿಕ್ಷಣ ಅತ್ಯವಶ್ಯಕವಾದ್ದು ಎಂದು ತಿಳಿಸಿದರು.
ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಹಾಗೂ ಬಸಪ್ಪ ಮರುಳಪ್ಪ ಸೇವಾ ಟ್ರಸ್ಟ್ ನ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿ ಇಂದಿನ ಮೊಬೈಲ್ ಯುಗದಲ್ಲಿ ಯುವಪಿಳಿಗೆ ತಮ್ಮ ಶಿಕ್ಷಣದಲ್ಲಿ ಹಿನ್ನೆಡೆಯುತ್ತಿದ್ದಾರೆ.ಸೈಬರ್ ಕೆಫೆಯಂತಹ ಹಲವು ಇಂಟರ್ ನೆಟ್ ಕೇಂದ್ರಗಳು ಪಟ್ಟಣದಾದ್ಯಂತ ನಾಯಿಕೊಡೆಗಳಂತೆ ತಲೆಯತ್ತಿದ್ದು,ಮಕ್ಕಳನ್ನು ಆಕರ್ಷಿಸಲು ಮುಂದಾಗಿವೆ.ಇಲ್ಲಿಗೆ ಮಕ್ಕಳು ಪೋಷಕರ ಮಾತನ್ನು ಮೀರಿ ಹೋಗುತ್ತಿದ್ದು,ಕೆಟ್ಟಕಲಿಕೆಗೆ ಒಳಗಾಗುತ್ತಿದ್ದಾರೆ.ಇದರ ಬಗ್ಗೆ ಪೊಷಕರು ಹೆಚ್ಚೆತ್ತು ಮಕ್ಕಳ ಉತ್ತಮ ಭವಿಷ್ಯಕ್ಕೆ ಅಗತ್ಯವಾದ ವಾತಾವರಣವನ್ನು ಕಲ್ಪಿಸಿಕೊಡಿ ಎಂದರು.
ವಿಧ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ ಕಾರ್ಯದರ್ಶಿ ಕವಿತಾ,ಸರ್ಕಾರಿ ಬಿಎಂಎಸ್ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಮೂಗೇಶಪ್ಪ,ಚಂದ್ರಶೇಖರ್,ಕನಕದಾಸ ವಿದ್ಯಾಸಂಸ್ಥೆಯ ಶಿವಪ್ರಕಾಶ್,ಶಾಲೆಯ ಪ್ರಿನ್ಸಿಪಾಲ್ ರವಿ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು,ಮಕ್ಕಳು,ಪೋಷಕರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ