ದೇವಾಲಯಕ್ಕೆ ಆಗಮಿಸುವ ಭಕ್ತರು ಬಳಪದ ಕಲ್ಲಿನಿಂದ ಮಾಡಿರುವ ಈ ಶಿಲಾಶಾಸನವನ್ನೇ ಪೂಜೆಸುತ್ತಿದ್ದು,ಅದಕ್ಕೆ ಎಣ್ಣೆ ಮಜ್ಜನ ಮಾಡಿಸುವುದಲ್ಲದೆ, ಅನೇಕ ವಸ್ತುಗಳನ್ನು ಅದರ ಮೇಲೆ ಹಾಕುತ್ತಿದ್ದು,.ಇದರಿಂದ ಶಾಸನದ ಮೇಲಿನ ಅನೆಕ ಅಂಶಗಳ ಅಳಿಸಿಹೋಗುತ್ತಿವೆ.ಇದೇಮುಂದುವರೆದರೆ ಶಾಸ ಸಂಪೂರ್ಣವಾಗಿ ನಶಿಸಿ ಹೋಗುತ್ತದೆ ಎಂದು ಸಂಘದವರು ತಿಳಿಸಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಸುತ್ತಮುತ್ತ ಇನ್ನೂ ಅನೇಕ ಶಾಸನಗಳು ಇದ್ದರೂ ಸಹ ಯಾವುದೇ ಅಧ್ಯಯನ ತಂಡವಾಗಿ ಬಂದು ಪರಿಶೀಲನೆ ನಡೆಸಿಲ್ಲ.ಈ ಹಿಂದೆ ಸಂಚಯನ ಸ್ವಯಂ ಸೆವಾ ಸಂಸ್ಥೆ ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗವನ್ನು ಸಂಪರ್ಕಿಸಿ ಶಾಸನದ ಅಧ್ಯಯನ ಮಾಡುವಂತೆ ಮನವಿ ಮಾಡಿದ್ದರು.ಇದಕ್ಕೆ ಸಂಬಂಧ ಪಟ್ಟ ಇಲಾಖೆಯವರು ಇದರ್ ಸಂರಕ್ಷಣೆಗೆ ಮುಂದಾಗಿ ಪುರಾತನ ಶಾಸನಗಳು ಅವನತಿ ಹೊಂದುವುದನ್ನು ತಪ್ಪಿಸಿ,ಇತಿಹಾಸದ ಕುರುಹುಗಳನ್ನು ಉಳಿಸಿಕೊಡಿ ಎಂದು ಸಂಚಯನ ಸಂಘದ ಹರ್ಷ ಹಾಗೂ ಗ್ರಾಮಸ್ಥರು ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.
ಹುಳಿಯಾರು ಸಮೀಪದ ಸೋರಲಮಾವು ಗ್ರಾಮದ ಇತಿಹಾಸ ಪ್ರಸಿದ್ದ ಪುರಾತ ಈಶ್ವರ ದೇವಾಯದಲ್ಲಿ ಕರ್ನಾಟಕವನ್ನಾಳಿದ ಹೊಯ್ಸಳರ ಕಾಲಕ್ಕೆ ಸೇರಿತ್ತು ಎಂಬಲಾದ ಶಿಲಾ ಶಾಸನವೊಂದಿದೆ. ಆದರೆ ಅದರ ಸೂಕ್ತ ನಿರ್ವಹಣೆಯಿಲ್ಲದೆ ಅದು ಅವನತಿಯತ್ತ ಸಾಗುತ್ತಿದೆ.ಅದ ಸೂಕ್ತ ನಿರ್ವಹಣೆಗಾಗಿ ಗ್ರಾಮದ ಸಂಚಯನ ಸ್ವಯಂ ಸೆವಾ ಸಂಸ್ಥೆ ಆಗ್ರಹಿಸಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ