ವಿಷಯಕ್ಕೆ ಹೋಗಿ

ಅಳತೆಯ ವಿಚಿತ್ರ

ಹಿಂದೆ ಅಳತೆಯ ಬಳಕೆ ಸೇರು,ಪಾವು,ಚಟಾಕು ಹೀಗೆ ನಾನಾ ರೀತಿಯಿತ್ತು.ಅದರೀಗ ಅವುಗಳು ಬದಲಿಗೆ ಲೀಟರ್,ಮಿಲಿ ಲೀಟರ್ ಮಾತ್ರ ಚಾಲ್ತಿಯಲ್ಲಿದೆ.ಈಗಿನವರಿಗೆ ಸೇರಿನ ಅಳತೆ ಬಗ್ಗೆ ಹೆಚ್ಚು ಕಡಿಮೆ ತಿಳಿದೆ ಇಲ್ಲ ಎನ್ನಬಹುದು.ಅದೇ ರೀತಿ ಇಂಚು,ಅಡಿ,ಮೈಲುಗಳ ಬದಲಿಗೆ ಕಿಮೀ,ಮೀ,ಸೆಂ.ಮೀ ಬಳಕೆಯಲ್ಲಿದ್ದು ಎಲ್ಲರಿಗೂ ಸುಲಭದಲ್ಲಿ ಅರ್ಥವಾಗುತ್ತದೆ.ಜಾಗತೀಕವಾಗಿ ಈಗ ಎಸ್ ಐ ಸಿಸ್ಟಮ್ ಬಳಕೆಯಲ್ಲಿದ್ದು ಕಾನೂನು ಮಾಪನ ಶಾಸ್ತ್ರ ಇಲಾಖೆ ಹೇಳುವಂತೆ ದಿ ಲೀಗಲ್‌ ಮೆಟ್ರಾಲಜಿ ಕಾಯ್ದೆ 2009 ಸೆಕ್ಷನ್‌ 11 (1) (ಸಿ) ಪ್ರಕಾರ ಇಂಚು, ಅಡಿ ಮಾಪನಗಳು ನಿಷಿದ್ಧ.ಇದನ್ನು ಬಳಕೆ ಮಾಡಿದರೆ ದಂಡ ಹಾಕಬಹುದು.ಆದರೂ ಕೂಡ ಟಿವಿ ಜಾಹೀರಾತುಗಳಲ್ಲಿ ನಮ್ಮ ಹೊಸ ಟಿವಿ ಇಷ್ಟು ಇಂಚು/ ಅಡಿ ಇದೆಯೆಂಬ ಲೆಕ್ಕದಲ್ಲಿ ಗಾತ್ರವನ್ನು ನಮೂದಿಸುವುದನ್ನು ಕಾಣಬಹುದು. ಈ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ ಹಿಲರಿ ಕ್ರಾಸ್ತಾ Feb 21, ೨೦೧೨ ರಲ್ಲಿ ಬರೆದ ಲೇಖನ ಗಮನ ಸೆಳೆಯುವಂತಿದ್ದು ಈ ಬಗ್ಗೆ ತಮ್ಮ ಪ್ರತಿಕ್ರಿಯೆಗಾಗಿ ಅದನ್ನು ಇಲ್ಲಿ ನೀಡಲಾಗಿದೆ.
ಭಾರತದಲ್ಲಿ ಇಂಚು, ಅಡಿ ಮಾಪನ ನಿಷಿದ್ಧ !
* ಹಿಲರಿ ಕ್ರಾಸ್ತಾ Feb 21, 2012
ಮಂಗಳೂರು: ಭಾರತದಲ್ಲಿ ಇಂಚು, ಅಡಿ ಮಾಪನಗಳು ನಿಷಿದ್ಧವೇ? ಕಾನೂನು ಮಾಪನ ಶಾಸ್ತ್ರ ಇಲಾಖೆ ಹೇಳುವಂತೆ ದಿ ಲೀಗಲ್‌ ಮೆಟ್ರಾಲಜಿ ಕಾಯ್ದೆ 2009 ಸೆಕ್ಷನ್‌ 11 (1) (ಸಿ) ಪ್ರಕಾರ ಈ ಮಾಪನಗಳು ನಿಷಿದ್ಧ. ಮಿಲಿ ಮೀಟರ್‌, ಸೆಂಟಿ ಮೀಟರ್‌, ಮೀಟರ್‌, ಕಿಲೋ ಮೀಟರ್‌ ಇತ್ಯಾದಿ ಮೆಟ್ರಿಕ್‌ ಮೂಲ ಮಾಪನಗಳು ಮಾತ್ರ ಪ್ರಮಾಣ ಬದ್ಧ.

ಸೆಂಟಿ ಮೀಟರ್‌, ಮೀಟರ್‌ ಮಾಪನಗಳು ಜನಸಾಮಾನ್ಯರಿಗೆ ಚಿರಪರಿಚಿತ ಹಾಗೂ ಇವುಗಳು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾದ ಮಾಪನಗಳಾಗಿವೆ; ಹಾಗಾಗಿ ಇವುಗಳನ್ನು ಪ್ರಮಾಣ ಬದ್ಧ (ಸ್ಟಾ ಂಡರ್ಡ್‌) ಎಂದು ಕೇಂದ್ರ ಸರಕಾರ ಗುರುತಿಸಿದೆ ಎನ್ನುವುದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ.

ಇಂಚು ಮತ್ತು ಅಡಿ ಮಾಪನಗಳು ಪ್ರಮಾಣಬದ್ಧವಲ್ಲದ ಮೂಲ ಮಾಪನಗಳಾಗಿದ್ದು, ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟನೆ ನೀಡುವಾಗ ಟಿ.ವಿ.ಗಳ ಗಾತ್ರವನ್ನು ಇಂಚು ಮಾಪನದಲ್ಲಿ ನಮೂದಿಸಲಾಗಿದೆ ಎಂಬ ಕಾರಣಕ್ಕಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ಸಂಬಂಧಪಟ್ಟ ವಿತರಣಾ ಸಂಸ್ಥೆಗೆ ನೋಟಿಸ್‌ ನೀಡಿ 5000 ರೂ. ದಂಡ ಪಾವತಿಸುವಂತೆ ಸೂಚಿಸುತ್ತಿದ್ದಾರೆ,ಸ್ಥಳದಲ್ಲಿಯೇ ದಂಡ ಪಾವತಿಸಲು ಸಾಧ್ಯವಾಗದಿದ್ದರೆ ನಿಗದಿತ ದಿನಾಂಕದೊಳಗೆ ಕಚೇರಿಗೆ ತೆರಳಿ ದಂಡ ತೆರಬೇಕು. ದಂಡ ತೆರಲು ತಪ್ಪಿದರೆ ಪ್ರಕರಣ ನ್ಯಾಯಾಲಯದ ಮೆಟ್ಟಲು ಏರುತ್ತದೆ.

ವಿಚಿತ್ರ ಎಂದರೆ ಬಹುತೇಕ ವ್ಯಾಪಾರಸ್ಥರಿಗೆ/ ವಿತರಕರಿಗೆ ಇಂಚು, ಅಡಿ ಮಾಪನವನ್ನು ನಮೂದಿಸಬಾರದು ಎಂಬ ಸಂಗತಿ ತಿಳಿದಿಲ್ಲ. ಇಲಾಖೆಯ ಅಧಿಕಾರಿಗಳು ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟವಾದ ಕೂಡಲೇ ಅದರಲ್ಲಿ ಇಂಚು/ ಅಡಿ ಲೆಕ್ಕದಲ್ಲಿ ಗಾತ್ರವನ್ನು ನಮೂದಿಸಿದ್ದರೆ ಸಂಬಂಧ ಪಟ್ಟ ಡೀಲರ್‌ಗಳ ಕಚೇರಿಗೆ ತೆರಳಿ ನೋಟಿಸ್‌ ಕೊಡುತ್ತಾರೆ. ಇಂಚು/ಅಡಿ ಮಾಪನವನ್ನು ನಮೂದಿಸ ಬಾರದು ಎಂದು ಮುಂಚಿತವಾಗಿ ತಿಳುವಳಿಕೆ ನೋಟಿಸ್‌ ಕಳುಹಿಸುವುದಿಲ್ಲ.

'ಇಂಚು/ ಅಡಿ ಮಾಪನವನ್ನು ನಮೂದಿಸಬಾರದು; ಸೆಂಟಿ ಮೀಟರ್‌ ಮಾಪನವನ್ನೇ ನಮೂದಿಸಬೇಕು ಎಂದು ಮುಂಚಿತವಾಗಿ ತಿಳಿಸದೆ ನೇರವಾಗಿ ದಂಡ ವಸೂಲಿಗೆ ಮುಂದಾಗುವುದು ಸರಿಯಲ್ಲ ಎನ್ನುವುದು ವಿತರಕರ ಅಭಿಪ್ರಾಯ.ಸೆಂಟಿ ಮೀಟರ್‌/ ಮೀಟರ್‌ ಇತ್ಯಾದಿ ಪ್ರಮಾಣ ಬದ್ಧವಾದ ಮಾಪನವನ್ನು ಮಾತ್ರ ನಮೂದಿಸ ಬೇಕು ಎಂಬ ವಿಷಯ ಕಾಯ್ದೆಯಲ್ಲಿದೆ. 1985 ರಿಂದ ಈ ಕಾಯ್ದು ಜಾರಿಯಲ್ಲಿದೆ. ಕಾಯ್ದೆಯನ್ನು ವಿತರಕರು ತಿಳಿದುಕೊಂಡಿರಬೇಕೇ ಹೊರತು ಈ ಕುರಿತಂತೆ ಮುಂಚಿತವಾಗಿ ನೋಟಿಸ್‌/ತಿಳುವಳಿಕೆ ಕೊಡುವ ಪದ್ಧತಿ ಇಲ್ಲ ಎಂದು ಕಾನೂನು ಮಾಪನ ಇಲಾಖೆಯ ಮಂಗಳೂರಿನ ನಿರೀಕ್ಷಕರಾದ ಗಜೇಂದ್ರ ಹೇಳುತ್ತಾರೆ.

ಟಿ.ವಿ. ತಯಾರಕರಿಗೆ ಈ ವಿಷಯ ಗೊತ್ತಿದೆ. ಅವರು ಸೆಂಟಿ ಮೀಟರ್‌ ಮಾಪನವನ್ನು ನಮೂದಿಸುತ್ತಾರೆ. ಆದರೆ ವಿತರಕರು ಮಾತ್ರ ತಿಳಿಯದೆಯೊ ಅಥವಾ ತಿಳಿದೋ ಇಂಚು ಮಾಪನವನ್ನು ನಮೂದಿಸುತ್ತಾರೆ. ಮಂಗಳೂರಿನಲ್ಲಿ ಕೆಲವು ವಿತರಕರಿಗೆ ಎರಡು- ಮೂರು ಬಾರಿ ಮುನ್ಸೂಚನೆ ನೀಡಿದ ಬಳಿಕವೂ ಅವರು ಮತ್ತೆ ಇಂಚು ಮಾಪನವನ್ನೇ ನಮೂದಿಸಿದ್ದಾರೆ. ಹಾಗಾಗಿ ಅವರಿಗೆ ದಂಡ ವಿಧಿಸಲಾಗಿದೆ ಎಂದು ವಿವರಿಸಿದ್ದಾರೆ.

ಮೇಲಿನ ಆರ್ಟಿಕಲ್ ಓದಿದ ಮೇಲೆ ನಿಮೇಗೇನನ್ನಿಸಿತು ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...