ಕಳೆದ ಫೆಬ್ರವರಿ 26ರಂದು ದಪ್ಪಗುಂಟೆಯ ರಮೇಶ ಹಾಗೂ ಸಾಲಕಟ್ಟೆ ಗ್ರಾಮದ ಚೈತ್ರರೊಂದಿಗೆ ವಿವಾಹ ನಿಶ್ಚಯವಾಗಿತ್ತು.ಹಿರಿಯೂರು ಪಟ್ಟಣದ ಬಂಗಾರದ ಅಂಗಡಿಯಲ್ಲಿ ಮದುವೆಯ ಒಡವೆಗಳನ್ನು ತಯಾರು ಮಾಡಲು ಹಾಕಿದ್ದ ಒಡವೆಗಳನ್ನು ಫೆ.24ರಂದು ತರಲೆಂದು ಗ್ರಾಮದಿಂದ ತೆರಳಿದ್ದ ವರ ರಮೇಶ ಮದುವೆಯ ದಿನ ಸಮೀಪಿಸಿದರೂ ಮನೆಗೆ ಬಾರದಿದ್ದನ್ನು ಕಂಡ ಸಂಬಂಧಿಕರು ರಮೇಶ ಕಾಣೆಯಾಗಿದ್ದಾನೆಂದು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮದುವೆ ನಿಂತು ಹೋಗಿತ್ತು.
ಕಳೆದ ಸೋಮವಾರ ರಾತ್ರಿ ಬೋರನಕಣಿವೆ ಜಲಾಶಯದಲ್ಲಿ ರಮೇಶ ಶವವಾಗಿ ಪತ್ತೆಯಾಗಿದ್ದು,ಒಡವೆಯನ್ನು ತರಲೆಂದು ಹಣ ತೆಗೆದುಕೊಂಡು ಹೋಗಿದ್ದ ಈತನ್ನು ಯಾರೋ ಹಣಕ್ಕಾಗಿ ಕೊಲೆಮಾಡಿ ಕಾಕಿರಬಹುದೆಂದು ಶಂಕಿಸಲಾಗಿದೆ.ಶವದ ಮರಣೋತ್ತರಪರೀಕ್ಷೆ ನಡೆಸಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಾಬೂರಾಮ್,ಎ.ಎಸ್.ಪಿ ವಂಶಿಕೃಷ್ಣ,ಸಿಪಿಐ ಪ್ರಭಾಕರ್ ಹಾಗೂ ಪಿಎಸೈ ಪಾರ್ವತಮ್ಮ ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ